Radhika help to Ravi

ಯಾರು ಕೂಡ ಊಹಿಸಲಾಗದ ಘಟನೆಯೊಂದು ಕನ್ನಡ ಚಿತ್ರರಂಗದಲ್ಲಿ ನಡೆದು ಹೋಗಿದೆ, ಹೌದು ಚಿತ್ರ ನಟ ಯಶ್ ತಮ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲು ನಿರಾಕರಿಸಿದ್ದರು. ಇನ್ನು ಇದರಿಂದ ಬೇಸರಗೊಂಡ ಯಶ್ ಅವರ ಅಭಿಮಾನಿ ಯಶ್ ಅವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ಮಾಡಿದ್ದಾನೆ, ಇನ್ನು ರವಿಯನ್ನ ಆಸ್ಪತ್ರೆಗೆ ಸೇರಿಸಿದರು ಆತನನ್ನ ಬದುಕಿಸಲು ಸಾಧ್ಯವಾಗಲಿಲ್ಲ.

ಪಾವಗಡ ತಾಲೂಕಿನ ರವಿ 4 ವರ್ಷಗಳ ಹಿಂದೆ ನಗರಕ್ಕೆ ಬಂದು ಲಗ್ಗೆರೆಯಲ್ಲಿ ನೆಲೆಸಿದ್ದರು, ಇನ್ನು ಯಶ್ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ಪ್ರತಿ ವರ್ಷ ಯಶ್ ಅವರ ಹುಟ್ಟು ಹಬ್ಬದ ದಿನದಂದು ಶುಭಾಶಯವನ್ನ ಹೇಳಲು ಮನೆಯ ಬಳಿ ಬರುತ್ತಿದ್ದರು.

Radhika help to Ravi

ಇನ್ನು ಹಿರಿಯ ನಟ ಅಂಬರೀಷ್ ಅವರ ನಿಧನದಿಂದ ಮತ್ತು ಇತ್ತೀಚಿಗೆ ನಡೆದ IT ದಾಳಿಯಿಂದ ಬೇಸರಗೊಂಡ ಯಶ್ ವರ್ಷದ ತನ್ನ ಹುಟ್ಟು ಹಬ್ಬವನ್ನ ನಿರಾಕರಿಸಿದ್ದರು ಮತ್ತು ಯಾರು ನನಗೆ ವಿಶ್ ಮಾಡಲು ಮನೆಯ ಮುಂದೆ ಬರಬೇಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹೇಳಿದ್ದರು.

ಇನ್ನು ಯಶ್ ಅವರು ಇಷ್ಟೆಲ್ಲ ಮನವಿ ಮಾಡಿದರು ರವಿ ಸೇರಿದಂತೆ ನೂರಾರು ಅಭಿಮಾನಿಗಳು ಮಂಗಳವಾರ ಬೆಳಿಗ್ಗೆ ಯಶ್ ಅವರ ಮನೆಯ ಮುಂದೆ ಜಮಾಯಿಸಿದ್ದರು. ಇನ್ನು ಈ ವರ್ಷ ತನ್ನ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಬಾರದು ಎಂದು ಬದ್ಧರಾಗಿದ್ದ ಯಶ್ ಬೆಳಿಗ್ಗೆನೇ ತನ್ನ ಕುಟುಂಬ ಸದಸ್ಯರ ಜೊತೆ ಹೊರಗೆ ಹೋಗಿದ್ದರು.

Radhika help to Ravi

ಇನ್ನು ಮದ್ಯಾಹ್ನದ ವರೆಗೂ ತಮ್ಮ ನೆಚ್ಚಿನ ನಟ ಬಾರದ ಕಾರಣ ಕಾದು ಬೇಸತ್ತ ರವಿ ಮದ್ಯಾಹ್ನ 2 ಘಂಟೆ ಸುಮಾರಿಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇನ್ನು ರವಿಯನ್ನ ಬೇಗನೆ ಆಸ್ಪತ್ರೆಗೆ ಸೇರಿಸಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ರವಿ ಪ್ರಣವನ್ನ ಬಿಟ್ಟಿದ್ದಾರೆ, ರವಿ ಏನೋ ಅಭಿಮಾನದ ಹೆಸರಿನಲ್ಲಿ ಹೋಗಿಬಿಟ್ಟರು ಆದರೆ ಈಗ ಇವರ ಕುಟುಂಬಕ್ಕೆ ದಿಕ್ಕು ಯಾರು.

