ಯುವಕ ಮತ್ತು ಯುವತಿಯರು ಜೀವನದಲ್ಲಿ ಯವ್ವನಕ್ಕೆ ಕಾಲಿಡುತ್ತಿದ್ದಂತೆ ಅವರ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ, ದೇಹದಲ್ಲಿ ಹಾರ್ಮೋನ್‍ಗಳ ಬದಲಾವಣೆಯಿಂದ ಮೊಡವೆಗಳು ಏಳುತ್ತವೆ, ಕೆಲವರಿಗೆ ಮೊಡವೆಯು ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಇನ್ನೂ ಕೆಲವರಿಗೆ ಮುಖದಲ್ಲಿ ಒಂದು ಎರಡು ಮೊಡವೆಗಳು ಕಾಣಿಸಿಕೊಳ್ಳಬಹುದು. ಇನ್ನು ಮುಖದ ಮೇಲೆ ಮೊಡವೆ ಬಂದ ಜಾಗದಲ್ಲಿ ಕಲೆ ಅಥವಾ ಕುಳಿಗಳು ಬೀಳುತ್ತದೆ, ಮೊಡವೆಯಿಂದ ಉಂಟಾಗುವ ಕುರುಹುಗಳು ಮುಖದ ಸೌಂದರ್ಯವನ್ನು ಹಾಳುಮಾಡುವುದರ ಜೊತೆಗೆ ಆಕರ್ಷಣೆಯನ್ನು ಕುಂದಿಸುವುತ್ತದೆ. ಇನ್ನು ಈ ಕೆಲವು ಹಣ್ಣುಗಳನ್ನ ನೀವು ಸೇವಿಸಿದರೆ ಇಂತಹ ಮುಖದ ಕೆಲವು ಕಲೆಗಳು ಹಾಗೂ ಮೊಡವೆ ಗುರುತುಗಳನ್ನು ಹೋಗಲಾಡಿಸಿ ಮೃದುವಾದ ಹಾಗೂ ಕಾಂತಿಯುತ ಚರ್ಮವನ್ನ ಪಡೆಯಬಹುದು.

ಹಾಗಿದ್ದರೆ ಯಾವ ಹಣ್ಣಿನ ಸೇವನೆ ನಿಮ್ಮ ದೇಹಕ್ಕೆ ಲಾಭ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಮುಖದಲ್ಲಿ ಕೂಡ ಮೊಡವೆ ಇದ್ದರೆ ನೀವು ಈ ಹಣ್ಣುಗಳನ್ನ ಇಂದೇ ಸೇವನೆ ಮಾಡಿ. ಸೇಬು ಹಣ್ಣು ಸಾಂಪ್ರದಾಯಿಕ ಮತ್ತು ವರ್ಷ ಹಳೆಯದಾದ ಹಣ್ಣುಗಳಲ್ಲಿ ಒಂದಾಗಿದೆ, ಇದು ಚರ್ಮವನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರವಾಗಿರಲು ಚರ್ಮವನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ಚರ್ಮವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಮೊಡವೆಗಳ ವಿರುದ್ಧ ಹೋರಾಡುತ್ತದೆ ಆದ್ದರಿಂದ ನಿಮ್ಮ ಚರ್ಮವನ್ನು ಶುದ್ಧೀಕರಿಸಲು ಮತ್ತು ಮೃದುಗೊಳಿಸಲು ನಿಮ್ಮ ನೀರಿನ ಸ್ನಾನಕ್ಕೆ ಸೇಬು ರಸವನ್ನು ಸೇರಿಸಬಹುದು, ಇದು ಚರ್ಮವನ್ನು ಬಿಳುಪುಗೊಳಿಸಲು ಸಹ ಸಹಾಯ ಮಾಡುತ್ತದೆ.

