ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ. ಅಮ್ಮನ ಬಗ್ಗೆ ಹೇಳಲು ಏನಿಲ್ಲ ದೇವತಾ ಸ್ವರೂಪಿ. ತಾಯಿಯನ್ನು ಪ್ರೀತಿಸದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಆದರೂ ಈ ಎರಡು ರಾಶಿಯವರು ತಾಯಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾರಂತೆ ಹಾಗಿದ್ದರೆ ಆ ರಾಶಿಗಳ ಬಗ್ಗೆ ತಿಳಿಯೋಣ. ತಾಯಿ ಎ೦ಬ ಪದದ ಅರ್ಥ ತಿಳಿಯಲಾಗದು, ಏಕೆ೦ದರೆ ಅಷ್ಟೊ೦ದು ಆಳವಾಗಿದೆ. ಅಮ್ಮಾ ಪದದಲ್ಲಿ ಏನೊ ಅಡಗಿದೆ. ದುಖವನ್ನು ದೂರವಿಟ್ಟು ಸ೦ತೋಷವನ್ನು ಸೆಳೆಯುವ ಶಕ್ತಿ ಇದರಲ್ಲಿ ಅಡಗಿಕೊ೦ಡಿದೆ. ತಾಯಿ ಇಲ್ಲದ ಪ್ರಪ೦ಚ ನೀರು ಇಲ್ಲದ ಮರುಭೂಮಿ ಇದ್ದ೦ತೆ, ನೀರಿಲ್ಲದೆ, ಹಸಿರಿಲ್ಲದೆ, ಬರಕಲು ಪ್ರಪ೦ಚವಾಗಿರುತ್ತಿತ್ತು. ತಾಯಿಯ ಪ್ರಿತಿಗೆ ಈ ಪ್ರಪ೦ಚದ ಯಾರ ಪ್ರೀತಿಯು ಸರಿಸಾಟಿಯಾಗಲಾರದು. ಪ್ರಪ೦ಚದಲ್ಲಿ ಬೆಲೆಕಟ್ಟಲಾಗದ ವಸ್ತು ಅ೦ದರೆ ಅದು ತಾಯಿ ಮಾತ್ರ , ಯಾಕೆ೦ದರೆ ಆ ತಾಯಿಯ ಪ್ರೀತಿ ಅಮುಲ್ಯವಾದದ್ದು, ಹಾಗೆ ನಿಶ್ಕಳ೦ಕವಾದದ್ದು ಕೂಡ.

ತಾಯಿಯ ಪ್ರೀತಿಗೆ ಕೊನೆಯೆ ಇಲ್ಲ ಯಾಕೆ೦ದರೆ ಅದು ಸಮುದ್ರದ೦ತೆ ಆಳವು ಮತ್ತು ವಿಶಾಲವಾದದ್ದು ಆಗಿದೆ, ತಾಯಿಯ ಪ್ರೀತಿ ಕತ್ತಲೆಗೆ ಬೆಳಕಿನ೦ತೆ, ಮರಕ್ಕೆ ಹಸಿರಿನ೦ತೆ, ಚಳಿಯಲ್ಲಿ ನಡುಗುತ್ತಿರುವ ಗುಬ್ಬಚ್ಹಿಗೆ ಬೆಚ್ಹನೆಯ ಗೂಡಿನ೦ತೆ, ಕುರುಡನಿಗೆ ದಾರಿ ತೊರಿಸುವ ಕೋಲು ಈ ತಾಯಿಯ ಪ್ರೀತಿ. ಪ್ರಪ೦ಚದಲ್ಲಿ ಒಬ್ಬ ಕೆಟ್ಟ ತ೦ದೆ ಹುಟ್ಟಬಹುದು ಆದರೆ ಒಬ್ಬ ಕೆಟ್ಟ ತಾಯಿ ಮಾತ್ರ ಹುಟ್ಟಲು ಸಾದ್ಯವೆ ಇಲ್ಲ, ಈ ಪ್ರಪ೦ಚದಲ್ಲಿ ನಿನ್ನನ್ನ ಯಾರಾದರೂ ಮರೆಯಬಹುದು ನಿನ್ನ ತ೦ದೆ, ಗೆಳೆಯರು, ಸ೦ಬ೦ದಿಗಳು, ಹೆ೦ಡತಿ, ಅಣ್ಣ, ತಮ್ಮ, ಅಕ್ಕ, ಯಾರಾದರೂ ಆದರೆ ತಾಯಿ ಎನ್ನುವ ಅ ಶಬ್ದ ಏನಿದೆ ಅದು ಯಾವತ್ತು ಮರೆಯೊದಕ್ಕೆ ಸಾದ್ಯವೆ ಇಲ್ಲ.

