News of Cow Pooja

ಹಿಂದುಗಳಿಗೆ ಗೋಮಾತೆ ದೇವರ ಸಮಾನ ಆಕೆಯು ಕೋಟಿ ಕೋಟಿ ದೇವಾನುದೇವತೆಗಳ ಆರಾಧನೆಗೆ ಸಮ, ಗೋವುಗಳು ನಮ್ಮ ಸಂಸ್ಕ್ರತಿಯ ಪ್ರತೀಕ ಹೀಗಾಗಿ ಗೋವಿಲ್ಲದ ಬದಕನ್ನು ನಾವು ಊಹಿಸಿಕೊಳ್ಳುವುದು ಕಷ್ಟ.

ಹಸುವನ್ನು ಪೂಜ್ಯನೀಯವಾಗಿ ನೋಡುವ ನಾವು ನಮ್ಮ ಜೀವನದ ಎಲ್ಲ ಭಾಗಗಳಲ್ಲಿಯೂ ಹಸುವಿನ ತ್ಯಾಗವನ್ನು ನೋಡುತ್ತೇವೆ, ಮಕ್ಕಳಿಂದ ಹಿಡಿದು ಮುದುಕರಾಗುವ ತನಕವೂ ಹಸು ಒಂದು ಮೆನೆಗೆ ಕಣ್ಣಿದ್ದಂತೆ, ಇಂದಿನ ಮನುಷ್ಯ ಜೀವನದ ಶೈಲಿಯಲ್ಲಿಯೇ ಗೋವಿಗೆ ಸ್ಥಾನವಿಲ್ಲ.

ಆಕೆಯನ್ನು ಮನಸ್ಸಿನಿಂದಲೇ ಹೊರಹಾಕಿದರೆ ಕಾನೂನು, ಸಮಾಜ ಸಹಜವಾಗಿಯೇ ಆಕೆಯ ವಿರುದ್ಧವೇ ಸಾಗುತ್ತದೆ ಆದ್ದರಿಂದ ಗೋವು ಪ್ರತಿಯೊಬ್ಬನ ಹೃದಯದಲ್ಲಿ ಗೋವು ಪ್ರತಿಷ್ಠಾಪನೆಗೊಳ್ಳಬೇಕು ಜನ್ಮ ನೀಡಿದ ಮಾತೆ, ಜನ್ಮ ಭೂಮಿ ಮತ್ತು ಗೋವಿಗೆ ನೆಮ್ಮದಿಗಳಿದ್ದಾಗ ನಮ್ಮಲ್ಲೂ ಸಮೃದ್ಧಿ, ಸಮಾಧಾನ ಲಭಿಸುತ್ತದೆ.

News of Cow Pooja

ಗೀತೆಯ ಸಾರದಲ್ಲಿ ಹಾಗು ನಮ್ಮ ಶಾಸ್ತ್ರಗಳಲ್ಲಿ ಕೂಡ ಗೋವಿನ ಮಹತ್ವದ ಬಗ್ಗೆ ತಿಳಿಸಲಾಗಿದೆ, ಹೀಗೆ ಈ ಪವಿತ್ರವಾದ ಗೋವು ಮನೆಯ ಬಾಗಿಲ ಬಳಿ ಬಂದಿತೆಂದರೆ ಅದರ ಅರ್ಥ ಏನು ಗೊತ್ತಿದೆಯಾ, ಕುತೂಹಲಕಾರಿ ಸಂಗತಿ ನಿಮಗೆ ಹೇಳ ಹೊರಟಿದ್ದೇವೆ. ಒಂದು ವೇಳೆ ಹಸು ನಿಮ್ಮ ಮನೆ ಬಾಗಿಲ ಬಳಿ ಬಂದು ನಿಂತರೆ ಶೀಘ್ರವೇ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿದೆ ಎಂದರ್ಥ ಮತ್ತು ನಿಂತಿದ್ದ ಯಾವುದೊ ಶುಭ ಕಾರ್ಯ ನೆರವೇರುವ ಮುನ್ಸೂಚನೆ ಅದು.

ಶುಭ ವಾರ್ತೆಯ ಕೇಳುವ ದಿನವಾಗಿರುತ್ತದೆ, ಆ ದಿನ ನೀವು ಮನೆಗೆ ಬಂದ ಗೋವನ್ನು ಹಾಗೆ ಕಳುಹಿಸಬೇಡಿ, ಅದಕ್ಕೆ ಇಷ್ಟವಾದ ಬೆಲ್ಲ ಕಾಲುಗಳನ್ನು ಕೊಟ್ಟರೆ ಸಾಕು ಕೋಟಿ ದೇವರನ್ನು ತೃಪ್ತಿ ಮಾಡಿದ ಪುಣ್ಯ ನಿಮಗೆ ಲಭಿಸುತ್ತದೆ.

