ಭಾರತದಲ್ಲಿ ಈಗ ಮಳೆಯ ರುದ್ರನರ್ತನ ಜೋರಾಗಿಯೇ ಇದೆ. ಮೂಕ ಪ್ರಾಣಿಗಳ ವೇದನೆ ಹಾಗು ಮನುಕುಲ ತತ್ತರಿಸಿ ಹೋಗಿರುವ ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೇವರೇ ಕಣ್ಮುಚ್ಚಿ ಕುಳಿತಿದ್ದಾನೆ ಎನ್ನುವಂತಿದೆ ಸಂತ್ರಸ್ತರ ಪಾಡು. ಆದರೆ ಆ ದೇವರು ಕಾಯದಿದ್ದರೂ ಕೂಡ ನೆರೆ ಸಂತ್ರಸ್ತರ ಪಾಲಿಗೆ ಅದೆಷ್ಟೋ ಮಂದಿ ದೇವರ ರೂಪದಲ್ಲಿ ಬಂದು ಪ್ರಾಣ ಕಾಪಾಡಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ರಕ್ಷಣಾ ದಳದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವ ಅದೆಷ್ಟೋ ಪೊಲೀಸರು, ಸೈನಿಕರು, ವಿಪತ್ತು ರಕ್ಷಣಾ ದಳದವರ ಬಗ್ಗೆ ನಾವಿಂದು ಹೇಳಹೊರಟಿದ್ದೇವೆ.

ಹೌದು ಕರ್ನಾಟಕ,ಕೇರಳ,ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಪ್ರವಾಹದ ಭೀತಿಗೆ ನಲುಗಿ ಹೋಗಿವೆ. ಈ ನಡುವೆ ಜೀವರಕ್ಷಕನಾಗಿ ಬಂದು ಪ್ರಾಣ ಉಳಿಸಿದ ಹಲವು ರಕ್ಶಕರ ಫೋಟೋ ಹಾಗು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲದಲ್ಲಿ ನೋಡಿರಬಹುದು.

ಅಂತೆಯೇ ಗುಜರಾತ್ ನಲ್ಲಿ ನಡೆದ ಮಹಾಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಹೆಣ್ಣುಮಕ್ಕಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಉಕ್ಕಿ ಹರಿದ ನದಿಯಲ್ಲಿ ಛಲದಂಕನಂತೆ ನಡೆದಾಡಿಕೊಂಡು ರಕ್ಷಿಸುತ್ತಿದ್ದ ಆ ಪೊಲೀಸ್ ಅಧಿಕಾರಿಯೊಬ್ಬನ ವಿಡಿಯೋ ನೀವು ವೀಕ್ಷಿಸಿರಬಹುದು, ನಿಜಕ್ಕೂ ಅಲ್ಲಿಂದ ಮುಂದೆ ಏನಾಯ್ತು ಆ ಅಧಿಕಾರಿ ಯಾರು ಅದರ ಬಗ್ಗೆ ನಿಮಗೆ ಸಂಕ್ಷಿಪ್ತ ವಿವರಾಂಬೆ ನೀಡಲಿದ್ದೇವೆ ಕೇಳಿ. ಗುಜರಾತ್‌ನ ಮೊರ್ಬಿ ಜಿಲ್ಲೆಯ ಕಲ್ಯಾನ್‌ಪುರ ಗ್ರಾಮದ ಪ್ರವಾಹದ ನೀರಿನಿಂದ ರಕ್ಷಿಸಲು ಪೊಲೀಸ್ ಕಾನ್‌ಸ್ಟೆಬಲ್ ಇಬ್ಬರು ಮಕ್ಕಳನ್ನು 2 ಕಿಲೋಮೀಟರ್‌ಗಿಂತ ಹೆಚ್ಚು ದೂರ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದರು .

ಆ ಅಧಿಕಾರಿಯ ಹೆಸರೇ  ಪೃಥ್ವಿರಾಜ್ ಜಡೇಜಾ. ಮಕ್ಕಳನ್ನು ಉಳಿಸಲು ಉಗ್ರ ಪ್ರವಾಹ ಮತ್ತು ಬಲವಾದ ಗಾಳಿ ಬೀಸಿದರೂ ಸಹ ಎದೆಗುಂದದೆ ರಕ್ಷಿಸಿದ ಈ ಅಧಿಕಾರಿಯನ್ನು ಸ್ವತಃ ಗುಜರಾತ್ ನ ಮುಖ್ಯಮಂತ್ರಿ ವಿಜಯ್ ರೂಪಾನಿ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶಂಶರ್ ಸಿಂಗ್ ಕೂಡ ಪೊಲೀಸರನ್ನು ಶ್ಲಾಘಿಸಿದರು, ಅವರ ಕಾರ್ಯಗಳನ್ನು “ವೀರೋಚಿತ” ಎಂದು ಕರೆದರು.

