ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಪ್ರತಿಭೆಗಳನ್ನ ಹೊರತಂದ ಕಾರ್ಯಕ್ರಮ ಅಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಏನು ಹೇಳಿದರೆ ತಪ್ಪಾಗಲ್ಲ. ಹೌದು ಬಡವ, ಶ್ರೀಮಂತ ಅನ್ನದೆ ಎಲ್ಲರೂ ಕೂಡ ಈ ವೇಧಿಕೆಯಲ್ಲಿ ತಮ್ಮ ತೋರ್ಪಡಿಸಬಹುದಾಗಿದೆ, ಇನ್ನು ಈ ಕಾರ್ಯಕ್ರಮದ ಅನೇಕ ಜನರಿಗೆ ಆಶಾಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಕಳೆದ ಭಾರಿ ಹನುಮಂತ ತನ್ನ ಹಾಡುಗಳ ಮೂಲಕ ಇಡೀ ಕರ್ನಾಟಕದ ಜನರ ಮನಗೆದ್ದರೆ ಈ ಭಾರಿ ರತ್ನಮ್ಮ ಮತ್ತು ಮಂಜಮ್ಮ ಎಲ್ಲರ ಗಮನವನ್ನ ತಮ್ಮತ್ತ ಸೆಳೆಯುತ್ತಿದ್ದಾರೆ.

ಹೌದು ಈ ಇಬ್ಬರು ಅಂಧ ಸಹೋದರಿಯರು ಹಾಡುವ ಹಾಡಿಗೆ ಕರ್ನಾಟಕದ ಜನರ ಮಾತ್ರವಲ್ಲದೆ ಇಡೀ ಚಿತ್ರರಂಗವೇ ಇವರ ಹಾಡಿಗೆ ಫಿದಾ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಜೀವನದಲ್ಲಿ ತುಂಬಾ ಬಡವರಾದ ರತ್ನಮ್ಮ ಮತ್ತು ಮಂಜಮ್ಮ ದೇವಸ್ಥಾನದಲ್ಲಿ ಹಾಡುಗಳನ್ನ ಹಾಡಿಕೊಂಡು ಜೀವನ ಮಾಡುತ್ತಿದ್ದರು, ಆದರೆ ಯಾರೋ ಪುಣ್ಯಾತ್ಮ ಇವರು ಹಾಡುವ ಹಾಡುಗಳನ್ನ ವಿಡಿಯೋ ಮಾಡಿ ಅದನ್ನ ಜೀ ಕನ್ನಡಕ್ಕೆ ಕಳುಹಿಸಿಕೊಟ್ಟಾ, ಆ ವ್ಯಕ್ತಿ ಮಾಡಿದ ಸಹಾಯ ಈಗ ರತ್ನಮ್ಮ ಮತ್ತು ಮಂಜಮ್ಮ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಹಾಡುವಂತೆ ಆಗಿದೆ. ಇನ್ನು ರತ್ನಮ್ಮ ಮತ್ತು ಮಂಜಮ್ಮ ಕಡು ಬಡವರು ಮತ್ತು ಇವರಿಗೆ ಉಳಿದುಕೊಳ್ಳಲು ಸರಿಯಾದ ಮನೆ ಕೂಡ ಇಲ್ಲ. ರತ್ನಮ್ಮ ಮತ್ತು ಮಂಜಮ್ಮನ ಕಷ್ಟವನ್ನ ಕಂಡ ಅರ್ಜುನ್ ಜನ್ಯ ಅವರು ಅವರ ಮನೆಗೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನ ಹಾಕಿ ಅವರು ಜೀವನಪೂರ್ತಿ ಹೊಟ್ಟೆ ತುಂಬಾ ಊಟ ಮಾಡುವಂತೆ ನೋಡಿಕೊಳ್ಳುತ್ತಿದ್ದಾರೆ.

