ಪ್ರತಿಯೊಬ್ಬರು ಜೀವ ವಿಮೆ ಪಾಲಿಸಿ ಮಾಡಿಸಬೇಕೆಂಬ ಧ್ಯೇಯದೊಂದಿಗೆ ಎಲ್‌ಐಸಿ ಕಾರ್ಯನಿರ್ವಹಿಸುತ್ತಿದೆ. ಆಪತ್‌ ಕಾಲದಲ್ಲಿ ಪಾಲಿಸಿಯಿಂದ ಸಾಲ ಪಡೆಯಬಹುದು. ಪಾಲಿಸಿದಾರರ ಹಣ ಪಾವತಿಯನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತಿದೆ. ಜೀವನದಲ್ಲಿ ಎಲ್‌ಐಸಿ ಪಾಲಿಸಿ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ನಮಗಲ್ಲದಿದ್ದರೂ ನಮ್ಮನ್ನು ನಂಬಿರುವವರಿಗೆ ಇದರ ಅವಶ್ಯಕತೆ ಹೆಚ್ಚಿದೆ.

ಹೀಗಾಗಿ ದೇಶದ ಸಮಗ್ರ ಆರ್ಥಿಕತೆಗೂ ಕೂಡ ಜೀವ ವಿಮೆ ಹೆಚ್ಚು ಶಕ್ತಿ ನೀಡಿದೆ. ಭಾರತೀಯ ಜೀವ ವಿಮಾ ನಿಗಮ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಾರ್ವಜನಿಕರಲ್ಲಿ ತನ್ನದೇಯಾದ ಛಾಪು ಮೂಡಿಸಿದೆ. ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಿಗೆ ನಿರಂತರ ಆರ್ಥಿಕ ನೆರವು ನೀಡುವಲ್ಲಿ ಎಲ್‌ಐಸಿ ಪಾಲು ಹೆಚ್ಚಿದೆ ಎಂದರು. ಈಗಿನ ಯುಗದಲ್ಲಿ ನಿಮಗೆ ಸಾಲ ಬೇಕು ಎಂದರೆ ಬ್ಯಾಂಕ್ ಗಳಿಗೆ ಓಡಾಡಬೇಕಾದ ಅವಶ್ಯಕತೆ ಹೆಚ್ಚಿರುತ್ತದೆ.

ಕೂತಲ್ಲೇ ಯಾವ ಕೆಲಸವು ಆಗಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೋ ಅಥವಾ ಯಾವುದೊ ಸಮಾರಂಭಗಳಿಗೆ, ಬಂಡವಾಳಕ್ಕಾಗಿ ಹೀಗೆ ಅಲ್ಪಮಟ್ಟಿನ ಹಣ ಹೊಂದಿಸಲು ನಿಮಗೆ ಸಾಲ ಬೇಕಿದ್ದಲ್ಲಿ ಶೀಘ್ರದಲ್ಲೇ ನೀಡುವಿಯೂದು ಎಲ್ಲರಿಗು ಕಷ್ಟವಾಗುತ್ತದೆ. ಆದರೆ ನಿಮ್ಮ ಬಳಿ ಎಲ್ ಐ ಸಿ ಬಾಂಡ್ ಇದ್ದಾರೆ ಖಂಡಿತವಾಗಿ ನಿಮಗೆ ಅತಿ ಶೀಘ್ರದಲ್ಲಿ ಲೋನ್ ಸಿಗಲಿದೆ. ಹೌದು ಈ ಹಣ ಪಡೆಯಲು ಇರಬೇಕಾದ ಷರತ್ತು ಹಾಗು ನಿಯಮಾವಳಿಗಳನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ.

