ಮನುಷ್ಯನ ಜೀವನದ ಮೇಲೆ ರಾಶಿಗಳ ಮಹತ್ವ ಬಹಳಷ್ಟಿದೆ, ರಾಶಿಗಳ ಮೂಲಕ ಮಾನವನ ಭವಿಷ್ಯವನ್ನು ಅಳೆಯುವ ವಿದ್ಯೆಯನ್ನು ಈ ಹಿಂದೆಯೇ ನಮ್ಮ ಪೂರ್ವಜರು ಅರಿತಿದ್ದರು, ಒಂದು ವೇಳೆ ಗ್ರಹಗತಿಗಳಲ್ಲಿ ಬದಲಾವಣೆಯಾದರೆ ಇದರ ನೇರ ಪ್ರಭಾವ ಬೀಳುವುದು ನಮ್ಮ ರಾಶಿಗಳ ಮೇಲೆ. ಕೆಲವರಿಗೆ ಒಳ್ಳೆಯ ಫಲ ಸಿಕ್ಕರೆ ಇನ್ನು ಕೆಲವರಿಗೆ ಮಿಶ್ರಫಲ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಕೇತುಗಳ ಚಲನೆಯಲ್ಲಿ ಬದಲಾವಣೆಯಾಗುತ್ತಿದೆ, ಭಾರತೀಯ ಜೋತಿಷ್ಯಶಾಸ್ತ್ರ ರಾಹು ಹಾಗೂ ಕೇತುಗಳೆಂಬ ಅಸ್ತಿತ್ವದಲ್ಲಿರದ ಛಾಯಾಗ್ರಹಗಳನ್ನು ಗುರುತಿಸಿದೆ. ಆದಿ ಅಂತ್ಯಗಳು ತಿಳಿದಿಲ್ಲ. ಒಂದು ಅಳತೆಯಲ್ಲಿ ನಾವು ಗುರುತಿಸಿಕೊಳ್ಳಬೇಕು ಅಷ್ಟೇ. ಈ ಕಾರಣಕ್ಕಾಗಿಯೇ ಭಾರತೀಯ ಜೋತಿಷ್ಯ ಶಾಸ್ತ್ರ ಭೂಮಿಯನ್ನು ಮಧ್ಯದ ಬಿಂದುವನ್ನಾಗಿ ರೂಪಿಸಿಕೊಂಡಿತು. ರಾಹು ಕೇತುಗಳನ್ನು ರಹಸ್ಯಮಯ ಗ್ರಹಗಳು ಎಂದು ಕೂಡ ಕರೆಯಲಾಗುತ್ತದೆ.

ಈ ರಾಶಿಪಲ್ಲಟದಿಂದ ಯಾರಿಗೆ ಲಾಭ ಎನ್ನುವುದನ್ನ ಮೊದಲು ನೋಡೋಣ. ಮಿಥುನ ರಾಶಿಯವರಿಗೆ ಈ ಘಳಿಗೆ ಶುಭವಾಗಲಿದೆ, ನಿಮ್ಮ ಯೋಜನೆಗಳು ಒಂದೊಂದೇ ಯಶಸ್ಸು ಕಾಣಲಿವೆ. ಸಣ್ಣ ಪ್ರವಾಸದ ಯೋಗವಿದೆ. ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಿದೆ, ಮತ್ತು ಅಧ್ಯಾತ್ಮದತ್ತ ಒಲವು ಹೆಚ್ಚಲಿದೆ, ಅಲ್ಲದೆ ಧನಾಗಮನವಿದೆ.

ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಫಲ ಲಭಿಸಲಿದೆ, ಉದ್ಯೋಗಿಗಳಿಗೆ ಪ್ರಮೋಷನ್ ಸಿಗುವ ಯೋಗವಿದೆ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನ ಮೆಚ್ಚಿಕೊಳ್ಳುವರು. ಮಾತಾಪಿತರ ಆಶೀರ್ವಾದವಿದೆ. ಧನು ರಾಶಿಯವರಿಗೆ ಪ್ರವಾಸದ ಯೋಗವಿದೆ, ಧಾರ್ಮಿಕ ಕಾರ್ಯಗಳು ನಡೆದು ಮನೆಯಲ್ಲಿ ಶಾಂತಿ ನೆಲೆಸಲಿದೆ. ಕುಂಭ ರಾಶಿಗೆ ಸಂಗಾತಿಯ ಜೊತೆ ಉತ್ತಮ ದಿನಗಳು ಬರಲಿವೆ, ಆರ್ಥಿಕ ಕ್ಷೇತ್ರದಲ್ಲಿ ಮುನ್ನಡೆ. ರಾಹುಕೇತುಗಳ ಪರಿವರ್ತನೆ ಈ ರಾಶಿಗಳ ಸ್ವಲ್ಪ ಮಿಶ್ರಫಲ ತರಲಿದೆ ಆದ್ದರಿಂದ ಇವರು ಸ್ವಲ್ಪ ಎಚ್ಚರಿಕೆ ವಹಿಸಿ.

