ಚಿತ್ರರಂಗ ಎಂದರೆ ಹಾಗೆಯೇ ಇಲ್ಲಿ ಹೆಸರು ಮಾಡುವುದು ಕೂಡ ಕಷ್ಟ, ಹಾಗೆಯೇ ಕೊನೆಯವರೆಗೂ ಆ ಹೆಸರನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ವಿಷಯ. ಇವತ್ತು ಹೀರೊ ನಂಬರ್ ಒನ್ ಆಗಿದ್ದವರು ಮುಂದೊಂದು ದಿನ ಜನರಿಗೆ ನೆನಪಾಗದೆಯೇ ಇರಬಹುದು. ಹೀಗಾಗಿ ಇಲ್ಲಿ ಯಾವುದು ಶಾಶ್ವತವಲ್ಲ, ಬದುಕಿರುವಷ್ಟು ಸಮಯ ಹೇಗೆ ಬದುಕಿದ್ದವೇ ಏತಕ್ಕಾಗಿ ಬದುಕಿದೆವು ಏನನ್ನು ಮಾಡಿದೆವು ಎಂಬುವುದರ ಮೇಲೆ ಎಲ್ಲವೂ ನಿರ್ಧರಿತವಾಗಿರುತ್ತದೆ. ಸಿನೆಮಾ ರಂಗಕ್ಕೆ ಬಂದು ದೊಡ್ಡ ಹೆಸರು ಗಳಿಸಿ ಅಪಾರ ಅಭಿಮಾನಿ ಬಳಗ ಹೊಂದಬೇಕು ಎನ್ನುವ ಬಯಕೆ ಯಾರಿಗೆ ತಾನೇ ಇರಲ್ಲ ಹೇಳಿ. ಚಿತ್ರರಂಗದಲ್ಲಿ ಈ ಹಿಂದೆ ಹೆಸರು ಮಾಡಿ ಖ್ಯಾತಿಗಳಿಸಿದ ಅದೆಷ್ಟೋ ನಟರು ಇಂದು ಹಲವರಿಗೆ ಗೊತ್ತಿಲ್ಲ. ಸ್ಟಾರ್ ಪಟ್ಟ ಪಡೆಯಲು ಅವರು ಪಟ್ಟ ಕಷ್ಟ, ಜೀವನೋಪಾಯಕ್ಕೆ ಅವರ ಹಿಡಿದು ಬಂದ ದಾರಿ ಕೆಲ ಅಭಿಮಾನಿಗಳಿಗೆ ತಿಳಿದಿರುವುದಿಲ್ಲ.

ನಾವು ತಿಳಿದಷ್ಟು ಸುಲಭವಾಗಿರಲ್ಲ ಒಬ್ಬ ಕಲಾವಿದನ ಜೀವನ, ಒಳಗಡೆ ಸಾವಿರ ನೋವಿಟ್ಟುಕೊಂಡರೂ ಕೂಡ ಪರದೆಯ ಮುಂದೆ ನಿಮ್ಮೆಲ್ಲರ ಮನರಂಜನೆಗೆ ಆತ ನಟಿಸಲೇಬೇಕು. ಅದು ನಗುವಿನ ಪಾತ್ರ ಇರಬಹುದು, ಅಥವಾ ಯಾವುದೇ ಸನ್ನಿವೇಶ ಇರಬಹುದು, ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಲೇಬೇಕು. ಇದೆ ರೀತಿ ಚಿತ್ರರಂಗದ ಇತಿಹಾಸದಲ್ಲಿ ಅಲ್ಪ ಸಮಯದಲ್ಲೇ ಹೆಸರು ಗಳಿಸಿ ನಂತರ ಕಮರಿ ಹೋದ ಅದೆಷ್ಟೋ ನಟರಿದ್ದಾರೆ. ತಮ್ಮ ಜೀವನದಲ್ಲಿ ಉತ್ತುಂಗ ಸಮಯದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ನಂತರ ಹೇಳ ಹೆಸರಿಲ್ಲದೆ ಅವಕಾಶಕ್ಕಾಗಿ ಒದ್ದಾಡಿದ ಕಥೆ ಕೂಡ ಇದೆ. ಇದೆ ಸಾಲಿನಲ್ಲಿ ಬರುವ ಒಬ್ಬದ ಖ್ಯಾತ ಖಳನಾಯಕನ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ ಕೇಳಿ. ಯಾವ ಖಳನಾಯಕನನ್ನು ನೋಡಿದರೆ ಇಡೀ ಸಿನಿಮಾ ಪ್ರೇಕ್ಷಕರೆ ಹೆದರುತ್ತಿದ್ದರೋ, ಯಾರ ನಟನಿಗೆ ಜನರು ನಿಜ ಜೀವನದಲ್ಲಿಯೂ ಕೂಡ ಭಯಭೀತ ರಾಗಿದ್ದರೋ ಅದೇ ನಟನ ಕಥೆ ಹೇಳುತ್ತಿದ್ದೇವೆ ಕೇಳಿ.

