Toady Semi Final Match

ತೀವ್ರ ಕುತೂಹಲ ಮೂಡಿಸಿರುವ ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿದ್ದು ಇಂದು ಪಂದ್ಯ ಮುಂದುವರೆಯಲಿದೆ. ಸದ್ಯ ಪಂದ್ಯ ವರುಣನ ಅವಕೃಪೆಗೆ ಗುರಿಯಾಗಿದೆ, ಪಂದ್ಯ ರದ್ದಾಗುವಾಗ ನ್ಯೂಜಿಲ್ಯಾಂಡ್ 46 ಓವರ್ ವೇಳೆ 5 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿದೆ, ಇಂದು ಪಂದ್ಯವನ್ನು ಅಲ್ಲಿಂದಲೆ ಮುಂದುವರೆಯುತ್ತೇ.

ಆದರೆ ಪಂದ್ಯಾಟಕ್ಕೆ ಮಳೆ ಅಡ್ಡಿ ಆಗಿದ್ದರಿಂದ ಹಲವಾರು ಮಂದಿ ಭಾರತ ತಂಡಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ, ವಾಸ್ತವಾಂಶ ನೋಡಿದರೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಅಲ್ಲಿಗೆ ಪಂದ್ಯವನ್ನು ರದ್ದು ಮಾಡಲಾಗುತ್ತದೆ.

ಇನ್ನು ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ 15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಫೈನಲ್ ಗೆ ನೇರವಾಗಿ ಪ್ರವೇಶ ಸಿಗುತ್ತದೆ, ಇನ್ನು 11 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಫೈನಲ್ ಗೇರುವ ಅವಕಾಶದಿಂದ ವಂಚಿತವಾಗುವ ಸಾಧ್ಯತೆ ಇದೆ.

Toady Semi Final Match

ಇನ್ನು ಕೇವಲ ಮಳೆ ಬಂದರೆ ಮಾತ್ರ ಭಾರತಕ್ಕೆ ಈ ಅವಕಾಶ, ಒಂದುವೇಳೆ ಮಳೆಯಿಂದ ಪಂದ್ಯ ರದ್ದಾಗಲಿಲ್ಲ ಎಂದರೆ ಡಕ್ ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ದೊಡ್ಡ ಶಾಕ್ ಎದುರಾಗಲಿದೆ. ಮೂಲಗಳ ಪ್ರಕಾರ ನ್ಯೂಜಿಲೆಂಡ್ ಇನ್ನಿಂಗ್ಸ್ ಮುಗಿದ ಬಳಿಕ ಮತ್ತೆ ಮಳೆ ಆರಂಭ ಆದರೆ ಭಾರತಕ್ಕೆ ಓವರ್ ಗಳ ಕಡಿತ ಆರಂಭ ಆಗುತ್ತದೆ ಅಂದರೆ ಕಡಿಮೆ ಓವರ್ ಗಳಲ್ಲಿ ಭಾರತ ನಿರ್ದಿಷ್ಟ ಗುರಿ ತಲುಪಬೇಕಾಗುತ್ತದೆ.

ಭಾರತ ಈಗಾಗಲೇ ನ್ಯೂಜಿಲೆಂಡ್ ತಂಡದ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಕಡಿಮೆ ರನ್ನಿಗೆ ಕಟ್ಟಿ ಹಾಕಿದೆ, ಒಂದು ವೇಳೆ ಐವತ್ತು ಓವರ್ ಗಳ ಪಂದ್ಯಾಟ ನಡೆದಿದ್ದರೆ ಭಾರತ ನಿಧಾನವಾಗಿ ಸ್ಕೊರ್ ಚೆಸ್ ಮಾಡುತ್ತಿತ್ತು. ಮಳೆಯಿಂದ ಓವರ್ ಗಳ ಸಂಖ್ಯೆ ಕಡಿತವಾಗುವುದರಲ್ಲಿ ಅನುಮಾನವೇ ಇಲ್ಲ ಹೀಗಾಗಿ ಭಾರತಕ್ಕೆ, ಇಪ್ಪತ್ತು ಓವರ್ ಗಳ ಪಂದ್ಯಾಟ ನಡೆಯಲೂಬಹುದು, ಒಂದು ವೇಳೆ ಟಿ 20 ನಡೆದರೆ ಭಾರತ ಇಪ್ಪತ್ತು ಓವರ್ ಗಳಲ್ಲಿ 148 ರನ್ ಗುರಿ ನೀಡಲಾಗುತ್ತದೆ.

