ಈ ಬಾರಿಯ ಐಪಿಎಲ್ ನಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಹೊಸ ವರುಷವೇ ದೊಡ್ಡ ಶಾಕ್ ಎದುರಾಗಿದೆ. ಹೌದು ಬೆಂಗಳೂರು ತಂಡದಲ್ಲಿ ಆಗಲಿರುವ ಈ ಬದಲಾವಣೆ ತಂಡದ ಮೇಲೆ ಯಾವ ರೀತಿಯ ಪರಿಣಾಮ ಬೀಳಲಿದೆ ಎನ್ನುವುದು ಕೂಡ ಕಾದು ನೋಡಬೇಕಾಗಿದೆ. ಅಸಲಿ ವಿಷ್ಯಕ್ಕೆ ಬರುವುದಾದರೆ ಈ ಬಾರಿಯ ಐಪಿಎಲ್ ಮುಗಿದ ಕೆಲ ಸಮಯದಲ್ಲೇ ವಿಶ್ವಕಪ್ ಕೂಡ ಆರಂಭವಾಗಲಿದೆ. ಆದ್ದರಿಂದ ಬಹುತೇಕ ಭಾರತೀಯ ಆಟಗಾರರೂ ಹಾಗು ವಿದೇಶಿ ಆಟಗಾರರು ಪಾಲ್ಗೊಳ್ಳುವುದು ಬಹುತೇಕ ಕಷ್ಟ. ಹಾಗಿದ್ದರೆ ಇಷ್ಟಕ್ಕೂ ಬೆಂಗಳೂರಿನ ಅಭಿಮಾನಿಗಳಿಗೆ ಯಾವ ಸುದ್ದಿ ನಿರಾಸೆ ಮೂಡಿಸಿದೆ ಗೊತ್ತಾ.

ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಮುಂಬೈ ತಂಡದ ವೇಗಿ ಜಸ್ ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವುದಾದರೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಯಾಕೆ ವಿಶ್ರಾಂತಿ ನೀಡಬಾರದು ಎಂದು ಬಿಸಿಸಿಐನ ಕಾರ್ಯದರ್ಶಿಗಳು ಚಕಾವೆತ್ತಿದ್ದು ಈ ಹಿನ್ನೆಲೆಯಲ್ಲಿ ಕೊಹ್ಲಿ ಐಪಿಎಲ್ ನಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ. ಇದರೊಂದಿಗೆ ಐಪಿಎಲ್ ನಲ್ಲಿ ವಿರಾಟ ದರ್ಶನ ನೋಡುವ ಆಸೆಗೆ ತಣ್ಣೀರು ಎರೆಚಿದಂತಾಗಿದೆ.


ಮೇ 30ರಿಂದ ಏಕದಿನ ವಿಶ್ವಕಪ್ ಪಂದ್ಯಾವಳಿ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿದ್ದು ಮೇ 19ರವರೆಗೂ ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಹೀಗಾಗಿ ಕೊಹ್ಲಿಗೆ ವಿಶ್ರಾಂತಿ ಸಿಗುವುದು ಕಡಿಮೆಯಾಗುತ್ತದೆ. ಇದು ವಿಶ್ವಕಪ್ ಟೂರ್ನಿಯ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನು ಈ ಬಾರಿ ಕಪ್ ನಮ್ದೆ ಅಂತ ಆರ್ಸಿಬಿ ಅಭಿಮಾನಿಗಳು ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದು ಒಂದು ವೇಳೆ ವಿರಾಟ್ ಕೊಹ್ಲಿ ಈ ಬಾರಿ ಆರ್ಸಿಬಿ ತಂಡವನ್ನು ಮುನ್ನಡೆಸದಿದ್ದರೆ ಏನು ಗತಿ ಎಂಬ ಪ್ರಶ್ನೆ ಮೂಡುತ್ತದೆ. ಇಷ್ಟೇ ಅಲ್ಲದೆ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಯಾರು ಮುನ್ನೆಡೆಸಲಿದ್ದಾರೆ ಎನ್ನುವುದು ಕುತೂಹಲಕರವಾಗಿದೆ.

Please follow and like us:
0
http://karnatakatoday.in/wp-content/uploads/2019/01/rcb-1024x576.jpghttp://karnatakatoday.in/wp-content/uploads/2019/01/rcb-150x104.jpgKarnataka Today's Newsಅಂಕಣಈ ಬಾರಿಯ ಐಪಿಎಲ್ ನಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಹೊಸ ವರುಷವೇ ದೊಡ್ಡ ಶಾಕ್ ಎದುರಾಗಿದೆ. ಹೌದು ಬೆಂಗಳೂರು ತಂಡದಲ್ಲಿ ಆಗಲಿರುವ ಈ ಬದಲಾವಣೆ ತಂಡದ ಮೇಲೆ ಯಾವ ರೀತಿಯ ಪರಿಣಾಮ ಬೀಳಲಿದೆ ಎನ್ನುವುದು ಕೂಡ ಕಾದು ನೋಡಬೇಕಾಗಿದೆ. ಅಸಲಿ ವಿಷ್ಯಕ್ಕೆ ಬರುವುದಾದರೆ ಈ ಬಾರಿಯ ಐಪಿಎಲ್ ಮುಗಿದ ಕೆಲ ಸಮಯದಲ್ಲೇ ವಿಶ್ವಕಪ್ ಕೂಡ ಆರಂಭವಾಗಲಿದೆ. ಆದ್ದರಿಂದ ಬಹುತೇಕ ಭಾರತೀಯ ಆಟಗಾರರೂ ಹಾಗು ವಿದೇಶಿ...Kannada News