ಭಾರತದಲ್ಲಿ ಚಿನ್ನಕ್ಕೆ ಇರುವ ಬೆಲೆ ಮತ್ತು ಬೇಡಿಕೆ ಮತ್ತೆ ಯಾವ ದೇಶದಲ್ಲಿಯೂ ಇಲ್ಲ ಎಂದರೆ ತಪ್ಪಾಗಲಾರದು, ನಾವು ಆಭರಣ ಪ್ರಿಯರು ಪ್ರತಿಯೊಂದು ಹಬ್ಬ ಹರಿದಿನಗಳು ಬಂತು ಎಂದರೆ ಮೊದಲು ಯೋಚಿಸುವುದು ಹೊಸ ಚಿನ್ನ ಖರೀದಿಯನ್ನೇ, ನಮ್ಮ ಮದುವೆ, ನಾಮಕರಣ, ಇನ್ನು ಮುಂತಾದ ಮಹತ್ವದ ದಿನಗಳಿಗೆ ಹೆಚ್ಚಿನ ಒತ್ತು ನೀಡುವುದು ಚಿನ್ನಾಭರಣಗಳಿಗೆ. ಇನ್ನು ಕೆಲ ದಿನಗಳಿಂದ ನೀವು ಕೇಳುತ್ತಿರಬಹುದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ ಎಂದು ಹೌದು ಇದು ಸತ್ಯ, ಚಿನ್ನ ಈಗ ಬೇಡಿಕೆಯಿಲ್ಲದೆ ಬೆಲೆ ಕೂಡ ಸಾವಿರದ ಕೆಳಗೆ ಇಳಿದಿದೆ ಎಂದರೆ ತಪ್ಪಾಗದು.

ಹೌದು ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಆಮದು ಅರ್ಧಕ್ಕೆ ಅರ್ಧ ಇಳಿದಿದೆಯೆಂದು ಹೇಳಾಗುತ್ತಿದೆ, ಈಬಗ್ಗೆ ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ ಇದು ಹೀಗೆ ಮುಂದುವರಿದರೆ ಹಬ್ಬದ ದಿನಗಳು ಜನರಿಗೆ ಸಿಹಿಸುದ್ದಿ ಸಿಗಲಿದೆಯಾ  ಎನ್ನುವುದು ಕಾದು ನೋಡಬೇಕು. ಇನ್ನು ಚಿನ್ನದ ವ್ಯಾಪಾರಕ್ಕೆ ಅತಿದೊಡ್ಡ ಮಾರುಕಟ್ಟೆ ಏನಂದ್ರೆ ಎದು ನಮ್ಮ ದೇಶ ಮಾತ್ರ ಇಲ್ಲಿಯೇ ಈಗ ಬೇಡಿಕೆ ಇಲ್ಲದಿರುವುದು ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಪ್ರಪಂಚದ ಗೋಲ್ಡ್ ಟ್ರೇಡಿಂಗ್ ಕೂಡ ಇಳಿದಿರುವುದು ಇನ್ನೊಂದು ಕಾರಣವಾಗಿದೆ. ಇನ್ನು ಜೂಲೈ ೧೮ಕ್ಕೆ ಚಿನ್ನದ ಬೆಲೆ ಮೊದಲಬಾರಿಗೆ ಮೂವತ್ತು ಸಾವಿರಕ್ಕೆ ಇಳಿದಿತ್ತು, ಇನ್ನು ಕಳೆದ ಹತ್ತು ದಿನದ ಚಿನ್ನದ ಬೆಲೆ ಇಳಿಕೆ ಗಮನಿಸಿದರೆ ಅದು ಕೂಡ ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 27770 ರೂಪಾಯಿ ಆಗಿದೆ, ಮತ್ತು ಕಳೆದ ಒಂದು ವಾರದಿಂದ ಇಳಿಯುತ್ತಲೇ ಇದೆ.

ಇನ್ನು ಆಗಸ್ಟ್ ಅಂತ್ಯಕ್ಕೆ ಇನ್ನು ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್ಥಿಕ ತಜ್ಞರ ಪ್ರಕಾರ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಏಕೆಂದರೆ ಮತ್ತೆ ಏಪ್ರಿಲ್ ತಿಂಗಳು ಬಂದಾಗ ಹಬ್ಬ ಹರಿದಿನ ಅಕ್ಷಯ ತೃತೀಯ , ಮದುವೆ ಸೀಸನ್ ಶುರುವಾಗುವುದರಿಂದ ಮತ್ತೆ ಬೆಲೆ ಏರಲಿದೆ ಎನ್ನುತ್ತಾರೆ. ಆಗಸ್ಟ್ ಅಂತ್ಯಕ್ಕೆ ಹತ್ತು ಗ್ರಾಂ ಚಿನ್ನದ ಬೆಲೆ ೨೫ ಸಾವಿರಕ್ಕೆ ಇಳಿದರೆ ಅದು ದಾಖಲೆಯೇ ಆಗಲಿದೆ ಎನ್ನುತ್ತಾರೆ. ಚಿನ್ನದ ಬೆಲೆ ಎಷ್ಟಾದ್ರೆ ಒಳ್ಳೆಯದು ಎಂದು ತಿಳಿಸಿ

Please follow and like us:
0
http://karnatakatoday.in/wp-content/uploads/2018/08/GOLD-PRICES-DOWN-1024x576.pnghttp://karnatakatoday.in/wp-content/uploads/2018/08/GOLD-PRICES-DOWN-150x104.pngEditorಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುಭಾರತದಲ್ಲಿ ಚಿನ್ನಕ್ಕೆ ಇರುವ ಬೆಲೆ ಮತ್ತು ಬೇಡಿಕೆ ಮತ್ತೆ ಯಾವ ದೇಶದಲ್ಲಿಯೂ ಇಲ್ಲ ಎಂದರೆ ತಪ್ಪಾಗಲಾರದು, ನಾವು ಆಭರಣ ಪ್ರಿಯರು ಪ್ರತಿಯೊಂದು ಹಬ್ಬ ಹರಿದಿನಗಳು ಬಂತು ಎಂದರೆ ಮೊದಲು ಯೋಚಿಸುವುದು ಹೊಸ ಚಿನ್ನ ಖರೀದಿಯನ್ನೇ, ನಮ್ಮ ಮದುವೆ, ನಾಮಕರಣ, ಇನ್ನು ಮುಂತಾದ ಮಹತ್ವದ ದಿನಗಳಿಗೆ ಹೆಚ್ಚಿನ ಒತ್ತು ನೀಡುವುದು ಚಿನ್ನಾಭರಣಗಳಿಗೆ. ಇನ್ನು ಕೆಲ ದಿನಗಳಿಂದ ನೀವು ಕೇಳುತ್ತಿರಬಹುದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ ಎಂದು ಹೌದು ಇದು ಸತ್ಯ,...Kannada News