ಡಿ ಬಾಸ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೌದು ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ ಅಂದರೆ ಡಿ ಬಾಸ್ ದರ್ಶನ್ ಎಂದು ಹೇಳಿದರೆ ತಪ್ಪಾಗಲ್ಲ. ದರ್ಶನ್ ಅವರ ಚಿತ್ರ ಅಂದರೆ ಆ ಚಿತ್ರ ಮಂದಿರ ಫುಲ್ ಆಗಿರುತ್ತದೆ, ಇನ್ನು ಸದ್ಯಕ್ಕೆ ಒಡೆಯ ಚಿತ್ರದ ನಂತರ ಈಗ ಜಾಸ್ತಿ ಸದ್ದು ಮಾಡುತ್ತಿರುವ ದರ್ಶನ್ ಅವರ ಚಿತ್ರ ಅಂದರೆ ರಾಬರ್ಟ್ ಚಿತ್ರವಾಗಿದೆ. ಇನ್ನು ದರ್ಶನ್ ಅಭಿಮಾನಿಗಳು ದರ್ಶನ್ ಅವರ ರಾಬರ್ಟ್ ಚಿತ್ರಕ್ಕೆ ಕಾತುರದಿಂದ ಕಾಯುತ್ತಿದ್ದಾರೆ, ಇನ್ನು ಮೊನ್ನೆ ದರ್ಶನ್ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದ್ದು ಅಭಿಮಾನಿಗಳು ತುಂಬಾ ಆತಂಕಕ್ಕೆ ಒಳಗಾಗಿದ್ದರು, ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದು ದರ್ಶನ್ ಅವರು ಮಾತನಾಡಿದ ನಂತರ ಅಭಿಮಾನಿಗಳು ಸಂತಸವನ್ನ ವ್ಯಕ್ತಪಡಿಸಿದ್ದರು.

ಇನ್ನು ದರ್ಶನ್ ಅವರ ರಾಬರ್ಟ್ ಚಿತ್ರದ ಕೆಲವು ಶೂಟಿಂಗ್ ಗಳು ಬಾಕಿ ಇರುವ ಇರುವ ಕಾರಣ ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಗಾಂಧಿನಗರದ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ರಾಬರ್ಟ್ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನವೇ ಈಗ ಕೋಟಿ ಕೋಟಿ ಸಂಪಾದನೆಯನ್ನ ಮಾಡುತ್ತಿದ್ದು ಕಲೆಕ್ಷನ್ ನೋಡಿ ಚಿತ್ರರಂಗ ಕೊಂಚ ಶಾಕ್ ನಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ದರ್ಶನ್ ಅವರ ಚಿತ್ರ ಅಂದರೆ ಕಲೆಕ್ಷನ್ ಸ್ವಲ್ಪ ಜಾಸ್ತಿನೇ ಇರುತ್ತದೆ, ಆದರೆ ಬಿಡುಗಡೆಗೂ ಮುನ್ನವೇ ಇಷ್ಟು ಸಂಪಾದನೆ ಮಾಡಿದ್ದನ್ನ ಎಲ್ಲರಿಗೂ ಆಶ್ಚರ್ಯ ಆಗಿದೆ ಎಂದು ಹೇಳಬಹುದು.

Robert Kannada Movie

ಹಾಗಾದರೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೂ ಮುನ್ನ ಎಷ್ಟು ಗಳಿಕೆ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾಬರ್ಟ್ ಚಿತ್ರ ಬಿಡುಗಡೆಗೂ ಮುನ್ನ ಲಾಭಗಳಿಸಿ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ನೆರೆ ರಾಜ್ಯದಲ್ಲಿ ಕೂಡ ದೊಡ್ಡ ಸುದ್ದಿ ಮಾಡುತ್ತಿದೆ. ರಾಬರ್ಟ್ ಚಿತ್ರ ಬಿಡುಗಡೆಗೂ ಮುನ್ನವೇ 65 ಕೋಟಿ ರೂಪಾಯಿಯನ್ನ ಸಂಪಾದನೆ ಮಾಡಿದೆ, ಇನ್ನು ಇದರಲ್ಲಿ ಥಿಯೇಟರ್ ಹಕ್ಕಿನಿಂದ 35 ಕೋಟಿ ಹಾಗು ಡಿಜಿಟಲ್ ಮಾರಾಟ ಹಕ್ಕಿನಿಂದ 30 ಕೋಟಿ ಗಳಿಸಿದೆ ರಾಬರ್ಟ್ ಚಿತ್ರ.

