Revanna and Darshan

ರೇವಣ್ಣ ಅವರು ಸುಮಲತಾ ಅವರ ಗಂಡ ಅಂಬರೀಷ್ ಅವರು ಸತ್ತು ಇನ್ನು ಎರಡು ತಿಂಗಳು ಕೂಡ ಆಗಿಲ್ಲ ಅಷ್ಟರಲ್ಲೇ ಸುಮಲತಾ ಅವರಿಗೆ ಈ ಚುನಾವಣೆ ಯಾಕೆ ಬೇಕಿತ್ತು ಎಂದು ಹೇಳಿದ್ದು ನಿಮಗೆಲ್ಲ ಗೊತ್ತೇ ಇದೆ.

ಈಗಾಗಲೇ ರೇವಣ್ಣ ಅವರ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ, ರೇವಣ್ಣ ಅವರ ಈ ಹೇಳಿಕೆಗೆ ದರ್ಶನ್ ಅವರ ಅಭಿಮಾನಿಗಳು ಮತ್ತು ಅಂಬರೀಷ್ ಅವರ ಅಭಿಮಾನಿಗಳು ರೇವಣ್ಣ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ರೇವಣ್ಣ ಅವರ ಈ ಹೇಳಿಕೆಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ರಿಯಾಕ್ಟ್ ಮಾಡಿದ್ದಾರೆ, ಹಾಗಾದರೆ ದರ್ಶನ್ ಅವರು ರೇವಣ್ಣ ಏನು ಮಾಡಿದ್ದಾರೆ ಅಂತ ನಾವು ಹೇಳುತ್ತೀವಿ ಪೂರ್ತಿಯಾಗಿ ಓದಿ.

Revanna and Darshan

ರೇವಣ್ಣ ಈ ಹೇಳಿಕೆಗೆ ರಾಜ್ಯದೆಲ್ಲೆಡೆ ಬಾರಿ ಆಕ್ರೋಶ ವ್ಯಕ್ತವಾಗಿದ್ದು ಈ ಹಿಂದೆ ನಿಮ್ಮ ಪಕ್ಷದವರೇ ಆದ ಕಲ್ಪನಾ ಸಿದ್ದರಾಜು ಅವರು ಕೂಡ ಗಂಡ ಸತ್ತು ಎರಡು ತಿಂಗಳು ಆಗುವ ಅಷ್ಟರಲ್ಲಿ ಅವರು ಮದ್ದೂರಿನಿಂದ ನಾಮಪತ್ರ ಸಲ್ಲಿಸಿರಲಿಲ್ಲವೇ, ಅವಾಗ ಎಲ್ಲಿ ಹೋಗಿತ್ತು ಈ ನಿಮ್ಮ ಮಾತು ಎಂದು ರೇವಣ್ಣ ಅವರಿಗೆ ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ಮತ್ತು ನಿಮ್ಮ ಕುಟುಂಬದವರು ಮಾಡಿದರೆ ಸರಿ ಆದರೆ ಅದನ್ನೇ ಬೇರೆಯವರು ಮಾಡಿದರೆ ತಪ್ಪು, ಇದೆಂತ ಮಾತು ಎಂದು ಅಂಬರೀಷ್ ಅಭಿಮಾನಿಗಳು ರೇವಣ್ಣ ಅವರಿಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.

Revanna and Darshan

ಇನ್ನು ಇತ್ತ ಸುಮಲತಾ ಅವರು ರೇವಣ್ಣ ಆಗಲಿ ಅಥವಾ ಅವರ ಮನೆಯವರಾಗಲಿ ಯಾರೇ ಏನು ಬೇಕಾದರೂ ನನ್ನ ಬಗ್ಗೆ ಮಾತನಾಡಲಿ ಆದರೆ ನೀವು ಮಾತ್ರ ನಿಖಿಲ್ ಅವರ ಪರ್ಸನಲ್ ಲೈಫ್ ಎಲ್ಲೂ ಕೆದಕಬೇಡಿ ಎಂದು ಅಭಿಮಾನಿಗಳಲ್ಲಿ ಮನವಿಯನ್ನ ಮಾಡಿ ದೊಡ್ಡತನವನ್ನ ಮರೆದಿದ್ದಾರೆ.

