ನಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಈ ಪ್ರಪಂಚದಲ್ಲಿ ಯಾವ ಶಕ್ತಿಯಿಂದಲೂ ಕೂಡ ನಮ್ಮ ಏಳಿಗೆಯನ್ನ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ನಮ್ಮಲ್ಲಿ ಛಲ ಇದ್ದರೆ ನಾವು ಆಕಾಶದ ಎತ್ತರಕ್ಕೆ ಬೆಳೆಯಬಹುದು ಅನ್ನುವುದನ್ನ ನಿರೂಪಿಸಿದ್ದಾನೆ ಸಿಮ್ ಕಾರ್ಡ್ ಮಾರಾಟ ಮಾಡುವ ಒಬ್ಬ ಬಡ ಹುಡುಗ. ಈ ಸಿಮ್ ಕಾರ್ಡ್ ಮಾರುವ ಹುಡುಗ ಈಗ 6 ಸಾವಿರ ಕೋಟಿಗೆ ಅಧಿಪತಿ ಆಗಿದ್ದಾನೆ ನಿಮಗೆ ನಂಬಲು ಸಾಧ್ಯವಿಲ್ಲ, ಆದರೆ ಇದು ನಿಜ ಸ್ನೇಹಿತರೆ, ಸ್ನೇಹಿತರೆ ಇದು ಕಟ್ಟು ಕಥೆ ಅಲ್ಲ ಬದಲಾಗಿ ನಿಜವಾದ ಕಥೆ ಆಗಿದೆ. ಹಾಗಾದರೆ ಈ ಹುಡುಗನಿಗೆ ಅಷ್ಟು ಹಣವನ್ನ ಸಂಪಾದನೆ ಮಾಡಲು ಹೇಗೆ ಸಾಧ್ಯವಾಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ನಾವು ನೀವು ರೋಡ್ ಬದಿಯಲ್ಲಿ ನಡೆದುಕೊಂಡು ಹೋಗುವಾಗ ನಮಗೆ ಹಲವು ಹೋಟೆಲ್ ಗಳು ಕಾಣಿಸುತ್ತದೆ ಮತ್ತು ಕೆಲವು ಹೋಟೆಲ್ ಗಳ ಮೇಲೆ OYO ಎಂದು ಬರೆದಿರುತ್ತದೆ, ಹೀಗೆ ಅದೆಷ್ಟೋ ಊರುಗಳ ಅದೆಷ್ಟೋ ಹೋಟೆಲ್ ಗಳ ಮೇಲೆ ಈ OYO ಅನ್ನುವ ಅಕ್ಷರವನ್ನ ನಾವು ನೋಡಿರುತ್ತೇವೆ. ಇನ್ನು ನಾವು ಗುರುತು ಇಲ್ಲದ ಊರಿಗೆ ಹೋದಾಗ ಅಲ್ಲಿ ಉಳಿಯಲು ಸರಿಯಾದ ಹೋಟೆಲ್ ಸಿಗುತ್ತಿಲ್ಲ ಎಂದು ನಾವು ಯೋಚನೆ ಮಾಡುವ ಅಗತ್ಯ ಇಲ್ಲ ಮತ್ತು ಈ OYO ಆಪ್ ನಲ್ಲಿ ರೂಮ್ ಗಳನ್ನ ಬುಕ್ ಮಾಡಿಕೊಳ್ಳಬಹುದು. ಇನ್ನು ದೇಶದಲ್ಲಿ ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ಈ OYO ರೂಮ್ ಸಿಗುತ್ತದೆ, ಸ್ನೇಹಿತರೆ ಈ OYO ರೂಮ್ ನ ಓನರ್ ನಮ್ಮ ಕಥೆಯಲ್ಲಿನ ಹೀರೋ ಆಗಿದ್ದಾನೆ.

