Rajayoga after vijayadashami

ಎಲ್ಲಾ ರೀತಿಯ ಯೋಗಗಳು ಜೀವನದ ಸಂದರ್ಭದಲ್ಲಿ ಇರುತ್ತದೆ. ವಿವಿಧ ಹೆಸರುಗಳಿಂದ ನಾವು ಅವುಗಳನ್ನು ಹೆಸರಿಸುತ್ತೇವೆ. ರಾಜಯೋಗ, ಧನಯೋಗ, ಬುಧಾದಿತ್ಯ ಯೋಗ ಗಜಕೇಸರಿ ಯೋಗ, ಧರ್ಮ ಕರ್ಮಾಧಿಪ ಯೋಗ, ಪಂಚಮಹಾಗ್ರಯ ಯೋಗ, ಲಕ್ಷ್ಮಿ ಯೋಗ , ಮೃದಂಗ ಯೋಗ, ಗೃಹಯೋಗ, ವಾಹನ ಯೋಗ, ಚತುಸ್ಸಾಗರ ಯೋಗ ವಿಪರೀತ ರಾಜಯೋಗ, ನೀಚಭಂಗ ರಾಜಯೋಗ ಇತ್ಯಾದಿ. ದಶಮಿಯು ಯಾವಾಗಲೂ ಮಂಗಳಕರವಾದುದು. ಇಂಥ ದಶಮಿ ದಿನ ಮಾಡಿದ ದಾನವು ಕೋಟಿ ಪಾಲು ಪುಣ್ಯವನ್ನು ಕೊಡುತ್ತದೆ. ಈ ಪುಣ್ಯವಾದ ದಶಮಿಯು ಮಾನವರಿಗೆ ಜಯ ಕೊಡುವುದರಿಂದ ವಿಜಯದಶಮಿ ಎಂದೇ ಪ್ರಸಿದ್ಧವಾಗಿದೆ. ವಿಜಯದಶಮಿ ವಿಷಯದಲ್ಲಿ ವರಾಹಪುರಾಣದಲ್ಲಿ ಹೇಳಿದಂತೆ ದಶಮಿಯು ನವಮಿ ತಿಥಿಯಿಂದ ಸಹಿತವಾಗಿರಬೇಕು.

Rajayoga after vijayadashami

ಇಂತಹ ದಶಮಿಯು ಯಾವಾಗಲೂ ಮಂಗಳಕರವಾದುದು. ಇಂತಹ ದಶಮಿ ದಿನ ಮಾಡಿದ ದಾನವು ಕೋಟಿಪಾಲಿಗಿಂತಲೂ ಹೆಚ್ಚಿನ ಪುಣ್ಯವನ್ನು ಕೊಡುತ್ತದೆ. ಈ ಪುಣ್ಯವಾದ ದಶಮಿಯು ಮಾನವರಿಗೆ ಜಯ ಕೊಡುವುದರಿಂದ ವಿಜಯದಶಮಿ ಎಂದೇ ಪ್ರಸಿದ್ಧವಾಗಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎಂಬುದು ನಾವೆಲ್ಲರೂ ಅರಿತಿರುವ ಸಂಗತಿ.

Rajayoga after vijayadashami

ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ, ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. ‘ದಶಹರ’ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.

Rajayoga after vijayadashami

ಅಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಹಲವು ದಿನಗಳು ರಾಮಾಯಣವನ್ನು ಓದಿ ವಿಜಯದಶಮಿಯಂದು ಶ್ರೀರಾಮ ಪಟ್ಟಾಬಿಷೇಕ ಕಥಾಭಾಗವನ್ನು ಇತರರೊಂದಿಗೆ ಮನನಮಾಡಿ ಮನೆ, ವಠಾರ, ಪ್ರವಚನ ಮಂದಿರಗಳಲ್ಲಿ ಶ್ರೀರಾಮ ಪಟ್ಟಾಭಿಷೇಕವನ್ನು ನೆರವೇರಿಸಿದ ಸಂಭ್ರವನ್ನು ಅನುಭವಿಸುವುದು ಸರ್ವೇ ಸಾಧಾರಣವಾಗಿತ್ತು. ಈ ಬಾರಿಯ ವಿಜಯದಶಮಿ ಮುಗಿಯುತ್ತಿದ್ದಂತೆ ಈ ರಾಶಿಗಳಿಗೆ ರಾಜಯೋಗ ಆರಂಭವಾಗಲಿದೆ. ಮೊದಲನೆಯದಾಗಿ ವೃಷಭ ರಾಶಿಗೆ ಈ ಬಾರಿಯ ಆಯುಧ ಪೂಜೆಯ ನಂತರ ಲಾಭ ಪಡೆಯಲಿದ್ದಾರೆ. ಇನ್ನು ಕಟಕ ರಾಶಿಯವರು ಕೂಡ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ವಾಹನ ಚಾಲಕರಿಗೆ ಉತ್ತಮ ಆದಾಯದ ನಿರೀಕ್ಷೆ ಇದೆ.