Pimple in face

ಅನಾನಸ್ ಹಣ್ಣು ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದುರಲ್ಲಿ ಆಶ್ಚರ್ಯವೇನಿಲ್ಲ, ಅದು ಜನರಿಗೆ ಚಿರಪರಿಚಿತವಾಗಿದೆ ಆದರೆ ಚರ್ಮಕ್ಕೆ ಚಿಕಿತ್ಸೆ, ಶುದ್ಧೀಕರಣ ಮತ್ತು ಮೃದುಗೊಳಿಸುವಿಕೆಗೆ ಬಂದಾಗ ಅನಾನಸ್ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಇನ್ನು ಈ ಹಣ್ಣು ಮಂದ ಮತ್ತು ಶುಷ್ಕ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ. ನಿಂಬೆ ಹಣ್ಣಿನ ರಸ ಕೂಡ ದೇಹಕ್ಕೆ ತುಂಬಾ ಒಳ್ಳೆಯದು, ಇನ್ನು ಇದರ ಜೊತೆಗೆ ಪಪ್ಪಾಯಿಯೂ ಸಹ ಅನೇಕ ಪ್ರಯೋಜನಗಳನ್ನು ಹೊಂದಿದೆ ಮತ್ತು ಮಹಿಳೆಯರಿಗೆ ಚರ್ಮಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡಲು ಇದನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ. ಇನ್ನು ಪಪ್ಪಾಯ ಹಣ್ಣು ಚರ್ಮದ ಟೋನ್ ಅನ್ನು ಹಗುರಗೊಳಿಸುತ್ತದೆ ಮತ್ತು ವಯಸ್ಸಿನ ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ಪುನಃಸ್ಥಾಪಿಸುತ್ತದೆ, ಹೀಗಾಗಿ ಇದು ಚರ್ಮವನ್ನು ನೈಸರ್ಗಿಕವಾಗಿ ಬೆಳಗಿಸಲು ಸಹಾಯ ಮಾಡುತ್ತದೆ.

ಇನ್ನು ಬಾಳೆಹಣ್ಣಿನ ಸೇವನೆ ಕೂಡ ಚರ್ಮಕ್ಕೆ ಬಹಳ ಒಳ್ಳೆಯದು, ಹೌದು ಮಾನವನ ಸೌಂದರ್ಯ ವರ್ಧಿಸಲು ಹಲವು ಮಂದಿ ಬಾಳೆಹಣ್ಣನ್ನು ತಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳುತ್ತಾರೆ ನಿಮ್ಮ ಚರ್ಮವನ್ನು ಎಲ್ಲಾ ರೀತಿಯಲ್ಲಿ ಬೆಳಗಿಸಲು ಮತ್ತು ನಯವಾದ ಚರ್ಮವನ್ನು ಹೊಂದಲು ಈ ಎಲ್ಲಾ ಆರೋಗ್ಯಕರ ಮತ್ತು ಸಾಂಪ್ರದಾಯಿಕ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಸ್ನೇಹಿತರೆ ನೀವು ಈ ಹಣ್ಣುಗಳ ಸೇವನೆ ಮಾಡಿದರೆ ನಿಮ್ಮ ಮುಖವನ್ನ ಮೊಡವೆಯ ಕಲೆಗಳಿಂದ ದೂರ ಮಾಡಬಹುದು, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Pimple in face

Please follow and like us:
error0
http://karnatakatoday.in/wp-content/uploads/2019/10/Pimple-in-face-1-1024x576.jpghttp://karnatakatoday.in/wp-content/uploads/2019/10/Pimple-in-face-1-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಲೈಫ್ ಸ್ಟೈಲ್ಸುದ್ದಿಜಾಲಯುವಕ ಮತ್ತು ಯುವತಿಯರು ಜೀವನದಲ್ಲಿ ಯವ್ವನಕ್ಕೆ ಕಾಲಿಡುತ್ತಿದ್ದಂತೆ ಅವರ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ, ದೇಹದಲ್ಲಿ ಹಾರ್ಮೋನ್‍ಗಳ ಬದಲಾವಣೆಯಿಂದ ಮೊಡವೆಗಳು ಏಳುತ್ತವೆ, ಕೆಲವರಿಗೆ ಮೊಡವೆಯು ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಇನ್ನೂ ಕೆಲವರಿಗೆ ಮುಖದಲ್ಲಿ ಒಂದು ಎರಡು ಮೊಡವೆಗಳು ಕಾಣಿಸಿಕೊಳ್ಳಬಹುದು. ಇನ್ನು ಮುಖದ ಮೇಲೆ ಮೊಡವೆ ಬಂದ ಜಾಗದಲ್ಲಿ ಕಲೆ ಅಥವಾ ಕುಳಿಗಳು ಬೀಳುತ್ತದೆ, ಮೊಡವೆಯಿಂದ ಉಂಟಾಗುವ ಕುರುಹುಗಳು ಮುಖದ ಸೌಂದರ್ಯವನ್ನು ಹಾಳುಮಾಡುವುದರ ಜೊತೆಗೆ ಆಕರ್ಷಣೆಯನ್ನು ಕುಂದಿಸುವುತ್ತದೆ....Film | Devotional | Cricket | Health | India