ಕೋರ್ಟಿನಲ್ಲಿ ಯಾವುದೇ ಒಬ್ಬ ಅಪರಾಧಿಗೆ ಗಲ್ಲು ಶಿಕ್ಷೆಯನ್ನ ವಿಧಿಸಿದಾಗ ಜಡ್ಜ್ ಆದೇಶವನ್ನ ನೀಡಿ ಸಹಿ ಹಾಕಿದ ಪೆನ್ನಿನ ತುದಿಯನ್ನ ಮುರಿದು ಹಾಕುತ್ತಾರೆ, ಇನ್ನು ಈ ಶಿಕ್ಷೆಯನ್ನ ಆದೇಶವನ್ನ ಕೇಳಿ ಅಪರಾಧಿ ಗಡ ಗಡ ನಡುಗಲು ಆರಂಭ ಮಾಡುತ್ತಾನೆ. ಇನ್ನು ಗಲ್ಲು ಶಿಕ್ಷೆಯನ್ನ ವಿಧಿಸಲು ಸಂಬಂಧ ಪಟ್ಟಹಾಗೆ ಸಾಕಷ್ಟು ನಿಯಮಗಳು ಇದೆ, ಗಲ್ಲಿಗೆ ಹಾಕುವ ಹಗ್ಗ, ಕಬ್ಬ ಮತ್ತು ಶಿಕ್ಷೆಯನ್ನ ಕೊಡುವ ಬಗ್ಗೆ ಎಲ್ಲವೂ ಕೂಡ ಮೊದಲೇ ನಿರ್ಧಾರ ಆಗಿರುತ್ತದೆ. ಇನ್ನು ಗಲ್ಲು ಶಿಕ್ಷೆಯನ್ನ ನೀಡುವ ಸಮಯದಲ್ಲಿ ಜೈಲಿನ ಅಧೀಕ್ಷಕ, ಡಾಕ್ಟರ್, ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮತ್ತು ವಧಾಕಾರ ಉಪಸ್ಥಿತಿಯಲ್ಲಿ ಇರುತ್ತಾರೆ ಮತ್ತು ಇವರಲ್ಲಿ ಯಾರಾದರೂ ಒಬ್ಬರು ಇಲ್ಲದೆ ಇದ್ದರೂ ಕೂಡ ಶಿಕ್ಷೆಯನ್ನ ವಿಧಿಸಲು ಸಾಧ್ಯವಾಗುವುದಿಲ್ಲ.

ಇನ್ನು ಯಾವ ಅಪರಾಧಿಗೆ ಶಿಕ್ಷೆ ಆಗಿರುತ್ತದೆಯೋ ಆ ಅಪರಾಧಿಯ ಜೊತೆ ಕಡೆಯ ತನಕ ವಧಾಕಾರ ಇರುತ್ತಾನೆ, ಯಾಕೆ ಅಂದರೆ ಇಡೀ ಪ್ರಕ್ರಿಯೆಯಲ್ಲಿ ಆತನದ್ದೇ ಅತೀ ದೊಡ್ಡ ಕೆಲಸವಾಗಿದೆ. ಇನ್ನು ಅಪರಾಧಿಗೆ ಶಿಕ್ಷೆ ಕೊಡುವ ಸಮಯದಲ್ಲಿ ಆತನ ಕಿವಿಗೆ ಒಂದು ಗುಟ್ಟನ್ನ ಹೇಳಲಾಗುತ್ತದೆ, ಇನ್ನು ಇದು ನಮ್ಮ ದೇಶದ ಪ್ರತಿ ಗಲ್ಲು ಶಿಕ್ಷೆಯ ಸಮಯದಲ್ಲಿ ಆಗುತ್ತದೆ, ಇನ್ನು ಆತನ ಕಿವಿಯಲ್ಲಿ ಏನು ಹೇಳುತ್ತಾರೆ ಅನ್ನುವುದರ ಬಗ್ಗೆ ಹೆಚ್ಚಿನ ಜನರಿಗೆ ಇನ್ನು ತಿಳಿದಿಲ್ಲ. ಅಪರಾಧಿಯ ಹೃದಯ ಶಾಂತವಾಗಲಿ ಮತ್ತು ಶಿಕ್ಷೆ ಕೊಟ್ಟ ಮಾನಸಿಕ ಖಿನ್ನತೆ ಆ ವಧಾಕಾರನಿಗೆ ಆವರಿಸಬಾರದು ಅನ್ನುವ ಉದ್ದೇಶದಿಂದ ಆ ಎರಡು ಪದಗಳನ್ನ ಶಿಕ್ಷೆಯನ್ನ ಅನುಭವಿಸುವ ಅಪರಾಧಿಯ ಕಿವಿಯಲ್ಲಿ ಹೇಳಲಾಗುತ್ತದೆ.

