ಸೂಪರ್ ಸ್ಟಾರ್ ರಜನೀಕಾಂತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕೇವಲ ನಟನೆಯಲ್ಲಿ ಮಾತ್ರ ರಜನೀಕಾಂತ್ ಅವರು ಸೂಪರ್ ಸ್ಟಾರ್ ಅಲ್ಲ ಹೃದಯವಂತಿಕೆಯಲ್ಲೂ ಕೂಡ ರಜನೀಕಾಂತ್ ಅವರು ಸೂಪರ್ ಸ್ಟಾರ್. ಈಗ ರಜನೀಕಾಂತ್ ಅವರ ಮೊದಲ ಪ್ರೇಯಸಿಯ ಬಗ್ಗೆ ಮಾಹಿತಿ ಹೊರಗೆ ಬಿದ್ದಿದೆ, ತಾನು ಬಸ್ ಕಂಡಕ್ಟರ್ ಆಗಿದ್ದಾಗ ಪ್ರೀತಿ ಮಾಡಿದ ಹುಡುಗಿಯನ್ನ ರಜನೀಕಾಂತ್ ಅವರು ಈಗಲೂ ಹುಡುಕುತ್ತಲೇ ಇದ್ದಾರೆ. ರಜನೀಕಾಂತ್ ಅವರ ಅಮರ ಪ್ರೇಮ ಕಥೆಯನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಬರುತ್ತದೆ, ಹಾಗಾದರೆ ರಜನೀಕಾಂತ್ ಅವರು ಬಸ್ ಕಂಡಕ್ಟರ್ ಆಗಿದ್ದಾಗ ಪ್ರೀತಿ ಮಾಡಿದ ಹುಡುಗಿ ಯಾರು ಮತ್ತು ಇಬ್ಬರು ಬೇರೆ ಬೇರೆ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಪ್ರೇಮ ಕಥೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಅದೂ ರಜನೀಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸವನ್ನ ಮಾಡುತ್ತಿದ್ದ ಸಮಯ, ಒಂದು ದಿನ ಮೆಡಿಕಲ್ ಕಾಲೇಜಿನ ಒಬ್ಬ ಹುಡುಗಿ ರಜನೀಕಾಂತ್ ಅವರು ಇದ್ದ ಬಸ್ಸನ್ನ ಹತ್ತುತ್ತಾಳೆ ಮತ್ತು ಸ್ವಲ್ಪ ಸಮಯದ ನಂತರ ನಾನು ಬೇರೆ ಬಸ್ಸನ್ನ ಹತ್ತಿದ್ದೇನೆ ದಯವಿಟ್ಟು ಬಸ್ ನಿಲ್ಲಿಸಿ ಎಂದು ಹೇಳುತ್ತಾಳೆ. ಇನ್ನು ಇದರಿಂದ ಕೋಪ ಮಾಡಿಕೊಂಡ ರಜನೀಕಾಂತ್ ಅವರು ಆಕೆಗೆ ಚನ್ನಾಗಿ ಬಯ್ಯುತ್ತಾರೆ, ಆದರೆ ಆಕೆ ಕೂಡ ಸುಮ್ಮನಿರದೆ ತಿರುಗಿ ರಜನೀಕಾಂತ್ ಅವರಿಗೆ ಚನ್ನಾಗಿ ಬಯ್ಯುತ್ತಾಳೆ ಮತ್ತು ಆವತ್ತಿಗೆ ಆ ಘಟನೆ ಮುಗಿಯುತ್ತದೆ. ಆಕೆಯ ಹೆಸರು ನಿರ್ಮಲಾ, ಇನ್ನು ರಜನಿಕಾಂತ್ ಅವರ ಬಸ್ ದಿನಾಲೂ ನಿರ್ಮಲಾ ಅವರು ವಾಸವಿದ್ದ ಪ್ರದೇಶದಲ್ಲೇ ಓಡಾಡುತ್ತಿರುತ್ತದೆ ಮತ್ತು ಒಂದು ದಿನ ನಿರ್ಮಲಾ ಅವರನ್ನ ನೋಡಿದ ರಜನೀಕಾಂತ್ ಅವರು ಕೋಪದಲ್ಲಿ ನಿಮ್ಮನ್ನ ಬೈದೆ ಬೇಜಾರ್ ಮಾಡಿಕೊಳ್ಳಬೇಡಿ ಎಂದು ಕ್ಷಮೆ ಕೇಳುತ್ತಾರೆ.