Toady Semi Final Match

ಹೇಳಿ ಕೇಳಿ ಭಾರತದ ಮಧ್ಯಮ ಕ್ರಮಾಂಕ ಇನ್ನು ಸರಿಯಾಗಿ ಉತ್ತಮ ಪ್ರದರ್ಶನ ನೀಡಿಲ್ಲ ಒಂದು ವೇಳೆ ಓಪನರ್ ಬ್ಯಾಟ್ಸಮನ್ ಗಳು ಕೈಕೊಟ್ಟರೆ ಭಾರತಕ್ಕೆ ಕಡಿವಾಣ ಹಾಕಲು ಕಿವೀಸ್ ಕಾಯುತ್ತಿದೆ, ಹೀಗಾಗಿ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ನಡೆಸಬೇಕಾದ ಅನಿವಾರ್ಯತೆ ಭಾರತಕ್ಕಿದೆ.

ಮಳೆ ಜೋರಾಗಿ ಬಂದು ಪಂದ್ಯಾಟ ರದ್ದುಗೊಂಡರೆ ಮಾತ್ರ ಭಾರತಕ್ಕೆ ಲಾಭ, ಇಲ್ಲವಾದಲ್ಲಿ ಭಾರತಕ್ಕೆ ಡಕ್ ವರ್ಥ್ ಲೂಯಿಸ್ ನಿಯಮ ಮುಳುವಾಗಬಹುದೋ ಏನೋ, ಏನೇ ಆಗಲಿ ಭಾರತ ತಂಡ ಇದೀಗ ಸೂಪರ್ ಫಾರ್ಮ್ ನಲ್ಲಿದೆ ಆದರೆ ಇಪ್ಪತ್ತು ಓವರ ಗಳ ಪಂದ್ಯಾಟ ಯಾರ ಪಾಲಾಗಲಿದೆ ಎನ್ನುವುದು ಊಹಿಸವುದೇ ಕಷ್ಟ, ನಿಮಗೂ ಕೂಡ ಈ ವಿಮರ್ಶೆ ಇಷ್ಟವಾಗಿದ್ದರೆ ಹಂಚಿಕೊಳ್ಳಿ, ಯಾವುದೇ ಅಡೆತಡೆ ಬಂದರೂ ಕೂಡ ಭಾರತ ಫೈನಲ್ ಪ್ರವೇಶಿಸಿ ಕಪ್ ತರಲಿ ಎನ್ನುವುದೇ ನಮ್ಮ ಆಶಯ.

Toady Semi Final Match

Please follow and like us:
error0
http://karnatakatoday.in/wp-content/uploads/2019/07/rain-wc-1024x576.jpghttp://karnatakatoday.in/wp-content/uploads/2019/07/rain-wc-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಕ್ರಿಕೆಟ್ಸುದ್ದಿಜಾಲತೀವ್ರ ಕುತೂಹಲ ಮೂಡಿಸಿರುವ ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿದ್ದು ಇಂದು ಪಂದ್ಯ ಮುಂದುವರೆಯಲಿದೆ. ಸದ್ಯ ಪಂದ್ಯ ವರುಣನ ಅವಕೃಪೆಗೆ ಗುರಿಯಾಗಿದೆ, ಪಂದ್ಯ ರದ್ದಾಗುವಾಗ ನ್ಯೂಜಿಲ್ಯಾಂಡ್ 46 ಓವರ್ ವೇಳೆ 5 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿದೆ, ಇಂದು ಪಂದ್ಯವನ್ನು ಅಲ್ಲಿಂದಲೆ ಮುಂದುವರೆಯುತ್ತೇ. ಆದರೆ ಪಂದ್ಯಾಟಕ್ಕೆ ಮಳೆ ಅಡ್ಡಿ ಆಗಿದ್ದರಿಂದ ಹಲವಾರು ಮಂದಿ ಭಾರತ ತಂಡಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ,...Film | Devotional | Cricket | Health | India