ಬೀದಿ ಬೀದಿಯಲ್ಲಿ ಆಹಾರ ಮಾರಾಟ ಆಗುವ ಇಂದಿನ ಈ ಕಾಲದಲ್ಲಿ ಯಾವ ಕ್ಷಣಕ್ಕೆ ಯಾವ ರೋಗ ಅವರಿಸಬಹುದೋ ಎಂದು ಹೇಳಲು ಸಾಧ್ಯವಿಲ್ಲ, ಹೀಗಾಗಿ ನಮ್ಮ ಆರೋಗ್ಯದ ಭದ್ರತೆ ನಮ್ಮ ಕೈಯಲ್ಲಿದೆ ಹೀಗಿರುವಾಗ ಆಹಾರದ ಅಭ್ಯಾಸ ಮತ್ತು ನಿಯಂತ್ರಣ ನಮ್ಮ ಕೈಯಲ್ಲಿದೆ. ವೇಗವಾಗಿ ಸಾಗುತ್ತಿರುವ ಈ ಜಗತ್ತಿನಲ್ಲಿ ಜನರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಇಡುತ್ತಿಲ್ಲ ಇದೆ ಕಾರಣಕ್ಕೆ ಭಿನ್ನ ಭಿನ್ನ ರೋಗಗಳು ಜನರನ್ನು ಕಾಡುತ್ತಿವೆ. ಇಂದು ನಾವು ನಿಮಗೆ ಕಿಡ್ನಿ ಸಂಬಂಧಿತ ರೋಗದಿಂದ ದೂರವಾಗಲು ಕೆಲ ವಿಷಯಗಳನ್ನು ತಿಳಿಸುತ್ತಿದ್ದೇವೆ, ಇದನ್ನು ಪಾಲಿಸಿದರೆ ಖಂಡಿತ ಜನ್ಮದಲ್ಲಿ ನಿಮಗೆ ಯಾವತ್ತೂ ಕೂಡ ಕಿಡ್ನಿಯಿಂದ ಸಮಸ್ಯೆ ಎದುರಾಗುವುದಿಲ್ಲ. ‘ಊಟ ಬಲ್ಲವನಿಗೆ ರೋಗವಿಲ್ಲ’ ನಾವು ತಿನ್ನುವ ಜಂಕ್‌ ಫುಡ್‌ಗಳು ಅಂದರೆ ಅತಿಯಾದ ಕಾಫಿ, ಟೀ ಸೇವನೆ, ಪಾನ್‌ ಪರಾಗ್, ಸಿಗರೇಟುಗಳು, ಆಗಾಗ ಭೇಟಿ ನೀಡುವ ಪಬ್ ಮತ್ತು ಬಾರ್‌ಗಳು ಒಂದೆಡೆಯಾದರೆ, ಆಹಾರದಲ್ಲಿನ ನಾರಿನಂಶದ ಕೊರತೆ, ಕುಡಿಯುವ ಕಡಿಮೆ ಪ್ರಮಾಣದ ನೀರು ಇನ್ನೊಂದೆಡೆ ಎಲ್ಲವೂ ದೇಹದ ಸಮತೋಲನವನ್ನು ಹಾಳುಗೆಡವುತ್ತದೆ.

