ಆಧಾರ್ ಕಾರ್ಡ್ ಬಗ್ಗೆ ಕೆಲವರಿಗೆ ಖುಷಿ ಇದ್ದರೇ ಇನ್ನು ಕೆಲವರಿಗೆ ಇದರ ಬಗ್ಗೆ ಅಸಮಾಧಾನವೇ ಹೆಚ್ಚು ಹೀಗಿರುವಾಗ ಇದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕೆಲವರ ಧನಾತ್ಮಕ ಅಂಶಗಳನ್ನು ಹೇಳಿದರೆ ಇನ್ನು ಕೆಲವರು  ಅನಾನುಕೂಲ ಹೇಳಲು ಕಾಯುತ್ತಿರುತ್ತಾರೆ. ಹೀಗಿರುವಾಗ ಟ್ವಿಟ್ಟರ್ ನಲ್ಲಿ ಆಧಾರ್ ಕಾರ್ಡ್ ಬಗ್ಗೆ ವ್ಯಂಗವಾಗಿ ಟ್ರೊಲ್ ಮಾಡಿದವನಿಗೆ ಭಾರತ ಸರ್ಕಾರ ಆತನಿಗೆ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಮಾಡಿದೆ.

ಈ ಉತ್ತರಕ್ಕೆ ನೆಟ್ಟಿಗರು ಬಹಳ ಖುಷಿ ಆಗಿದ್ದರೆ, ಟ್ರೊಲ್ ಮಾಡಿದವನು ಮುಖ ಮುಚ್ಚಿಕೊಳ್ಳುವಂತಾಗಿದ್ದಾನೆ. ಹೌದು ಇಟಕ್ಕೂ ನಡೆದಿದ್ದೇನು ನೋಡೋಣ ಬನ್ನಿ. ಟ್ವಿಟ್ಟರ್ ನಲ್ಲಿ ಎಂದಿನಂತೆ ಟ್ವೀಟ್ ಗಳು ಹರಿದಾಡುತ್ತಿದ್ದವು ಈ ನಡುವೆ ಲಂಕಾಧಿಪತಿ , ಹತ್ತು ತಲೆಯುಳ್ಳ ರಾವಣನ ಫೋಟೋ ಹಾಕಿ ಈತನಿಗೆ ಎಷ್ಟು ಆಧಾರ್ ಕಾರ್ಡ್ ನೀಡ್ತಿರಿ ಎಂದು ವ್ಯಂಗವಾಗಿ ಆಧಾರ್ ಅಧಿಕಾರಿಗಳಿಗೆ ಕೇಳುತ್ತಾನೆ.

ಆದರೆ ಆತನಿಗೆ ಈ ರೀತಿಯಾದ ರಿಪ್ಲೈ ಬರುತ್ತದೆ ಎಂದು ಗೊತ್ತಿರಲಿಲ್ಲ, ಪೋಸ್ಟ್ ಮಾಡಿದ ಕೆಲ ಕ್ಷಣದಲ್ಲೇ ಆತನಿಗೆ ಭಾರತ ಆಧಾರ್ ಕಾರ್ಡ್ ಕಡೆಯಿಂದ ರಿಪ್ಲಯ್ ಬರುತ್ತದೆ. ಆ ಸಂದೇಶದಲ್ಲಿ ಏನಿತ್ತು ಗೊತ್ತಾ. ರಾವಣ ಭಾರತದ ಪ್ರಜೆಯಲ್ಲ ಆದ್ದರಿಂದ ಅವನು ಆಧಾರ್ ಕಾರ್ಡ ಪಡೆಯಲು ಅರ್ಹನಲ್ಲ ಎಂದು ಭಾರತ ಸರ್ಕಾರ ಟ್ವೀಟ್ ಮಾಡಿ ಆತನನ್ನು ಮುಜುಗರ ಮಾಡುತ್ತದೆ.

 

ಇಷ್ಟಕ್ಕೂ AADHAAR  ಕಾರ್ಡ್ ನಿಂದ ನಿಜವಾಗಿಯೂ ಪ್ರಯೋಜನವೇ ಹೆಚ್ಚು ಯಾಕೆಂದರೆ ಸರ್ಕಾರದಿಂದ ಬರುವ ಯಾವುದೇ ಸೌಲಭ್ಯಗಳು ನೇರವಾಗಿ ಅದೇ ವ್ಯಕ್ತಿಗೆ ತಲುಪಬೆಕು ಮತ್ತು ತಲುಪಿದೆ ಎನ್ನುವುದು ಆಧಾರ್ ಕಾರ್ಡ್ ನಿಂದ ಸರಿಯಾಗಿ ತಿಳಿಯುತ್ತೆ ಅಲ್ಲದೆ, ನಕಲಿ ವ್ಯಕ್ತಿಗಳು, ನಕಲಿ ಪ್ರೂಫ್ ತೋರಿಸುವವರಿಗೆ ಆಧಾರ್ ಬಹು ದೊಡ್ಡ ಅಸ್ತ್ರವಾಗಿದೆ.

Please follow and like us:
0
http://karnatakatoday.in/wp-content/uploads/2018/06/adhhar-1024x576.pnghttp://karnatakatoday.in/wp-content/uploads/2018/06/adhhar-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುಆಧಾರ್ ಕಾರ್ಡ್ ಬಗ್ಗೆ ಕೆಲವರಿಗೆ ಖುಷಿ ಇದ್ದರೇ ಇನ್ನು ಕೆಲವರಿಗೆ ಇದರ ಬಗ್ಗೆ ಅಸಮಾಧಾನವೇ ಹೆಚ್ಚು ಹೀಗಿರುವಾಗ ಇದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕೆಲವರ ಧನಾತ್ಮಕ ಅಂಶಗಳನ್ನು ಹೇಳಿದರೆ ಇನ್ನು ಕೆಲವರು  ಅನಾನುಕೂಲ ಹೇಳಲು ಕಾಯುತ್ತಿರುತ್ತಾರೆ. ಹೀಗಿರುವಾಗ ಟ್ವಿಟ್ಟರ್ ನಲ್ಲಿ ಆಧಾರ್ ಕಾರ್ಡ್ ಬಗ್ಗೆ ವ್ಯಂಗವಾಗಿ ಟ್ರೊಲ್ ಮಾಡಿದವನಿಗೆ ಭಾರತ ಸರ್ಕಾರ ಆತನಿಗೆ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಮಾಡಿದೆ. ಈ ಉತ್ತರಕ್ಕೆ ನೆಟ್ಟಿಗರು ಬಹಳ ಖುಷಿ ಆಗಿದ್ದರೆ, ಟ್ರೊಲ್...Kannada News