Rajani first lover

ಹೀಗೆ ಪ್ರತಿ ದಿನ ಒಬ್ಬರನ್ನೊಬ್ಬರು ನೋಡುತ್ತಿದ್ದ ಇಬ್ಬರು ಒಳ್ಳೆಯ ಸ್ನೇಹಿತರಾಗುತ್ತಾರೆ, ದಿನಗಳು ಉರುಳಿದಂತೆ ಒಬ್ಬರನ್ನೊಬ್ಬರು ಇಷ್ಟಪಟ್ಟು ಭೇಟಿ ಮಾಡಲು ಆರಂಭಿಸುತ್ತಾರೆ. ಇನ್ನು ಆ ಸಮಯದಲ್ಲಿ ರಂಗಭೂಮಿಯಲ್ಲಿ ನಟನೆಯನ್ನ ಮಾಡುತ್ತಿದ್ದ ರಜನೀಕಾಂತ್ ಅವರು ಇಂದು ನಾನು ನಟಿಸುವ ನಾಟಕ ಇದೆ ನೀನು ಬಂದು ನೋಡು ಎಂದು ನಿರ್ಮಲಾ ಅವರನ್ನ ಕರೆಯುತ್ತಾರೆ. ಇನ್ನು ರಜನೀಕಾಂತ್ ಅವರ ನಟನೆಯನ್ನ ಮೆಚ್ಚಿಕೊಂಡ ನಿರ್ಮಲಾ ನೀವು ಮದ್ರಾಸ್ ಗೆ ಹೋಗಿ ಅಲ್ಲಿ ಸಿನಿಮಾಗಳಲ್ಲಿ ನಟನೆ ಮಾಡು ಎಂದು ರಜನೀಕಾಂತ್ ಗೆ ಪ್ರೋತ್ಸಹ ತುಂಬುತ್ತಾಳೆ. ಇನ್ನು ನಾನು ಮದ್ರಾಸ್ ಗೆ ಹೋದರೆ ಒಳ್ಳೆಯ ನಟ ಆಗುತ್ತೇನೆ ಆದರೆ ಅಲ್ಲಿಗೆ ಹೋಗುವ ಮೊದಲು ನಟನೆಯ ಬಗ್ಗೆ ತರಬೇತಿ ತಗೆದುಕೊಂಡರೆ ಉತ್ತಮ ಆದರೆ ನನ್ನ ಬಳಿ ಹಣ ಇಲ್ಲ ಎಂದು ಹೇಳುತ್ತಾರೆ ರಜನಿ.

 

ತನ್ನ ಕಾಲೇಜಿನ ಶುಲ್ಕಕ್ಕೆ ಇಟ್ಟುಕೊಂಡ 500 ರೂಪಾಯಿಯನ್ನ ರಜನೀಕಾಂತ್ ಗೆ ಕೊಟ್ಟ ನಿರ್ಮಲಾ ನೀವು ಮೊದಲು ಮದ್ರಾಸ್ ಗೆ ಹೋಗಿ ತರಬೇತಿ ಪಡೆದಿಕೊ ಎಂದು ರಜನಿಗೆ ಹೇಳುತ್ತಾಳೆ. ಇನ್ನು ಆ 500 ರೂಪಾಯಿ ತಗೆದುಕೊಂಡು ಮದ್ರಾಸ್ ಗೆ ಹೋದ ರಜನಿ ಅಲ್ಲಿ ಒಳ್ಳೆಯ ತರಬೇತಿ ಪಡೆದು ಸಿನಿಮಾಗಳಲ್ಲಿ ನಟನೆ ಮಾಡಿ ಶುರು ಮಾಡುತ್ತಾರೆ, ಇನ್ನು ಕೆಲವು ಸಮಯದ ನಂತರ ಬೆಂಗಳೂರಿಗೆ ಬಂದ ರಜನೀಕಾಂತ್ ಅವರು ನಿರ್ಮಲಾ ಅವರನ್ನ ಭೇಟಿ ಮಾಡಲು ಹೋಗುತ್ತಾರೆ, ಆದರೆ ಆಗಾಗಲೇ ನಿರ್ಮಲಾ ಅವರ ಕುಟುಂಬ ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿರುತ್ತಾರೆ.