Rajayoga after vijayadashami

 

ಸಿಂಹದವರಿಗೆ ನವರಾತ್ರಿಯ ಪ್ರತಿದಿನವೂ ವಿಶೇಷ ದಿನವಾಗಿದ್ದು ಲಕ್ಷ್ಮಿ ಹಾಗು ದುರ್ಗೆಯ ದರ್ಶನ ಮಾಡಿ. ವಿದ್ಯಾರ್ಥಿಗಳಿಗೆ ಶುಭ ಫಲವಿದೆ. ತುಲಾ ರಾಶಿಯವರಿಗೆ ಈ ಬಾರಿಯ ದಸರಾ ಎಲ್ಲಿಲ್ಲದ ಅದ್ರಷ್ಟ ತಂದು ನೀಡಲಿದೆ. ಹಣದ ವರ್ಗಾವಣೆಯಾಗಿ ನಿಮ್ಮ ಕೈಯಲ್ಲಿ ಲಕ್ಷ್ಮಿ ನೆಲೆಸಲಿದ್ದಾಳೆ. ಆದ್ದರಿಂದ ಯಾವುದೇ ಕಾರಣಕ್ಕೂ ಅನವಶ್ಯಕ ಖರ್ಚಿಗೆ ಮುಂದಾಗಬೇಡಿ. ಒಮ್ಮೆ ಲಕ್ಷ್ಮಿ ಹೊರಟರೆ ಮತ್ತೆ ಬರುವುದು ಅಷ್ಟೊಂದು ಸುಲಭವಲ್ಲ. ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಹಂಚಿಕೊಳ್ಳಿ.

Please follow and like us:
0
http://karnatakatoday.in/wp-content/uploads/2018/10/VIJAYADASHAMI-1024x576.pnghttp://karnatakatoday.in/wp-content/uploads/2018/10/VIJAYADASHAMI-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಎಲ್ಲಾ ರೀತಿಯ ಯೋಗಗಳು ಜೀವನದ ಸಂದರ್ಭದಲ್ಲಿ ಇರುತ್ತದೆ. ವಿವಿಧ ಹೆಸರುಗಳಿಂದ ನಾವು ಅವುಗಳನ್ನು ಹೆಸರಿಸುತ್ತೇವೆ. ರಾಜಯೋಗ, ಧನಯೋಗ, ಬುಧಾದಿತ್ಯ ಯೋಗ ಗಜಕೇಸರಿ ಯೋಗ, ಧರ್ಮ ಕರ್ಮಾಧಿಪ ಯೋಗ, ಪಂಚಮಹಾಗ್ರಯ ಯೋಗ, ಲಕ್ಷ್ಮಿ ಯೋಗ , ಮೃದಂಗ ಯೋಗ, ಗೃಹಯೋಗ, ವಾಹನ ಯೋಗ, ಚತುಸ್ಸಾಗರ ಯೋಗ ವಿಪರೀತ ರಾಜಯೋಗ, ನೀಚಭಂಗ ರಾಜಯೋಗ ಇತ್ಯಾದಿ. ದಶಮಿಯು ಯಾವಾಗಲೂ ಮಂಗಳಕರವಾದುದು. ಇಂಥ ದಶಮಿ ದಿನ ಮಾಡಿದ ದಾನವು ಕೋಟಿ ಪಾಲು ಪುಣ್ಯವನ್ನು ಕೊಡುತ್ತದೆ....Kannada News