Yash Radhika Baby

ಹೌದು ಕೆಲವರು ಡಿಸೆಂಬರ್ 21 ಕ್ಕೆ ರಿಲೀಸ್ ಆಗುವ ಯಶ್ ಅವರ KGF ಸಿನಿಮಾಗೆ ಕಾಯುತಿದ್ದರೆ, ಇನ್ನು ಕೆಲವು ಯಶ್ ಅಭಿಮಾನಿಗಳು, ಯಶ್ ದಂಪತಿಗೆ ಜನಿಸುವ ಮಗುವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಈ ಹಿಂದೆ ಕಾರ್ಯಕ್ರಮದಲ್ಲಿ ನನಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ಹೇಳಿದರು ಮತ್ತು ನಮ್ಮ ನಿಮ್ಮೆಲ್ಲರ ಕಲಿಯುಗದ ಕರ್ಣ ಅಂಬರೀಷ್ ಅವರು ಯಶ್ ಅವರ ಬಳಿ ನಿನಗೆ ತನ್ನ ತರಾನೇ ಇರುವ ಗಂಡು ಮಗು ಹುಟ್ಟುತ್ತದೆ ಎಂದು ಹೇಳಿದ್ದರು ಹಾಗೆ ವೈದ್ಯರು ಇದೆ ಡಿಸೆಂಬರ್ 9 ಅಥವಾ 9 ಕ್ಕಿಂತ ಮುಂಚೆ ರಾಧಿಕಾ ಅವರಿಗೆ ಡೆಲಿವರಿ ಆಗುವ ಸಾಧ್ಯತೆ ಇದೆ ಎಂದು ಡೇಟ್ ಕೊಟ್ಟಿದ್ದರು.

Yash Radhika Baby

ನಮ್ಮ ಅಂಬಿ ಹೇಳಿದ ಮಾತಿಗೆ ಉತ್ತರ ಕೊಟ್ಟ ಯಶ್ ಅವರು ಕಲಿಯುಗಕ್ಕೆ ಒಬ್ಬನೇ ಕರ್ಣ ಅದು ನೀವು ಮತ್ತು ಚಿತ್ರರಂಗಕ್ಕೆ ಒಬ್ಬನೇ ರೆಬಲ್ ಸ್ಟಾರ್ ಅದು ಅಂಬರೀಶ ಅವರು ಮಾತ್ರ ಎಂದು ಅಂಬಿ ಅವರಿಗೆ ಹೇಳಿದ್ದರು ರಾಕಿಂಗ್ ಸ್ಟಾರ್ ಯಶ್.

ಇನ್ನು ಯಶ್ ಮತ್ತು ಅವರ ಕುಟುಂಬವು ರಾಧಿಕಾ ಅವರಿಗೆ ಕಳೆದ ವಾರವಷ್ಟೇ ಸೀಮಂತವನ್ನ ಮಾಡುವುದರ ಮೂಲಕ ಒಬ್ಬ ಗರ್ಭಿಣಿ ಹೆಣ್ಣಿಗೆ ಮಾಡಬೇಕಾದ ಎಲ್ಲಾ ಶಾಸ್ತ್ರಗಳನ್ನ ಮುಗಿಸಿ ರಾಧಿಕಾ ಪಂಡಿತ್ ಅವರಿಗೆ ಆಶೀರ್ವಾದವನ್ನ ಮಾಡಿದ್ದರು.

Yash Radhika Baby

ಇನ್ನು ಅಂಬಿಯನ್ನ ಕಳೆದುಕೊಂಡು ನೋವಿನಲ್ಲಿರುವ ಅಭಿಮಾನಿಗಳಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಗುಡ್ ನ್ಯೂಸ್ ಒಂದನ್ನ ನೀಡಿದ್ದಾರೆ ಇಂದು 6:10 ನಿಮಿಶಕ್ಕೆ ಯಶ್ ಆಸೆಯಂತೆ ರಾಧಿಕಾ ಯಶ್ ಅವರಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ, ಒಂದೆಡೆ KGF ಎಲ್ಲ ದಾಖಲೆಗಳನ್ನು ಮುರಿದು ಯಶಸ್ಸು ಕಾಣಲು ಹೊರಟಿದ್ದಾರೆ ಇನ್ನೊಂದಡೆ ಮನೆಗೆ ಮುದ್ದಾದ ಹೆಣ್ಣು ಮಗು ಬಂದಿರೋದು ಯಶ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

ಯಶ್ ಅವರಿಗೆ ಹೆಣ್ಣು ಮಗು ಆಗಿದೆ ಎಂದ ಕೂಡಲೇ ಅಭಿಮಾನಿಗಳ ಸಂತೋಸ ಮುಗಿಲು ಮುಟ್ಟಿದೆ, ನಿಮಗೂ ಸಂತಸ ತಂದಿದೆ ಅಂದುಕೊಳ್ಳುತ್ತೇನೆ ಸ್ನೇಹಿತರೆ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ವಿಶ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ .

Yash Radhika Baby

Please follow and like us:
0
http://karnatakatoday.in/wp-content/uploads/2018/12/Yash-Radhika-Baby-1024x576.jpghttp://karnatakatoday.in/wp-content/uploads/2018/12/Yash-Radhika-Baby-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೌದು ಕೆಲವರು ಡಿಸೆಂಬರ್ 21 ಕ್ಕೆ ರಿಲೀಸ್ ಆಗುವ ಯಶ್ ಅವರ KGF ಸಿನಿಮಾಗೆ ಕಾಯುತಿದ್ದರೆ, ಇನ್ನು ಕೆಲವು ಯಶ್ ಅಭಿಮಾನಿಗಳು, ಯಶ್ ದಂಪತಿಗೆ ಜನಿಸುವ ಮಗುವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಕಾರ್ಯಕ್ರಮದಲ್ಲಿ ನನಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ಹೇಳಿದರು ಮತ್ತು ನಮ್ಮ ನಿಮ್ಮೆಲ್ಲರ ಕಲಿಯುಗದ ಕರ್ಣ ಅಂಬರೀಷ್ ಅವರು ಯಶ್ ಅವರ ಬಳಿ ನಿನಗೆ ತನ್ನ ತರಾನೇ ಇರುವ ಗಂಡು ಮಗು ಹುಟ್ಟುತ್ತದೆ ಎಂದು...Kannada News