ನಿರ್ಮಲಾ ಅವರಿಗೋಸ್ಕರ ರಜನೀಕಾಂತ್ ಅವರು ಎಲ್ಲಾ ಕಡೆ ಹುಡುಕುತ್ತಾರೆ ಆದರೆ ನಿರ್ಮಲಾ ಅವರು ರಜನೀಕಾಂತ್ ಅವರಿಗೆ ಸಿಗುವುದೇ ಇಲ್ಲ ಮತ್ತು ಆಕೆಗಾಗಿ ಕಣ್ಣೀರು ಹಾಕುತ್ತ ಹುಚ್ಚನಂತೆ ಅಳುತ್ತಾರೆ ರಜನಿ. ಇನ್ನು ಈ ಸಮಯದಲ್ಲಿ ರಜನಿ ಸ್ನೇಹಿತರೆ ರಾಜನಿಗೆ ಸಮಾಧಾನ ಮಾಡಿ ರಜನೀಕಾಂತ್ ಅವರನ್ನ ಮತ್ತೆ ನಟನೆ ಮಾಡಲು ಕಳುಹಿಸಿಕೊಡುತ್ತಾರೆ, ಈಗಲೂ ರಜನೀಕಾಂತ್ ಅವರು ಎಲ್ಲಿಗೆ ಪ್ರಯಾಣ ಮಾಡಿದರು ಕೂಡ ಅವರ ಹೃದಯ ಮಾತ್ರ ನಿರ್ಮಲಾ ಅವರಿಗಾಗಿ ಹುಡುಕುತ್ತದೆಯಂತೆ, ರಜನಿ ಅವರ ಈ ಅಮರ ಪ್ರೇಮ ಕಥೆಯನ್ನ ಅವರ ಸ್ನೇಹಿತ ದೇವನ್ ಅವರು ಬಿಚ್ಚಿಟ್ಟಿದ್ದಾರೆ, ಸ್ನೇಹಿತರೆ ರಜನೀಕಾಂತ್ ಅವರ ಈ ಪ್ರೇಮಕಥೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rajani first lover

Please follow and like us:
error0
http://karnatakatoday.in/wp-content/uploads/2019/10/Rajanikant-Love-story-1024x576.jpghttp://karnatakatoday.in/wp-content/uploads/2019/10/Rajanikant-Love-story-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಸೂಪರ್ ಸ್ಟಾರ್ ರಜನೀಕಾಂತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕೇವಲ ನಟನೆಯಲ್ಲಿ ಮಾತ್ರ ರಜನೀಕಾಂತ್ ಅವರು ಸೂಪರ್ ಸ್ಟಾರ್ ಅಲ್ಲ ಹೃದಯವಂತಿಕೆಯಲ್ಲೂ ಕೂಡ ರಜನೀಕಾಂತ್ ಅವರು ಸೂಪರ್ ಸ್ಟಾರ್. ಈಗ ರಜನೀಕಾಂತ್ ಅವರ ಮೊದಲ ಪ್ರೇಯಸಿಯ ಬಗ್ಗೆ ಮಾಹಿತಿ ಹೊರಗೆ ಬಿದ್ದಿದೆ, ತಾನು ಬಸ್ ಕಂಡಕ್ಟರ್ ಆಗಿದ್ದಾಗ ಪ್ರೀತಿ ಮಾಡಿದ ಹುಡುಗಿಯನ್ನ ರಜನೀಕಾಂತ್ ಅವರು ಈಗಲೂ ಹುಡುಕುತ್ತಲೇ ಇದ್ದಾರೆ. ರಜನೀಕಾಂತ್ ಅವರ ಅಮರ ಪ್ರೇಮ ಕಥೆಯನ್ನ ಕೇಳಿದರೆ ನಿಮ್ಮ...Film | Devotional | Cricket | Health | India