ನಾವು ನೀವು ಬಾಲಕರಾಗಿದ್ದಾಗ ಯಾವೆಲ್ಲ ಆಟ ಆಡುತ್ತಿದ್ದೆವು ಏನು ಮಾಡುತ್ತಿದ್ದೆವು ಎಂದು ಸ್ವಲ್ಪ ನೆನೆಪಿಸಿಕೊಳ್ಳಿ ಬಾಲ್ಯದಲ್ಲಿ ಜೀವನ ಕಳೆಯುವುದೇ ಒಂದು ಖುಷಿಯಾಗಿತ್ತು ಅದರ ಹೊರತು ಬೇರೆ ಯಾವುದು ಅಷ್ಟೊಂದು ಮಹತ್ವವಿರಲಿಲ್ಲ. ಆದರೆ ಇಲ್ಲೊಬ್ಬ 7 ವರ್ಷದ ಬಾಲಕ ವರುಷಕ್ಕೆ 155 ಕೋಟಿಗೂ ಹೆಚ್ಚು ಸಂಪಾದನೆ ಮಾಡುವ ಮೂಲಕ ಇಡೀ ವಿಶ್ವಕ್ಕೆ ಶಾಕ್ ನೀಡಿದ್ದಾನೆ.

ಹಾಗಿದ್ದರೆ ಈತ ಮಾಡುತ್ತಿದ್ದ ಆ ಕೆಲಸವೇನು ಆ ಕೆಲಸವನ್ನು ನಾವು ಕೂಡ ಮಾಡಬಹುದೇ ಏನದು ತಿಳಿಯೋಣ ಬನ್ನಿ. ಮಕ್ಕಳಾಗಿದ್ದಾಗ ನಾವೇನು ಮಾಡುತ್ತಿದ್ದೆವು? ಒಮ್ಮೆ ಯೋಚಿಸಿ. ಆಟ, ಪಾಠ, ನಿದ್ದೆ, ತರಲೆ ಅಷ್ಟೇ. ಆದರೆ ರಿಯಾನ್ ಎಂಬ ಈ 7 ವರ್ಷ ಪ್ರಾಯದ ಬಾಲಕ ಯೂಟ್ಯೂಬ್ ಸ್ಟಾರ್ ಆಗಿದ್ದು ವೀಡಿಯೋ ಜಾಲತಾಣದ ಮೂಲಕ ವರ್ಷಕ್ಕೆ 155 ಕೋಟಿ ಸಂಪಾದನೆ ಮಾಡುತ್ತಿದ್ದಾನೆ ಎಂದರೆ ನೀವು ನಂಬಲೇಬೇಕು.

ಅಮೇರಿಕಾದ ನಿವಾಸಿಯಾಗಿರುವ ರೇಯಾನ್ Ryan Toys Review ಎಂಬ ವೀಡಿಯೋ ಚಾನೆಲ್‌ ನಡೆಸುತ್ತಿದ್ದು ಹಾಲುಗಲ್ಲದ ವಯಸ್ಸಿನಲ್ಲಿ ಜಗದ್ವಿಖ್ಯಾತನಾಗಿದ್ದಾನೆ. 2015ರಲ್ಲಾತ ಇದನ್ನು ಆರಂಭಿಸಿದ್ದು ಇಲ್ಲಿಯವರೆಗೆ 1.73 ಕೋಟಿ ಫಾಲೋವರ್ಸ್ ಹೊಂದಿದ್ದಾನೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ಯೂಟ್ಯೂಬ್‌ನಲ್ಲಿ ಸರ್ವಾಧಿಕ ಸಂಪಾದನೆ ಮಾಡುವ ಸ್ಟಾರ್ 2018 ಪಟ್ಟಿಯಲ್ಲಿ ರೇಯಾನ್ ಎಲ್ಲರಿಗಿಂತ ಟಾಪ್ ಸ್ಥಾನದಲ್ಲಿದ್ದಾನೆ. ಸಂಪಾದನೆ ವಿಷಯದಲ್ಲೀತ ಘನಾನುಘಟಿಗಳನ್ನು ಹಿಂದಿಕ್ಕಿದ್ದಾನೆ. ಆಟದ ಸಾಮಾನುಗಳ ರಿವ್ಯೂ ಮಾಡುವ ಈತ ಕಳೆದ ವರ್ಷ 71 ಕೋಟಿ ಆದಾಯ ಗಳಿಸುವುದರ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಮತ್ತು ಈ ವರ್ಷ ಮೊದಲ ಸ್ಥಾನಕ್ಕೆ ಜಿಗಿದಿದ್ದಾನೆ.

