ತನ್ನ ಗಾಯನದಿಂದ ಮನೆಮಾತಾಗಿರುವ ರಾನು ಮಂಡಲ್ ರಾತ್ರೋ ರಾತ್ರಿ ಫೇಮಸ್ ಆದರು, ಅವರ ಬಗ್ಗೆ ಹಿರಿಯರು ಹೇಳಿದ ಗಾದೆ ನೆನಪಾಗುತ್ತಿದೆ ಅದೇನೆಂದರೆ, ಪ್ರತಿಭೆ ಗುಡಿಸಲಿನಲ್ಲಿ ಹುಟ್ಟುತ್ತದೆ ಮತ್ತು ಅರಮನೆಯಲ್ಲಿ ಸಾಯುತ್ತದೆ ಎಂದು. ಇದು ನಿಜವಾಗಿ ಸತ್ಯ. ರಾನು ಹಾಡು ಅಂತರ್ಜಾಲದಲ್ಲಿ ಟಾಪ್ ಹಿಟ್ ಆಗುತ್ತಿರುವುದನ್ನು ಕಂಡು ಅವಕಾಶ ನೀಡಿ ಆಕೆಯನ್ನು ಸಮಾಜದ ಮುಖ್ಯ ಭೂಮಿಕೆಗೆ ತಂದು ಪರಿಚಯಿಸಲಾಯಿತು. ಇದಾದ ಬಳಿಕ ನಡೆದಿದ್ದೆಲ್ಲ ಪವಾಡ. ಸಿಕ್ಕ ಅವಕಾಶದಲ್ಲಿ ರಾನು ಬಹಳ ಉತ್ತಮವಾಗಿಯೇ ಹಾಡಿದರು ಮತ್ತು ಎಲ್ಲರ ಮನಗೆದ್ದರು.

ಸದ್ಯಕ್ಕೆ ರಾನು ಹಲವಾರು ಪ್ರಾಜೆಕ್ಟ್ ಗಳನ್ನೂ ಒಪ್ಪಿಕೊಂಡಿದ್ದಾರೆ. ತನ್ನ ಬದುಕಿನ ಬಗ್ಗೆ ಒಂದೊಂದೇ ಸತ್ಯವನ್ನು ಹೊರಹಾಕುತ್ತಿರುವ ಈಕೆ ಈಗ ತಾನು ಹುಟ್ಟಿದ್ದೆಲ್ಲಿ ಎನ್ನುವ ವಿಷಯವನ್ನು ಕೂಡ ಬಹಿರಂಗ ಮಾಡಿದ್ದಾರೆ. ನಾವೆಲ್ಲಾ ಅಂದುಕೊಂಡ ಹಾಗೆ ರಾನು ಮಂಡಲ್ ಎಲ್ಲೋ ಪುಟ್ ಪಾತ್ ನಲ್ಲಿ ಜೀವನ ಮಾಡಿಲ್ಲ ಬದಲಿಗೆ ಎಲ್ಲರ ಹಾಗೆ ಆಕೆಗೂ ಒಂದು ಕುಟುಂಬ ಇತ್ತು.

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ರಾನು ತಾನು ಹುಟ್ಟಿದಾಗಿನಿಂದಲೂ ಬಡವಳಲ್ಲ ಮತ್ತು ಸುಸ್ಥಿತಿಯಲ್ಲಿರುವ ಕುಟುಂಬದಲ್ಲಿ ಜನಿಸಿರುವುದಾಗಿ ಹೇಳಿದ್ದಾಳೆ. ‘ನಾನು ಫುಟ್‌ಪಾತ್‌ನಲ್ಲಿ ಹುಟ್ಟಿಲ್ಲ. ನಾನು ಉತ್ತಮ ಕುಟುಂಬಕ್ಕೆ ಸೇರಿದವಳು ಆದರೆ ಅದು ನನ್ನ ಹಣೆಬರಹ. ನಾನು ಕೇವಲ ಆರು ತಿಂಗಳ ಮಗುವಾಗಿದ್ದಾಗ ನನ್ನ ಹೆತ್ತವರಿಂದ ಬೇರ್ಪಟ್ಟಿದ್ದೇನೆ. ನಾವು ಮದುವೆಯ ನಂತರ ಪಶ್ಚಿಮ ಬಂಗಾಳದಿಂದ ಮುಂಬೈಗೆ ಸ್ಥಳಾಂತರಗೊಂಡೆನು ಎಂದು ಹೇಳಿದರು.

ಇನ್ನು ಮುಂದುವರೆದು ತಮ್ಮ ಪತಿ ಬಾಲಿವುಡ್ ಸ್ಟಾರ್ ಫಿರೋಜ್ ಖಾನ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದನ್ನೂ ರಾನು ಬಹಿರಂಗಪಡಿಸಿದರು. “ನನ್ನ ಪತಿ ಫಿಲ್ಮ್‌ಸ್ಟಾರ್ ಫಿರೋಜ್ ಖಾನ್ ಅವರ ಮನೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಅವರ ಮಗ ಫರ್ದೀನ್ ಆ ಸಮಯದಲ್ಲಿ ಕಾಲೇಜಿನಲ್ಲಿದ್ದರು. ಅವರು ಕುಟುಂಬ ಸದಸ್ಯರಂತೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು’ ಎಂದು ಅವರು ಹೇಳಿದರು.