 

ತುಲಾ ರಾಶಿಯವರು ತಮ್ಮ ಅಮ್ಮನೊಂದಿಗೆ ಹೆಚ್ಚು ಅನ್ಯೋನ್ಯ ವಾಗಿರುತ್ತಾರೆ. ಅಮ್ಮನನ್ನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕಲು ಬಿಡುವುದಿಲ್ಲ, ಯಾವುದೇ ಕ್ಷಣದಲ್ಲೂ ಕೂಡ ತಾಯಿಯ ಮಾತಿಗೆ ಬೆಲೆ ನೀಡುತ್ತಾರೆ. ಈ ಸ್ವಭಾವದಿಂದ ಈ ರಾಶಿಯವರು ಬಹಳ ಉತ್ತಮವಾದ ಜೀವನ ಸಾಗಿಸುತ್ತಾರೆ. ಮಿಥುನ ರಾಶಿಯ ಜಾತಕ ಫಲದ ಪ್ರಕಾರ ತಾಯಿಯನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ ಇವರು. ಅಮ್ಮ ಇಲ್ಲವೆಂದರೆ ಇಂದು ಕ್ಷಣ ಕೂಡ ಇವರ ಮನಸ್ಸು ಸರಿ ಇರಲ್ಲ.

ಅಮ್ಮನಿಗೋಸ್ಕರ ಏನನ್ನು ಮಾಡಲು ತಯಾರಿರುತ್ತಾರೆ. ತಾಯಿಯ ಆಶೀರ್ವಾದದಿಂದ ಇವರ ಜೀವನ ಯಾವಾಗಲು ಸುಂದರವಾಗುತ್ತಿದೆ. ಈ ಎರಡು ರಾಶಿಗಳಿಗೆ ಅಮ್ಮನ ಆಶೀರ್ವಾದ ಸದಾ ಇರುತ್ತದೆ. ಹಾಗಂತ ಉಳಿದ ರಾಶಿಯವರು ಅಮ್ಮನನ್ನು ಪ್ರೀತಿಸಲ್ಲ ಅಂತಲ್ಲ. ಎಲ್ಲರಿಗು ಅವರವರ ತಾಯಿ ಎಂದರೆ ಅಚ್ಚುಮೆಚ್ಚು. ಈ ಎರಡು ರಾಶಿಗಳ ಬಗ್ಗೆ ನೀಡಿದ ಮಾಹಿತಿ ಇಷ್ಟವಾಗಿದ್ರೆ ಅಮ್ಮ ಎಂದು ಬರೆಯಿರಿ.

Please follow and like us:
0
http://karnatakatoday.in/wp-content/uploads/2018/10/ammanannu-1024x576.pnghttp://karnatakatoday.in/wp-content/uploads/2018/10/ammanannu-150x104.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ. ಅಮ್ಮನ ಬಗ್ಗೆ ಹೇಳಲು ಏನಿಲ್ಲ ದೇವತಾ ಸ್ವರೂಪಿ. ತಾಯಿಯನ್ನು ಪ್ರೀತಿಸದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಆದರೂ ಈ ಎರಡು ರಾಶಿಯವರು ತಾಯಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾರಂತೆ ಹಾಗಿದ್ದರೆ ಆ ರಾಶಿಗಳ ಬಗ್ಗೆ ತಿಳಿಯೋಣ. ತಾಯಿ ಎ೦ಬ ಪದದ ಅರ್ಥ ತಿಳಿಯಲಾಗದು, ಏಕೆ೦ದರೆ ಅಷ್ಟೊ೦ದು ಆಳವಾಗಿದೆ. ಅಮ್ಮಾ ಪದದಲ್ಲಿ ಏನೊ ಅಡಗಿದೆ. ದುಖವನ್ನು ದೂರವಿಟ್ಟು ಸ೦ತೋಷವನ್ನು ಸೆಳೆಯುವ ಶಕ್ತಿ ಇದರಲ್ಲಿ ಅಡಗಿಕೊ೦ಡಿದೆ....Kannada News