Premaloka kannada movie

ಹೌದು ಕನ್ನಡ ಸಿನಿಮಾ ಲೋಕದ ರಸಿಕ ಸಿನಿ ಬ್ರಹ್ಮ ಎಂದು ಖ್ಯಾತಿ ಆಗಿರುವ ರವಿಚಂದ್ರನ್ ಅವರ ಸಿನಿ ಜರ್ನಿ ಅನ್ನು ಕೇಳಿದರೆ ನೀವು ಬಾಯಲ್ಲಿ ಬೆರಳಿಟ್ಟು ಕೊಳ್ಳೋದು ಪಕ್ಕ.

ಹೌದು ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸಿನಿಮಾ ಅಂದರೆ ಅದು ಪ್ರೇಮ ಲೋಕ, ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ನಿಮಗೆ ಗೊತ್ತೇ ಇದೆ, ಆದರೆ ಜನರಿಗೆ ಆ ಸಿನಿಮಾ ಹಿಟ್ ಆಗಿರುವ ಬಗ್ಗೆ ಮಾತ್ರ ಗೊತ್ತಿದೆ ಆ ಸಿನಿಮಾ ಹಿಂದಿನ ರವಿಚಂದ್ರನ್ ಅವರ ಶ್ರಮ, ಅವರಿಗಾಗಿರುವ ಅವಮಾನದ ಬಗ್ಗೆ ಇನ್ನು ಕೆಲವರಿಗೆ ತಿಳಿದಿಲ್ಲ.

ಪ್ರೇಮಲೋಕವನ್ನು ರವಿಚಂದ್ರನ್ ನಿರ್ವಿುಸಿ, ನಿರ್ದೇಶಿಸಿದ್ದು ತಮ್ಮ 26ನೇ ವಯಸ್ಸಿನಲ್ಲಿ, ಈಗ ಅವರ ವಯಸ್ಸು 57 , 31ವರ್ಷಗಳ ಹಿಂದಿನ ರವಿಚಂದ್ರನ್ ಅವರ ಈ ಸಾಹಸ ಈಗಲೂ ಒಂದು ಅದ್ಭುತ ದಾಖಲೆಯಾಗಿಯೇ ಉಳಿದಿದೆ, ಹಾಗೆ ಯಾರು ಕೂಡ ಅವರ ದಾಖಲೆಯನ್ನು ಮುರಿಯಲಾಗಲಿಲ್ಲ, ಅಂತಹ ದೊಡ್ಡ ಹಿಟ್ ಕೊಟ್ಟಿತ್ತು ಪ್ರೇಮಲೋಕ.

Premaloka kannada movie

ರವಿಚಂದ್ರನ್ ನಟರಾಗಿ, ನಿರ್ವಪಕರಾಗಿ, ನಿರ್ದೇಶಕರಾಗಿ, ಕಥೆಗಾರರಾಗಿ ಮತ್ತು ಚಿತ್ರಕಥೆಗಾರರಾಗಿ ಕೈಗೆತ್ತಿಕೊಂಡ ಮೊಟ್ಟಮೊದಲ ಚಿತ್ರ ‘ಪ್ರೇಮಲೋಕ’. ‘ಪ್ರೇಮಲೋಕ’ ಚಿತ್ರಕ್ಕಾಗಿ ರವಿಚಂದ್ರನ್ ಖರ್ಚು ಮಾಡಿದ ಮೊತ್ತ 1.5 ಕೋಟಿ ಅಂದಿನ ಕಾಲದಲ್ಲಿ 1.5 ಕೋಟಿ ಅಂದರೆ ಸಣ್ಣ ಮೊತ್ತವಲ್ಲ, ಈ ವಿಷಯ ತಿಳಿದವರು ರವಿಚಂದ್ರನ್ ಗೆ ತಲೆ ಸರಿಯಿಲ್ಲ, ಅವರಿಗೇನು ಬಿಡಿ ಹುಡುಗರ ಬುದ್ದಿ, ಅವರ ಅಪ್ಪನಿಗೂ ಬುದ್ದಿ ಇಲ್ಲವ ಎಂದು ಮಾತನಾಡಿಕೊಂಡಿದ್ದರು, ಆದರೆ ಅದು ಯಾವದಕ್ಕೂ ತಲೆ ಕೆಡಿಸಿಕೊಳ್ಳದ ರವಿ ಸಿನಿಮಾ ಮಾಡಿಯೇ ಬಿಟ್ಟರು.

ನಂತರ ಅದನ್ನು 1987ರಲ್ಲಿ ರಿಲೀಸ್ ಕೂಡ ಮಾಡಿದರು, ರವಿಚಂದ್ರನ್ ಅವರ ದುರಾದ್ರಷ್ಟವೋ ಏನೋ ಗೊತ್ತಿಲ್ಲ ಸಿನಿಮಾ ರಿಲೀಸ್ ಆದಾಗಿನಿಂದ 4 ವಾರ ಸಿನಿಮಾ ನೋಡಲು ಯಾರು ಕೂಡ ಥೇಟರ್ ಗೆ ಕಾಲಿಡಲಿಲ್ಲ, ಅದನ್ನು ಕೇಳಿದ ಗಾಂಧಿನಗರ ಕೇಕೆ ಹಾಕಿ ನಗಲು ಸುರು ಮಾಡಿದರು.

