ಈಗಾಗಲೇ ಸರ್ಕಾರದಿಂದ ಅನೇಕ ಯೋಜನೆಗಳು ಬಂದಿದ್ದು ,ಹಾಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪ್ರಕಾರ ಬಾರತದಲ್ಲಿ 2022 ರ ಸುಮಾರಿಗೆ ಗುಡಿಸಲು ಮುಕ್ತ ಬಾರತ ಮಾಡಬೆಕಂಬ ಕನಸು ನನಸಾಗಲು ಹೆಚ್ಚು ದಿನ ಉಳಿದಿಲ್ಲ ,ಇಂದು ನಾವು ನಿಮಗೆ ಹೇಗೆ ಪ್ರದಾನಿ ಆವಾಸ ಯೋಜನೆ ಮಾಡುವ ಪೂರ್ತಿ ವಿವರ ನಿಡ್ತೇವೆ ,ಸರಿಯಾಗಿ ಗಮನಿಸಿ.


ಮೊದಲನೇದಾಗಿ ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ ಆಧಾರ್ ನಂಬರ್ ಹಾಗು ನಿಮ್ಮ ವಾರ್ಷಿಕ ಆದಾಯವನ್ನು ನಿಖರವಾಗಿ ಪ್ರಕಟಿಸ ಬೇಕು. ನಂತರ ಕೆಳಗೆ ಕೊಟ್ಟಿರುವ ಸರ್ಕಾರಿ ವೆಬ್ ಸೈಟ್ ಮೂಲಕ ನಿಮ್ಮ ವಿವರ ತುಂಬಿಸ ಬೇಕು ಮೊದಲನೇದಾಗಿ, ಪ್ರಧಾನಮಂತ್ರಿ ಅವಾಸ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ಗೆ ಭೇಟಿ ನೀಡಿ. ‘ಸಿಟಿಜನ್ ಅಸೆಸ್ಮೆಂಟ್’ ಮೆನು ಮೂಲಕ ಪ್ರಧಾನಮಂತ್ರಿ ಅವಾಸ ಯೋಜನೆ ಅರ್ಜಿ ಆಪ್ಸನ್ ಆಯ್ಕೆ ಮಾಡಿ. ನಿಮಗೆ ಎರಡು ಆಯ್ಕೆಗಳನ್ನು ನೋಡಬಹುದು.

1. ಸ್ಲಂ ನಿವಾಸಿಗಳು(Slum Dwellers)
2. ಇತರ ಮೂರು ಘಟಕಗಳ ಪ್ರಯೋಜನಗಳು( rural, urban or semi-urban)
ಇವೆರಡರಲ್ಲಿ ನಿಮ್ಮ ಆಯ್ಕೆಯನ್ನು ಸರಿಯಾಗಿ ಟಿಕ್ ಮಾಡಬೇಕು.
ನಂತರ ಈ ಮೇಲಿನ ಮಾಹಿತಿ ತುಂಬಿದ ನಂತರ ಒಂದು ಹೊಸ ವಿಂಡೋ ಓಪನ್ ಆಗುತ್ತದೆ ಅದರಲ್ಲಿ ನೀವು  ಹೊಸ ವಿಂಡೋದಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ತುಂಬಬೇಕು. ಇದು ವೈಯಕ್ತಿಕ ವಿವರ, ಸಂಪರ್ಕ ವಿವರ, ಪ್ರಸ್ತುತ ವಸತಿ ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರ, ಮನೆ ವಿವರ, ಮೊಬೈಲ್ ನಂಬರ್ ಮತ್ತು ಆದಾಯ ವಿವರಗಳನ್ನು ಒಳಗೊಂಡಿದ್ದು, ಯಾವುದೇ ತಪ್ಪುಗಳಾಗದಂತೆ ಅರ್ಜಿಯಲ್ಲಿ ತುಂಬಬೇಕು.

ನಂತರ ಮೇಲಿನ ಎಲ್ಲ ವಿವರಗಳನ್ನೂ ತುಂಬಿದ ನಂತರ ಸೇವ್ ಮಾಡಬೇಕು ಸೇವ್ ಮಾಡುವ ಮೊದಲು ನಿಮಗೆ ಒಂದು (CAPTCHA) ಕ್ಯಾಪ್ಚಾ ಕೋಡ್ ಕಾಣುತ್ತದೆ ಅಲ್ಲಿ ಕಾಣುವ ಕೋಡ್ ಅನ್ನು ಬಾಕ್ಸ್ ಅಲ್ಲಿ ತುಂಬಿ ಸೇವ್ ಮಾಡಿ ,ನಿಮಗೆ ಬೇಕಾದರೆ ಒಂದು ಪ್ರಿಂಟ್ ಅನ್ನು ತೆಗೆದು ಕೊಳ್ಳಬಹುದು ಇಲ್ಲವಾದರೆ ಕಡ್ಡಾಯವಾಗಿ ಅಪ್ಲಿಕೇಶನ್ ನಂಬರ್ ಅನ್ನು ಬರೆದಿಟ್ಟು ಕೊಳ್ಳಿ, ನೀವು ಪ್ರಿಂಟ್ ತೆಗೆದು ಕೊಲ್ಲೋದು ಉತ್ತಮ, ನಂತರ ನಿಮ್ಮ ಅಪ್ಲಿಕೇಶನ್ ಕೋಡ್ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಟೇಟ್ಸ್ ಅನ್ನು ತಿಳಿಯ ಬಹುದು ಅಪ್ಲಿಕೆಶನ್ ಸ್ಟೇಟ್ಸ್ ತಿಳಿಯಲು , ನಿಮ್ಮ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. (http://pmaymis.gov.in/Track_Application_Status. ಇದರ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಟೇಟ್ಸ್ ತಿಳಿಯಿರಿ.

