purchase bmw for coin

ನೋಟಿನ ಮೇಲೆ ಹೆಚ್ಚು ಆಸಕ್ತಿವಹಿಸುವ ನಾವು ಚಿಲ್ಲರೆ ಅಥವಾ ಕಾಯಿನ್ ಅಂದರೆ ಇಷ್ಟ ಪಡುವುದಿಲ್ಲ, ಮಧ್ಯಮ ವರ್ಗದವರಿಗೆ ಚಿಲ್ಲರೆ ಅಂದರೆ ಹೆಚ್ಚು ಒಲವು. ಕೆಲವರಂತೂ ಚಿಕ್ಕ ಹುಂಡಿಯನ್ನ ಇಟ್ಟುಕೊಂಡು ಚಿಲ್ಲರೆಯನ್ನ ಅದರೊಳಗೆ ಹಾಕಿ ಒಂದಷ್ಟು ಹಣವನ್ನ ಉಳಿತಾಯ ಮಾಡುತ್ತಾರೆ, ಹೀಗೆ ಚೀನಾಕ್ಕೆ ಸೇರಿದ ಮಧ್ಯಮ ವರ್ಗದ ವ್ಯಕ್ತಿಯಾದ ‘ ಚೂನ್ ಹು’ ಚಿಕ್ಕಂದಿನಿಂದ ಚಿಲ್ಲರೆಯನ್ನ ಉಳಿತಾಯ ಮಾಡುವ ಹವ್ಯಾಸವನ್ನ ಇಟ್ಟುಕೊಂಡಿದ್ದ.

purchase bmw for coin

ಚಿಕ್ಕ ಪುಟ್ಟ ಕೆಲಸಗಳನ್ನ ಮಾಡಿ ಜೀವನವನ್ನ ಸಾಗಿಸುತ್ತಿದ್ದ ಇವನಿಗೆ BMW ಕಾರನ್ನ ಖರೀದಿ ಮಾಡಬೇಕು ಅನ್ನೋದು ಜೀವನದ ದೊಡ್ಡ ಆಸೆ, ಕೊನೆಗೂ BMW ಕಾರ್ ಶೋ ರೂಮ್ ಗೆ ಹೋಗಿ 40 ಲಕ್ಷ ಬೆಲೆಯ ಕಾರನ್ನ ಸೆಲೆಕ್ಟ್ ಮಾಡಿಕೊಂಡ , ‘ ಚೂನ್ ಹು’.

ಈ ಹಣವನ್ನ ಚಿಲ್ಲರೆ ರೂಪದಲ್ಲಿ ಕೊಡುತ್ತೇನೆ ಎಂದು ಶೋ ರೂಮ್ ಮ್ಯಾನೇಜರ್ ಗೆ ಹೇಳಿದ, ಇದರಿಂದ ಶಾಕ್ ಆದ ಆ ಮ್ಯಾನೇಜರ್ ಮೊದಲು ಹಿಂದೇಟು ಹಾಕಿದನು.

purchase bmw for coin

ನಂತರ ಆ ವ್ಯಕ್ತಿಯ ಪರಿಶ್ರಮ ಮತ್ತು ಕಸ್ಟಮರ್ ನ್ನ ಕಳೆದುಕೊಳ್ಳಲು ಇಷ್ಟಪಡದ ಆ ಮ್ಯಾನೇಜರ್ ಕೊನೆಗೆ ಚಿಲ್ಲರೆ ತಗೆದುಕೊಳ್ಳಲು ಒಪ್ಪಿದನು, ಸುಮಾರು 45 ಬಕ್ಕೆಟ್ ಚಿಲ್ಲರೆಯನ್ನ ಲಾರಿಯಲ್ಲಿ ಹಾಕಿಂಡು ‘ ಚೂನ್ ಹು’.

12 ಜನ ಸಿಬ್ಬಂದಿ ಸುಮಾರು 18 ಘಂಟೆಗಳ ಕಾಲ ಚಿಲ್ಲರೆ ಎಣಿಕೆಯ ಕಾರ್ಯವನ್ನ ಮಾಡಿದರು, ಚಿಲ್ಲರೆಯನ್ನ ಎನಿಸಿ ಮುಗಿಸುವ ಹೊತ್ತಿಗೆ ಪಾಪ ಸಿಬ್ಬಂದಿಯ ಸೊಂಟ ನೋವು ಬಂತಂತೆ.

purchase bmw for coin

BMW ಕಾರ್ ನಲ್ಲಿ ಕೂತ ‘ ಚೂನ್ ಹು ‘ ಜಾಮ್ ಎಂದು ಕಾರ್ ಡ್ರೈವಿಂಗ್ ಮಾಡಿಕೊಂಡು ಹೊರಟನು, ಎಂತಹ ದೊಡ್ಡ ಆಕಾರದ ನದಿಯಾದರು ಚಿಕ್ಕ ಚಿಕ್ಕ ಹನಿಯಿಂದ ಸೇರಿ ದೊಡ್ಡ ನದಿಯಾಗಿ ಹರಿಯುತ್ತದೆ ಹಾಗಾಗಿ ಚಿಲ್ಲರೆಯ ಬಗ್ಗೆ ತಾತ್ಸಾರ ಬೇಡ. ಇನ್ನು ಪ್ರತಿದಿನ ಒಂದಷ್ಟು ಹಣವನನ್ನ ಉಳಿತಾಯ ಮಾಡುವುದರಿಂದ ಮುಂದೆ ಒಂದು ದಿನ ಆ ಹಣ ನಿಮಗೆ ಆಸರೆಯಾಗಿ ಉಳಿಯುತ್ತದೆ.

Please follow and like us:
0
http://karnatakatoday.in/wp-content/uploads/2018/05/ayyyyy-1024x576.jpghttp://karnatakatoday.in/wp-content/uploads/2018/05/ayyyyy-150x150.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣನೋಟಿನ ಮೇಲೆ ಹೆಚ್ಚು ಆಸಕ್ತಿವಹಿಸುವ ನಾವು ಚಿಲ್ಲರೆ ಅಥವಾ ಕಾಯಿನ್ ಅಂದರೆ ಇಷ್ಟ ಪಡುವುದಿಲ್ಲ, ಮಧ್ಯಮ ವರ್ಗದವರಿಗೆ ಚಿಲ್ಲರೆ ಅಂದರೆ ಹೆಚ್ಚು ಒಲವು. ಕೆಲವರಂತೂ ಚಿಕ್ಕ ಹುಂಡಿಯನ್ನ ಇಟ್ಟುಕೊಂಡು ಚಿಲ್ಲರೆಯನ್ನ ಅದರೊಳಗೆ ಹಾಕಿ ಒಂದಷ್ಟು ಹಣವನ್ನ ಉಳಿತಾಯ ಮಾಡುತ್ತಾರೆ, ಹೀಗೆ ಚೀನಾಕ್ಕೆ ಸೇರಿದ ಮಧ್ಯಮ ವರ್ಗದ ವ್ಯಕ್ತಿಯಾದ ' ಚೂನ್ ಹು' ಚಿಕ್ಕಂದಿನಿಂದ ಚಿಲ್ಲರೆಯನ್ನ ಉಳಿತಾಯ ಮಾಡುವ ಹವ್ಯಾಸವನ್ನ ಇಟ್ಟುಕೊಂಡಿದ್ದ. ಚಿಕ್ಕ ಪುಟ್ಟ ಕೆಲಸಗಳನ್ನ ಮಾಡಿ ಜೀವನವನ್ನ ಸಾಗಿಸುತ್ತಿದ್ದ ಇವನಿಗೆ...Kannada News