ಹೌದು ಒಂದು ಕಾಲದಲ್ಲಿ ಧಾರವಾಡದ ಒಂದು ಚಿಕ್ಕ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತಿದ್ದ ಒಬ್ಬ ವ್ಯಕ್ತಿ ಅದೇ ಧಾರವಾಡಕ್ಕೆ ಐ ಪಿ ಯಸ್ ಅಧಿಕಾರಿಯಾಗಿ ಬರುತ್ತಾರೆ , ಈ ಸ್ಟೋರಿ ಕೇಳಿ ಯಾವುದೊ ಸಿನಿಮಾ ಸ್ಟೋರಿ ಅಂದುಕೊಳ್ಳ ಬೇಡಿ ಇದು ಯಾರನ್ನ ನೋಡಿದ್ರೆ ರೌಡಿಗಳು ಜಾಗ ಖಾಲಿ ಮಾಡ್ತಾರೋ ,ಯಾರನ್ನ ನೋಡಿದ್ರೆ ಪುಂಡು ಪೋಕಿರಿಗಳು ಬಚ್ಚಿಟ್ಟಿ ಕೊಳ್ಳುತ್ತಾರೋ ಯಾರನ್ನ ನೋಡಿದ್ರೆ ಭ್ರಷ್ಟ ಅಧಿಕಾರಿಗಳ ಬೆವರಿಳಿಯಿತ್ತೋ ,ಅವರೇ ನಮ್ಮ ನೆಚ್ಚಿನ ದಿಟ್ಟ ಅಧಿಕಾರಿ ನಮ್ಮ ನೆಚ್ಚಿನ ರವಿ ಚೆನ್ನಣ್ಣನವರ್. ಇಂದು ಅವರು ಕರ್ನಾಟಕದ ಮನೆ ಮಾತಾಗಿರುವ ಐ ಪಿ ಎಸ್ ಅಧಿಕಾರಿ.  ಐ ಪಿ ಯಸ್ ಪಾಸ್ ಅಗೋದೆಂದರೆ ಅದು ಸುಲಭದ ಮಾತಲ್ಲ ಅದರಲ್ಲೂ ಬಡ ಕುಟುಂಬದಲ್ಲಿ ಇದ್ದರೆ ಅಂತೂ ಮುಗಿದೇ ಹೋಯಿತು ,ಆದರೆ ನಮ್ಮ ರವಿ ಚೆನ್ನಣ್ಣನವರ್ ಅವರು ಬಡಕುಟುಂಬ ದಲ್ಲಿ ಜನಿಸಿದ ಅವರು ಇಂದು ಐಪಿಎಸ್ ಅಧಿಕಾರಿಯಾಗಿ ಒಂದು ಪವಾಡವನ್ನೇ ಮಾಡಿದ್ರು .

ಆದರೆ ಅವರು ನಡೆದು ಬಂದ ಹಾದಿಯಲ್ಲಿ ಎಷ್ಟೋ ಕಷ್ಟಗಳು ಎದುರಾಗಿತ್ತು ,ಆದರೂ ಆ ಕಷ್ಟಗಳನ್ನು ಮೆಟ್ಟಿ ಅವರು ನೆಡೆದು ಬಂದ ಹಾದಿ ಕೇಳಿದ್ರೆ ಮೈ ಜುಮ್ಮೆನಿಸುತ್ತದೆ. ಹೋಟೆಲ್ ನಲ್ಲಿ ಸಪ್ಲೆಯರ್ ಆಗಿ ಬಂದ ಹಣದಿಂದ UPSC ಪರೀಕ್ಷೆ ಬರೆದು ನಂತರ ೨೦೦೮ ರಲ್ಲಿ ನಡೆದ ಯುಪಿಎಸ್ ಸಿ ಪರೀಕ್ಷೆಯಲ್ಲಿ ( Union Public Service Commission Civil Services Exam 2008) ೭೦೩ ನೇ ರಾಂಕ್ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಪಡೆದಿರುವ ಗದಗ್ ನ ಕುಗ್ರಾಮ ನೀಲಾಗುಡ್ ನ ಒಂದು ವಂಚಿತ ಸಮುದಾಯದ ಬಡ ಕುಟುಂಬದಿಂದ ಬಂದ ರವಿ, ರಾಂಕ್ ಬಂದಿದ್ದು ದೊಡ್ಡ ಸಾಧನೆಯೇ ಆಗಿತ್ತು.

