Ranu Mandal Second song

ಸ್ನೇಹಿತರೆ ಪ್ರತಿಭೆಗೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ಸಾಕ್ಷಿ ರಾನು ಮಾಡಲ್ ಎಂದು ಹೇಳಿದರೆ ತಪ್ಪಾಗಲ್ಲ, ಯಾವುದೇ ರೈಲ್ವೆ ಸ್ಟೇಷನ್ ನಲ್ಲಿ ಹಾಡುಗಳನ್ನ ಹಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರಾನು ಮಂಡಲ್ ತನ್ನ ಹಾಡಿನ ಮೂಲಕ ಈಗ ದೇಶಾದ್ಯಂತ ವೈರಲ್ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ.

ಇನ್ನು ರಾನು ಮಂಡಲ್ ಅವರ ಸುಮಧುರ ಕಂಠವನ್ನ ತನ್ನ ಮೊಬೈಲ್ ನಲ್ಲಿ ಸೇರಿಹಿಡಿಯುವ ಮೂಲಕ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಯಿತು. ಇನ್ನು ಇದನ್ನ ನೋಡಿದ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯ ಅವರು ತನ್ನ ಸಿನಿಮಾದಲ್ಲಿ ಹಾಡನ್ನ ಹಾಡಲು ಅವಕಾಶವನ್ನ ಮಾಡಿಕೊಟ್ಟು ಆಕೆಗೆ 6 ಲಕ್ಷ ಸಂಭಾವೆಯನ್ನ ಕೂಡ ನೀಡಿದ್ದರು.

Ranu Mandal Second song

ಇನ್ನು ಈಗ ರಾನು ಮಂಡಲ್ ಅವರಿಗೆ ಇನ್ನೊಂದು ಭರ್ಜರಿ ಅವಕಾಶ ಒದಗಿ ಬಂದಿದ್ದು ರಾನು ಮಂಡಲ್ ಫುಲ್ ಖುಷಿಯಾಗಿದ್ದಾರೆ. ಹಾಗಾದರೆ ರಾನು ಮಂಡಲ್ ಅವರಿಗೆ ಒದಗಿ ಬಂದಿರುವ ಅವಕಾಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾನು ಮಂಡಲ್ ಕಂಠದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯ ಅವರು ರಾನು ಮಂಡಲ್ ಅವರ ಕೈಯಲ್ಲಿ ತೇರಿ ಮೇರಿ ಕಹಾನಿ ಅನ್ನುವ ಹಾಡನ್ನ ಹಾಡಿಸುವುದರ ಮೂಲಕ ಯಶಸ್ಸನ್ನ ಸಾಧಿಸಿದ್ದರು, ಇನ್ನು ಈಗ ಮತ್ತೆ ಹಿಮೇಶ್ ರೇಶ್ಮಿಯ ಅವರು ರಾನು ಮಂಡಲ್ ಅವರ ಕೈಯಲ್ಲಿ ಎರಡನೆಯ ಹಾಡನ್ನ ಹಾಡಿಸುವುದರ ಮೂಲಕ ಮತ್ತೆ ಜನರಿಗೆ ರಾನು ಮಂಡಲ್ ಧ್ವನಿಯ ವಿಶೇಷತೆಯನ್ನ ತೋರಿಸಿದ್ದಾರೆ.

Ranu Mandal Second song

ಇನ್ನು ರಾನು ಮಂಡಲ್ ಅವರ ಈ ಹಾಡನ್ನ ಕೇಳಿದ ಜನರು ರಾನು ಮಂಡಲ್ ಅವರಿಗೆ ಮತ್ತೆ ಫಿದಾ ಆಗಿದ್ದಾರೆ, ಇನ್ನು ಈ ಹಾಡನ್ನ ಹಾಡಿದ ಮೇಲೆ ರಾನು ಮಂಡಲ್ ಅವರ ಸ್ಟೇಟಸ್ ಇನ್ನು ಬದಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ರೈಲ್ವೆ ಸ್ಟೇಷನ್ ನಲ್ಲಿ ಹಾಡನ್ನ ಹಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಪ್ರತಿಭೆ ಇಂದು ದೇಶಾದ್ಯಂತ ತನ್ನ ಮೇರು ಮೂಡಿಸಿರುವುದು ನೋಡಿದರೆ ಮುಂದೆ ಒಂದು ದಿನ ಈಕೆ ದೊಡ್ಡ ಸಾಧನೆಯನ್ನ ಮಾಡುತ್ತಾಳೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ, ಸ್ನೇಹಿತರೆ ರಾನು ಮಂಡಲ್ ಅವರ ಹಾಡಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Ranu Mandal Second song

Please follow and like us:
error0
http://karnatakatoday.in/wp-content/uploads/2019/09/Megha-Offer-to-Ranu-Mandal-1024x576.jpghttp://karnatakatoday.in/wp-content/uploads/2019/09/Megha-Offer-to-Ranu-Mandal-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಸ್ನೇಹಿತರೆ ಪ್ರತಿಭೆಗೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ಸಾಕ್ಷಿ ರಾನು ಮಾಡಲ್ ಎಂದು ಹೇಳಿದರೆ ತಪ್ಪಾಗಲ್ಲ, ಯಾವುದೇ ರೈಲ್ವೆ ಸ್ಟೇಷನ್ ನಲ್ಲಿ ಹಾಡುಗಳನ್ನ ಹಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರಾನು ಮಂಡಲ್ ತನ್ನ ಹಾಡಿನ ಮೂಲಕ ಈಗ ದೇಶಾದ್ಯಂತ ವೈರಲ್ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನು ರಾನು ಮಂಡಲ್ ಅವರ ಸುಮಧುರ ಕಂಠವನ್ನ ತನ್ನ ಮೊಬೈಲ್ ನಲ್ಲಿ ಸೇರಿಹಿಡಿಯುವ ಮೂಲಕ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್...Film | Devotional | Cricket | Health | India