ಮೇಷ ರಾಶಿಯವರಿಗೆ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವ್ಯಾಪಾರಿಗಳಿಗೆ ಸಂಕಷ್ಟ ಒದಗಲಿದೆ, ಹೇಳದೆ ಕೇಳದೆ ಯಾವ ಕೆಲಸಕ್ಕೂ ಮುಂದೆ ಹೋಗಬೇಡಿ. ವೃಷಭ ರಾಶಿಯವರ ಕುಟುಂಬದಲ್ಲಿ ಅಶಾಂತಿ ಮೂಡಲಿದೆ ಆದ್ದರಿಂದ ಈ ಸಮಯವನ್ನು ಸ್ವಲ್ಪ ಕಾಳಜಿಯಿಂದ ಕಳೆಯಿರಿ, ನಿಮ್ಮ ಕೋಪದ ಮೇಲೆ ನಿಯಂತ್ರಣ ಇರಲಿ. ಮಾತಿನ ಮೇಲೆ ನಿಗಾವಹಿಸಬೇಕಾಗುತ್ತದೆ ಕರ್ಕ ರಾಶಿಯವರು , ನಿಮ್ಮ ಮಾತು ನಿಮಗೆ ಸಂಕಷ್ಟ ತಂದೊಡ್ಡಲಿದೆ ಅದ್ದ್ದರಿಂದ ಸ್ವಲ್ಪ ನಿಯಂತ್ರಣ ಬೇಕು.

ಸಿಂಹ ರಾಶಿಯವರು ಯಾವುದೇ ನಿರ್ಧಾರ ತಗೆದುಕೊಳ್ಳುವ ಮೊದಲು ಮನೆಯವರ ಸಲಹೆ ಸೂಚನೆಗಳನ್ನು ಕೇಳಿ. ಒಬ್ಬರೇ ನಿರ್ಧಾರ ತಗೆದುಕೊಳ್ಳಬೇಡಿ. ಖರ್ಚು ವೆಚ್ಚದಲ್ಲಿ ಸ್ವಲ್ಪ ಏರಿಕೆಯನ್ನು ಕಂಡುಕೊಳ್ಳಲ್ಲಿದ್ದಾರೆ ಮೀನಾ ರಾಶಿಯವರು, ಅತಿಯಾಗಿ ಯಾರನ್ನು ನಂಬಬೇಡಿ. ಮಕರ ರಾಶಿಯವರು ಆರೋಗ್ಯದ ಮೇಲೆ ಸ್ವಲ್ಪ ಮುತುವರ್ಜಿ ವಹಿಸಿ ಸ್ವಲ್ಪ ದಿನಗಳ ಕಾಲ ಅರೋಗ್ಯ ಹದಗೆಡಲಿದೆ. ನಕಾರಾತ್ಮಕ ಪರಿಸ್ಥಿತಿಗಳನ್ನು ಎದುರಿಸಲಿದ್ದಾರೆ ಮೀನಾ ರಾಶಿಯವರು, ಶತ್ರು ಕಾಟವಿದೆ ಸ್ವಲ್ಪ ದೂರವಿರಿ ನಿಮ್ಮ ವಿರೋಧಿಗಳಿಂದ. ದಯವಿಟ್ಟು ನಿಮ್ಮ ಸ್ನೇಹಿತರಿಗೂ ತಲುಪಿಸಿ ಓಂ ನಮಃ ಶಿವಾಯ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/rahu-ketu-rashi-1024x576.jpghttp://karnatakatoday.in/wp-content/uploads/2018/08/rahu-ketu-rashi-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಮನುಷ್ಯನ ಜೀವನದ ಮೇಲೆ ರಾಶಿಗಳ ಮಹತ್ವ ಬಹಳಷ್ಟಿದೆ, ರಾಶಿಗಳ ಮೂಲಕ ಮಾನವನ ಭವಿಷ್ಯವನ್ನು ಅಳೆಯುವ ವಿದ್ಯೆಯನ್ನು ಈ ಹಿಂದೆಯೇ ನಮ್ಮ ಪೂರ್ವಜರು ಅರಿತಿದ್ದರು, ಒಂದು ವೇಳೆ ಗ್ರಹಗತಿಗಳಲ್ಲಿ ಬದಲಾವಣೆಯಾದರೆ ಇದರ ನೇರ ಪ್ರಭಾವ ಬೀಳುವುದು ನಮ್ಮ ರಾಶಿಗಳ ಮೇಲೆ. ಕೆಲವರಿಗೆ ಒಳ್ಳೆಯ ಫಲ ಸಿಕ್ಕರೆ ಇನ್ನು ಕೆಲವರಿಗೆ ಮಿಶ್ರಫಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಕೇತುಗಳ ಚಲನೆಯಲ್ಲಿ ಬದಲಾವಣೆಯಾಗುತ್ತಿದೆ, ಭಾರತೀಯ ಜೋತಿಷ್ಯಶಾಸ್ತ್ರ ರಾಹು ಹಾಗೂ ಕೇತುಗಳೆಂಬ ಅಸ್ತಿತ್ವದಲ್ಲಿರದ ಛಾಯಾಗ್ರಹಗಳನ್ನು ಗುರುತಿಸಿದೆ. ಆದಿ...Kannada News