ಅದಾಗಲೇ ಕಷ್ಟಪಟ್ಟು SSLC ಹಾಗು PUC ಅಲ್ಲಿ ಡಿಸ್ಟಿಂಕ್ಷನ್ ತೆಗೆದಿದ್ದರು ,ಸಣ್ಣ ಪುಟ್ಟ ಕೆಲಸ ಗಳನ್ನೂ ಮಾಡಿಕೊಂಡು ಹೇಗಾದರೂ ಮಾಡಿ ಐ ಪಿ ಯಸ್ ಪರೀಕ್ಷೆ ಬರೆಯಬೇಕು ಎನ್ನೋದು ರವಿ ಕನಸಾಗಿತ್ತು ,ಆದರೆ ಅವರಬಳಿ ಹಣ ಇರಲಿಲ್ಲ , ಅದೇಗೋ ಅಲ್ಲಿ ಇಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿ ಸ್ವಲ್ಪ ಸ್ವಲ್ಪ ಹಣ ಹೊಂದಿಸಿದರು ,ನಂತರ ಉದ್ಯಮಿ ಸುಭಾಷ್ ಎನ್ನುವವರು ಪರಿಚಯಾವಾಗಿ ,ಅವರಿಗೆ ಮುಂದಕ್ಕೆ ಓದಲು ಸಾಹಯ ಮಾಡಿದರು .

ರವಿ ಅವರಿಗೆ ಸಿನಿಮಾ ನೋಡೋದಂದರೆ ಪಂಚ ಪ್ರಾಣವಂತೆ ಆದರೆ ಸಿನಿಮಾ ನೋಡುತ್ತಾ ಕುಂತರೆ ನಾನು ಅಧಿಕಾರಿ ಆಗಲ್ಲ ಪೊಲೀಸ್ ಆದಮೇಲೆ ನೋಡಿದರೆ ಆಯ್ತೆಂದು , ಎಲ್ಲ ಸಿನಿಮಾವನ್ನು ಒಂದು ಪುಸ್ತಕದಲ್ಲಿ ಪಟ್ಟಿ ಮಾಡಿಟ್ಟುಕೊಂಡು ಎಕ್ಸಾಮ್ ಮುಗಿದಮೇಲೆ ಮೇಲೆ ನೋಡಿದರಾಯ್ತು ಎಂದು ಕೊಂಡು ಓದಲು ಶುರುಮಾಡಿದ ಅವರು ಇಂದು ಒಬ್ಬ ಉನ್ನತ ಹೆಮ್ಮೆಯ ಅಧಿಕಾರಿಯಾಗಿ ಹೊರ ಹೊಮ್ಮಿರೋದು ಅವರಲ್ಲಿರುವ ಶಕ್ತಿ ಅನ್ನು ತೋರಿಸುತ್ತದೆ.