 

ನಂತರ ನೀವು ಇದರಲ್ಲಿ ನೀವು PMAY ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ನಲ್ಲಿ ಬದಲಾವಣೆ ಮಾಡಲು ಬಯಸಿದ್ದಲ್ಲಿ ಅರ್ಜಿಯನ್ನು ಎಡಿಟ್ ಮಾಡಬಹುದು. ಕೇವಲ ನಿಮ್ಮ ಅರ್ಜಿ ಸಂಖ್ಯೆ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ ಬದಲಾವಣೆ ಮಾಡಬಹುದು. ಒಂದು ವೇಳೆ ಅರ್ಜಿದಾರರು ತಪ್ಪು ಮಾಹಿತಿ ತುಂಬಿದಲ್ಲಿ ಅದನ್ನು ಸರಿಪಡಿಸುವುದಕ್ಕಾಗಿ ಈ ಅವಕಾಶ ನೀಡಲಾಗಿದೆ.

ಹಾಗೆ ನಂತರ ನಿಮಗೆ ಪ್ರಧಾನಿ ಆವಾಸ ಯೋಜನೆ ಅಡಿಯಲ್ಲಿ ಈ ರೀತಿಯಲ್ಲಿ ಉಪಯೋಗ ಪಡೆಯ ಬಹುದಾಗಿದೆ ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ. ವಾರ್ಷಿಕವಾಗಿ ಆದಾಯ ರೂ. 6 ಲಕ್ಷ ಇರುವವರು ಪ್ರಸ್ತುತ ಈ ಸಬ್ಸಿಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಇದರ ಮಿತಿಯನ್ನು 6 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ.

 

 

ಅಂದರೆ ಈ ಸಬ್ಸಿಡಿ ಪರಿಮಿತಿಯಲ್ಲಿ ಇದೀಗ ರೂ. 18 ಲಕ್ಷದವರೆಗೆ ಆದಾಯ ಗಳಿಸುವವರು ಫಲಾನುಭವಿಗಳು ಆಗಲಿದ್ದಾರೆ. ನಿಮ್ಮ ವಾರ್ಷಿಕ ಆದಾಯ ರೂ. 18 ಲಕ್ಷ ಇದ್ದು, ಮೊದಲ ಬಾರಿ ಮನೆ ಖರೀದಿಸುತ್ತಿದ್ದರೆ ಮನೆ ಸಾಲದ ಬಡ್ಡಿಯ ಭಾಗವಾಗಿ ಸರ್ಕಾರದಿಂದ ರೂ. 2.4 ಲಕ್ಷ ಸಬ್ಸಿಡಿ ಪಡೆಯಬಹುದು.
ಈ ಮಾಹಿತಿಯನ್ನು ತಪ್ಪದೆ ನಿಮ್ಮವರೊಂದಿಗೆ ಹಂಚಿ ಕೊಳ್ಳಿ ಹಾಗೆ ತಪ್ಪದೆ ಶೇರ್ ಮಾಡಿ ನಿಮ್ಮ ಒಂದು ಶೇರ್ ಇಂದ ಒಬ್ಬ ಬಡವನಿಗೆ ಮನೆ ದೊರಕಬಹುದು.

Please follow and like us:
0
http://karnatakatoday.in/wp-content/uploads/2018/06/ava-1024x576.pnghttp://karnatakatoday.in/wp-content/uploads/2018/06/ava-150x150.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಈಗಾಗಲೇ ಸರ್ಕಾರದಿಂದ ಅನೇಕ ಯೋಜನೆಗಳು ಬಂದಿದ್ದು ,ಹಾಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪ್ರಕಾರ ಬಾರತದಲ್ಲಿ 2022 ರ ಸುಮಾರಿಗೆ ಗುಡಿಸಲು ಮುಕ್ತ ಬಾರತ ಮಾಡಬೆಕಂಬ ಕನಸು ನನಸಾಗಲು ಹೆಚ್ಚು ದಿನ ಉಳಿದಿಲ್ಲ ,ಇಂದು ನಾವು ನಿಮಗೆ ಹೇಗೆ ಪ್ರದಾನಿ ಆವಾಸ ಯೋಜನೆ ಮಾಡುವ ಪೂರ್ತಿ ವಿವರ ನಿಡ್ತೇವೆ ,ಸರಿಯಾಗಿ ಗಮನಿಸಿ. ಮೊದಲನೇದಾಗಿ ಅರ್ಜಿ ಸಲ್ಲಿಸುವ ಮುನ್ನ ಕಡ್ಡಾಯವಾಗಿ ಆಧಾರ್ ನಂಬರ್ ಹಾಗು ನಿಮ್ಮ ವಾರ್ಷಿಕ ಆದಾಯವನ್ನು ನಿಖರವಾಗಿ...Kannada News