ದೇಹವು ತ್ಯಾಜ್ಯಗಳನ್ನು ಮಲ, ಮೂತ್ರ, ಬೆವರಿನ ಮೂಲಕ ಹೊರಹಾಕುತ್ತದೆ ಆದರೆ ಇಂದು ಇದೆಲ್ಲಕ್ಕೂ ಪ್ರತಿಬಂಧನವಿದೆ. ಜಂಕ್‌ ಫುಡ್ ಸೇವನೆ, ಕಡಿಮೆ ನೀರು ಕುಡಿಯುವುದು, ಮಲ, ಮೂತ್ರಗಳನ್ನು ಪ್ರತಿಬಂಧಿಸಿದರೆ, ಎಸಿ, ಫ್ಯಾನುಗಳು, ಡಿಯೋಡರೆಂಟ್‌ಗಳ ಅತಿಯಾದ ಬಳಕೆ ಬೆವರನ್ನು ತಡೆಯುತ್ತದೆ ಮತ್ತು ಅಲ್ಲಿಗೆ ನಮ್ಮ ದೇಹವೇ ಕೊಳಚೆ ತೊಟ್ಟಿಯಾಗಿ, ರೋಗ ಉತ್ಪಾದನಾ ಕೇಂದ್ರವೇ ಆಗಿಬಿಡುತ್ತದೆ. ಕಿಡ್ನಿ ಅಥವಾ ಮೂತ್ರಕೋಶದ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ, ಮನುಷ್ಯನ ದೇಹದಲ್ಲಿ ಮೂತ್ರಕೋಶ ಅತ್ಯಂತ ಮುಖ್ಯವಾದ ಭಾಗ, ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಆರೋಗ್ಯದಿಂದಿರಲು ಸಾಧ್ಯವಿಲ್ಲ.

Problems of Humans

ಮನುಷ್ಯನಲ್ಲಿ ಎರಡು ಮೂತ್ರಕೋಶವಿದೆ ಮತ್ತು ಒಂದು ಹಾಳಾದರೆ ಇನ್ನೊಂದಿದೆ ಎಂದು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ, ಕ್ರಾನಿಕ್ ಕಿಡ್ನಿ ಕಾಯಿಲೆ(ಸಿಕೆಡಿ-ದೀರ್ಘಕಾಲದ ಕಿಡ್ನಿರೋಗ) ಎಂಬುದು ಮನುಷ್ಯನಿಗೆ ಅತ್ಯಂತ ಯಾತನಾಮಯವಾದದ್ದು. ಉತ್ತಮ ಕಿಡ್ನಿಯ ಆರೋಗ್ಯಕ್ಕಾಗಿ ನಾವು ಹೇಳುವ ಈ ಕೆಲವು ಸಲಹೆಗಳನ್ನು ಪಾಲಿಸಿ, ಮೊದಲನೆಯದು ಮೂಲಿಕೆ ಔಷಧಿಗಳನ್ನು ಬಳಸಬೇಡಿ, ಚೀನಾ ಮತ್ತು ಭಾರತೀಯ ಮೂಲಿಕೆಗಳಿಂದ ತಯಾರಿಸಿದ ಔಷಧಗಳನ್ನು ಹೆಚ್ಚೆಚ್ಚು ಬಳಸಿದರೆ ಕಿಡ್ನಿಗೆ ಹಾನಿಯುಂಟುಮಾಡಬಹುದು. ರಕ್ತದೊತ್ತಡ ನಿಯಂತ್ರಣದಲ್ಲಿರಲಿ, ತೀವ್ರ ರಕ್ತದೊತ್ತಡವಿದ್ದರೆ ಕಿಡ್ನಿಗೆ ತೊಂದರೆಯಾಗಿ ಅದು ಹೆಚ್ಚಿನ ಒತ್ತಡ ಹಾಕಿ ಕಾರ್ಯವೈಖರಿಗೆ ತೊಂದರೆಯನ್ನ ಉಂಟುಮಾಡಬಹುದು.

ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲಿ, ಡಯಾಬಿಟಿಸ್ ಸಮಸ್ಯೆಯಿರುವವರಿಗೆ ಕಿಡ್ನಿ ಸಮಸ್ಯೆಯಿರುವುದು ಸಾಮಾನ್ಯ, ದೀರ್ಘಕಾಲಿನ ಕಿಡ್ನಿ ಸಮಸ್ಯೆಗಳಿಗೆ ಡಯಾಬಿಟಿಸ್ ಕಾರಣವಾಗಿರುತ್ತದೆ. ಎರಡನೆಯದಾಗಿ ಅಧಿಕ ಮಸಾಲೆ, ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಸೇವಿಸುವುದು ಉತ್ತಮವಲ್ಲ, ಸಂಸ್ಕರಿತ, ಅಧಿಕ ಆಸಿಡ್ ಪದಾರ್ಥಗಳ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ಹೆಚ್ಚೆಚ್ಚು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳು ಉತ್ತಮ. ಆದಷ್ಟು ಜಂಕ್ ಫುಡ್ ಗಳಿಂದ ದೂರವಿರಿ.