ಅವರು ಜನತೆಗೆ ಹೇಳುವ ಮಾತು ಏನೆಂದರೆ ” ಬಡತನ ,ಅಜ್ಞಾನ ,ಅನಕ್ಷರತೆ ಅನ್ನೋದು ಒಂದು ಶಾಪ ವಲ್ಲ ,ಒಂದು ವೇಳೆ ನೀವು ಅದರಿಂದ ಹೊರ ಬರದೇ ಹೋದರೆ ಅದು ನಿಜವಾದ ಶಾಪ” ಎಂದು ಕಾರ್ಯಕ್ರಮಗಳಲ್ಲಿ ಹೇಳುತ್ತಾರೆ ,ಹಾಗೆ ರಾಜಕೀಯ ವ್ಯಕ್ತಿಗಳಿಗೂ ಆಗಾಗ ಅವರು ಖಡಕ್ ಎಚ್ಚರಿಕೆ ಕೊಡುತ್ತಾರೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ಹಿಂದೆ ಅನೇಕ ಹಿಂಬಾಲಕರು ರೌಡಿ ಗಳನ್ನೂ ಇಟ್ಟಿರುತ್ತಾರೆ ಅಂಥವರಿಗೆ ರವಿ ಅವರು ಹೇಳುವೆನೆಂದರೆ ” ಉತ್ತಮ ನಾಯಕ ಇನ್ನೊಬ್ಬ ನಾಯಕನನ್ನು ತಯಾರಿಸುತ್ತಾನೆ ಹೊರತು ಹಿಂಬಾಲಕರನ್ನಲ್ಲ ” ಎಂದು ಹೇಳುತ್ತಾರೆ.

ಕೆಲವು ಭ್ರಷ್ಟರ ಮಧ್ಯ ಇಂಥ ಹೆಮ್ಮೆಯ ಅಧಿಕಾರಿ ನಮ್ಮ ಕರ್ನಾಟಕದಲ್ಲಿ ಇರೋದು ನಮ್ಮ ಹೆಮ್ಮೆಯೇ ಸರಿ .”ನೀವು ಕೂಡ ಇವರ ಆದರ್ಶವನ್ನೇ ರೂಪಿಸಿಕೊಳ್ಳಿ ನಿಮ್ಮ ಜೀವನವನ್ನು ಸ್ಥಾಪಿಸಿ ಕೊಳ್ಳಿ” ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗು ತಲುಪಿಸಿ. ರವಿ ಅವರು ನೆಡೆದು ಬಂದ ಹಾದಿ ಎಲ್ಲರಿಗೂ ತಿಳಿಯಲಿ .ಇನ್ನು ಹೆಚ್ಚಿನ ಜೀವನ ಚರಿತ್ರೆಯನ್ನು ಓದುವ ಆಸಕ್ತಿ ಇದ್ದರೆ ಅವರ ಹೆಸರನ್ನು ಕಾಮೆಂಟ್ ಮಾಡಿ.

Please follow and like us:
0
http://karnatakatoday.in/wp-content/uploads/2018/11/RAVI-D-CHENNANAVAR-STORY-KANNADA-1024x576.pnghttp://karnatakatoday.in/wp-content/uploads/2018/11/RAVI-D-CHENNANAVAR-STORY-KANNADA-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುಲೈಫ್ ಸ್ಟೈಲ್ಹೌದು ಒಂದು ಕಾಲದಲ್ಲಿ ಧಾರವಾಡದ ಒಂದು ಚಿಕ್ಕ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತಿದ್ದ ಒಬ್ಬ ವ್ಯಕ್ತಿ ಅದೇ ಧಾರವಾಡಕ್ಕೆ ಐ ಪಿ ಯಸ್ ಅಧಿಕಾರಿಯಾಗಿ ಬರುತ್ತಾರೆ , ಈ ಸ್ಟೋರಿ ಕೇಳಿ ಯಾವುದೊ ಸಿನಿಮಾ ಸ್ಟೋರಿ ಅಂದುಕೊಳ್ಳ ಬೇಡಿ ಇದು ಯಾರನ್ನ ನೋಡಿದ್ರೆ ರೌಡಿಗಳು ಜಾಗ ಖಾಲಿ ಮಾಡ್ತಾರೋ ,ಯಾರನ್ನ ನೋಡಿದ್ರೆ ಪುಂಡು ಪೋಕಿರಿಗಳು ಬಚ್ಚಿಟ್ಟಿ ಕೊಳ್ಳುತ್ತಾರೋ ಯಾರನ್ನ ನೋಡಿದ್ರೆ ಭ್ರಷ್ಟ ಅಧಿಕಾರಿಗಳ ಬೆವರಿಳಿಯಿತ್ತೋ ,ಅವರೇ...Kannada News