ರೈಲ್ವೆ ಸ್ಟೇಷನ್ ಬಳಿ ಜೀವನೋಪಾಯಕ್ಕೆ ಬೇರೆ ವಿಧಿಯಿಲ್ಲದೇ ಹಾಡಿಕೊಂಡು ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಇದೀಗ ಭಾರತದ ವೈರಲ್ ಗಾಯಕಿ, ಈಕೆಯ ಹಾಡುಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದೇ ತಡ ಪ್ರತಿಯೊಬ್ಬರ ಮೊಬೈಲ್ ನಲ್ಲೂ ಈಕೆಯದ್ದು ಹಾಡು, ಈಕೆಯದ್ದೇ ಸುದ್ದಿ. ಸದ್ಯಕ್ಕೆ ರಾನು ದೇಶದ ಮುಖ್ಯ ಭೂಮಿಕೆಗೆ ಬಂದು ತನ್ನ ಹಿಂದಿನ ಜೀವನದ ಕಹಿ ಘಟನೆಗಳನ್ನೆಲ್ಲ ಮರೆಯುತ್ತಿದ್ದಾರೆ. ರಾನು ಅವರಿಗೆ ಬಾಲಿವುಡ್ ನಲ್ಲಿ ಹಾಡಲು ಅವಕಾಶ ಮಾಡಿಕೊಟ್ಟ ಹಿಮೇಶ್ ರೇಶ್ಮಿ ರಾತ್ರೋ ರಾತ್ರಿ ಅವರನ್ನು ಬಹುಬೇಡಿಕೆಯ ಸಿಂಗರ್ ಆಗಿ ಮಾಡಿಬಿಟ್ಟರು. ತನ್ನ ಒಂದು ಹಾಡು ಅಷ್ಟೊಂದು ಮಟ್ಟಿಗೆ ಹಿಟ್ ಪಡೆಯುತ್ತದೆ ಎಂದು ರಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ, ತದನಂತರ ರಾನುಗೆ ಬಂದಿದ್ದ ಆಫ಼ರ್ ಗಳನ್ನೂ ಕೇಳಿ ಎಲ್ಲರೂ ಬೆರಗಾಗಿದ್ದರು.

ಲತಾ ಮಂಗೇಶ್ಕರ್ ಅವರ ದ್ವನಿಯನ್ನು ಹೋಲುವ ರಾನು ಹಾಡುಗಳಿಗೆ ಮನಸೋತವರಿಲ್ಲ. ಇದರ ಮದ್ಯೆ ರಾನು ಅವರು ಸ್ಟಾರ್ ಗಿರಿ ಸಿಕ್ಕಿದೆ ತಡ ಅವರೀಗ ಮನಸ್ಸಿನಲ್ಲಿರುವ ಹಲವು ಡಿಮ್ಯಾಂಡ್ ಗಳನ್ನೂ ಹೊರಹಾಕಿದ್ದಾರೆ. ಇಷ್ಟಕ್ಕೂ ರಾನು ಅವರು ಈಗ ಕೇಳುತ್ತಿರುವ ಆ ಕೋರಿಕೆಗೂ ಕೂಡ ಒಂದು ಬಲವಾದ ಕಾರಣವಿದೆ. ನಿಮಗೆಲ್ಲ ತಿಳಿದಿರುವುವಂತೆ ರಾನು ಅವರು ವೈರಲ್ ಆಗುತ್ತಿದ್ದಂತೆಯೇ ಅವರಿಗೆ ಸಲ್ಮಾನ್ ಖಾನ್ 55 ಲಕ್ಷದ ಮನೆ ನೀಡಿದ್ದಾರೆ ಹಾಗೂ ಇತರ ಸ್ಟಾರ್ ಗಳು ಕಾರು ನೀಡಿದ್ದಾರೆ ಎಂದು ಏನೆಲ್ಲಾ ಸುದ್ದಿಗಳು ಹರಿದಾಡಿದ್ದವು, ಮೊದಲಿಗೆ ರಾಷ್ಟೀಯ ಮಾಧ್ಯಮಗಳು ಕೂಡ ಈ ಸುದ್ದಿಯನ್ನು ಬಿತ್ತರಿಸಿದ್ದವು ಆದರೆ ಕೊನೆಗೆ ಇವೆಲ್ಲ ಶುದ್ಧ ಸುಳ್ಳು ಎಂದು ತಿಳಿಯಿತು.

