Ravichandran daughter Marriage Photos

ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಗಟ್ಟಿಮೇಳ ಕಾರ್ಯ ನಡೆದಿದೆ, ಹೌದು ತಮ್ಮ ಮಗಳ ಮದುವೆಯನ್ನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬಹಳ ಅದ್ದೂರಿಯಾಗಿ ನಡೆಸಿಕೊಟ್ಟಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸ್ಯಾಂಡಲ್ ವುಡ್ ನ ಎಲ್ಲಾ ಗಣ್ಯರನ್ನ ಮದುವೆಗೆ ಆಮಂತ್ರಿಸಿದ್ದರು.

ಇನ್ನು ಮದುವೆ ಈಗ ಬಹಳ ಅದ್ದೂರಿಯಾಗಿ ನಡೆದಿದ್ದು ಮಾಧ್ಯಮಗಳಿಗೆ ಮಾತ್ರ ಚಿತ್ರೀಕರಣವನ್ನ ಮಾಡಲು ಅವಕಾಶವನ್ನ ಕೊಟ್ಟಿರಲಿಲ್ಲ, ಆದರೂ ಕೂಡ ರವಿಚಂದ್ರನ್ ಮಗಳ ಮದುವೆಯನ್ನ ನೋಡುವ ಭಾಗ್ಯದಿಂದ ಯಾರು ಕೂಡ ವಂಚಿತರಾಗಿಲ್ಲ.

Ravichandran daughter Marriage Photos

ಹಾಗಾದರೆ ರವಿಚಂದ್ರನ್ ಮಗಳ ಮದುವೆ ಹೇಗಿತ್ತು, ರವಿಚಂದ್ರನ್ ಮಗಳ ಮದುವೆಗೆ ಯಾರು ಯಾರು ಬಂದಿದ್ದರು ಮತ್ತು ರವಿಚಂದ್ರನ್ ಅವರು ಮದುವೆಯಲ್ಲಿ ತಮ್ಮ ಕುಟುಂಬದ ಜೊತೆ ಯಾವ ರೀತಿ ಸಂತೋಷದಲ್ಲಿ ಇದ್ದರೂ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ರವಿಚಂದ್ರನ್ ಅವರು ತಮ್ಮ ಮಗಳಾದ ಗೀತಾಂಜಲಿ ಮದುವೆಯನ್ನ ಬಹಳ ವಿಶೇಷವಾಗಿ ಮಾಡಬೇಕು ಅಂದುಕೊಂಡಿದ್ದ ರವಿಚಂದ್ರನ್ ಅವರು ತಾವೇ ಖುದ್ದಾಗಿ ತಮ್ಮ ಆತ್ಮೀಯರನ್ನ ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದ್ದರು.

ಈಗ ಮದುವೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬಹಳ ಅದ್ದೂರಿಯಾಗಿದ್ದು ನಡೆದಿದ್ದು ಎಲ್ಲಾ ರೀತಿಯ ಮದುವೆಯ ಶಾಸ್ತ್ರ ಅಚುಕಟ್ಟಾಗಿ ನಡೆದಿದೆ, ಇನ್ನು ಮದುವೆಗೆ ರಜನೀಕಾಂತ್ ಮತ್ತು ಚಿರಂಜೀವಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು.

Ravichandran daughter Marriage Photos

ಇನ್ನು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯರಂತಹ ಗಣ್ಯ ರಾಜಕಾರಣಿಗಳು ಕೂಡ ಮದುವೆಗೆ ಆಗಮಿಸಿ ವಧು ವರರಿಗೆ ಆಶೀರ್ವಾದವನ್ನ ಮಾಡಿದರು. ಇನ್ನು ಮದುವೆಯಲ್ಲಿ ಹಂಸಲೇಖ ಅವರ ಸಂಗೀತ ಕಾರ್ಯಕ್ರಮವನ್ನ ಕೂಡ ಆಯೋಜನೆ ಮಾಡಿದ್ದ ರವಿಚಂದ್ರನ್ ಅವರು ಎಷ್ಟೇ ಅದ್ದೂರಿಯಾಗಿ ಮದುವೆಯನ್ನ ಮಾಡಿಕೊಟ್ಟಿದ್ದರೂ ಕೂಡ ಮಗಳನ್ನ ಅಳಿಯ ಮನೆಗೆ ಕಳುಹಿಸಿಕೊಡಬೇಕು ಅನ್ನುವ ಕಾರಣಕ್ಕೆ ಅವರ ಕಣ್ಣಿನಲ್ಲಿ ತಂದೆ ಮಗಳ ಅವಿನಾಭಾವ ಸಂಬಂಧದ ಆನಂದದ ಬಾಷ್ಪ ತುಂಬಿಕೊಂಡಿದ್ದವು.

ಏನೇ ಆಗಲಿ ಯಾವುದೇ ಮಾಧ್ಯಮದವರ ದುಕಾಟ ಮತ್ತು ಗೊಂದಲ ಇಲ್ಲದೆ ಬಹಳ ತಾಳ್ಮೆಯಿಂದ ಮತ್ತು ಸಂತೋಷದಿಂದ ತಾವು ಅಂದುಕೊಂಡಂತೆ ಮದುವೆಯನ್ನ ಮಾಡಿಕೊಟ್ಟಿರುವ ರವಿಚಂದ್ರನ್ ಅವರ ತಂದೆ ಮಗಳ ಅವಿನಾಭಾವ ಸಂಬಂಧದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Ravichandran daughter Marriage Photos

Please follow and like us:
0
http://karnatakatoday.in/wp-content/uploads/2019/05/Ravichandran-Daughter-Marriage-Photos-1024x576.jpghttp://karnatakatoday.in/wp-content/uploads/2019/05/Ravichandran-Daughter-Marriage-Photos-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಗಟ್ಟಿಮೇಳ ಕಾರ್ಯ ನಡೆದಿದೆ, ಹೌದು ತಮ್ಮ ಮಗಳ ಮದುವೆಯನ್ನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬಹಳ ಅದ್ದೂರಿಯಾಗಿ ನಡೆಸಿಕೊಟ್ಟಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸ್ಯಾಂಡಲ್ ವುಡ್ ನ ಎಲ್ಲಾ ಗಣ್ಯರನ್ನ ಮದುವೆಗೆ ಆಮಂತ್ರಿಸಿದ್ದರು. ಇನ್ನು ಮದುವೆ ಈಗ ಬಹಳ ಅದ್ದೂರಿಯಾಗಿ ನಡೆದಿದ್ದು ಮಾಧ್ಯಮಗಳಿಗೆ ಮಾತ್ರ ಚಿತ್ರೀಕರಣವನ್ನ ಮಾಡಲು ಅವಕಾಶವನ್ನ ಕೊಟ್ಟಿರಲಿಲ್ಲ, ಆದರೂ ಕೂಡ ರವಿಚಂದ್ರನ್ ಮಗಳ ಮದುವೆಯನ್ನ ನೋಡುವ ಭಾಗ್ಯದಿಂದ ಯಾರು ಕೂಡ ವಂಚಿತರಾಗಿಲ್ಲ. ಹಾಗಾದರೆ ರವಿಚಂದ್ರನ್...Kannada News