ಸ್ನೇಹಿತರೆ ಬಿಗ್ ಬಾಸ್ ಸೀಸನ್ 7 ನೂರು ದಿನಗಳನ್ನ ಪೂರೈಸಿ 15 ನೇ ವರದ ಕೊನೆಗೆ ಬಂದು ತಲುಪಿದೆ, ಇನ್ನು ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಯಾರೆಲ್ಲ ಫಿನಾಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಇನ್ನು ಬಿಗ್ ಬಾಸ್ ನಲ್ಲಿ ಯಾರು ಊಹಿಸಿದ ಎಲಿಮಿನೇಷನ್ ಗಳು ಕೂಡ ನಡೆಯುತ್ತಿದ್ದು ಕೆಲವು ಅಭಿಮಾನಿಗಳಿಗೆ ತುಂಬಾ ಬೇಸರ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ವಾರ ಬಿಗ್ ಬಾಸ್ ನಲ್ಲಿ ಟಿಕೆಟ್ ಟು ಫೈನಲ್ ಟಾಸ್ಕ್ ನಲ್ಲಿ ಗೆದ್ದವರನ್ನ ಹೊರತುಪಡಿಸಿ ಉಳಿದವರೆಲ್ಲರೂ ಎಲಿಮಿನೇಷನ್ ಗೆ ನೊಮಿನೇಟ್ ಆಗಿದ್ದರು. ಇನ್ನು ಈ ಟಾಸ್ಕ್ ನಲ್ಲಿ ವಾಸುಕಿ ವೈಭವ್ ಗೆದ್ದು ಈ ವಾರದ ಎಲಿಮಿನಷನ್ ನಿಂದ ಮುಕ್ತಿ ಪಡೆದಿದ್ದರು ವಾಸುಕಿ ವೈಭವ್. ಇನ್ನು ವಾಸುಕಿ ವೈಭವ್ ಅವರನ್ನ ಹೊರತುಪಡಿಸಿ ಉಳಿದ ಎಲ್ಲಾ ಸ್ಪರ್ದಿಗಳು ಕೂಡ ಈ ವಾರ ಬಿಗ್ ಬಾಸ್ ನಿಂದ ಎಲಿಮಿನೇಷನ್ ಆಗಲು ನೊಮಿನೇಟ್ ಆಗಿದ್ದರು.

ಇನ್ನು ಕಳೆದ ವಾರ ಡಬಲ್ ಎಲಿಮಿನೇಷನ್ ಇದ್ದ ಕಾರಣ ಈ ವಾರ ಬಿಗ್ ಬಾಸ್ ಮನೆಯ ಟಾಸ್ಕ್ ಗಳಲ್ಲಿ ತೀವ್ರವಾದ ಪೈಪೋಟಿ ಉಂಟಾಗಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ನೊಮಿನೇಟ್ ಆದ ಸ್ಪರ್ಧಿಗಳಲ್ಲಿ ಈ ವಾರ ಯಾರು ಮನೆಯಿಂದ ಆಚೆ ಬರುತ್ತಾರೆ ಅನ್ನುವುದು ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು, ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ, ಹರೀಶ್ ಈ ನಾಲ್ವರಲ್ಲಿ ಪ್ರಿಯಾಂಕಾ ಈ ವಾರ ಎಲಿಮಿನೇಟ್ ಆಗಿದ್ದು ತಮ್ಮ ಬಿಗ್ ಬಾಸ್ ಪಯಣವನ್ನ ಮುಗಿಸಿದ್ದಾರೆ. ಸತತ 105 ದಿನಗಳ ಕಾಲ ಪ್ರಿಯಾಂಕಾ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದು ಬಹಳ ಪ್ರಭಲ ಸ್ಪರ್ದಿಯಾಗಿದ್ದರು, ಸಾಮಾನ್ಯ ಜ್ಞಾನ, ಮಾತು ಮತ್ತು ಮೇಕಪ್ ವಿಚಾರದಲ್ಲಿ ಪ್ರಿಯಾಂಕಾ ಅವರು ಹಲವು ಬಾರಿ ಟ್ರೊಲ್ ಆಗಿದ್ದರೂ ಕೂಡ ಹಲವು ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ.

