ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ ಯಾರಿಗೆ ಇಷ್ಟ ಇಲ್ಲ, ಐಪಿಎಲ್ ಆರಂಭ ಆದಾಗಿನಿಂದ ತನ್ನ ಒಂದೇ ಒಂದು ಭಾರಿ ಐಪಿಎಲ್ ಕಿರೀಟವನ್ನ ಗೆಲ್ಲದೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡುವುದನ್ನ ಸ್ವಲ್ಪಾನು ಕಡಿಮೆ ಮಾಡಿಲ್ಲ. ಆದರೆ ಈಗ ಅಭಿಮಾನಿಗಳಿಗೆ ಶಾಕ್ ನೀಡುವಂತೆ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ ಪ್ರಾಂಚೈಸಿಗಳು ಹಿಂದಿನ ಐಪಿಎಲ್ ಪಂದ್ಯಗಳಲ್ಲಿ ಕಳಪೆ ಆಟವನ್ನ ಆಡಿದ ಪ್ರಮುಖ ಆಟಗಾರರನ್ನ ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ, ಸದ್ಯಕ್ಕೆ ಈ ಮೂರೂ ಆಟಗಾರರನ್ನ ತಂಡದಿಂದ ತೆಗೆದು ಹಾಕಲಾಗುತ್ತಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಹಾಗಾದರೆ ಆ ಪ್ರಮುಖ ಆಟಗಾರರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಭಾರಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡದಲ್ಲಿ ಯಾವ ಆಟಗಾರ ಕಾಣಿಸಿಕೊಂಡರೆ ನಿಮಗೆ ಇಷ್ಟ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವಿದೇಶಿ ಆಟಗಾರನಾದ ಟೈಮ್ ಸೌದಿ ಕಳೆದ ಭಾರಿ ಐಪಿಎಲ್ ನಲ್ಲಿ ಬೆಂಗಳೂರು ಪರವಾಗಿ ಆಟವಾಡಿದ್ದರು, ಆದರೆ ಇವರು ಆಡಿದ್ದು ಕೇವಲ ಮೂರೂ ಪಂದ್ಯಗಳನ್ನ ಮಾತ್ರ ಮತ್ತು ಪಡೆದಿದ್ದು ಕೇವಲ ಒಂದು ವಿಕೆಟ್.

Royal Challengers Bangalore

ಇನ್ನು ಟೈಮ್ ಸೌದಿ ಅವರ ಎಕಾನಮಿ 13.11, ಇನ್ನು ಕಳೆದ ಸೀಸನ್ ನಲ್ಲಿ ಬೆಂಗಳೂರು ತಂಡ KKR ತಂಡದ ವಿರುದ್ಧ ಗೆಲ್ಲುವ ಪಂದ್ಯವನ್ನ ಸೋಲುವ ಹಾಗೆ ಮಾಡಿದ್ದು ಟೈಮ್ ಸೌದಿ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ನಾಲ್ಕು ಓವರ್ ಗೆ 61 ರನ್ ಗಳನ್ನ ನೀಡಿ ತುಂಬಾ ದುಬಾರಿ ಅನಿಸಿಕೊಂಡರು, ಈ ಕಾರಣಕ್ಕೆ ಟೈಮ್ ಸೌದಿ ಅವರನ್ನ ಬೆಂಗಳೂರು ತಂಡದಿಂದ ಕೈಬಿಡಲಾಗುತ್ತಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಸವ್ಯಸಾಚಿ ಆಟಗಾರ ಪವನ್ ನೇಗಿ ಕೂಡ ಬೆಂಗಳೂರು ತಂಡದಲ್ಲಿ ನಿರೀಕ್ಷಿತವಾದ ಪ್ರದರ್ಶನವನ್ನ ನೀಡಿಲ್ಲ ಮತ್ತು ಬ್ಯಾಟಿಂಗ್ ಬೌಲಿಂಗ್ ನಲ್ಲಿ ಮಿಂಚಲು ವಿಫಲರಾಗಿದ್ದರು.

