Raita Bandhu Yojana

ನಮ್ಮ ಕೇಂದ್ರ ಸರ್ಕಾರವು ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಯೋಜನೆಯನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಬಡವರಿಗೆ ಮತ್ತು ರೈತರಿಗಾಗಿ ಹಲವು ಯೋಜನೆಯನ್ನ ಜಾರಿಗೆ ತಂದಿದೆ ನಮ್ಮ ಕೇಂದ್ರ ಸರ್ಕಾರ. ಇನ್ನು ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬಕ್ಕೆ ಮೋದಿ ಸರ್ಕಾರ ಬಡವರಿಗೆ ಮತ್ತು ರೈತರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ.

ಇನ್ನು ಆ ಬಂಪರ್ ಗಿಫ್ಟ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವನಿಗೆ ಮತ್ತು ರೈತರಿಗೆ ತಲುಪಿಸಿ.

Raita Bandhu Yojana

ಭಾರತ ದೇಶದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಒಂದು ದೊಡ್ಡ ಯೋಜನೆಯನ್ನ ಜಾರಿಗೆ ತಂದಿದ್ದಾರೆ ನಮ್ಮ ಪ್ರಧಾನ ಮಂತ್ರಿ ಮೋದಿಯವರು, ಬಡತನ ಮತ್ತು ಪೌಷ್ಟಿಕ ಆಹಾರ ಸಮಸ್ಯೆಯನ್ನ ನೀಗಿಸುವ ಈ ಯೋಜನೆ ತುಂಬಾ ಉಪಕಾರಿಯಾಗಲಿದೆ.

ಇನ್ನು ಆ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಕೊಡುತ್ತೀ ಓದಿ, “ಸಾರ್ವತ್ರಿಕ ಕನಿಷ್ಠ ಆದಾಯ” ಯೋಜನೆಯನ್ನ ಜಾರಿಗೆ ತರಲು ಮೋದಿ ಸರ್ಕಾರ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡಿದೆ. ಇನ್ನು ಈ ಯೋಜನೆಯ ಅನ್ವಯ ಫಲಾನುಭವಿಗಳಿಗೆ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ನೇರವಾಗಿ 2500 ರೂಪಾಯಿ ಬಂದು ಬೀಳಲಿದೆ.

Raita Bandhu Yojana

ಇನ್ನು ದೇಶದ ಜನಸಂಖ್ಯೆಯಲ್ಲಿ 27% ರಷ್ಟು ಜನರು ಬಡವರು ಇದ್ದಾರೆ, ಅವರ ಹಸಿವನ್ನ ನೀಗಿಸುವ ಈ ಯೋಜನೆ ದೇಶದ ಬಡವರಿಗೆ ತುಂಬಾ ಉಪಕಾರಿಯಾಗಲಿದೆ. ಇನ್ನು ಈ ಯೋಜನೆಯನ್ನ ಜಾರಿಗೆ ತರಲು ಮಾರ್ಚ್ ನಿಂದ ಜಾರಿಗೆ ತರಲು ಸರ್ಕಾರ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.

ಹಾಗಾದರೆ ರೈತರಿಗಾಗಿ ತಂದಿರುವ ಹೊಸ ಯೋಜನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ, ರೈತರಿಗಾಗಿ “ರೈತ ಬಂಧು” ಯೋಜನೆಯನ್ನ ಜಾರಿಗೆ ತರಲು ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡಿದೆ ಮೋದಿ ಸರ್ಕಾರ.

Raita Bandhu Yojana

ಇನ್ನು ಈ ಯೋಜನೆಯ ಅನ್ವಯ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರತಿ ತಿಂಗಳು ತಲಾ 4 ಸಾವಿರ ನೀಡುವ ಯೋಜನೆ ಇದಾಗಿದೆ, ಇನ್ನು ಈ ಎರಡು ಯೋಜನೆಗಳು ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಜಾರಿ ಮಾಡಲು ಮುಂದಾಗಿದೆ ಮೋದಿಯವರು. ಹಾಗೆ ಅವರ ಜಮೀನಿನ ಎಕರೆಗೆ ಅನುಗುಣವಾಗಿ 8000 ರೂಪಾಯಿಯ ವರೆಗೂ ಕೂಡ ಸಿಗಲಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ವರ್ಗದ ಜನರಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ ಮೋದಿಯವರು, ಏನೇ ಆದರೂ ಈ ಎರಡು ಯೋಜನೆಗಳಿಂದ ಜನರಿಗೆ ತುಂಬಾ ಉಪಯೋಗ ಆಗಲಿದೆ.

Please follow and like us:
0
http://karnatakatoday.in/wp-content/uploads/2019/01/Raita-bandhu-Yojana-1024x576.jpghttp://karnatakatoday.in/wp-content/uploads/2019/01/Raita-bandhu-Yojana-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಮ್ಮ ಕೇಂದ್ರ ಸರ್ಕಾರವು ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಯೋಜನೆಯನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಬಡವರಿಗೆ ಮತ್ತು ರೈತರಿಗಾಗಿ ಹಲವು ಯೋಜನೆಯನ್ನ ಜಾರಿಗೆ ತಂದಿದೆ ನಮ್ಮ ಕೇಂದ್ರ ಸರ್ಕಾರ. ಇನ್ನು ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬಕ್ಕೆ ಮೋದಿ ಸರ್ಕಾರ ಬಡವರಿಗೆ ಮತ್ತು ರೈತರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ. ಇನ್ನು ಆ ಬಂಪರ್ ಗಿಫ್ಟ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Kannada News