ಯಾವುದೇ ಒಬ್ಬ ಅಭಿಮಾನಿ ಈ ರೀತಿ ಕುರುಡು ಅಭಿಮಾನವನ್ನ ಪ್ರದರ್ಶಿಸಬಾರದು, ಇನ್ನು ಕೆಟ್ಟ ಘಟನೆಯಿಂದ ತುಂಬಾ ನೊಂದಿರುವ ಯಶ್ ಈ ರೀತಿ ಯಾರು ಮಾಡಬಾರದು ಮತ್ತು ನಿಮ್ಮ ಮನೆಯವರಿಗೆ ಯಾರು ದಿಕ್ಕು ಎಂದು ಕಣ್ಣೀರು ಹಾಕಿದ್ದಾರೆ.

Radhika help to Ravi

ಇನ್ನು ಯಶ್ ಅವರು ಮೃತ ರವಿ ಕುಟುಂಬಕ್ಕೆ 5 ಲಕ್ಷ ರೂಪಾಯಿಯನ್ನ ನೀಡಿದ್ದಾರೆ, ಇನ್ನು ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ರಾಧಿಕಾ ಪಂಡಿತ್ ಅವರು ಕೂಡ ಇದರಿಂದ ಸಿಕ್ಕಾಪಟ್ಟೆ ಶಾಕ್ ಗೆ ಒಳಗಾಗಿದ್ದು ರಾಧಿಕಾ ಅವರು ಕೂಡ ಅಭಿಮಾನಿಯ ಕುಟುಂಬಕ್ಕೆ 5 ಲಕ್ಷ ಹಣವನ್ನ ನೀಡಿದ್ದು ನೀವು ಯಾವ ಸಮಯದಲ್ಲಿ ಕೂಡ ನಮ್ಮ ಬಳಿ ನಾವು ನಿಮಗೆ ಸಹಾಯವನ್ನ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ ಯಶ್ ಮತ್ತು ರಾಧಿಕಾ ಪಂಡಿತ್.

ಈ ಹಿಂದೆ ಯಶ್ ಅವರ ಅಭಿಮಾನಿ ಕಟ್ ಔಟ್ ಗೆ ಹಾರ ಹಾಕಲು ಹೋಗಿ ಕೈ ಕಳೆದುಕೊಂಡಾಗ ಯಶ್ ಅವರು ಅವರಿಗೆ ಸಹಾಯವನ್ನ ಮಾಡಿ ಕೈ ಹಾಕಿಸಿಕೊಟ್ಟಿದ್ದರು, ಒಟ್ಟಿನಲ್ಲಿ ಅಭಿಮಾನಿ ಮಾಡಿದ ಕೆಲಸದಿಂದ ನೋವಾಗಿದ್ದರು ಗಂಡ ಮತ್ತು ಹೆಂಡತಿ ಇಬ್ಬರೂ ಅಭಿಮಾನಿ ಕುಟುಂಬಕ್ಕೆ ನೇರವಾಗಿ ದೊಡ್ಡತನವನ್ನ ಮೆರೆದಿದ್ದಾರೆ.

ಸ್ನೇಹಿತರೆ ಯಶ್ ಮತ್ತು ರಾಧಿಕಾ ಪಂಡಿತ್ಜ್ ಅವರು ಅಭಿಮಾನಿ ರವಿ ಕುಟುಂಬಕ್ಕೆ ಸಹಾಯ ಮಾಡಿದ್ದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಯಶ್ ಅಭಿಮಾನಿಗೆ ತಲುಪಿಸಿ.

Radhika help to Ravi

Please follow and like us:
0
http://karnatakatoday.in/wp-content/uploads/2019/01/Radhika-Help-to-Ravi-1024x576.jpghttp://karnatakatoday.in/wp-content/uploads/2019/01/Radhika-Help-to-Ravi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಯಾರು ಕೂಡ ಊಹಿಸಲಾಗದ ಘಟನೆಯೊಂದು ಕನ್ನಡ ಚಿತ್ರರಂಗದಲ್ಲಿ ನಡೆದು ಹೋಗಿದೆ, ಹೌದು ಚಿತ್ರ ನಟ ಯಶ್ ತಮ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲು ನಿರಾಕರಿಸಿದ್ದರು. ಇನ್ನು ಇದರಿಂದ ಬೇಸರಗೊಂಡ ಯಶ್ ಅವರ ಅಭಿಮಾನಿ ಯಶ್ ಅವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ಮಾಡಿದ್ದಾನೆ, ಇನ್ನು ರವಿಯನ್ನ ಆಸ್ಪತ್ರೆಗೆ ಸೇರಿಸಿದರು ಆತನನ್ನ ಬದುಕಿಸಲು ಸಾಧ್ಯವಾಗಲಿಲ್ಲ. ಪಾವಗಡ ತಾಲೂಕಿನ ರವಿ 4 ವರ್ಷಗಳ ಹಿಂದೆ ನಗರಕ್ಕೆ ಬಂದು ಲಗ್ಗೆರೆಯಲ್ಲಿ ನೆಲೆಸಿದ್ದರು, ಇನ್ನು ಯಶ್...Kannada News