ವಿಶಾಲವಾದ ಈ ಜಗತ್ತಿನಲ್ಲಿ ನಾವು ಎಲ್ಲರನ್ನ ಮೆಚಿಸುವಂತೆ ಬದುಕಬೇಕು ಅಂದರೆ ಅದು ಕಷ್ಟಸಾಧ್ಯ ಮತ್ತು ನಮ್ಮ ಮೂಢತನ ಏನು ಹೇಳಿದರೆ ತಪ್ಪಾಗಲ್ಲ, ಯಾಕೆ ಅಂದರೆ ರಾಮ ರಾಮ ಎಂದವನೇ ರಾವಣನಿಗೆ ಇಷ್ಟ ಆಗಲಿಲ್ಲ ಮತ್ತು ಕೃಷ್ಣ ಕೃಷ್ಣ ಅಂದವನೇ ಕಂಸನಿಗೆ ಇಷ್ಟ ಆಗಲಿಲ್ಲ. ಇನ್ನೊಬ್ಬರನ್ನ ಮೆಚ್ಚಿಸುವ ಸಲುವಾಗಿ ನಾವು ಬದುಕಬೇಕು ಅಂದರೆ ಆ ಬದುಕಿಗೆ ಅರ್ಥಾನೇ ಇಲ್ಲ ಎಂದು ಹೇಳಬಹುದು, ಜಗತ್ತಿನಲ್ಲಿ ಹಲವು ಜನರು ತಮ್ಮ ಜೀವನದಲ್ಲಿ ಅದೆಷ್ಟೋ ಕಷ್ಟ ಮತ್ತು ನೋವುಗಳನ್ನ ಎದುರಿಸುತ್ತಾರೆ ಮತ್ತು ಅವರಿಗೆಲ್ಲ ಕಾಡುವ ಒಂದೇ ಪ್ರಶ್ನೆ ಅಂದರೆ ದೇವರೇ ಒಳ್ಳೆಯವರಿಗೆ ಮಾತ್ರ ಯಾಕಿಷ್ಟು ಕಷ್ಟ ಮತ್ತು ನೋವನ್ನ ಕೊಡುತ್ತೀಯಾ ಅನ್ನುವುದು. ಹೌದು ಜೀವನದಲ್ಲಿ ಎಷ್ಟೋ ಪಾಪ ಮತ್ತು ಕೆಡುಕು ಮಾಡಿದವರೆಲ್ಲ ಸುಖದಿಂದ ಇದ್ದಾರೆ ಆದರೆ ಒಳ್ಳೆಯತನಕ್ಕೆ ಮಾತ್ರ ಸುಖವಿಲ್ಲ ಅನ್ನುವುದು ಈ ಮಾತ್ನ ಅರ್ಥವಾಗಿದೆ.

ಬಹುಷಃ ನಿಮಗೂ ಕೂಡ ಈ ಪ್ರಶ್ನೆ ಒಮ್ಮೆಯಾದರೂ ಕಾಡಿಬಹುದು, ಇನ್ನು ಇದೆ ಪ್ರಶ್ನೆಯನ್ನ ಶ್ರೀ ಕೃಷ್ಣನಿಗೆ ಕೇಳಿದಾಗ ಆತ ಕೊಟ್ಟ ಉತ್ತರ ಏನು ಗೊತ್ತಾ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಸ್ನೇಹಿತರೆ ಒಳ್ಳೆಯ ಜನರು ಜೀವನದಲ್ಲಿ ಕಷ್ಟಗಳನ್ನ ಅನುಭವಿಸಲು ಮೂರೂ ಕಾರಣಗಳಿವೆ, ಮೊದಲನೆಯದಾಗಿ ಒಳ್ಳೆಯ ವ್ಯಕ್ತಿಯೊಳಗೆ ಯಾವಾಗಲೂ ಇತರರ ಬಗ್ಗೆ ಪ್ರೀತಿ ಮತ್ತು ಗೌರವ ಇರುತ್ತದೆ ಮತ್ತು ಆತ ಯಾರಿದಾದರೂ ಸಹಾಯವನ್ನ ಮಾಡಿದಾಗ ಅವನ ಮುಂದೆ ಇರುವ ಅವನನ್ನ ಮೂರ್ಖ ಎಂದು ಭಾವಿಸಲು ಆರಂಭಿಸುತ್ತಾನೆ ಮತ್ತು ಅವನಲ್ಲಿ ಹೆಚ್ಚು ದೋಚಲು ಪ್ರಯತ್ನಿಸುತ್ತಾನೆ, ಇನ್ನು ಇದನ್ನ ತಿಳಿಯದ ಒಳ್ಳೆಯ ವ್ಯಕ್ತಿ ಅವನಿಗೆ ಸಹಾಯವನ್ನ ಮಾಡುತ್ತಾನೆ.