ರಾನು ಮಂಡಲ್ ಅವರಿಗೆ ಯಾವ ನೆರವಿನ ಹಸ್ತವು ಕೂಡ ಬಂದಿಲ್ಲ, ಇದೆ ಕಾರಣಕ್ಕಾಗಿ ರಾನು ಈಗ ಚಿಕ್ಕ ಕೋರಿಕೆಯೊಂದನ್ನು ಮಾಡಿದ್ದಾರೆ. ಸದ್ಯಕ್ಕೆ ರಾನು ಒಂದು ಹಾಡು ಹಾಡಬೇಕೆಂದರೆ ಕೂಡ ಕೊಲ್ಕತ್ತಾದಿಂದ ಮುಂಬೈ ಗೆ ವಿಮಾನದ ಮೂಲಕ ಬರಬೇಕಾಗುತ್ತದೆ, ಹೀಗಾಗಿ ಈ ಪಯಣ ನನಗೆ ತುಂಬಾ ಆಯಾಸ ಕೊಡುತ್ತಿದೆ, ಮುಂಬೈನಲ್ಲಿ ಸ್ವಂತ ಮನೆ ಇದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ನನ್ನ ಜೀವನವನ್ನೇ ಕಥೆಯಾಗಿರಿಸಿ ಯಾರಾದ್ರೂ ಸಿನೆಮಾ ಕೂಡ ಮಾಡಿ ಎಂದು ಅವರು ನಗು ನಗುತ್ತಲೇ ಉತ್ತರಿಸಿದ್ದಾರೆ. ಸದ್ಯಕ್ಕೆ ರಾನು ಅವರಿಗೆ ಇರಲು ಕೋಲ್ಕತ್ತಾ ಸರ್ಕಾರವೇ ವ್ಯವಸ್ಥೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಜೀವನ ಏರಿಳಿತಗಳಿಂದ ಕೂಡಿದ್ದರೂ ಒಂದು ದಿನ ವೇದಿಕೆಯಲ್ಲಿ ಹಾಡುವ ನಂಬಿಕೆ ನನ್ನಲ್ಲಿತ್ತು ಎಂದು ರಾತ್ರೋ ರಾತ್ರಿ ದೇಶಾದ್ಯಂತ ಮನೆ ಮಾತಾದ ಗಾಯಕಿ ರಾನು ಮಂಡಲ್ ಹೇಳಿದ್ದಾರೆ.

himesh helps ranu

ರೈಲ್ವೆ ಫ್ಲಾಟ್ ಫಾರಂನಲ್ಲಿ ರಾನು ಮಂಡಲ್ ಹಾಡಿದ ‘ಎಕ್ ಪ್ಯಾರ್ ಕಾ ನಗ್ಮಾ ಹೈ’ ಗೀತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರು ಪ್ರಸಿದ್ಧಿಯಾದರು.ರಾನು ಮಂಡಲ್ ಹಾಡನ್ನು ಮೆಚ್ಚಿಕೊಂಡ ಬಾಲಿವುಡ್ ಗಾಯಕ ಹಿಮೇಶ್ ರೇಶಮಿಯಾ ಅವರ ಮುಂದಿನ ಚಿತ್ರ ಹ್ಯಾಪಿ ಹಾರ್ಡಿ ಅಂಡ್ ಹೀರ್ ಚಿತ್ರದಲ್ಲಿ ಎರಡು ಗೀತೆಗಳನ್ನು ಹಾಡಿಸಿದ್ದರು. ಒಂದು ವೇಳೆ ನನ್ನಗೆ ದೇವರ ದಯೆ ಇಲ್ಲದಿದ್ದರೆ ಹಾಡಲು ಅವಕಾಶ ಸಿಗುತ್ತಿರಲಿಲ್ಲವೇನೂ, ನನ್ನ ಮೇಲೆ ದೇವರ ದಯೆ ಇದೆ ಅದಕ್ಕಾಗಿ ನಾನು ಹಾಡಬಲ್ಲೆ ಎಂದು ರಾನು ಮಂಡಲ್ ಹೇಳಿದ್ದಾರೆ.

ಹಾಡನ್ನು ಹಾಡಲು ಶುರುಮಾಡಿದಾಗ ಈ ರೀತಿಯ ಬದಲಾವಣೆ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೆ, ನನ್ನ ಧ್ವನಿಯಲ್ಲಿ ನಂಬಿಕೆ ಇತ್ತು. ಲತಾ ಮಂಗೇಶ್ಕರ್ ಅವರ ಧ್ವನಿಯಿಂದ ಸ್ಪೂರ್ತಿ ಪಡೆದು ಚಿಕ್ಕಂದಿನಿಂದಲೂ ಹಾಡುತ್ತಿದೆ. ಭವಿಷ್ಯದಲ್ಲೂ ಹಾಡುವುದನ್ನು ಮುಂದುವರೆಸುತ್ತೇನೆ. ಭರವಸೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ರಾನು ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
error0
http://karnatakatoday.in/wp-content/uploads/2019/09/raanu-mandal-house-1024x576.jpghttp://karnatakatoday.in/wp-content/uploads/2019/09/raanu-mandal-house-150x104.jpgKarnataka Trendingಚಲನಚಿತ್ರರೈಲ್ವೆ ಸ್ಟೇಷನ್ ಬಳಿ ಜೀವನೋಪಾಯಕ್ಕೆ ಬೇರೆ ವಿಧಿಯಿಲ್ಲದೇ ಹಾಡಿಕೊಂಡು ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಇದೀಗ ಭಾರತದ ವೈರಲ್ ಗಾಯಕಿ, ಈಕೆಯ ಹಾಡುಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದೇ ತಡ ಪ್ರತಿಯೊಬ್ಬರ ಮೊಬೈಲ್ ನಲ್ಲೂ ಈಕೆಯದ್ದು ಹಾಡು, ಈಕೆಯದ್ದೇ ಸುದ್ದಿ. ಸದ್ಯಕ್ಕೆ ರಾನು ದೇಶದ ಮುಖ್ಯ ಭೂಮಿಕೆಗೆ ಬಂದು ತನ್ನ ಹಿಂದಿನ ಜೀವನದ ಕಹಿ ಘಟನೆಗಳನ್ನೆಲ್ಲ ಮರೆಯುತ್ತಿದ್ದಾರೆ. ರಾನು ಅವರಿಗೆ ಬಾಲಿವುಡ್ ನಲ್ಲಿ ಹಾಡಲು ಅವಕಾಶ ಮಾಡಿಕೊಟ್ಟ ಹಿಮೇಶ್ ರೇಶ್ಮಿ...Film | Devotional | Cricket | Health | India