Punishment in India

ಹಾಗಾದರೆ ಆತನ ಕಿವಿಯಲ್ಲಿ ಏನು ಹೇಳುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವಧಾಕಾರನು ಅಪರಾಧಿಯ ಕಿವಿಯಲ್ಲಿ ನನ್ನನ್ನು ಕ್ಷಮಿಸಿಬಿಡಿ, ಇದು ನಮ್ಮ ಅನಿವಾರ್ಯತೆ, ನನ್ನನ್ನ ಕ್ಷಮಿಸಿಬಿಡು ನಾನು ಸರ್ಕಾರದ ಗುಲಾಮ ಮತ್ತು ನಾನು ನಿನನಾಗಿ ಈ ಸಮಯದಲ್ಲಿ ಏನು ಮಾಡಲು ಕೂಡ ಸಾಧ್ಯವಿಲ್ಲ ರಾಮ್ ರಾಮ್ ಎಂದು ಹೇಳುತ್ತಾನೆ ಆ ವಧಾಕಾರ. ಇನ್ನು ಅಪರಾಧಿ ಹಿಂದೂ ಆಗಿದ್ದರೆ ಆತನ ಕಿವಿಯಲ್ಲಿ ರಾಮ್ ರಾಮ್ ಎಂದು ಹೇಳಲಾಗುತ್ತದೆ ಮತ್ತು ಇತರೆ ಧರ್ಮಿಯರಿಗೆ ಅವರವರ ಧರ್ಮಕ್ಕೆ ಅನುಗುಣವಾಗಿ ದೇವರ ಹೆಸರುಗಳನ್ನ ಕರೆಯಲಾಗುತ್ತದೆ.

ಸ್ನೇಹಿತರೆ ಜೀವನ ಅನ್ನುವುದು ಸಿಂಪಲ್ ನಿಜ ಆದರೆ ನಾವೇ ಜೀವನದಲ್ಲಿ ಕೆಲವೊಮ್ಮೆ ಬೇಕು ಬೇಕು ಅಂತಾನೆ ಕಷ್ಟಗಳನ್ನ ತಂದುಕೊಳ್ಳುತ್ತೇವೆ ಮತ್ತು ಅದೂ ಎಷ್ಟರ ಮಟ್ಟಿಗೆ ಅಂದರೆ ಕೆಲವರಿಗೆ ಕೆಲವೊಮ್ಮೆ ಅಪರಾಧ ಮಾಡುವುದು ಅನಿವಾರ್ಯ ಆಗಿರುತ್ತದೆ. ಇನ್ನು ಕೆಲವು ಜನರಿಗೆ ಅಪರಾಧ ಮಾಡುವುದರಲ್ಲಿಯೇ ಸುಖ ಸಿಗುತ್ತದೆ, ಪ್ರಪಂಚದಲ್ಲಿ ಒಬ್ಬೊಬ್ಬ ಮನುಷ್ಯ ಕೂಡ ವಿಭಿನ್ನ ಮನಸ್ಥಿತಿಯನ್ನ ಹೊಂದಿರುತ್ತಾನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅಪರಾಧಿಯೇ ಮತ್ತು ಅದರಲ್ಲಿ ಕೆಲವರದ್ದು ಸಣ್ಣ ಅಪರಾಧ ಆದರೆ ಇನ್ನು ಕೆಲವರದ್ದು ದೊಡ್ಡ ಅಪರಾಧ ಆಗಿರುತ್ತದೆ. ಇನ್ನು ಅಪರಾಧ ಮಾಡಿದ ಎಲ್ಲರಿಗೂ ಕೂಡ ಇಂತಹ ಶಿಕ್ಷೆಯನ್ನ ನೀಡಲಾಗುವುದಿಲ್ಲ ಬದಲಾಗಿ ಗಂಭೀರ ಅಪರಾಧಗಳನ್ನ ಮಾಡುವವರಿಗೆ ಇಂತಹ ಶಿಕ್ಷೆಗಳನ್ನ ನೀಡಲಾಗುತ್ತದೆ.

Punishment in India

Please follow and like us:
error0
http://karnatakatoday.in/wp-content/uploads/2019/12/Punishment-in-India-1024x576.jpghttp://karnatakatoday.in/wp-content/uploads/2019/12/Punishment-in-India-150x104.jpgeditorಅಂಕಣಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಕೋರ್ಟಿನಲ್ಲಿ ಯಾವುದೇ ಒಬ್ಬ ಅಪರಾಧಿಗೆ ಗಲ್ಲು ಶಿಕ್ಷೆಯನ್ನ ವಿಧಿಸಿದಾಗ ಜಡ್ಜ್ ಆದೇಶವನ್ನ ನೀಡಿ ಸಹಿ ಹಾಕಿದ ಪೆನ್ನಿನ ತುದಿಯನ್ನ ಮುರಿದು ಹಾಕುತ್ತಾರೆ, ಇನ್ನು ಈ ಶಿಕ್ಷೆಯನ್ನ ಆದೇಶವನ್ನ ಕೇಳಿ ಅಪರಾಧಿ ಗಡ ಗಡ ನಡುಗಲು ಆರಂಭ ಮಾಡುತ್ತಾನೆ. ಇನ್ನು ಗಲ್ಲು ಶಿಕ್ಷೆಯನ್ನ ವಿಧಿಸಲು ಸಂಬಂಧ ಪಟ್ಟಹಾಗೆ ಸಾಕಷ್ಟು ನಿಯಮಗಳು ಇದೆ, ಗಲ್ಲಿಗೆ ಹಾಕುವ ಹಗ್ಗ, ಕಬ್ಬ ಮತ್ತು ಶಿಕ್ಷೆಯನ್ನ ಕೊಡುವ ಬಗ್ಗೆ ಎಲ್ಲವೂ ಕೂಡ ಮೊದಲೇ ನಿರ್ಧಾರ ಆಗಿರುತ್ತದೆ....Film | Devotional | Cricket | Health | India