ಯಾವುದೇ ಶುಭ ಕಾರ್ಯಗಳ ಮುಂಚೆ ಗೋ ಪೂಜೆ ಮಾಡುವುದನ್ನು ನೀವು ಗಮನಿಸಿರಬಹುದು, ಹಿಂದೂ ಧರ್ಮದ ಪೂಜ್ಯನೀಯ ದೇವತೆ, ಗೋಮಾತೆ ಹಿಂದೂಗಳಿಗೆ ಗೋವೆಂದರೆ ಮಾತೆ, ದೇವತೆಯ ಸಮಾನ. ಗೋವಿನಲ್ಲಿ ಎಲ್ಲಾ ದೇವದೇವತೆಗಳಿದ್ದಾರೆ ಮತ್ತುಗೋವು ಕೇಳಿದ್ದನ್ನು ಪರಿಪಾಲಿಸುತ್ತಾಳೆ ಎಂದು ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ.

News of Cow Pooja

ಕಾಮಧೇನು ಎಂದರೆ ಬೇಡಿದನ್ನು ಕೊಡುವುದು ಎನ್ನುವ ಅರ್ಥವಿದೆ, ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಧೇನುನಾಮ್ ಆಸ್ಮಿ ಕಾಮಧುಕ ಎನ್ನುತ್ತಾನೆ ಇದರರ್ಥ ಗೋವುಗಳಲ್ಲಿ ನಾನು ಕಾಮಧುಕ, ಬೇಡಿದನ್ನು ಕೊಡುವ ಗೋವು ಎಂದು.

ಕಾಮಧೇನು ಈ ಮಾತೆ, ಆ ಹಸುವಿನ ಸುತ್ತ ಐದು ಬಾರಿ ಪ್ರದಕ್ಷಿಣೆ ಮಾಡಿದರೆ ಇಡೀ ಭೂಮಂಡಲವನ್ನು ತಿರುಗಿದಂತೆ ಸರಿ, ಹೀಗಾಗಿ ಶ್ರದ್ದಾ ಭಕ್ತಿಯಿಂದ ಮಾತೆಯನ್ನು ನಮಸ್ಕರಿಸಿ ಮತ್ತು ಆಕೆಯನ್ನು ಪೋಷಿಸಿ, ಕೊಟ್ಟಂತಹ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಹಂಚಿಕೊಳ್ಳಿ, ನಿಮಗೆ ನೆನಪಿರಲಿ ಕೃಷ್ಣ ಕೂಡ ಗೋ ಪಾಲಕನೇ ಆಗಿದ್ದ.

News of Cow Pooja

Please follow and like us:
0
http://karnatakatoday.in/wp-content/uploads/2019/06/GO-MATHA-HOUSE-1024x576.jpghttp://karnatakatoday.in/wp-content/uploads/2019/06/GO-MATHA-HOUSE-150x104.jpgKarnataka Today's Newsಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಿಂದುಗಳಿಗೆ ಗೋಮಾತೆ ದೇವರ ಸಮಾನ ಆಕೆಯು ಕೋಟಿ ಕೋಟಿ ದೇವಾನುದೇವತೆಗಳ ಆರಾಧನೆಗೆ ಸಮ, ಗೋವುಗಳು ನಮ್ಮ ಸಂಸ್ಕ್ರತಿಯ ಪ್ರತೀಕ ಹೀಗಾಗಿ ಗೋವಿಲ್ಲದ ಬದಕನ್ನು ನಾವು ಊಹಿಸಿಕೊಳ್ಳುವುದು ಕಷ್ಟ. ಹಸುವನ್ನು ಪೂಜ್ಯನೀಯವಾಗಿ ನೋಡುವ ನಾವು ನಮ್ಮ ಜೀವನದ ಎಲ್ಲ ಭಾಗಗಳಲ್ಲಿಯೂ ಹಸುವಿನ ತ್ಯಾಗವನ್ನು ನೋಡುತ್ತೇವೆ, ಮಕ್ಕಳಿಂದ ಹಿಡಿದು ಮುದುಕರಾಗುವ ತನಕವೂ ಹಸು ಒಂದು ಮೆನೆಗೆ ಕಣ್ಣಿದ್ದಂತೆ, ಇಂದಿನ ಮನುಷ್ಯ ಜೀವನದ ಶೈಲಿಯಲ್ಲಿಯೇ ಗೋವಿಗೆ ಸ್ಥಾನವಿಲ್ಲ. ಆಕೆಯನ್ನು ಮನಸ್ಸಿನಿಂದಲೇ ಹೊರಹಾಕಿದರೆ ಕಾನೂನು, ಸಮಾಜ ಸಹಜವಾಗಿಯೇ...Kannada News