ಇನ್ನು ಇಷ್ಟೆಲ್ಲ ಆದರೂ ರೇವಣ್ಣ ಒಂದು ಕ್ಷಮೆಯನ್ನ ಕೂಡ ಕೇಳಿಲ್ಲ, ಅಷ್ಟೇ ಅಲ್ಲದೆ ನಾನು ಯಾಕೆ ಕ್ಷಮೆ ಕೇಳಬೇಕು, ನಾನೇನು ತಪ್ಪು ಮಾತನಾಡಲಿಲ್ಲ ಎಂದು ಹೇಳಿ ಅಭಿಮಾನಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇನ್ನು ರೇವಣ್ಣ ಅವರ ಬದಲಾಗಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯವರು ಸುಮಲತಾ ಅವರ ಬಳಿ ಕ್ಷಮೆಯನ್ನ ಕೇಳಿದ್ದಾರೆ.

Revanna and Darshan

ಇನ್ನು ಇನ್ನೇ ರಾತ್ರಿ ಸುಮಲತಾ ಅವರನ್ನ ಭೇಟಿ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ನೀವು ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ.

ನಿಮಗೆ ಅಂಬಿ ಅಪ್ಪನ ಅಭಿಮಾನಿಗಳ ಆಶೀರ್ವಾದ ಇದೆ, ನಿಮ್ಮ ದೊಡ್ಡ ಮಗನಂತೆ ನಿಮ್ಮ ಜೊತೆ ನಿಂತು ನಿಮ್ಮ ಪರ ಪ್ರಚಾರ ಮಾಡಿ ನಿಮ್ಮನ್ನ ಗೆಲ್ಲಿಸುವ ಎಲ್ಲಾ ಜವಾಬ್ದಾರಿ ನನ್ನದು ಎಂದು ಸುಮಲತಾ ಅವರಿಗೆ ಧೈರ್ಯ ಹೇಳಿದ್ದಾರೆ ದರ್ಶನ್ ಅವರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುಮಲತಾ ಅವರ ಜೊತೆ ಮಾತನಾಡಿ ಸುಮಲತಾ ಅವರಿಗೆ ಧೈರ್ಯ ತುಂಬಿದ್ದಾರೆ ದರ್ಶನ್ ಅವರು, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Revanna and Darshan

Please follow and like us:
0
http://karnatakatoday.in/wp-content/uploads/2019/03/Darshan-and-Revanna-1024x576.jpghttp://karnatakatoday.in/wp-content/uploads/2019/03/Darshan-and-Revanna-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರೇವಣ್ಣ ಅವರು ಸುಮಲತಾ ಅವರ ಗಂಡ ಅಂಬರೀಷ್ ಅವರು ಸತ್ತು ಇನ್ನು ಎರಡು ತಿಂಗಳು ಕೂಡ ಆಗಿಲ್ಲ ಅಷ್ಟರಲ್ಲೇ ಸುಮಲತಾ ಅವರಿಗೆ ಈ ಚುನಾವಣೆ ಯಾಕೆ ಬೇಕಿತ್ತು ಎಂದು ಹೇಳಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗಾಗಲೇ ರೇವಣ್ಣ ಅವರ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ, ರೇವಣ್ಣ ಅವರ ಈ ಹೇಳಿಕೆಗೆ ದರ್ಶನ್ ಅವರ ಅಭಿಮಾನಿಗಳು ಮತ್ತು ಅಂಬರೀಷ್ ಅವರ ಅಭಿಮಾನಿಗಳು ರೇವಣ್ಣ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ರೇವಣ್ಣ ಅವರ ಈ ಹೇಳಿಕೆಗೆ...Kannada News