Piyanka in Big Boss

ಇನ್ನು ಪ್ರಿಯಾಂಕಾ ಅವ್ರು ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಹೇಗಿದ್ದಾರೋ ಈಗಲೂ ಹಾಗೆ ಇದ್ದಾರೆ ಅನ್ನುವುದು ಪ್ರಿಯಾಂಕಾ ಅಭಿಮಾನಿಗಳ ಅಭಿಪ್ರಾಯವಾಗಿದೆ. ಇನ್ನು ಕುರಿ ಪ್ರತಾಪ್ ಅವರು ಪ್ರಿಯಾಂಕಾ ಅವರಿಗೆ ಒಬ್ಬ ಸ್ನೇಹಿತರಾಗಿದ್ದರು ಮತ್ತು ಭೂಮಿ ಶೆಟ್ಟಿ ಅವರ ಜೊತೆ ಪ್ರಿಯಾಂಕಾ ಅವರಿಗೆ ಒಂದು ಒಳ್ಳೆಯ ಭಾಂದವ್ಯ ಇತ್ತು. ಇನ್ನು ಕಳೆದ ವಾರ ಪ್ರಿಯಾಂಕಾ ಅವರು ಸುದೀಪ್ ಅವರಿಂದ ಚಪ್ಪಾಳೆಯನ್ನ ಗಿಟ್ಟಿಸಿಕೊಂಡು ಜಾಕೆಟ್ ನ್ನ ಪಡೆದುಕೊಂಡಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಆಚೆ ಬಂದ ಪ್ರಿಯಾಂಕಾ ಅವರಿಗೆ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸತತ 15 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಪ್ರಿಯಾಂಕಾ ಅವರಿಗೆ ವಾರಕ್ಕೆ 40 ಸಾವಿರ ರೂಪಾಯಿಯಂತೆ 6 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಘಟಾನುಘಟಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದು ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗುತ್ತಾರೆ ಅನ್ನುವುದನ್ನ ಊಹೆ ಮಾಡುವುದು ಕಷ್ಟ ಆಗಿದೆ. ಪ್ರಾರಂಭದಲ್ಲಿ ಸ್ವಲ್ಪ ಮಂಕಾಗಿದ್ದ ಬಿಗ್ ಬಾಸ್ ಈಗ ಬಹಳ ರೋಚಕ ಹಂತವನ್ನ ತಲುಪಿದ್ದು ಜನರು ರಾತ್ರಿಯಾದರೆ ಸಾಕು ಬಿಗ್ ಬಾಸ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದಾರೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಆಚೆ ಬರಬಹುದು ಮತ್ತು ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Piyanka in Big Boss

Please follow and like us:
error0
http://karnatakatoday.in/wp-content/uploads/2020/01/Piyanka-in-Big-Boss-1-1024x576.jpghttp://karnatakatoday.in/wp-content/uploads/2020/01/Piyanka-in-Big-Boss-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಬಿಗ್ ಬಾಸ್ ಸೀಸನ್ 7 ನೂರು ದಿನಗಳನ್ನ ಪೂರೈಸಿ 15 ನೇ ವರದ ಕೊನೆಗೆ ಬಂದು ತಲುಪಿದೆ, ಇನ್ನು ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಯಾರೆಲ್ಲ ಫಿನಾಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಇನ್ನು ಬಿಗ್ ಬಾಸ್ ನಲ್ಲಿ ಯಾರು ಊಹಿಸಿದ ಎಲಿಮಿನೇಷನ್ ಗಳು ಕೂಡ ನಡೆಯುತ್ತಿದ್ದು ಕೆಲವು ಅಭಿಮಾನಿಗಳಿಗೆ ತುಂಬಾ ಬೇಸರ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ವಾರ...Film | Devotional | Cricket | Health | India