ಆ ನಟ ಬೇರೆ ಯಾರು ಅಲ್ಲ ಖ್ಯಾತ ಬಹುಭಾಷಾ ಖಳನಾಯಕ ರಾಮ್ (ರಾಮಿ) ರೆಡ್ಡಿ. ಈ ಹೆಸರು ಕೇಳಿದರೆ ಸಾಕು ಅಂದಿನ ಸಿನಿ ಪ್ರೇಕ್ಷಕರು ಅಷ್ಟು ಭಯಪಡುತ್ತಿದ್ದರು. ನಟನೆಗೂ ಮೀರಿ ಈತನ ಆ ಹಾವಭಾವ ಎಲ್ಲರ ಮನಗೆದ್ದಿತ್ತು. ಆಂಧ್ರಪ್ರದೇಶದ ಚಿತ್ತೂರಿನವರಾದ ರಾಮಿ ರೆಡ್ಡಿ ಖಳನಾಯಕನ ಪಾತ್ರಕ್ಕೆ ನ್ಯಾಯ ಒದಗಿಸುವ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಈ ನಟನ ಬಾಳಲ್ಲಿ ಕೊನೆಗೆ ನಡೆದಿದ್ದಂತೂ ದೊಡ್ಡ ದುರಂತ. ರಾಮ್ ರೆಡ್ಡಿ ಸಿನೆಮಾಗಳಲ್ಲಿ ನಟಿಸುವ ಮೊದಲು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಪದವಿ ಪಡೆದು ನಂತರ ತನ್ನ ಬದುಕನ್ನ ಆರಂಭಿಸಿದರು.

ಸಿನೆಮಾ ರಂಗ ಪ್ರವೇಶಿಸಿದ ಇವರು ಅಂಕುಶಮ್ ಎನ್ನುವ ಚಿತ್ರದಲ್ಲಿ ಸ್ಪಾಟ್ ನಾಗ ಎನ್ನುವ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ನಂತರ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಬಹುಬೇಡಿಕೆಯ ನಟರಾಗಿದ್ದರು. ವಿಲನ್ ಪಾತ್ರದಲ್ಲಿ ರಾಮಿ ರೆಡ್ಡಿ ತೊಂಬತ್ತರ ದಶಕದಲ್ಲಿ ಯಾರು ಗಳಿಸಿದ ಹೆಸರು ಮಾಡಿದ್ದರು, 250 ಕ್ಕೂ ಹೆಚ್ಚು ಹಿಟ್ ಚಿತ್ರಗಳಲ್ಲಿ ನಟಿಸಿದ ರೆಡ್ಡಿಯವರು ನಟಿಸಿದ ಎಲ್ಲಾ ಚಿತ್ರಗಳು ಬಹುತೇಕ ಹಿಟ್ ಕಂಡಿದ್ದವು. ಆದರೆ ಈ ನಟನ ಬಾಳಿನಲ್ಲಿ ಕೊನೆಯವರೆಗೂ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ರಾಮಿ ರೆಡ್ಡಿ ಮತ್ತೆ ಸುಧಾರಿಸುವ ಯಾವುದೇ ಸೂಚನೆ ನೀಡಿರಲಿಲ್ಲ.

ಲಿವರ್ ಕಾನ್ಸರ್ ಎನ್ನುವ ಭಯಾನಕ ಕಾಯಿಲೆ ಅವರನ್ನು ಕಾಡಿತ್ತು, ಇದಾದ ಕೆಲ ದಿನಗಳ ಬಳಿಕವೇ ಮೂತ್ರಪಿಂಡದ ಕಾಯಿಲೆ ಕೂಡ ಅವರನ್ನು ಉಳಿಸಲು ಬಿಡಲಿಲ್ಲ. ತದನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸಂಪೂರ್ಣವಾಗಿ ತ್ಯಜಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ರಾಮಿ ರೆಡ್ಡಿ ಗುರುತಿಸಲು ಅಸಾಧ್ಯವಾದ ರೀತಿಯಲ್ಲಿದ್ದರು. ನಿಜಕ್ಕೂ ಒಬ್ಬ ಮಹಾನ್ ಖಳನಾಯಕನ ಬದುಕಲ್ಲಿ ಈ ರೀತಿ ನಡೆದಿದ್ದು ವಿಷಾದವೇ ಸರಿ. ಯಾರಿಗೆಲ್ಲಾ ರಾಮಿ ರೆಡ್ಡಿಯವರ ಅಭಿನಯ ಇಷ್ಟವಾಗಿತ್ತು ತಿಳಿಸಿ.

Please follow and like us:
error0
http://karnatakatoday.in/wp-content/uploads/2019/09/villain-ram-reddi-last-days-1024x576.jpghttp://karnatakatoday.in/wp-content/uploads/2019/09/villain-ram-reddi-last-days-150x104.jpgKarnataka Trendingಚಲನಚಿತ್ರಚಿತ್ರರಂಗ ಎಂದರೆ ಹಾಗೆಯೇ ಇಲ್ಲಿ ಹೆಸರು ಮಾಡುವುದು ಕೂಡ ಕಷ್ಟ, ಹಾಗೆಯೇ ಕೊನೆಯವರೆಗೂ ಆ ಹೆಸರನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ವಿಷಯ. ಇವತ್ತು ಹೀರೊ ನಂಬರ್ ಒನ್ ಆಗಿದ್ದವರು ಮುಂದೊಂದು ದಿನ ಜನರಿಗೆ ನೆನಪಾಗದೆಯೇ ಇರಬಹುದು. ಹೀಗಾಗಿ ಇಲ್ಲಿ ಯಾವುದು ಶಾಶ್ವತವಲ್ಲ, ಬದುಕಿರುವಷ್ಟು ಸಮಯ ಹೇಗೆ ಬದುಕಿದ್ದವೇ ಏತಕ್ಕಾಗಿ ಬದುಕಿದೆವು ಏನನ್ನು ಮಾಡಿದೆವು ಎಂಬುವುದರ ಮೇಲೆ ಎಲ್ಲವೂ ನಿರ್ಧರಿತವಾಗಿರುತ್ತದೆ. ಸಿನೆಮಾ ರಂಗಕ್ಕೆ ಬಂದು ದೊಡ್ಡ ಹೆಸರು ಗಳಿಸಿ...Film | Devotional | Cricket | Health | India