ಕನ್ನಡದ ಖ್ಯಾತ ನಟಿ ರಾಧಿಕಾ ಪಂಡಿತ್ ಅವರಿಗೆ ಮೊನ್ನೆ ಎರಡನೆಯ ಮಗುವಿನ ಡೆಲಿವರಿ ಆಗಿ ಗಂಡು ಮಗು ಜನಿಸಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ರಾಧಿಕಾ ಪಂಡಿತ್ ಅವರಿಗೆ ಗಂಡು ಹುಟ್ಟಿದ್ದಕ್ಕೆ ಯಶ್ ಅಭಿಮಾನಿಗಳು ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು ಶುಭಾಶಯವನ್ನ ಕೋರಿದ್ದಾರೆ ಮತ್ತು ರಾಧಿಕಾ ಪಂಡಿತ್ ಅವರ ಅತ್ತೆ ಅಂದರೆ ಯಶ್ ಅವರ ತಾಯಿ ಮಗು ಸೇಮ್ ತನ್ನ ಯಶ್ ತರಾನೇ ಇದೆ ಎಂದು ಹೇಳಿದ್ದಾರೆ. ಇನ್ನು ಕನ್ನಡ ಮತ್ತು ಹಲವು ಭಾಷೆಯ ಸ್ಟಾರ್ ನಟಿಯರ ಡೆಲಿವರಿಯ ಬಗ್ಗೆ ಕೇಳುತ್ತಲೇ ಇರುತ್ತೇವೆ, ಆದರೆ ಆ ನಟಿಯರಿಗೆ ಡೆಲಿವರಿ ಮಾಡಿದ ವೈದ್ಯರ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಇನ್ನು ರಾಧಿಕಾ ಪಂಡಿತ್ ಅವರ ವಿಷಯದಲ್ಲಿ ಇದು ಭಿನ್ನ ಅಂತಾನೆ ಹೇಳಬಹುದು, ರಾಧಿಕಾ ಪಂಡಿತ್ ಅವರಿಗೆ ಡೆಲಿವರಿ ಮಾಡಿದ ಡಾಕ್ಟರ್ ಸ್ವರ್ಣವ್ರತ ಅವರು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು.

ಇನ್ನು ಡೆಲಿವರಿಯ ನಂತರ ಡಾಕ್ಟರ್ ಕೊಡುವ ಹೇಳಿಕೆಯ ಮೇಲೆ ಗೊತ್ತಾಗುತ್ತದೆ ಈ ನಟಿಗೆ ಡೆಲಿವರಿ ಮಾಡಿದ ಡಾಕ್ಟರ್ ಇವರೇ ಎಂದು, ಇನ್ನು ಬಹಳ ಕಷ್ಟದ ಸಮಯದಲ್ಲಿ ತನ್ನ ಜೊತೆಗೆ ಇದ್ದ ಡಾಕ್ಟರ್ ಸ್ವರ್ಣವ್ರತ ಅವರನ್ನ ರಾಧಿಕಾ ಪಂಡಿತ್ ಅವರು ಯಾವಾಗಲು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ರಾಧಿಕಾ ಪಂಡಿತ್ ಅವರಿಗೆ ಎರಡು ಭಾರಿ ಕೂಡ ಸೀಸರಿನ್ ಮಾಡುವ ಮೂಲಕ ಹೆರಿಗೆ ಮಾಡಿದ್ದು ಡಾಕ್ಟರ್ ಸ್ವರ್ಣವ್ರತ ಅವರು, ರಾಧಿಕಾ ಪಂಡಿತ್ ಅವರ ತಮ್ಮ ಸ್ವಂತ ತಂಗಿಯಂತೆ ನೋಡುವ ಇವರು ಯಶ್ ಕುಟುಂಬಕ್ಕೆ ತುಂಬಾ ಆತ್ಮೀಯರು.