Rathnamma and Manjamma

ಇನ್ನು ನಮಗೆ ಉಳಿಯಲು ಮನೆ ಇಲ್ಲ ಎಂದು ಕಣ್ಣೀರು ಹಾಕಿದ ರತ್ನಮ್ಮ ಮತ್ತು ಮಂಜಮ್ಮ ಅವರ ಕಷ್ಟವನ್ನ ಕಂಡು ಬೇಸರ ಮಾಡಿಕೊಂಡ ಕನ್ನಡದ ಖ್ಯಾತ ನಟ ಜಗ್ಗೇಶ್ ಅವರು ರತ್ನಮ್ಮ ಮತ್ತು ಮಂಜಮ್ಮನಿಗೆ ಮನೆಯನ್ನ ಕಟ್ಟಿಸಿಕೊಟ್ಟು ಅದರ ಗ್ರಹ ಪ್ರವೇಶ ಕೂಡ ಮಾಡಿದ್ದಾರೆ. ಇನ್ನು ರತ್ನಮ್ಮ ಮತ್ತು ಮಂಜಮ್ಮನ ಮನೆಯ ಪ್ರವೇಶಕ್ಕೆ ಅನುಶ್ರೀ ಅವರಿಗೆ ಉಡುಗೊರೆಯನ್ನ ನೀಡಿದ್ದು ಅನುಶ್ರೀ ಕೊಟ್ಟ ಉಡುಗೊರೆಗೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ, ಹಾಗಾದರೆ ಅನುಶ್ರೀ ಕೊಟ್ಟ ಉಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಮೊನ್ನೆ ಜಗ್ಗೇಶ್ ಅವರು ಅಂಧ ಗಾಯಕಿಯರಿಗೆ ಕಟ್ಟಿಸಿಕೊಟ್ಟ ಮನೆಯ ಪ್ರವೇಶವನ್ನ ಮಾಡಿದ್ದು ಮನೆಯನ್ನ ಅವರಿಗೆ ಅರ್ಪಿಸಿದ್ದಾರೆ, ಇನ್ನು ಅನುಶ್ರೀ ಅವರು ರತ್ನಮ್ಮ ಮತ್ತು ಮಂಜಮ್ಮನ ಮನೆಗೆ ಒಂದು ಒಳ್ಳೆಯ ಉಡುಗೊರೆಯನ್ನ ನೀಡಿದ್ದಾರೆ. ಹೌದು ಸ್ನೇಹಿತರೆ ಹೊಸ ಮನೆಗೆ ಬೇಕಾದ ಕೆಲವು ಅಗತ್ಯ ವಸ್ತುಗಳನ್ನ ಕೊಡಿಸುವ ಜವಾಬ್ದಾರಿಯನ್ನ ಅನುಶ್ರೀಯವರು ಹೊತ್ತುಕೊಂಡಿದ್ದಾರೆ, ಅನುಶ್ರೀ ಅವರು ಕೊಟ್ಟ ಈ ಉಡುಗೊರೆಯನ್ನ ಸಹಾಯ ಅನ್ನಬಹುದು, ಆದರೆ ಅನುಶ್ರೀ ಅವರು ಇದನ್ನ ಗಿಫ್ಟ್ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ ಹನುಮಂತನಿಗೆ ಜೀವನವನ್ನೇ ಕೊಟ್ಟ ಸರಿಗಮಪ ಕಾರ್ಯಕ್ರಮ ಈಗ ರತ್ನಮ್ಮ ಮತ್ತು ಮಂಜಮ್ಮನಿಗೂ ಕೂಡ ಜೀವನವನ್ನ ಕೊಡುತ್ತಿದೆ, ಇನ್ನು ರತ್ನಮ್ಮ ಮತ್ತು ಮಂಜಮ್ಮ ಕೂಡ ಅವರ ಪ್ರತಿಭೆಯನ್ನ ಬಳಸಿಕೊಂಡು ಮೇಲೆ ಬರಲಿ ಎಂದು ನಾವು ನೀವು ದೇವರಲ್ಲಿ ಪ್ರಾಥನೆಯನ್ನ ಮಾಡೋಣ.

Rathnamma and Manjamma

Please follow and like us:
error0
http://karnatakatoday.in/wp-content/uploads/2020/03/Anusree-gift-Rathnamma-and-Manjamma-1024x576.jpghttp://karnatakatoday.in/wp-content/uploads/2020/03/Anusree-gift-Rathnamma-and-Manjamma-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮ ಯಾರಿಗೆ ತಿಳಿದಿಲ್ಲ ಹೇಳಿ, ಹೌದು ಪ್ರತಿಭೆಗಳನ್ನ ಹೊರತಂದ ಕಾರ್ಯಕ್ರಮ ಅಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಏನು ಹೇಳಿದರೆ ತಪ್ಪಾಗಲ್ಲ. ಹೌದು ಬಡವ, ಶ್ರೀಮಂತ ಅನ್ನದೆ ಎಲ್ಲರೂ ಕೂಡ ಈ ವೇಧಿಕೆಯಲ್ಲಿ ತಮ್ಮ ತೋರ್ಪಡಿಸಬಹುದಾಗಿದೆ, ಇನ್ನು ಈ ಕಾರ್ಯಕ್ರಮದ ಅನೇಕ ಜನರಿಗೆ ಆಶಾಕಿರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಕಳೆದ ಭಾರಿ ಹನುಮಂತ ತನ್ನ ಹಾಡುಗಳ ಮೂಲಕ ಇಡೀ ಕರ್ನಾಟಕದ ಜನರ...Film | Devotional | Cricket | Health | India