Kannada actress Aarathi

ಕನ್ನಡ ನಾಡಿನ ರಸಿಕರ ಹೃದಯವನ್ನ ಸೂರೆಗೊಂಡ ನಾಯಕಿ ಅಂತ ಹಾಡಿನ ಸಾಲು ಬಂದೊಡನೆ ಬರುವ ಉತ್ತರ ರಂಗನಾಯಕಿ, ಹೌದು ಇಂತದೊಂದು ಮನೋಜ್ಞ ಪಾತ್ರದಲ್ಲಿ ನಟಿಸಿ, ಜೀವಿಸಿ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಸ್ಥಾನವನ್ನ ಗಳಿಸಿರುವ ಪ್ರತಿಭಾನ್ವಿತ ನಟಿ ಅಂದರೆ ಅದು ಆರತಿ.

ಕನ್ನಡ ರಾಣಿಯಾಗಿದ್ದ ನಟಿ ಆರತಿ ಅವರು ತಮ್ಮ ನಟನೆ, ನೃತ್ಯ, ಧ್ವನಿ ಮತ್ತು ಹಾವಭಾವ ಎಲ್ಲವನ್ನ ಚಿತ್ರದಲ್ಲಿ ನೋಡಿದ ಎಲ್ಲರಿಗೂ ಇಂದಿಗೂ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿದೆ, ಹೀಗೆ ಸಿನೆಮಾಗಳಲ್ಲಿ ಉತ್ತುಂಗದ ಸ್ಥಾನದಲ್ಲಿ ಇರುವಾಗಲೇ ಈ ನಟಿ ಸಡನ್ ಆಗಿ ಸಿನಿಮಾರಂಗಕ್ಕೆ ವಿದಾಯವನ್ನ ಹೇಳಿದರು.

ಇನ್ನು ಚಿತ್ರರಂಗವನ್ನ ಬಿಟ್ಟ ಇವರು ತುಂಬಾ ಸರಳವಾದ ಜೀವನವನ್ನ ತಮ್ಮದಾಗಿಸಿಕೊಂಡರು, ಆರತಿ ಅಂದಿನ ಟಾಪ್ ನಟಿ ಆದರೆ ಅವರು ಆಕೆ ತನ್ನ ಮಗಳ ಒಂಟಿತನವನ್ನ ನಿವಾರಣೆ ಮಾಡಲು ಮಗಳಿಗಾಗಿ ಚಿತ್ರರಂಗದಿಂದ ದೂರವಾದರು.

ಚಿತ್ರರಂಗವನ್ನ ಬಿಟ್ಟ ಆರತಿ ಅವರು ತೆರೆಮರೆಯಲ್ಲಿ ಇದ್ದುಕೊಂಡು ಮಾಡುತ್ತಿದ್ದ ಸಮಾಜ ಸೇವೆ ಮಾತ್ರ ಎಂತವರನ್ನ ಕೂಡ ಆಶ್ಚರ್ಯದಲ್ಲಿ ಮುಳುಗಿಸುತ್ತದೆ, ಇನ್ನು ಆರತಿ ಚಿತ್ರಗಳಲ್ಲಿ ನಟಿಸುವಾಗ ಗಳಿಸಿದ ಸಂಪಾದನೆ ಎಲ್ಲವನ್ನ ಸಮಾಜ ಸೇವೆಗಾಗಿ ಮತ್ತು ಬಡವರ ಉದ್ದಾರಕ್ಕಾಗಿ ಬಳಸಿದ್ದಾರೆ ಎನ್ನುವುದು ಅದೆಷ್ಟೋ ಜನಕ್ಕೆ ಇನ್ನು ತಿಳಿದಿಲ್ಲ ಮತ್ತು ಮಾಧ್ಯಮಗಳಿಗೂ ಕೂಡ ಈ ವಿಷಯ ಇನ್ನು ತಿಳಿದಿಲ್ಲ, ಆದರೆ ಆರತಿಯವರ ನಿಸ್ವಾರ್ಥ ಸೇವೆ ಮಾತ್ರ ಇಂದಿಗೂ ವಾಸ್ತವವಾಗಿದೆ.

Kannada actress Aarathi

ಇನ್ನು ಅಮೇರಿಕಾದಲ್ಲಿ ಇದ್ದುಕೊಂಡೇ ಪತಿ ಚಂದ್ರಶೇಖರ ದೇಸಾಯಿ ಗೌಡರ ಜೊತೆಗೂಡಿ ತಮ್ಮ ಸಮಾಜ ಸೇವೆಯನ್ನ ವಿಸ್ತರಿಸಿಕೊಂಡೆ ಬರುತ್ತಿದ್ದರೆ ನಟಿ ಆರತಿ. ಇನ್ನು ಆರತಿ ಅವರ ಸಮಾಜ ಸೇವೆಗೆ ಪ್ರೇರಣೆಯಾದವರು ಜಿ ಎಸ್ ಶಿವರುದ್ರಪ್ಪ ಅವರ ಮಗ ಜಿ ಎಸ್ ಜಯದೇವ ಅವರು.