Ritesh Agarwal

ಸ್ನೇಹಿತರೆ ನಾವು ಹೇಳುತ್ತಿರುವ ಈ ಯುವಕನ ಹೆಸರು ರಿತೇಶ್ ಅಗರ್ವಾಲ್, ತನ್ನ 17 ವಯಸ್ಸಿನಲ್ಲಿ ರಿತೇಶ್ ಅಗರ್ವಾಲ್ ತನ್ನ ಇಂಜಿನಿಯರಿಗೆ ಪದವಿಯನ್ನ ಅರ್ಧಕ್ಕೆ ನಿಲ್ಲಿಸಿ ಈ OYO ಸಂಸ್ಥೆಯನ್ನ ಆರಂಭ ಮಾಡುತ್ತಾರೆ ಮತ್ತು ಯಾರ ಸಹಾಯ ಮತ್ತು ಸಹಕಾರ ಇಲ್ಲದೆ ಈ ಸಂಸ್ಥೆಯನ್ನ 6 ವರ್ಷದಲ್ಲಿ 6 ಕೋಟಿ ವ್ಯವಹಾರಕ್ಕೆ ತಲುಪಿಸಿದ್ದಾರೆ. ಒರಿಸ್ಸಾದ ಕಟಕ್ ನಲ್ಲಿ ಹುಟ್ಟಿದ ರಿತೇಶ್ ಅಗರ್ವಾಲ್ ರಾಯಘದಲ್ಲಿ ವಿದ್ಯಾಭ್ಯಾಸವನ್ನ ಪೂರ್ತಿಮಾಡಿ IIT ನಲ್ಲಿ ಇಂಜಿನಿಯರಿಂಗ್ ಪಾಸ್ ಮಾಡಬೇಕು ಎಂದು ಕೋಚಿಂಗ್ ಕೂಡ ತೆಗೆದುಕೊಳ್ಳುತ್ತಾರೆ, ಆದರೆ ಅದರಲ್ಲಿ ವಿಫಲರಾಗುತ್ತಾರೆ.

ನಂತರ ತುಂಬಾ ಕಷ್ಟಪಟ್ಟ ಅಗರ್ವಾಲ್ ಯೂನಿವರ್ಸಿಟಿ ಆ ಲಂಡನ್ ನಲ್ಲಿ ಪ್ರವೇಶವನ್ನ ಪಡೆದುಕೊಳ್ಳುತ್ತಾರೆ ಮತ್ತು ರಿತೇಶ್ ಅವರಿಗೆ ಊರು ಊರು ಸುತ್ತುವುದು ಅಂದರೆ ಬಹಳ ಇಷ್ಟ. ಇನ್ನು ಊರು ಊರು ಸುತ್ತುತ್ತಿದ್ದ ರಿತೇಶ್ ಗೆ ಒಂದು ಒಳ್ಳೆಯ ಉಪಾಯ ಬರುತ್ತದೆ ಮತ್ತು ಹೀಗೆ ಸುತ್ತಾಡುವಾಗ ಅದೆಷ್ಟೋ ಭಾರಿ ರಿತೇಶ್ ಅವರಿಗೆ ಉಳಿದುಕೊಳ್ಳಲು ಸರಿಯಾದ ಹೋಟೆಲ್ ಗಳು ಸಿಗುತ್ತಿರಲಿಲ್ಲ ಮತ್ತು ಒಳ್ಳೆಯ ಹೋಟೆಲ್ ಗಳನ್ನ ಹುಡುಕುವುದು ಕೂಡ ಬಹಳ ಕಷ್ಟವಾಗುತ್ತಿತ್ತು. ಇನ್ನು ಈ ಕಷ್ಟಗಳನ್ನ ಅನುಭವಿಸಿದ ರಿತೇಶ್ ಅಗರ್ವಾಲ್ ಗೆ ಬೇರೆ ಬೇರೆ ಊರು ಮತ್ತು ದೇಶದಿಂದ ಬರುವ ಪ್ರವಾಸಿಗರಿಗೆ ಆನ್ಲೈನ್ ನಲ್ಲಿ ರೂಮ್ ಗಳನ್ನ ಬುಕ್ ಮಾಡುವ ವ್ವಯಸ್ಥೆಯನ್ನ ನಾನು ಯಾಕೆ ಕಾರ್ಯರೂಪಕ್ಕೆ ತರಬಾರದು ಅನ್ನುವ ಯೋಚನೆ ರಿತೇಶ್ ಅವರ ತಲೆಯಲ್ಲಿ ಬರುತ್ತದೆ.