ಅಂದು ರವಿಚಂದ್ರನ್ ಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಅಷ್ಟು ಪಾತಾಳಕ್ಕೆ ಹೋಗಿದ್ದರು ರವಿ, ಆದರೆ ಅದೇನಾಯಿತೋ ಏನೋ ಪ್ರೇಮ ಲೋಕದ ಹಾಡುಗಳು ರೇಡಿಯೋ ಗಳಲ್ಲಿ ಪ್ರಸಾರವಾಗಲು ಆರಂಭಿಸಿದವು, ಪ್ರೇಕ್ಷಕರು ಹಾಡುಗಳನ್ನು ಕೇಳುತಿದ್ದಂತೆ ಹುಚ್ಚೆದ್ದು ಕುಣಿದು ಥಿಯೇಟರ್ ಕಡೆಗೆ ಓಡಿದರು ಯಾಕಂದರೆ ಆ ಸಿನಿಮಾದ 10 ಹಾಡುಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು.

Premaloka kannada movie

ಅಂದು ‘ಗಂಗರಾಜು’ ಎಂದೇ ಕರೆಯಲ್ಪಡುತ್ತಿದ್ದ ಸಂಗೀತ ನಿರ್ದೇಶಕರನ್ನು ‘ಪ್ರೇಮಲೋಕ’ ಚಿತ್ರದ ನಂತರ ‘ಹಂಸಲೇಖ’ ಎಂದು ಗುರುತಿಸಲಾಯಿತು. ಅಪ್ಪಟ ರಂಗಭೂಮಿಯ ದೇಸಿ ಪ್ರತಿಭೆಯಾಗಿದ್ದ ಹಂಸಲೇಖ, ತಮ್ಮ ವಿಶಿಷ್ಟ ಸಂಗೀತದ ಮೂಲಕ ಒಂದು ಪವಾಡವನ್ನೇ ಸೃಷ್ಟಿಸಿಬಿಟ್ಟರು.

ಚಿಕ್ಕ ಹುಡುಗರಿಂದ ಮುದುಕರಿಗೂ ಪ್ರೇಮಲೋಕದ ಹಾಡು ಇಂಪಾಗಿ ಕೇಳುತಿತ್ತು, ಹಾಗೆ ಲಾರಿ ರಿಕ್ಷಾ ಗಳಲ್ಲಿ ಅದೇ ಹಾಡು, ಅಂದಿನ ಕ್ಯಾಸೆಟ್ ಲೋಕದಲ್ಲಿ ದಾಖಲೆಯನ್ನೇ ಸೃಷ್ಟಿ ಮಾಡಿತ್ತು ಪ್ರೇಮಲೋಕ.

ಅಂದು 26 ರ ಹರೆಯದ ಹುಡುಗ ಮಾಡಿದ ಈ ಸಾಧನೆಗೆ ಹಿಡಿ ದೇಶದ ಚಿತ್ರರಂಗವೇ ತಿರುಗಿನೋಡಿತ್ತು, ಇಂದು ಕನ್ನಡ ಚಿತ್ರರಂಗ ಇಷ್ಟರ ಮಟ್ಟಿಗೆ ಬೆಳೆಯಲು ನಮ್ಮ ರವಿ ಚಂದ್ರನ್ ಅವರೇ ಶ್ರಮವು ಕಾರಣ ಎಂದರೆ ತಪ್ಪಾಗಲ್ಲ.

Premaloka kannada movie

ಅಂದು ಥಿಯೆಟರ್ ಗೆ ಜನ ಬಂದಿಲ್ಲ ಎಂದು ಕಣ್ಣೀರು ಹಾಕಿದ್ದ ವ್ಯಕ್ತಿ ಇಂದು ಕನ್ನಡ ಚಿತ್ರರಂಗದ ಸಿನಿ ಬ್ರಹ್ಮ ಹಾಗು ಅಂದು ಹಳ್ಳಿ ಇಂದ ಬಂದಿದ್ದ ಗಂಗರಾಜು ಅಂದರೆ ಹಂಸಲೇಕ ಇಂದು ನಾಧ ಬ್ರಹ್ಮ ಆಗಿದ್ದಾರೆ. ಈ ಸಿನಿಮಾವನ್ನು ನೀವು ನೋಡಿದ್ದೀರಾ ? ನೋಡಿದ್ದರೆ ಅದರಲ್ಲಿ ನಿಮ್ಮ ಇಷ್ಟದ ಸಾಂಗ್ ಅನ್ನು ನಮಗೆ ತಿಳಿಸಿ ಹಾಗೆ ತಪ್ಪದೆ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಯಲಿ.

Please follow and like us:
0
http://karnatakatoday.in/wp-content/uploads/2018/11/premaloka-1024x576.jpghttp://karnatakatoday.in/wp-content/uploads/2018/11/premaloka-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೌದು ಕನ್ನಡ ಸಿನಿಮಾ ಲೋಕದ ರಸಿಕ ಸಿನಿ ಬ್ರಹ್ಮ ಎಂದು ಖ್ಯಾತಿ ಆಗಿರುವ ರವಿಚಂದ್ರನ್ ಅವರ ಸಿನಿ ಜರ್ನಿ ಅನ್ನು ಕೇಳಿದರೆ ನೀವು ಬಾಯಲ್ಲಿ ಬೆರಳಿಟ್ಟು ಕೊಳ್ಳೋದು ಪಕ್ಕ. ಹೌದು ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸಿನಿಮಾ ಅಂದರೆ ಅದು ಪ್ರೇಮ ಲೋಕ, ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ನಿಮಗೆ ಗೊತ್ತೇ ಇದೆ, ಆದರೆ ಜನರಿಗೆ ಆ ಸಿನಿಮಾ ಹಿಟ್ ಆಗಿರುವ ಬಗ್ಗೆ...Kannada News