ಭಾರತದಲ್ಲಿ ಅತಿ ಹೆಚ್ಚಿನ ಜನರು ವೀಕ್ಷಿಸುವ ಹಾಗು ಆಡುವ ಆಟ ಎಂದರೆ ಅದು ಕ್ರಿಕೆಟ್ ಎನ್ನಬಹುದು. ಭಾರತದಲ್ಲಿ ಕ್ರಿಕೆಟ್ ಬಹಳಷ್ಟು ಜನಪ್ರಿಯತೆ ಪಡೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದೇ ರೀತಿ ಕ್ರಿಕೆಟಿಗರೂ ಕೂಡ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ತನ್ನ ಒಂದೇ ಒಂದು ಇನ್ನಿಂಗ್ಸ್ ಮೂಲಕ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ ಹೆಚ್ಚಿನ ಆಟಗಾರರು. ಅದೇನೇ ಇರಲಿ ಭಾರತದಲ್ಲಿ ಕ್ರಿಕೆಟಿಗೂ ಮತ್ತು ಬಾಲಿವುಡ್ ಗೂ ಅವಿನಾಭಾವ ಸಂಬಂಧ ಇದೆ. ಒಂದಲ್ಲ ಒಂದು ರೀತಿಯಲ್ಲಿ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರು ಗಾಸಿಪ್ ಗೆ ಒಳಗಾಗುತ್ತಾರೆ, ಇದರಲ್ಲಿ ಕೆಲವು ಸತ್ಯ ಇದ್ದರೆ ಕೆಲವು ಗಾಸಿಪ್ ಗೆ ಸೀಮಿತವಷ್ಟೇ. ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ ಎಲ್ಲಾರು ಕೂಡ ಬಾಲಿವುಡ್ ಹಿನ್ನೆಲೆ ಇದ್ದವರನ್ನೇ ಮದುವೆಯಾಗಿರುವುದು ವಿಶೇಷ.

ಇಲ್ಲಿ ಗಾಸಿಪ್ ಗಳಿಗೇನು ಕೊರತೆ ಇರಲ್ಲ, ಕ್ರಿಕೆಟಿಗರು ಮತ್ತು ನಟಿಯರ ನಡುವಿನ ಸಂಬಂಧದ ವದಂತಿಗಳು ಯಾವಾಗಲೂ ಅಂತರ್ಜಾಲದಲ್ಲಿ ಸುತ್ತುತ್ತವೆ. ಸದ್ಯಕ್ಕೆ ಈ ಗಾಸಿಪ್ ತೊಂದರೆಯಲ್ಲಿ ಸಿಕ್ಕಿಬಿದ್ದವರು ಮತ್ತಾರು ಅಲ್ಲ, ಭಾರತದ ಉದಯೋನ್ಮುಖ ಸ್ಪೋಟಕ ಆಟಗಾರ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಬ್ ಪಂತ್. ಹೌದು ರಿಷಬ್ ಪಂತ್ ಜೊತೆ ಸುದ್ದಿಯಾಗಿರುವ ನಟಿ ಬೇರಾರು ಅಲ್ಲ ಕನ್ನಡದಲ್ಲಿ ಡಿ ಬಾಸ್ ಜೊತೆ ಐರಾವತ ಚಿತ್ರದಲ್ಲಿ ನಟಿಸಿ ಖ್ಯಾತಿಯಾಗಿದ್ದ ಊರ್ವಶಿ ರೌತೆಲಾ. ಹೌದು ಇಷ್ಟಕ್ಕೂ ಇವರಿಬ್ಬರ ನಡುವೆ ಹರಿದಾಡುತ್ತಿರುವ ಗಾಸಿಪ್ ಏನೆಂದರೆ ಕ್ರಿಕೆಟಿಗ ರಿಷಬ್ ಪಂತ್ ಈಗಾಗಲೇ ಊರ್ವಶಿ ಅವರನ್ನು ಸಾಮಾಜಿಕ ಜಾಲತಾಣವಾದ ವ್ಹಾಟ್ಸಾಪ್ ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು.