ಇನ್ನು ಯೋಚನೆ ಬಂದಿದ್ದೆ ತಡ ಪ್ರವಾಸಿಗರಿಗೆ ಸೇವೆಗಳನ್ನ ಕಲ್ಪಿಸಿಕೊಡಲು ಹೋಟೆಲ್ ಮತ್ತು ಗೆಸ್ಟ್ ಹೌಸ್ ಓನರ್ ಗಳ ಜೊತೆ ಮಾತನಾಡಿದ ರಿತೇಶ್ ಅವರು ಒಂದು ಪೋರ್ಟಲ್ ಆರಂಭಿಸಿದರು, ಇನ್ನು ಆರಂಭದ ದಿನಗಳಲ್ಲಿ ಜೀವನದಲ್ಲಿ ತುಂಬಾ ಕಷ್ಟಪಟ್ಟಿದ ರಿತೇಶ್ ಅಗರ್ವಾಲ್ ತನ್ನ ದಿನನಿತ್ಯದ ಖರ್ಚುಗಳನ್ನ ಪೂರೈಸಿಕೊಳ್ಳಲು ಸಿಮ್ ಕಾರ್ಡ್ ಗಳನ್ನ ಮಾರುತ್ತಿದ್ದರು. ಇನ್ನು 2011 ರಲ್ಲಿ ಒರವೆಲ್ ಅನ್ನುವ ಕಂಪನಿಯನ್ನ ಆರಂಭಿಸುತ್ತಾರೆ ಮತ್ತು ಈತನ ಉಪಾಯವನ್ನ ಬಹಳ ಇಷ್ಟಪಟ್ಟ ಗುರಂಗಾವ್ ಗೆ ಮನೀಶ್ ಸಿಂಗ್ ಅನ್ನುವ ವ್ಯಕ್ತಿ ಈ ಕಂಪನಿಗೆ ಹೂಡಿಕೆ ಮಾಡಲು ಮುಂದೆ ಬಂದರು. 2012 ರಲ್ಲಿ ಈ ಕಂಪನಿಗೆ ಬಹಳ ಒಳ್ಳೆಯ ಲಾಭ ಬರುತ್ತದೆ.

Ritesh Agarwal

ಇನ್ನು ಕಂಪನಿ ಬೆಳೆಯುತ್ತಿರುವ ಸ್ಪೀಡ್ ನೋಡಿ ಸಾಫ್ಟ್ ಬ್ಯಾಂಕ್ ಈ OYO ಕಂಪನಿಯ ಮೇಲೆ ಹೂಡಿಕೆ ಮಾಡಲು ಮುಂದೆ ಬರುತ್ತದೆ ಮತ್ತು ಹೀಗೆ ಹಲವು ಕಂಪನಿಗಳು ಈ ಕಂಪನಿಯ ಮೇಲೆ ಹೂಡಿಕೆಯನ್ನ ಮಾಡುತ್ತದೆ. ಹೀಗೆ ಕಷ್ಟಪಟ್ಟು ದುಡಿದ ಈ ರಿತೇಶ್ ಅಗರ್ವಾಲ್ ಅವರು ಈ ಕಂಪನಿಯನ್ನ 6 ಸಾವಿರ ಕೋಟಿ ರೂಪಾಯಿಯ ವ್ಯವಹಾರಕ್ಕೆ ತಂದಿದ್ದಾರೆ, ಮಧ್ಯಮವರ್ಗದ ಹುಡುಗನೊಬ್ಬ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ ಅನ್ನುವುದಕ್ಕೆ ಉತ್ತಮ ಉದಾಹರಣೆ ಈ ರಿತೇಶ್ ಅಗರ್ವಾಲ್, ಸ್ನೇಹಿತರೆ ಈತನ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/OYO-funder-1024x576.jpghttp://karnatakatoday.in/wp-content/uploads/2020/03/OYO-funder-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲನಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಈ ಪ್ರಪಂಚದಲ್ಲಿ ಯಾವ ಶಕ್ತಿಯಿಂದಲೂ ಕೂಡ ನಮ್ಮ ಏಳಿಗೆಯನ್ನ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ನಮ್ಮಲ್ಲಿ ಛಲ ಇದ್ದರೆ ನಾವು ಆಕಾಶದ ಎತ್ತರಕ್ಕೆ ಬೆಳೆಯಬಹುದು ಅನ್ನುವುದನ್ನ ನಿರೂಪಿಸಿದ್ದಾನೆ ಸಿಮ್ ಕಾರ್ಡ್ ಮಾರಾಟ ಮಾಡುವ ಒಬ್ಬ ಬಡ ಹುಡುಗ. ಈ ಸಿಮ್ ಕಾರ್ಡ್ ಮಾರುವ ಹುಡುಗ ಈಗ 6 ಸಾವಿರ ಕೋಟಿಗೆ ಅಧಿಪತಿ ಆಗಿದ್ದಾನೆ ನಿಮಗೆ ನಂಬಲು ಸಾಧ್ಯವಿಲ್ಲ, ಆದರೆ ಇದು ನಿಜ ಸ್ನೇಹಿತರೆ,...Film | Devotional | Cricket | Health | India