ಇಲ್ಲಿ ನೀವು ಗಮನಿಸಬೇಕಾದ ವಿಷಯ ಏನೆಂದರೆ ವಿಮೆ ಇದ್ದವರಿಗೆಲ್ಲ ಲೋನ್ ಸಿಗುವುದಿಲ್ಲ, ನೀವು ಮೂರು ವರ್ಷದವರೆಗೆ ನಿಮ್ಮ ಪಾಲಿಸಿಗೆ ಸರಿಯಾಗಿ ಹಣ ತುಂಬಿದ್ದರೆ ಮಾತ್ರ ಲೋನ್ ಪಡೆಯಲು ಅರ್ಹರಾಗಿರುತ್ತೀರಿ. ನಿಮ್ಮ ವಿಮಾ ಮೊತ್ತ ಮತ್ತು ನಿಮಗೆ ಸಾಲ ಬೇಕಾದ ಅವಧಿಯ ಮೇಲೆ ಎಲ್ಲವು ನಿರ್ಧರಿತವಾಗಿರುತ್ತದೆ. ನಿಮಗೆ ಸಾಮಾನ್ಯವಾಗಿ ಬ್ಯಾಂಕ್ ಹಾಗು ಸೊಸೈಟಿಗಳಲ್ಲಿ ನೀಡುವ ಬಡ್ಡಿ ದರದಲ್ಲೇ ಸಾಲ ನೀಡಲಾಗುತ್ತದೆ, ನಿಮ್ಮ ಪಾಲಿಸಿ ಮೊತ್ತದ 90 ಪರ್ಸೆಂಟ್ ಹಣವನ್ನು ಲೋನ್ ರೂಪದಲ್ಲಿ ನೀಡಲಾಗುತ್ತದೆ.

ಇದಕ್ಕಾಗಿ ಯಾವುದೇ ತೆರಿಗೆ ಇರುವುದಿಲ್ಲ. ಒಮ್ಮೆ ಲೋನ್ ತೆಗೆದುಕೊಂಡು ನಿಮ್ಮ ಲಿಮಿಟ್ ಇದ್ದರೆ ಮತ್ತೆ ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಇಷ್ಟೆಲ್ಲ ಅರ್ಹತೆ ಇದ್ದರೆ ನೀವು ಮಾಡಬೇಕಾದ ಕೆಲಸ ಇಷ್ಟೇ ಕೂಡಲೇ ನಿಮ್ಮ ಏಜೆಂಟ್ ಅವರನ್ನು ಸಂಪರ್ಕಿಸಿ, ಇದರ ಬಗ್ಗೆ ಮಾಹಿತಿ ಪಡೆದು ಹತ್ತಿರದ ಶಾಖೆಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ನಿಮ್ಮ ಬಾಂಡ್ ಇಡಬೇಕಾಗುತ್ತದೆ. ಈ ಮಾಹಿತಿಯನ್ನು ಎಲ್ಲ ಬಡವರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2019/04/lic-loan-available-1024x576.jpghttp://karnatakatoday.in/wp-content/uploads/2019/04/lic-loan-available-150x104.jpgKarnataka Today's Newsಅಂಕಣಎನ್‌ಆರ್‌ಐಪ್ರತಿಯೊಬ್ಬರು ಜೀವ ವಿಮೆ ಪಾಲಿಸಿ ಮಾಡಿಸಬೇಕೆಂಬ ಧ್ಯೇಯದೊಂದಿಗೆ ಎಲ್‌ಐಸಿ ಕಾರ್ಯನಿರ್ವಹಿಸುತ್ತಿದೆ. ಆಪತ್‌ ಕಾಲದಲ್ಲಿ ಪಾಲಿಸಿಯಿಂದ ಸಾಲ ಪಡೆಯಬಹುದು. ಪಾಲಿಸಿದಾರರ ಹಣ ಪಾವತಿಯನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತಿದೆ. ಜೀವನದಲ್ಲಿ ಎಲ್‌ಐಸಿ ಪಾಲಿಸಿ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ನಮಗಲ್ಲದಿದ್ದರೂ ನಮ್ಮನ್ನು ನಂಬಿರುವವರಿಗೆ ಇದರ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ದೇಶದ ಸಮಗ್ರ ಆರ್ಥಿಕತೆಗೂ ಕೂಡ ಜೀವ ವಿಮೆ ಹೆಚ್ಚು ಶಕ್ತಿ ನೀಡಿದೆ. ಭಾರತೀಯ ಜೀವ ವಿಮಾ ನಿಗಮ ಗ್ರಾಹಕರಿಗೆ ಉತ್ತಮ ಸೇವೆ...Kannada News