ಇನ್ನು ಇವರು ನಡೆಸುತ್ತಿರುವ ದಿನ ಬಂಧು ಎನ್ನುವ ಮಕ್ಕಳ ಆಶ್ರಯ ಮನೆ, ಇನ್ನು ಆರತಿಯರು ಇಲ್ಲಿನ ಮಕ್ಕಳಿಗೆ ವಿಶಾಲವಾದ ಹಾಸ್ಟೆಲ್ ನಿರ್ಮಾಣ ಮಾಡಿಸಿದ್ದೆ ಅಲ್ಲದೆ ಸುಮಾರು 2 ಕೋಟಿ ಹಣವನ್ನ ಠೇವಣಿ ಇರಿಸಿ ಅದರಿಂದ ಬರುವ ಬಡ್ಡಿ ಹಣವನ್ನ ವಿದ್ಯಾರ್ಥಿ ವೇತನವಾಗಿ ನೀಡಲು ವ್ಯವಸ್ಥೆಯನ್ನ ಮಾಡಿದ್ದಾರೆ.

ಇನ್ನು ಆರತಿಯವರು ತಮಗಾಗಿ ಕಟ್ಟಿಸಿಕೊಂಡಿದ್ದ ಪ್ರೀತಿಯ ಬಂಗಲೆಯನ್ನ ಬೆಳ್ಳಿತೆರೆಗೆ ಮಾರಾಟ ಮಾಡಿ ಬಂದ 15 ಕೋಟಿ ಹಣವನ್ನ ಸಮಾಜ ಸೇವೆಗೆ ವಿನಿಯೋಗ ಮಾಡಿದ್ದಾರೆ.

Kannada actress Aarathi

ಇನ್ನು ನಟಿ ಆರತಿ ಸುಮಾರು 40 ಶಾಲೆಗಳನ್ನ ದತ್ತು ಪಡೆದಿರುವುದು ಮಾತ್ರವಲ್ಲದೆ ಅಲ್ಲಿನ ಬಡ ವಿದ್ಯಾರ್ಥಿಗಳ ವೆಚ್ಚವನ್ನ ಕೂಡ ಭರಿಸುತ್ತಿರುವ ಆರತಿಯವರ ಕಳಕಳಿಯನ್ನ ಏನೆಂದು ಬಣ್ಣಿಸಬೇಕು ಅನ್ನುವುದೇ ತಿಳಿಯುತ್ತಿಲ್ಲ.

ಇನ್ನು ಆರತಿಯವರ ಸಮಾಜ ಸೇವೆ ಇಷ್ಟಕ್ಕೆ ಸೀಮಿತವಾಗಿಲ್ಲ, ಆರತಿ ಮತ್ತು ಅವರ ಪತಿ ಉತ್ತರ ಕರ್ನಾಟಕದ 20 ಹಳ್ಳಿಗಳನ್ನ ದತ್ತು ಪಡೆದಿದ್ದಾರೆ, ಇನ್ನು ಹಳ್ಳಿಗಳಿಗೆ ಸೌಚಾಲಯದ ವ್ಯವಸ್ಥೆ, ಶಾಲೆಯ ವ್ಯವಸ್ಥೆ, ಹೆಣ್ಣು ಮಕ್ಕಳಿಗಾಗಿ ಸ್ವಯಂ ಉದ್ಯೋಗ ತರಬೇತಿ ನೀಡುವಂತಹ ಮಹತ್ವದ ಕಾರ್ಯಗಳನ್ನ ಹಮ್ಮಿಕೊಂಡಿದ್ದಾರೆ.

ಯಾವುದೇ ಪ್ರಚಾರ ಅಥವಾ ಹೆಸರಿಗಾಗಿ ಸೇವೆ ಮಾಡದೆ ನಿಸ್ವಾರ್ಥವಾಗಿ ದುಡಿಯುತ್ತಿರುವ ಆರತಿಯವರು ಬಹಳಷ್ಟು ಜನರಿಗೆ ಮಾದರಿಯಾಗಬೇಕಿದೆ, ಇನ್ನು ಆರತಿಯವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Kannada actress Aarathi

Please follow and like us:
0
http://karnatakatoday.in/wp-content/uploads/2019/03/kannada-actress-Aarathi-1024x576.jpghttp://karnatakatoday.in/wp-content/uploads/2019/03/kannada-actress-Aarathi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ನಾಡಿನ ರಸಿಕರ ಹೃದಯವನ್ನ ಸೂರೆಗೊಂಡ ನಾಯಕಿ ಅಂತ ಹಾಡಿನ ಸಾಲು ಬಂದೊಡನೆ ಬರುವ ಉತ್ತರ ರಂಗನಾಯಕಿ, ಹೌದು ಇಂತದೊಂದು ಮನೋಜ್ಞ ಪಾತ್ರದಲ್ಲಿ ನಟಿಸಿ, ಜೀವಿಸಿ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಸ್ಥಾನವನ್ನ ಗಳಿಸಿರುವ ಪ್ರತಿಭಾನ್ವಿತ ನಟಿ ಅಂದರೆ ಅದು ಆರತಿ. ಕನ್ನಡ ರಾಣಿಯಾಗಿದ್ದ ನಟಿ ಆರತಿ ಅವರು ತಮ್ಮ ನಟನೆ, ನೃತ್ಯ, ಧ್ವನಿ ಮತ್ತು ಹಾವಭಾವ ಎಲ್ಲವನ್ನ ಚಿತ್ರದಲ್ಲಿ ನೋಡಿದ ಎಲ್ಲರಿಗೂ ಇಂದಿಗೂ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿದೆ, ಹೀಗೆ ಸಿನೆಮಾಗಳಲ್ಲಿ...Kannada News