ಮೂರನೆಯದು ದಿನನಿತ್ಯದ ಜೀವನಶೈಲಿ ಉತ್ತಮವಾಗಿರಬೇಕು, ಉತ್ತಮ ಜೀವನ ಶೈಲಿಯಿಂದ ಶರೀರ ಹೆಚ್ಚು ಚಟುವಟಿಕೆಯಿಂದ ಇದ್ದು ಕಿಡ್ನಿ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ನಾಲ್ಕನೆಯದು ದಿನದಲ್ಲಿ ಸ್ವಲ್ಪ ಸಮಯ ಯೋಗ ವ್ಯಾಯಾಮಕ್ಕೆ ಮೀಸಲಿಡಿ, ಕೊನೆಯದಾಗಿ ಎಲ್ಲ ಚಿಕಿತ್ಸೆಯ ಬಳಿಕ ಗುಣ ಹೊಂದಿ ಹೊರ ಹೋಗುವ ರೋಗಿಗೆ ವೈದ್ಯರು ಹೆಚ್ಚಿನ ಸಂದರ್ಭದಲ್ಲಿ ಹೇಳುವ ಕಿವಿಮಾತು, ನಾರಿನಂಶ ಹೊಂದಿರುವ ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಿ. ದಿನಕ್ಕೆ ಐದಾರು ಲೀಟರ್ ನೀರು ಕುಡಿಯಿರಿ, ನಿಯಮಿತವಾದ ವ್ಯಾಯಾಮವನ್ನು ಮಾಡಿರಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ನೋವು ನಿವಾರಕಗಳನ್ನು ಹೆಚ್ಚು ಸೇವಿಸಬೇಡಿ ಮತ್ತು ಮದ್ಯಪಾನ ಹಾಗು ಧೂಮಪಾನದಿಂದ ದೂರವಿರಿ..

Problems of Humans

Please follow and like us:
error0
http://karnatakatoday.in/wp-content/uploads/2019/11/Human-Problems-1024x576.jpghttp://karnatakatoday.in/wp-content/uploads/2019/11/Human-Problems-150x104.jpgKarnataka Trendingಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಬೀದಿ ಬೀದಿಯಲ್ಲಿ ಆಹಾರ ಮಾರಾಟ ಆಗುವ ಇಂದಿನ ಈ ಕಾಲದಲ್ಲಿ ಯಾವ ಕ್ಷಣಕ್ಕೆ ಯಾವ ರೋಗ ಅವರಿಸಬಹುದೋ ಎಂದು ಹೇಳಲು ಸಾಧ್ಯವಿಲ್ಲ, ಹೀಗಾಗಿ ನಮ್ಮ ಆರೋಗ್ಯದ ಭದ್ರತೆ ನಮ್ಮ ಕೈಯಲ್ಲಿದೆ ಹೀಗಿರುವಾಗ ಆಹಾರದ ಅಭ್ಯಾಸ ಮತ್ತು ನಿಯಂತ್ರಣ ನಮ್ಮ ಕೈಯಲ್ಲಿದೆ. ವೇಗವಾಗಿ ಸಾಗುತ್ತಿರುವ ಈ ಜಗತ್ತಿನಲ್ಲಿ ಜನರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಇಡುತ್ತಿಲ್ಲ ಇದೆ ಕಾರಣಕ್ಕೆ ಭಿನ್ನ ಭಿನ್ನ ರೋಗಗಳು ಜನರನ್ನು ಕಾಡುತ್ತಿವೆ. ಇಂದು...Film | Devotional | Cricket | Health | India