ಕನ್ನಡದ ಮನೆಮಗಳು ನಟಿ ರಾಧಿಕಾ ಈಗಲೂ ಕೂಡ ಹಲವಾರು ಅಭಿಮಾನಿ ಬಳಗ ಹೊಂದಿರುವ ಟಾಪ್ ನಟಿ ಸದ್ಯಕ್ಕೆ ಅಷ್ಟೊಂದು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳದಿದ್ದರು ಒಂದೆರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಇತ್ತೀಚಿಗೆ ಶೂಟಿಂಗ್ ಸಂದರಾಬಾದಲ್ಲಿ ನಡೆದ ಅವಘಡ ಅವರಿಗೆ ಭಾರಿ ಆಘಾತವನ್ನು ಉಂಟು ಮಾಡಿದೆ. ಇಷ್ಟಕ್ಕೂ ನಡೆದ ಘಟನೆ ಏನು, ನಟಿ ರಾಧಿಕಾಗೆ ಏನಾಗಿದೆ ಎನ್ನುವದರ ಸಂಪೂರ್ಣ ವರದಿ ನಿಮಗೆ ತಿಳಿಸುತ್ತಿದ್ದೇವೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ಮುಂದಿನ ಚಿತ್ರ ಭೈರಾದೇವಿ’ ಶೂಟಿಂಗ್ ವೇಳೆ ಬಿದ್ದು ಏಟು ಮಾಡಿಕೊಂಡಿದ್ದಾರೆ. ‘ಭೈರಾದೇವಿ’ ಚಿತ್ರದಲ್ಲಿ ರಾಧಿಕಾ ‘ಅಘೋರಿ’ ಪಾತ್ರ ಮಾಡುತ್ತಿದ್ದು ಗೋರಿ ಮೇಲಿಂದ ಕೆಳಗಿಳಿಯುವಾಗ ಆಯತಪ್ಪಿ ಬಿದ್ದು ಕೆಳಗುರುಳಿ ಬೆನ್ನಿನ ಹುರಿಗೆ ಏಟಾಗಿದೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಶಾಂತಿನಗರದ ಬಳಿ ಭೈರಾದೇವಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನಾಯಕಿ ಪಾತ್ರಧಾರಿ ರಾಧಿಕಾ ಕುಮಾರಸ್ವಾಮಿ ಅಘೋರಿ ಪಾತ್ರದಲ್ಲಿ ನಟಿಸುತ್ತಿದ್ದ ವೇಳೆ ಗೋರಿಯ ಮೇಲೆ ಹತ್ತಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಕೆಳಗಿಳಿಯುವಾಗ ರಾಧಿಕಾ ಆಯತಪ್ಪಿ ಕೆಳಗೆ ಬಿದ್ದರು. ತಕ್ಷಣವೇ ಅವರಿಗೆ ವೈದ್ಯಕೀಯ ಉಪಚಾರ ನಡೆಸಲಾಗಿದೆ.

ಅವರನ್ನು ಪರೀಕ್ಷಿಸಿ ವೈದ್ಯರು ಬೆನ್ನಿನ ಹುರಿ ಭಾಗಕ್ಕೆ ಪೆಟ್ಟುಬಿದ್ದಿದ್ದು ಒಂದು ತಿಂಗಳು ವಿಶ್ರಾಂತಿ ಬೇಕು ಎಂದಿದ್ದಾರೆ ಎಂದು ಭೈರಾದೇವಿ ಚಿತ್ರತಂಡ ಹೇಳಿದೆ.ಭೈರಾದೇವಿ ಒಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ಸ್ವತಃ ರಾಧಿಕಾ ಅವರೇ ತಮ್ಮ ಶಮಿಕಾ ಎಂಟರ್ ಪ್ರೈಸಸ್ ಅಡಿ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ಖಳನಟ ರವಿಶಂಕರ್ ಹಾಗೂ ನಟ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ‘ಆರ್‌ಎಕ್ಸ್‌ ಸೂರಿ ‘ ಚಿತ್ರ ನಿರ್ದೇಶಿಸಿದ್ದ ಶ್ರೀಜಯ್ ಭೈರಾದೇವಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಬರಲಿ ಎನ್ನುವುದೇ ಅವರ ಅಭಿಮಾನಿಗಳ ಆಶಯವಾಗಿದೆ, ರಾಧಿಕಾ ಅರೋಗ್ಯ ಬೇಗ ಸುಧಾರಿಸಲಿ ಎನ್ನೋಣ.

Please follow and like us:
0
http://karnatakatoday.in/wp-content/uploads/2019/02/radhika-kumarswami-1024x576.jpghttp://karnatakatoday.in/wp-content/uploads/2019/02/radhika-kumarswami-150x104.jpgKarnataka Today's Newsಅಂಕಣಚಲನಚಿತ್ರಕನ್ನಡದ ಮನೆಮಗಳು ನಟಿ ರಾಧಿಕಾ ಈಗಲೂ ಕೂಡ ಹಲವಾರು ಅಭಿಮಾನಿ ಬಳಗ ಹೊಂದಿರುವ ಟಾಪ್ ನಟಿ ಸದ್ಯಕ್ಕೆ ಅಷ್ಟೊಂದು ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳದಿದ್ದರು ಒಂದೆರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಇತ್ತೀಚಿಗೆ ಶೂಟಿಂಗ್ ಸಂದರಾಬಾದಲ್ಲಿ ನಡೆದ ಅವಘಡ ಅವರಿಗೆ ಭಾರಿ ಆಘಾತವನ್ನು ಉಂಟು ಮಾಡಿದೆ. ಇಷ್ಟಕ್ಕೂ ನಡೆದ ಘಟನೆ ಏನು, ನಟಿ ರಾಧಿಕಾಗೆ ಏನಾಗಿದೆ ಎನ್ನುವದರ ಸಂಪೂರ್ಣ ವರದಿ ನಿಮಗೆ ತಿಳಿಸುತ್ತಿದ್ದೇವೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ಮುಂದಿನ...Kannada News