Radhika Pandith Delevary doctor

ಇನ್ನು ಡಾಕ್ಟರ್ ಸ್ವರ್ಣವ್ರತ ಅವರು ಕನ್ನಡದ ಖ್ಯಾತ ನಟಿಯ ತಾಯಿ ಅನ್ನುವುದು ತುಂಬಾ ಜನರಿಗೆ ತಿಳಿದಿಲ್ಲ, ಹಾಗಾದರೆ ಆ ಕನ್ನಡ ಟಾಪ್ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಡಾಕ್ಟರ್ ಸ್ವರ್ಣವ್ರತ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕಿಸ್ ಚಿತ್ರದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿ ಭರಾಟೆ ಚಿತ್ರದಲ್ಲಿ ತನ್ನ ಅಮೋಘವಾದ ನಟನೆಯ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನಟಿ ಶ್ರೀಲಿಲಾ ಅವರು ಡಾಕ್ಟರ್ ಸ್ವರ್ಣವ್ರತ ಅವರ ಮಗಳು, ಹೌದು ಸ್ನೇಹಿತರೆ ನಟಿ ಶ್ರೀಲಿಲಾ ಅವರ ತಾಯಿಯೇ ರಾಧಿಕಾ ಪಂಡಿತ್ ಅವರಿಗೆ ಹೆರಿಗೆ ಮಾಡಿದ ಡಾಕ್ಟರ್ ಸ್ವರ್ಣವ್ರತ ಅವರು.

ತಾಯಿಯಂತೆ ತಾನು ಒಬ್ಬ ಡಾಕ್ಟರ್ ಆಗಬೇಕು ಅಂದುಕೊಂಡಿದ್ದ ನಟಿ ಶ್ರೀಲಿಲಾ PUC ಓದುತ್ತಿದ್ದಾಗ ಅಚಾನಕ್ಕಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿ ಈಗ ಭರಾಟೆ ಚಿತ್ರದಲ್ಲಿ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದಷ್ಟೇ ಅಲ್ಲದೆ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಜೊತೆ ತುಂಬಾ ಆತ್ಮೀಯತೆಯನ್ನ ಹೊಂದಿರುವ ನಟಿ ಶ್ರೀಲಿಲಾ ಅವರನ್ನ ಅಕ್ಕ ಭಾವ ಎಂದು ಕರೆಯುತ್ತಾರೆ. ಸ್ನೇಹಿತರೆ ಡಾಕ್ಟರ್ ಸ್ವರ್ಣವ್ರತ ಮತ್ತು ನಟಿ ಶ್ರೀಲಿಲಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Radhika Pandith Delevary doctor

Please follow and like us:
error0
http://karnatakatoday.in/wp-content/uploads/2019/11/Radhika-baby-Doctor-1024x576.jpghttp://karnatakatoday.in/wp-content/uploads/2019/11/Radhika-baby-Doctor-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನ್ನಡದ ಖ್ಯಾತ ನಟಿ ರಾಧಿಕಾ ಪಂಡಿತ್ ಅವರಿಗೆ ಮೊನ್ನೆ ಎರಡನೆಯ ಮಗುವಿನ ಡೆಲಿವರಿ ಆಗಿ ಗಂಡು ಮಗು ಜನಿಸಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ರಾಧಿಕಾ ಪಂಡಿತ್ ಅವರಿಗೆ ಗಂಡು ಹುಟ್ಟಿದ್ದಕ್ಕೆ ಯಶ್ ಅಭಿಮಾನಿಗಳು ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು ಶುಭಾಶಯವನ್ನ ಕೋರಿದ್ದಾರೆ ಮತ್ತು ರಾಧಿಕಾ ಪಂಡಿತ್ ಅವರ ಅತ್ತೆ ಅಂದರೆ ಯಶ್ ಅವರ ತಾಯಿ ಮಗು ಸೇಮ್ ತನ್ನ ಯಶ್ ತರಾನೇ ಇದೆ ಎಂದು ಹೇಳಿದ್ದಾರೆ. ಇನ್ನು...Film | Devotional | Cricket | Health | India