“ನಮಗೆ ಮನೆ ಇತ್ತು, ಆದರೆ ಅದನ್ನು ನಿರ್ವಹಿಸಲು ಜನರುಬೇಕು. ಒಂಟಿತನದ ಹಲವು ದಿನಗಳು ಇದ್ದವು. ನಾನು ತುಂಬಾ ಕಷ್ಟಪಟ್ಟಿದ್ದೇನೆ ಆದರೆ ಯಾವಾಗಲೂ ದೇವರನ್ನು ನಂಬುತ್ತೇನೆ. ನಾನು ಸಂದರ್ಭಗಳಿಗೆ ಅನುಗುಣವಾಗಿ ಹಾಡುತ್ತಿದ್ದೆ ಹೊರತು ಹಾಡುವ ಅವಕಾಶಕ್ಕಾಗಿ ಅಲ್ಲ, ”ಎಂದು ಹೇಳಿದರು.

ತಮ್ಮ ಮನೆಯಿಂದ ರೆಕಾರ್ಡಿಂಗ್ ಸ್ಟುಡಿಯೋಗೆ ಪ್ರಯಾಣಿಸುವುದು ಕಷ್ಟಕರವಾದ ಕಾರಣ ಮುಂಬೈಯಲ್ಲಿ ಮನೆ ಮಾಡುವ ಬಯಕೆಯನ್ನು ರಾನು ವ್ಯಕ್ತಪಡಿಸಿದ್ದಾರೆ. “ನಾನು ತುಂಬಾ ಸಂತಸದಿಂದ ಇದ್ದೇನೆ, ಈಗಾಗಲೇ ಐದರಿಂದ ಆರು ಹಾಡುಗಳನ್ನು ರೆಕಾರ್ಡ್ ಮಾಡಿದ್ದೇನೆ. ವಿಷಯವೆಂದರೆ, ಮುಂಬೈನಲ್ಲಿನ ಸಂಗೀತದ ಅವಕಾಶಗಳು ಎಂದರೆ ಅದಕ್ಕೆ ದೊಡ್ಡ ಅರ್ಥವಿದೆ.

ಬಹುಶ ಮುಂದಿನ ದಿನಗಳಲ್ಲಿ ರಾನು ಅವರ ಹಲವು ಆಲ್ಬಮ್ ಗಳಲ್ಲಿ ಹಾಡುವುದನ್ನು ನಾವು ಕಣ್ತುಂಬಿ ಕೊಳ್ಳುವಬಹುದು. ಕನ್ನಡದಲ್ಲೂ ರಾನು ಅವರ ಹಾಡುತ್ತಾರೆ ಅಥವಾ ಇತರ ಭಾಷೆಯಲ್ಲೂ ಅವರಿಗೆ ಅವಕಾಶ ಸಿಗುತ್ತವೆ ಮತ್ತು ಭವಿಷ್ಯದಲ್ಲಿ ತಾನು ಕಂಡ ಕನಸನ್ನು ಸಮುರವಾಗಿ ಸಾಕಾರಮಾಡಿಕೊಳ್ಳಲಿ ಎನ್ನುವುದು ಅವರನ್ನು ಹರಸಿ ಹಾರೈಸಿದ ಅದೆಷ್ಟೋ ಕೋಟ್ಯಂತರ ಅಭಿಮಾನಿಗಳ ಆಶಯ.

Please follow and like us:
error0
http://karnatakatoday.in/wp-content/uploads/2019/09/ranu-mandal-birth-place-2-1024x576.jpghttp://karnatakatoday.in/wp-content/uploads/2019/09/ranu-mandal-birth-place-2-150x104.jpgKarnataka Trendingಎಲ್ಲಾ ಸುದ್ದಿಗಳುಚಲನಚಿತ್ರತನ್ನ ಗಾಯನದಿಂದ ಮನೆಮಾತಾಗಿರುವ ರಾನು ಮಂಡಲ್ ರಾತ್ರೋ ರಾತ್ರಿ ಫೇಮಸ್ ಆದರು, ಅವರ ಬಗ್ಗೆ ಹಿರಿಯರು ಹೇಳಿದ ಗಾದೆ ನೆನಪಾಗುತ್ತಿದೆ ಅದೇನೆಂದರೆ, ಪ್ರತಿಭೆ ಗುಡಿಸಲಿನಲ್ಲಿ ಹುಟ್ಟುತ್ತದೆ ಮತ್ತು ಅರಮನೆಯಲ್ಲಿ ಸಾಯುತ್ತದೆ ಎಂದು. ಇದು ನಿಜವಾಗಿ ಸತ್ಯ. ರಾನು ಹಾಡು ಅಂತರ್ಜಾಲದಲ್ಲಿ ಟಾಪ್ ಹಿಟ್ ಆಗುತ್ತಿರುವುದನ್ನು ಕಂಡು ಅವಕಾಶ ನೀಡಿ ಆಕೆಯನ್ನು ಸಮಾಜದ ಮುಖ್ಯ ಭೂಮಿಕೆಗೆ ತಂದು ಪರಿಚಯಿಸಲಾಯಿತು. ಇದಾದ ಬಳಿಕ ನಡೆದಿದ್ದೆಲ್ಲ ಪವಾಡ. ಸಿಕ್ಕ ಅವಕಾಶದಲ್ಲಿ ರಾನು ಬಹಳ...Film | Devotional | Cricket | Health | India