ಭಾರತೀಯ ಕ್ರಿಕೆಟ್ ತಂಡದ ಗ್ರೇಟ್ ವಾಲ್ ಎಂದೇ ಖ್ಯಾತರಾಗಿರುವ ವಿಶ್ವದ ಮಹಾನ್ ಆಟಗಾರ ರಾಹುಲ್ ದ್ರಾವಿಡ್ ಗೆ ಈ ಬಾರಿಯ ಚುನಾವಣೆ ಶಾಕ್ ನೀಡಿದೆ. ಹೌದು ಈ ಬಾರಿ ಮತದಾನವನ್ನು ಅವರು ಮಾಡಲು ಸಾಧ್ಯವಾಗಲ್ಲ. ಇಷ್ಟಕ್ಕೂ ಈ ಸಂಕಷ್ಟಕ್ಕೆ ಕಾರಣವೇನು ತಿಳಿದುಕೊಳ್ಳೋಣ. ಚುನಾವಣಾ ರಾಯಭಾರಿಯಾಗಿರುವ, ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗರಾಗಿರುವ ರಾಹುಲ್​ ದ್ರಾವಿಡ್​ ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿ. 2018ರ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರಿಗೆ ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ ರಾಹುಲ್​ ದ್ರಾವಿಡ್​ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆಶ್ಚರ್ಯವಾದರೂ ಇದು ಸತ್ಯ. ಈ ಬಾರಿ ದ್ರಾವಿಡ್​ ಕುಟುಂಬ ಮತದಾನದ ಹಕ್ಕಿನಿಂದ ವಂಚಿತವಾಗಿದೆ.


ಹೌದು, ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತಿದ್ದ ರಾಹುಲ್ ದ್ರಾವಿಡ್ ಈ ಬಾರಿ ಮತದಾನ ಮಾಡುವಂತಿಲ್ಲ. ವಿಳಾಸ ಬದಲಾವಣೆಯಾದರೂ ಫಾರ್ಮ್ 6 ನ್ನು ಸರಿಯಾದ ಸಮಯಕ್ಕೆ ಸಲ್ಲಿಸದೇ ಇದ್ದದ್ದು ಇದಕ್ಕೆ ಕಾರಣ. ಇಂದಿರಾ ನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಮತ್ತಿಕೆರೆಗೆ ಸ್ಥಳಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ಅವರ ಸಹೋದರ ವಿಜಯ್ ಶಾಂತಿನಗರ ವಿಧಾನಸಭಾ ವ್ಯಾಪ್ತಿಗೆ ಬರುವ ಚುನಾವಣಾ ಅಧಿಕಾರಿಗಳಿಗೆ ಫಾರ್ಮ್ 7 ನ್ನು ( ಹೆಸರನ್ನು ಅಳಿಸಿಹಾಕುವುದಕ್ಕೆ ನೀಡಲಾಗುವ ಫಾರ್ಮ್) ನೀಡಿ ರಾಹುಲ್ ದ್ರಾವಿಡ್ ಹೆಸರನ್ನು ತೆಗೆಸಿದ್ದರು.


ವಿಳಾಸ ಬದಲಾದ ನಂತರ ದ್ರಾವಿಡ್​ ಮನೆಗೆ ನಮ್ಮ ಸಿಬ್ಬಂದಿಗಳು ಹೋಗಿದ್ದರು. ಅವರ ಕುಟುಂಬದ ಸದಸ್ಯರು ಮನೆಯೊಳಗೆ ಬಿಡಲಿಲ್ಲ. ಈ ಬಗ್ಗೆ ಸ್ಪೇನ್ ಪ್ರವಾಸದಲ್ಲಿದ್ದ ರಾಹುಲ್​ ಅವರ ಗಮನಕ್ಕೂ ಕೂಡ ತರಲಾಯಿತು, ಆದರೆ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಚುನಾವಣಾ ಅಧಿಕಾರಿ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ತಿಳಿಸಿದ್ದಾರೆ.


ಮಾರ್ಚ್​ 16ಕ್ಕೆ ಮುಂಚೆ ರಾಹುಲ್ ದ್ರಾವಿಡ್ ಫಾರ್ಮ್​ 6 ನೀಡಿದ್ದರೆ ಅವರ ಹೆಸರು ದಾಖಲಾಗುತ್ತಿದ್ದು . ಇದನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ. ಚುನಾವಣೆ ನಂತರವೇ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹೇಳಿದ್ದಾರೆ. ಅದೇನೇ ಇರಲಿ ರಾಹುಲ್ ಈ ಬಾರಿ ಮತದಾನದಿಂದ ವಂಚಿತರಾಗಿದ್ದಕ್ಕೆ ಬಹಳ ಬೇಸರವಿದೆ. ಈ ಬಗ್ಗೆ ಅವರು ಇನ್ನು ಯಾವುದೇ ಹೇಳಿಕೆ ನೀಡಿಲ್ಲ.

Please follow and like us:
0
http://karnatakatoday.in/wp-content/uploads/2019/04/dravid-cannot-vote-1024x576.jpghttp://karnatakatoday.in/wp-content/uploads/2019/04/dravid-cannot-vote-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಭಾರತೀಯ ಕ್ರಿಕೆಟ್ ತಂಡದ ಗ್ರೇಟ್ ವಾಲ್ ಎಂದೇ ಖ್ಯಾತರಾಗಿರುವ ವಿಶ್ವದ ಮಹಾನ್ ಆಟಗಾರ ರಾಹುಲ್ ದ್ರಾವಿಡ್ ಗೆ ಈ ಬಾರಿಯ ಚುನಾವಣೆ ಶಾಕ್ ನೀಡಿದೆ. ಹೌದು ಈ ಬಾರಿ ಮತದಾನವನ್ನು ಅವರು ಮಾಡಲು ಸಾಧ್ಯವಾಗಲ್ಲ. ಇಷ್ಟಕ್ಕೂ ಈ ಸಂಕಷ್ಟಕ್ಕೆ ಕಾರಣವೇನು ತಿಳಿದುಕೊಳ್ಳೋಣ. ಚುನಾವಣಾ ರಾಯಭಾರಿಯಾಗಿರುವ, ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಈ ಬಾರಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಭಾರತದ ಮಾಜಿ...Kannada News