rishab pant and cinema

ಕ್ರಿಕೆಟಿಗ ರಿಷಬ್ ಮತ್ತು ನಟಿ ಊರ್ವಶಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ  ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸುದ್ದಿ ಬಹಿರಂಗಗೊಳ್ಳುವ ಮೊದಲೇ ಈಗ ರಿಷಬ್ ಪಂತ್ ನಟಿಯನ್ನು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಎಲ್ಲೆಡೆ ಕೇಳಿ ಬರುತ್ತಿದೆ. ಬಾಲಿವುಡ್ ಬೆಡಗಿ ಊರ್ವಶಿ ನಿರಂತರವಾಗಿ ರಿಷಭ್ ಜೊತೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದರು, ಆದರೆ ಕ್ರಿಕೆಟಿಗ ನಟಿಯೊಂದಿಗಿನ ಸಂಬಂಧವನ್ನು ಮುಂದುವರೆಸಲು ಇಷ್ಟಪಡುತ್ತಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ರಿಷಬ್ ಅವರು ಈಗ ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಕ್ರಿಕೆಟರ್ ಗೆ ಹತ್ತಿರವಿರುವರು ಕೆಲ ಮೂಲಗಳು ತಿಳಿಸಿವೆ ಎನ್ನಲಾಗಿದೆ, ವರದಿಗಳ ಪ್ರಕಾರ ಬ್ಲಾಕ್ ಮಾಡಿಕೊಂಡಿರುವುದು ಪರಸ್ಪರ ಒಪ್ಪಿತ ಎನ್ನುತ್ತಾರೆ ಊರ್ವಶಿ ಕಡೆಯವರು.

ಇನ್ನು ಬಾಲಿವುಡ್ ನಟಿ ಊರ್ವಶಿ ಅವರ ಹೆಸರು ಕ್ರಿಕೆಟಿಗರೊಂದಿಗೆ ಕೇಳಿ ಬರುತ್ತಿರುವುದು ಇದೆ ಮೊದಲೇನಲ್ಲ ಈ ಹಿಂದೆ ಇನ್ನೊಬ್ಬ ಭಾರತದ ಖ್ಯಾತ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಕೂಡ ಕೇಳಿಬಂದಿತ್ತು. ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ಬಾಲಿವುಡ್ ಹಾಗು ಕನ್ನಡದಲ್ಲಿ ನಟಿಸಿದ್ದ ನತಾಶಾ ಅವರೊಂದಿಗೆ ನೂತನ ವರ್ಷದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಅದೇನೇ ಇರಲಿ ಸಿನೆಮಾ ನಟಿಯರಿಗೂ ಹಾಗು ಕ್ರಿಕೆಟರ್ಸ್ ನಡುವೆ ಇರುವ ಸಂಬಂಧಗಳು ಆಗಾಗ ಹೊಸ ಗಾಸಿಪ್ ಗೆ ಎಡೆಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ.

rishab pant and cinema

 

 

 

Please follow and like us:
error0
http://karnatakatoday.in/wp-content/uploads/2020/01/rishab-and-urvashi-1024x576.jpghttp://karnatakatoday.in/wp-content/uploads/2020/01/rishab-and-urvashi-150x104.jpgKarnataka Trendingಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಬೆಂಗಳೂರುಸುದ್ದಿಜಾಲಭಾರತದಲ್ಲಿ ಅತಿ ಹೆಚ್ಚಿನ ಜನರು ವೀಕ್ಷಿಸುವ ಹಾಗು ಆಡುವ ಆಟ ಎಂದರೆ ಅದು ಕ್ರಿಕೆಟ್ ಎನ್ನಬಹುದು. ಭಾರತದಲ್ಲಿ ಕ್ರಿಕೆಟ್ ಬಹಳಷ್ಟು ಜನಪ್ರಿಯತೆ ಪಡೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದೇ ರೀತಿ ಕ್ರಿಕೆಟಿಗರೂ ಕೂಡ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ತನ್ನ ಒಂದೇ ಒಂದು ಇನ್ನಿಂಗ್ಸ್ ಮೂಲಕ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ ಹೆಚ್ಚಿನ ಆಟಗಾರರು. ಅದೇನೇ ಇರಲಿ ಭಾರತದಲ್ಲಿ ಕ್ರಿಕೆಟಿಗೂ ಮತ್ತು ಬಾಲಿವುಡ್ ಗೂ ಅವಿನಾಭಾವ ಸಂಬಂಧ ಇದೆ....Film | Devotional | Cricket | Health | India