Police statement of Arjun Sarja

ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಅವರ ಮೇಲೆ ಮಾಡಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ನಟ ಅರ್ಜುನ್ ಸರ್ಜಾ ಅವರು ಪೋಲೀಸರ ಮುಂದೆ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

ಅರ್ಜುನ್ ಸರ್ಜಾ ಪೋಲೀಸರ ಮುಂದೆ ಹೇಳಿರುವ ಸತ್ಯ ಏನು ಅನ್ನುವುದರ ಬಗ್ಗೆ ನಾವು ಈಗ ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ದಯವಿಟ್ಟು ಇದನ್ನ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಗೆಳೆಯರಿಗೂ ಇದನ್ನ ಕಳುಹಿಸಿ.

Police statement of Arjun Sarja

ನಿನ್ನೆ ಕಬ್ಬನ್ ಪಾರ್ಕ್ ಫೋಲಿಕ್ ಸ್ಟೇಷನ್ ಗೆ ವಿಚಾರಣೆಯ ಸಲುವಾಗಿ ಭೇಟಿ ನೀಡಿದ್ದರು, ಇನ್ಸ್ಪೆಕ್ಟರ್ ಅವರು ಅರ್ಜುನ್ ಸರ್ಜಾ ಅವರನ್ನ ವಿಚಾರಣೆ ಓಲಾಡಿಸಿದಾಗ, ಇದರ ಸಲುವಾಗಿ ಮಾತನಾಡಿದ ಅರ್ಜುನ್ ಸರ್ಜಾ ಅವರು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ ಮತ್ತು ಇದನ್ನ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದಿದ್ದಾರೆ ನಟ ಅರ್ಜುನ್ ಸರ್ಜಾ.

ಇನ್ನು ನೀವು ಈ ಮೊದಲು ಯಾವತ್ತಾದರೂ ಶೃತಿ ಅವರನ್ನ ಭೇಟಿ ಮಾಡಿದ್ದೀರಾ ಎಂದು ಪೊಲೀಸರು ಕೇಳಿದಾಗ ಅರ್ಜುನ್ ಸರ್ಜಾ ಅವರು ಇಲ್ಲ ಎಂದು ಹೇಳಿದ್ದಾರೆ, ನಾನು ಅವರನ್ನ ಮೊದಲು ನೋಡಿದ್ದು ವಿಸ್ಮಯ ಸಿನಿಮಾದ ಶೂಟಿಂಗ್ ನಲ್ಲಿ ಎಂದು ಹೇಳಿದ್ದಾರೆ ಅರ್ಜಿನ್ ಸರ್ಜಾ.

ಇನ್ನು ಮುಂದುವರೆಸಿದ ಅರ್ಜುನ್ ಸರ್ಜಾ, ವಿಸ್ಮಯ ಚಿತ್ರದ ಆಡಿಷನ್ ನಡೆದಾಗಲೂ ಕೂಡ ನಾನು ಇರಲಿಲ್ಲ ಎಂದು ಹೇಳಿದ್ದಾರೆ ಅರ್ಜುನ್ ಸರ್ಜಾ, ಇನ್ನು ಆ ಚಿತ್ರದ ನಿರ್ದೇಶಕರಾದ ಅರುಣ್ ಅವರು ಹೇಳಿದಾಗಲೇ ನನಗೆ ಗೊತ್ತಾಗಿದ್ದು ಈ ಚಿತ್ರದ ನಟಿ ಶೃತಿ ಹರಿಹರನ್ ಎಂದು ಹೇಳಿದ್ದಾರೆ ನಟ ಅರ್ಜುನ್ ಸರ್ಜಾ.

Police statement of Arjun Sarja

ಇನ್ನು ರಿಹರ್ಸಲ್ ಸಮಯದಲ್ಲಿ ನಾವು ಅನುಚಿತವಾಗಿ ವರ್ತಿಸಿದ್ದೇನೆ ಅನ್ನುವ ಆರೋಪದ ಬಗ್ಗೆ ಮಾತನಾಡಿದ ಅರ್ಜುನ್ ಸರ್ಜಾ ಅವರು, ರಿಹರ್ಸಲ್ ನಲ್ಲಿ ನಾವಿಬ್ಬರೇ ಇರೋದಿಲ್ಲ, ಅಲ್ಲಿ ಸಾಕಷ್ಟು ಜನ ಇರುತ್ತಾರೆ, ಅವರೆಲ್ಲರ ಮುಂದೆ ನಾವು ಹಾಗೆ ನಡೆದುಕೊಳ್ಳಲು ಸಾಧ್ಯನಾ, ಒಂದು ವೇಳೆ ಹಾಗೆ ಆಗಿದ್ದರೆ ಅವರು ಆ ಕ್ಷಣದಲ್ಲೇ ಪ್ರತಿಕ್ರಿಯಿಸಬಹುದಿತ್ತು ಎಂದು ಹೇಳಿದ್ದಾರೆ ಅರ್ಜುನ್ ಸರ್ಜಾ.

ಇನ್ನು ನಾನು ಅವರನ್ನ ಸಹಕಲಾವಿದೆಯಾಗಿ ಅಷ್ಟೇ ನೋಡಿದ್ದೇನೆ ಬೇರೆ ಯಾವ ದೃಷ್ಟಿಯಿಂದಾನೂ ನಾನು ಆಕೆಯನ್ನ ನೋಡಿಲ್ಲ ಎಂದು ಹೇಳಿದ್ದಾರೆ ಅರ್ಜುನ್ ಸರ್ಜಾ. ಇನ್ನು ಸರ್ಜಾ ಅವರ ಹೇಳಿಕೆಯನ್ನ ವಿಡಿಯೋ ಮಾಡುಕೊಳ್ಳುವುದರ ಜೊತೆಗೆ ಲಿಖಿತ ರೂಪದಲ್ಲಿಯೂ ಕೂಡ ದಾಖಲು ಮಾಡಲಾಗಿದೆ, ಸ್ನೇಹಿತರೆ ಅರ್ಜುನ್ ಸರ್ಜಾ ಅವರ ಈ ಹೇಳಿಕೆಯನ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Police statement of Arjun Sarja

Please follow and like us:
0
http://karnatakatoday.in/wp-content/uploads/2018/11/Arjun-Sarja-statement-about-Shurthi-1024x576.jpghttp://karnatakatoday.in/wp-content/uploads/2018/11/Arjun-Sarja-statement-about-Shurthi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಅವರ ಮೇಲೆ ಮಾಡಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ನಟ ಅರ್ಜುನ್ ಸರ್ಜಾ ಅವರು ಪೋಲೀಸರ ಮುಂದೆ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಅರ್ಜುನ್ ಸರ್ಜಾ ಪೋಲೀಸರ ಮುಂದೆ ಹೇಳಿರುವ ಸತ್ಯ ಏನು ಅನ್ನುವುದರ ಬಗ್ಗೆ ನಾವು ಈಗ ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ದಯವಿಟ್ಟು ಇದನ್ನ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಗೆಳೆಯರಿಗೂ ಇದನ್ನ ಕಳುಹಿಸಿ. ನಿನ್ನೆ ಕಬ್ಬನ್ ಪಾರ್ಕ್ ಫೋಲಿಕ್ ಸ್ಟೇಷನ್ ಗೆ...Kannada News