ಇನ್ನು ಬಂದ ಮಾಹಿತಿಗಳ ಪ್ರಕಾರ ರಾಬರ್ಟ್ ಚಿತ್ರ ಬಿಡುಗಡೆಗೂ ಮುನ್ನವೇ ಸುಮಾರು ನೂರು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಅನ್ನುವುದು ಸಿನಿ ಪಂಡಿತರ ಅಭಿಪ್ರಾಯವಾಗಿದೆ. ಇನ್ನು ದರ್ಶನ್ ಅವರಿಗೆ ಕನ್ನಡಲ್ಲಿ ಮಾತ್ರವಲ್ಲದೆ ನೆರೆರಾಜ್ಯಗಳಲ್ಲಿ ಕೂಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ, ಇನ್ನು ರಾಬರ್ಟ್ ಚಿತ್ರ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ಬಿಡುಗಡೆಯಾಗಲಿದೆ, ಚಿತ್ರ ಕನ್ನಡದಲ್ಲಿ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ಬರುವ ಪ್ರತಿಕ್ರಿಯೆಯನ್ನ ಗಮನಿಸಿ ಆಂಧ್ರದಲ್ಲಿ ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರವನ್ನ ಮಾಡಿದೆ.

Robert Kannada Movie

ಇನ್ನು ದರ್ಶನ್ ಅವರ ಚಿತ್ರ ಅಂದರೆ ಅಲ್ಲಿ ಕಲೇಶನ್ ಸ್ವಲ್ಪ ಜೋರಾಗೆ ಇರುತ್ತದೆ, ಇನ್ನು ಚಿತ್ರ ಬಿಡುಗಡೆಗೂ ಮುನ್ನವೇ ಇಷ್ಟು ಗಳಿಕೆಯನ್ನ ಮಾಡಿದ್ದು ಬಿಗಡೆಯಾಗ ನಂತರ ಕೆಲವು ಚಿತ್ರಗಳ ದಾಖಲೆಯನ್ನ ಧೂಳಿಪಟ ಮಾಡುತ್ತದೆ ಎಂದು ಹೇಳಬಹುದು. ಅದೇನೇ ಇರಲಿ ನಮ್ಮ ಚಿತ್ರ ಈಗ ಬೇರೆ ರಾಜ್ಯದಲ್ಲಿ ಕೂಡ ಒಳ್ಳೆಯ ಹೆಸರನ್ನ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ, ಸ್ನೇಹಿತರೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಎಷ್ಟು ಗಳಿಕೆ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ದರ್ಶನ್ ಅಭಿಮಾನಿಗೆ ತಲುಪಿಸಿ.

Please follow and like us:
error0
http://karnatakatoday.in/wp-content/uploads/2020/03/Robert-Kannada-Movie-1024x576.jpghttp://karnatakatoday.in/wp-content/uploads/2020/03/Robert-Kannada-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಡಿ ಬಾಸ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೌದು ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ ಅಂದರೆ ಡಿ ಬಾಸ್ ದರ್ಶನ್ ಎಂದು ಹೇಳಿದರೆ ತಪ್ಪಾಗಲ್ಲ. ದರ್ಶನ್ ಅವರ ಚಿತ್ರ ಅಂದರೆ ಆ ಚಿತ್ರ ಮಂದಿರ ಫುಲ್ ಆಗಿರುತ್ತದೆ, ಇನ್ನು ಸದ್ಯಕ್ಕೆ ಒಡೆಯ ಚಿತ್ರದ ನಂತರ ಈಗ ಜಾಸ್ತಿ ಸದ್ದು ಮಾಡುತ್ತಿರುವ ದರ್ಶನ್ ಅವರ ಚಿತ್ರ ಅಂದರೆ ರಾಬರ್ಟ್ ಚಿತ್ರವಾಗಿದೆ. ಇನ್ನು...Film | Devotional | Cricket | Health | India