ಎರಡನೆಯದಾಗಿ ಒಳ್ಳೆಯ ವ್ಯಕ್ತಿಯ ಮನಸ್ಸು ಯಾವಾಗಲು ಇನ್ನೊಬ್ಬರ ಮನಸ್ಸನ್ನ ನೋಯಿಸಲು ಇಷ್ಟ ಪಡುವುದಿಲ್ಲ, ಆದ್ದರಿಂದ ಅವನು ಇತರರಿಂದ ಒಳ್ಳೆಯದು ಮತ್ತು ಕೆಟ್ಟದ್ದನ್ನ ಕೇಳುವಲ್ಲಿ ಮೌನವಾಗಿರುತ್ತಾನೆ, ಇನ್ನು ಆತನ ಈ ಮೌನವನ್ನ ಆ ಜನರು ದೌರ್ಬಲ್ಯವೆಂದು ಪರಿಗಣಿಸಿ ಜನರು ಅದರ ಲಾಭವನ್ನ ಪಡೆದುಕೊಳ್ಳುತ್ತಾರೆ ಮತ್ತು ಒಳ್ಳೆಯ ಜನರಿಗೆ ಹಾನಿ ಮಾಡುತ್ತಾರೆ. ಇನ್ನು ಮೂರನೆಯದಾಗಿ ಒಳ್ಳೆಯ ವ್ಯಕ್ತಿ ಇತರರೊಂದಿಗೆ ಜಗಳವಾಡಬಹುದು ಮತ್ತು ನಿಂದಿಸಲೂಬಹುದು ಆದರೆ ಹಾಗೆ ಮಾಡುವುದರಿಂದ ಅವನಿಗೆ ಏನು ಪ್ರಯೋಜನ ಆಗುವುದಿಲ್ಲ ಮತ್ತು ಇದರಿಂದ ಅವನ ಸಂತೋಷ ಹಾಳಾಗುತ್ತದೆ ಎಂದು ಅವನಿಗೆ ತಿಳಿಸಿರುತ್ತದೆ, ಈ ಕಾರಣಕ್ಕೆ ಅವನಿಗೆ ಇತರರು ಏನೇ ಹೇಳಿದರು ಆತ ಸಹಿಸಿಕೊಳ್ಳುವನು.

ಇನ್ನು ಶ್ರೀ ಕೃಷ್ಣನ ಪ್ರಕಾರ ಭಗವಾನ್ ಶ್ರೀ ಕೃಷ್ಣ ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನ ಸಾರಥಿಯಾದನು ಮತ್ತು ಯುದ್ಧದಲ್ಲಿ ಅರ್ಜುನನಿಗೆ ಸಂಪೂರ್ಣವಾಗಿ ಮಾರ್ಗದರ್ಶನ ನೀಡುತ್ತಿದ್ದನು. ಇಂದಿನ ಮನುಷ್ಯರಿಗೆ ಬಹಳ ಮುಖ್ಯವಾದ ಜ್ಞಾನವನ್ನ ಮಹಾಭಾರತ ಯುದ್ಧದ ಮೂಲಕ ಶ್ರೀಕೃಷ್ಣ ಕೊಟ್ಟನು, ಇನ್ನು ಯುದ್ಧದ ಸಮಯದಲ್ಲಿ ಅರ್ಜುನ ಕಠಿಣ ಪರಿಸ್ಥಿತಿಯಲ್ಲಿ ಬಿದ್ದಾಗಲೆಲ್ಲಾ ಶ್ರೀಕೃಷ್ಣನು ಆತನನ್ನ ಕಷ್ಟದ ಪರಿಸ್ಥಿತಿಯಿಂದ ರಕ್ಷಣೆ ಮಾಡುತ್ತಿದ್ದನು. ಇನ್ನು ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನು ಶ್ರೀ ಕೃಷ್ಣ ಬಳಿ ಯಾಕೆ ಒಳ್ಳೆಯವರಿಗೆ ಕೆಟ್ಟ ವಿಷಯಗಳು ಸಂಭವಿಸುತ್ತದೆ ಎಂದು, ಆಗ ಇದಕ್ಕೆ ಶ್ರೀ ಕೃಷ್ಣ ಕೊಟ್ಟ ಉತ್ತರ ಏನು ಅಂತ ಓದಿ.