 

ಈ ಮಹಾ ಹೃದಯಿಯ ಗುಣಗಾನವನ್ನು ಅನೇಕರು ಮಾಡಿದ್ದಾರೆ ಅದರಲ್ಲೊಬ್ಬರು ಪ್ರಧಾನಿ ಕಾರ್ಯಾಲಯವನ್ನು ಟ್ಯಾಗ್ ಮಾಡಿ ದಯವಿಟ್ಟು ಪ್ರಧಾನಿಗಳೇ ನಮ್ಮ ರಾಷ್ಟ್ರಕ್ಕೆ ವಿಪತ್ತು ಸಂಭವಿಸಿದಾಗ ನೆರವಾಗುವ ಇಂತಹ ದಿಟ್ಟ ಅಧಿಕಾರಿಗಳಿಗೆ ಮತ್ತು ಇಲಾಖೆಗಳಿಗೆ ಸೂಕ್ತ ಸೌಲಭ್ಯ, ಸೇವೆ, ಮತ್ತು ಎಲ್ಲಕಿಂತ ಹೆಚ್ಚಾಗಿ ಉತ್ತಮ ಬದುಕನ್ನ ಕಟ್ಟಿಕೊಡಿ ಎಂದು ಕೇಳಿಕೊಂಡಿದ್ದಾರೆ. ಅವರಲ್ಲಿ ಕೆಲವರು ಪ್ರವಾಹ ಪೀಡಿತ ರಾಜ್ಯದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುವ ಸಿಬ್ಬಂದಿಗೆ ಅಗತ್ಯ ಉಪಕರಣಗಳನ್ನು ನೀಡುತ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಉತ್ತರಾಖಂಡ, ಗುಜರಾತ್ ಪ್ರದೇಶ, ಗಂಗಾ ಪಶ್ಚಿಮ ಪಶ್ಚಿಮ ಬಂಗಾಳ, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸಹ ದಿನವಿಡೀ ಭಾರೀ ಮಳೆಯಾಗಲಿವೆ ಎಂದು ಇಲಾಖೆ ತಿಳಿಸಿದೆ. ಅದೇನೇ ಇರಲಿ ಜೀವದ ಹಂಗು ತೊರೆದು ಮಕ್ಕಳನ್ನು ಕಾಪಾಡಿದ ಈ ಅಧಿಕಾರಿಯ ಬಗ್ಗೆ ನಿಮ್ಮ ಮಾತನ್ನು ತಿಳಿಸಿ.

Please follow and like us:
error0
http://karnatakatoday.in/wp-content/uploads/2019/08/police-man-gujarath-1024x576.jpghttp://karnatakatoday.in/wp-content/uploads/2019/08/police-man-gujarath-150x104.jpgKarnataka Trendingಎಲ್ಲಾ ಸುದ್ದಿಗಳುಭಾರತದಲ್ಲಿ ಈಗ ಮಳೆಯ ರುದ್ರನರ್ತನ ಜೋರಾಗಿಯೇ ಇದೆ. ಮೂಕ ಪ್ರಾಣಿಗಳ ವೇದನೆ ಹಾಗು ಮನುಕುಲ ತತ್ತರಿಸಿ ಹೋಗಿರುವ ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೇವರೇ ಕಣ್ಮುಚ್ಚಿ ಕುಳಿತಿದ್ದಾನೆ ಎನ್ನುವಂತಿದೆ ಸಂತ್ರಸ್ತರ ಪಾಡು. ಆದರೆ ಆ ದೇವರು ಕಾಯದಿದ್ದರೂ ಕೂಡ ನೆರೆ ಸಂತ್ರಸ್ತರ ಪಾಲಿಗೆ ಅದೆಷ್ಟೋ ಮಂದಿ ದೇವರ ರೂಪದಲ್ಲಿ ಬಂದು ಪ್ರಾಣ ಕಾಪಾಡಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ರಕ್ಷಣಾ ದಳದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವ ಅದೆಷ್ಟೋ ಪೊಲೀಸರು, ಸೈನಿಕರು,...Film | Devotional | Cricket | Health | India