ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಕರುನಾಡಿನ ಜೋಡಿಯಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕನ್ನಡಿಗರ ಫೆವರಿಟ್ ಆಗಿದ್ದರು. ಸಿನೆಮಾದಲ್ಲಿ ಮುದ್ದು ಮುದ್ದಾಗಿ ನಟಿಸಿ ರಶ್ಮಿಕಾ ಕರುನಾಡಿನ ಹೊಸ ಕ್ರಶ್ ಆಗಿದ್ದಳು. ಸಿನೆಮಾ ಕೂಡ ಯಶಸ್ವಿ ಪ್ರದರ್ಶನ ಕಂಡು ಹೊಸ ದಾಖಲೆ ಬರೆಯಿತು. ಅಷ್ಟರಲ್ಲೇ ರಶ್ಮಿಕಾ ರಕ್ಷಿತ್ ಜೋಡಿ ನಡುವೆ ಪ್ರೀತಿ ಅರಳಿ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ ಈ ಮುದ್ದು ಜೋಡಿಗಳ ಮೇಲೆ ಅದು ಯಾರ ಕಣ್ಣು ಬಿತ್ತು ಗೊತ್ತಿಲ್ಲ ಈ ಜೋಡಿ ಬ್ರೇಕ್ ಅಪ್ ಮಾಡಿಕೊಂಡಿದೆ ಅನ್ನುವ ಸುದ್ದಿ ಹರಡತೊಡಗಿತು. ಮೊದಲಿಗೆ ಇದೊಂದು ಗಾಸಿಪ್ ಎಂದು ಎಲ್ಲರು ತಳ್ಳಿ ಹಾಕಿದ್ದರು ಆದರೆ ಕೊನೆಗೆ ಆಪ್ತ ಮೂಲಗಳೇ ಈ ಬಗ್ಗೆ ವರದಿ ನೀಡಿದ್ದರಿಂದ ಅಭಿಮಾನಿಗಳ ಅನುಮಾನ ಕೂಡ ನಿಜವಾಯಿತು ಈಗ ಈ ಜೋಡಿ ದೂರ ಆಗಿ ತಿಂಗಳುಗಳೇ ಕಳೆದಿವೆ.

 

ಆದರೆ ಇದೀಗ ಒಂದು ಫೋಟೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ ಮತ್ತು ರಕ್ಷಿತ್ ಶೆಟ್ಟಿಗೆ ಸಿಕ್ಕೇ ಬಿಟ್ಟಳು ಮತ್ತೊಂದು ಸುಂದರಿ ಎಂದು ಎಲ್ಲ ಕಡೆ ವೈರಲ್ ಆಗುತ್ತಿದೆ ಇಷ್ಟಕ್ಕೂ ಏನಿದು ನೋಡೋಣ ಕಂಪ್ಲೀಟ್ ವರದಿಯನ್ನು . ನಿಶ್ಚಿತಾರ್ಥ ಮುರಿದುಕೊಂಡ ಮೇಲೆ ರಕ್ಷಿತ್ ಶೆಟ್ಟಿ ಜೊತೆ ಕಾಣಿಸಿಕೊಂಡ ಆ ನಟಿ ಬೇರೆ ಯಾರು ಅಲ್ಲ ಮೇಘನಾ ಗಾಂವ್ಕರ್. ಇತ್ತೀಚಿಗೆ ನಡೆದ ಸ್ಯಾಂಡಲ್ವುಡ್ ಅವಾರ್ಡ್ ಸಮಾರಂಭದಲ್ಲಿ ಇವರು ಜೊತೆಗೆ ಕುಳಿತುಕೊಂಡಿದ್ದರು.

ಇವರಿಬ್ಬರು ಕುಳಿತುಕೊಂಡಿದ್ದ ಫೋಟೋ ಇದೀಗ ಜಾಲತಾಣದಲ್ಲಿ ಹರಿಯುತ್ತಿದೆ. ಇತ್ತ ಈ ಫೋಟೋ ಹಿಡ್ಕೊಂಡು ರಶ್ಮಿಕಾ ಅವರನ್ನು ಕೂಡ ಟ್ರೊಲ್ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಮೇಘನಾ ಕೂಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು ಎಡಕ್ಕೆ ನಟಿ ಸಂಯುಕ್ತ ಹೆಗ್ಡೆ ಕೂಡ ಕಾಮೆಂಟ್ ಮಾಡಿ ವಾವ್ ಎಂದು ಹಾರ್ಟ್ ಚಿಹ್ನೆ ಕೂಡ ಹಾಕಿಕೊಂಡಿದ್ದಾರೆ.

ಇನ್ನು ಅಭಿಮಾನಿಗಳು ಕೂಡ ಸಾಲು ಸಾಲು ಕಾಮೆಂಟ್ ಮಾಡಿ ಮೇಘನಾ ಅವರನ್ನು ಮದುವೆ ಆಗಿ ರಕ್ಷಿತ್ ಎಂದು ಹೇಳಿದ್ದಾರೆ.  ಸಿನಿ ಪ್ರಿಯರಲ್ಲಿ ಇವರಿಬ್ಬರ ನಡುವೆ ಏನೋ ಗುಸುಗುಸು ನಡೀತಾ ಇದೆ ಎಂದು ಜೋರಾಗೆ ಸುದ್ದಿ ಮಾಡುತ್ತಿದ್ದಾರೆ. ಇವೆಲ್ಲ ಗಮನಿಸಿದರೆ ಏನೋ ನಡಿತಾ ಇದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/rakshit-shetty-new-girl-1024x576.jpghttp://karnatakatoday.in/wp-content/uploads/2018/11/rakshit-shetty-new-girl-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರ  ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಕರುನಾಡಿನ ಜೋಡಿಯಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕನ್ನಡಿಗರ ಫೆವರಿಟ್ ಆಗಿದ್ದರು. ಸಿನೆಮಾದಲ್ಲಿ ಮುದ್ದು ಮುದ್ದಾಗಿ ನಟಿಸಿ ರಶ್ಮಿಕಾ ಕರುನಾಡಿನ ಹೊಸ ಕ್ರಶ್ ಆಗಿದ್ದಳು. ಸಿನೆಮಾ ಕೂಡ ಯಶಸ್ವಿ ಪ್ರದರ್ಶನ ಕಂಡು ಹೊಸ ದಾಖಲೆ ಬರೆಯಿತು. ಅಷ್ಟರಲ್ಲೇ ರಶ್ಮಿಕಾ ರಕ್ಷಿತ್ ಜೋಡಿ ನಡುವೆ ಪ್ರೀತಿ ಅರಳಿ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ ಈ ಮುದ್ದು ಜೋಡಿಗಳ ಮೇಲೆ ಅದು ಯಾರ ಕಣ್ಣು...Kannada News