ಓ ಅರ್ಜುನ ಒಳ್ಳೆಯ ಕಾರ್ಯಗಳನ್ನ ಮಾಡುವ ವ್ಯಕ್ತಿಯನ್ನ ಸಂಭಾವಿತ ಎಂದು ಕರೆಯುತ್ತಾರೆ ಮತ್ತು ಅವನು ದೇವರಿಗೆ ತುಂಬ ಪ್ರಿಯ. ಶ್ರೀ ಕೃಷ್ಣನ ಪ್ರಕಾರ ಒಬ್ಬ ಸಂಭಾವಿತ ವ್ಯಕ್ತಿ ತನ್ನ ಹಿಂದಿನ ಜನ್ಮದ ಎಲ್ಲಾ ಪಾಪಕರ್ಮಗಳನ್ನ ಆದಷ್ಟು ಬೇಗ ಅನುಭವಿಸಬೇಕೆಂದು ದೇವರು ಬಯಸುತ್ತಾನೆ ಮತ್ತು ಅವನು ಮೋಕ್ಷವನ್ನ ಪಡೆಯಬಹುದು, ಈ ಭೂಮಿಯ ಮೇಲೆ ಕೆಟ್ಟ ಕಾರ್ಯಗಳನ್ನ್ನ ಮಾಡುವ ವ್ಯಕ್ತಿಯೂ ಈ ಭೂಮಿಯ ಮೇಲೆ ಅದರ ಕರ್ಮಗಳನ್ನ ಪಡೆಯುತ್ತಾನೆ ಮತ್ತು ಇದು ಸತ್ಯ. ಈ ಜನ್ಮದಲ್ಲಿ ತಾನು ಮಾಡಿದ ಪಾಪಗಳಿಗೆ ಶಿಕ್ಷೆಯನ್ನ ಅನುಭವಿಸದ ವ್ಯಕ್ತಿ ತನ್ನ ನಂತರದ ಜನ್ಮದಲ್ಲಿ ಅದರ ಫಲವನ್ನ ಅನಿಭವಿಸುತ್ತಾನೆ, ಆದ್ದರಿಂದ ಒಳ್ಳೆಯ ವ್ಯಕ್ತಿಗೆ ಎಷ್ಟೇ ಕಷ್ಟಗಳು ಬಂದರು ಅದೂ ಅವನ ಹಿಂದಿನ ಜೀವನದ ಫಲಿತಾಂಶವಾಗಿದೆ.

Problems in life

Please follow and like us:
error0
http://karnatakatoday.in/wp-content/uploads/2019/11/Problems-in-life-1-1024x576.jpghttp://karnatakatoday.in/wp-content/uploads/2019/11/Problems-in-life-1-150x104.jpgeditorಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲವಿಶಾಲವಾದ ಈ ಜಗತ್ತಿನಲ್ಲಿ ನಾವು ಎಲ್ಲರನ್ನ ಮೆಚಿಸುವಂತೆ ಬದುಕಬೇಕು ಅಂದರೆ ಅದು ಕಷ್ಟಸಾಧ್ಯ ಮತ್ತು ನಮ್ಮ ಮೂಢತನ ಏನು ಹೇಳಿದರೆ ತಪ್ಪಾಗಲ್ಲ, ಯಾಕೆ ಅಂದರೆ ರಾಮ ರಾಮ ಎಂದವನೇ ರಾವಣನಿಗೆ ಇಷ್ಟ ಆಗಲಿಲ್ಲ ಮತ್ತು ಕೃಷ್ಣ ಕೃಷ್ಣ ಅಂದವನೇ ಕಂಸನಿಗೆ ಇಷ್ಟ ಆಗಲಿಲ್ಲ. ಇನ್ನೊಬ್ಬರನ್ನ ಮೆಚ್ಚಿಸುವ ಸಲುವಾಗಿ ನಾವು ಬದುಕಬೇಕು ಅಂದರೆ ಆ ಬದುಕಿಗೆ ಅರ್ಥಾನೇ ಇಲ್ಲ ಎಂದು ಹೇಳಬಹುದು, ಜಗತ್ತಿನಲ್ಲಿ ಹಲವು ಜನರು ತಮ್ಮ ಜೀವನದಲ್ಲಿ ಅದೆಷ್ಟೋ...Film | Devotional | Cricket | Health | India