ಒಂದು ಕೋಟಿ 73  ಲಕ್ಷ ಫಾಲೋವರ್ಸ್ ಹೊಂದಿರುವ ರೇಯಾನ್ ವೀಡಿಯೋವನ್ನು ಕೋಟಿಗಟ್ಟಲೆ ಜನರು ವೀಕ್ಷಿಸುತ್ತಾರೆ. ಮನೆಯಲ್ಲಿಯೇ ಕುಳಿತು ವೀಡಿಯೋ ಮೂಲಕ ಆಟಗಳ ರಿವ್ಯೂ ಮಾಡುತ್ತಾನೆ. ಆತನ ತಂದೆ- ತಾಯಿ ಅದನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡುತ್ತಾರೆ. ಈತನ ವೀಡಿಯೋಗಳನ್ನು ನೋಡುವವರು ಬಹುತೇಕ 3 ರಿಂದ 7 ವರ್ಷ ವಯಸ್ಸಿನ ಮಕ್ಕಳು. ರಯಾನ್ನ ಬಹುತೇಕ ಅಭಿಮಾನಿಗಳು ಅಮೇರಿಕಾದವರೇ ಆಗಿದ್ದಾರೆ.


ಅಷ್ಟೇ ಅಲ್ಲ ಈತ ಸ್ವಂತ ಆಟಿಕೆ ಮತ್ತು ಬಟ್ಟೆಗಳ ಬ್ಯುಸಿನೆಸ್ ಕೂಡ ಹೊಂದಿದ್ದಾನೆ. ಅದು ರೇಯಾನ್ಸ್ ವರ್ಲ್ಡ್ ಎಂಬ ಹೆಸರಿನಡಿಯಲ್ಲಿ ತನಗಿಷ್ಟವಾದ ಆಟಿಕೆ ಮತ್ತು ಉಡುಪುಗಳನ್ನು ಮಾರುತ್ತಾನೆ. ಅಮೇರಿಕಾದ ಇ- ಕಾಮರ್ಸ್ ದಿಗ್ಗಜ ವಾಲ್‌ಮಾರ್ಟ್‌ಲ್ಲಿ ಇವರ ಉತ್ಪನ್ನಗಳು ಮಾರಾಟವಾಗುತ್ತವೆ.

ಯೌಟ್ಯೂಬ್ ಚಾನೆಲ್ ಮಾಡಿಕೊಂಡು ಭಾರತದಲ್ಲಿಯೂ ಕೂಡ ಅದೆಷ್ಟೋ ಮಂದಿ ವರುಷಕ್ಕೆ ಕೋಟಿ ಕೋಟಿ ಹಣ ಮಾಡುತ್ತಿದ್ದಾರೆ ಅದರಲ್ಲಿ ಪ್ರಮುಖ ಹೆಸರುಗಳೆಂದರೆ ಟೆಕ್ನಿಕಲ್ ಗುರೂಜಿ ಗೌರವ್ ಚೌಧರಿ, ಭುವನ್ ಬಂ, ಆಶೀಶ್ ಹೀಗೆ ಮುಂತಾದ ದೊಡ್ಡ ಹೆಸರುಗಳಿವೆ. ಆದ್ದರಿಂದ ನಿಮ್ಮಲ್ಲಿ ಅಂತಹ ವಿಡಿಯೋ ಮಾಡಿ ಜನರನ್ನು ಆಕರ್ಷಿಸುವ ಗುಣ ಇದ್ದರೂ ನೀವು ಕೂಡ ಕೋಟಿ ಅಲ್ಲದಿದ್ದರೂ ಲಕ್ಷವಾದರೂ ಸಂಪಾದಿಸಬಹುದು. ಈ ಮಾಹಿತಿ ಇಷ್ಟವಾಗಿದ್ದರೆ ಎಲ್ಲರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/12/RIYAN-TOYS-1024x576.pnghttp://karnatakatoday.in/wp-content/uploads/2018/12/RIYAN-TOYS-150x104.pngKarnataka Today's Newsಅಂಕಣಆಟೋನಾವು ನೀವು ಬಾಲಕರಾಗಿದ್ದಾಗ ಯಾವೆಲ್ಲ ಆಟ ಆಡುತ್ತಿದ್ದೆವು ಏನು ಮಾಡುತ್ತಿದ್ದೆವು ಎಂದು ಸ್ವಲ್ಪ ನೆನೆಪಿಸಿಕೊಳ್ಳಿ ಬಾಲ್ಯದಲ್ಲಿ ಜೀವನ ಕಳೆಯುವುದೇ ಒಂದು ಖುಷಿಯಾಗಿತ್ತು ಅದರ ಹೊರತು ಬೇರೆ ಯಾವುದು ಅಷ್ಟೊಂದು ಮಹತ್ವವಿರಲಿಲ್ಲ. ಆದರೆ ಇಲ್ಲೊಬ್ಬ 7 ವರ್ಷದ ಬಾಲಕ ವರುಷಕ್ಕೆ 155 ಕೋಟಿಗೂ ಹೆಚ್ಚು ಸಂಪಾದನೆ ಮಾಡುವ ಮೂಲಕ ಇಡೀ ವಿಶ್ವಕ್ಕೆ ಶಾಕ್ ನೀಡಿದ್ದಾನೆ. ಹಾಗಿದ್ದರೆ ಈತ ಮಾಡುತ್ತಿದ್ದ ಆ ಕೆಲಸವೇನು ಆ ಕೆಲಸವನ್ನು ನಾವು ಕೂಡ ಮಾಡಬಹುದೇ ಏನದು ತಿಳಿಯೋಣ...Kannada News