2018 RCB ಪವನ್ ನೇಗಿ ಅವರನ್ನ ರಿಟರ್ನ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು ಆದರೆ ಆಡಿದ ಏಳು ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಗಳನ್ನ ಪಡೆದಿದ್ದರು ಪವನ್ ನೇಗಿ ಅವರು, ಹೀಗಾಗಿ ಇನ್ನೊಬ್ಬ ಉತ್ತಮ ಸವ್ಯಸಾಚಿ ಆಟಗಾರ ತಂಡಕ್ಕೆ ಅಗತ್ಯ ಇರುವ ಕಾರಣ ಪವನ್ ನೇಗಿ ಹೊರಗುಳಿಯುವುದು ಖಚಿತವಾಗಿದೆ. 2019 RCB ದಕ್ಷಿಣ ಭಾರತ ತಂಡದ ಆಟಗಾರ ಮತ್ತು ಉತ್ತಮ ವಿಕೆಟ್ ಕೀಪರ್ ಆದ ಹೆಂಡ್ರಿಕ್ ಕ್ಲಾಸೇನ್ ಅವರನ್ನ ಬರೋಬ್ಬರಿ 50 ಲಕ್ಷ ಕೊಟ್ಟು ಖರೀದಿ ಮಾಡಿತ್ತು, ಆದರೆ ಇವರು ಸಿಕ್ಕ ಅವಕಾಶವನ್ನ ಸರಿಯಾದ ರೀತಿ ಉಪಯೋಗಿಸಿಕೊಂಡಿಲ್ಲ. ಇವರು ಆಡಿದ್ದ ಮೂರೂ ಪಂದ್ಯಗಳಲ್ಲಿ ಕೇವಲ 9 ರನ್ ಗಳಿಸಿದ್ದರಷ್ಟೇ ಹೀಗಾಗಿ ಅವರನ್ನ ತಂದಿಂದ ಕೈಬಿಡುವುದು ಪಕ್ಕ ಆಗಿದೆ, ಇನ್ನು ಪಾರ್ಥಿವ್ ಪಟೇಲ್ ಕಾಯಂ ಸದಸ್ಯನಾದ ಕಾರಣ ಅವರೇ ಮುಂದಿನ ಸೀಸನ್ ನಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಸಲಿದ್ದಾರೆ.

Royal Challengers Bangalore

Please follow and like us:
error0
http://karnatakatoday.in/wp-content/uploads/2019/10/Royal-Challengers-Bangalore-1-1024x576.jpghttp://karnatakatoday.in/wp-content/uploads/2019/10/Royal-Challengers-Bangalore-1-150x104.jpgeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಬೆಂಗಳೂರುಮಂಗಳೂರುಸುದ್ದಿಜಾಲರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ ಯಾರಿಗೆ ಇಷ್ಟ ಇಲ್ಲ, ಐಪಿಎಲ್ ಆರಂಭ ಆದಾಗಿನಿಂದ ತನ್ನ ಒಂದೇ ಒಂದು ಭಾರಿ ಐಪಿಎಲ್ ಕಿರೀಟವನ್ನ ಗೆಲ್ಲದೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡುವುದನ್ನ ಸ್ವಲ್ಪಾನು ಕಡಿಮೆ ಮಾಡಿಲ್ಲ. ಆದರೆ ಈಗ ಅಭಿಮಾನಿಗಳಿಗೆ ಶಾಕ್ ನೀಡುವಂತೆ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ ಪ್ರಾಂಚೈಸಿಗಳು ಹಿಂದಿನ ಐಪಿಎಲ್ ಪಂದ್ಯಗಳಲ್ಲಿ ಕಳಪೆ ಆಟವನ್ನ ಆಡಿದ ಪ್ರಮುಖ ಆಟಗಾರರನ್ನ ತಂಡದಿಂದ ಕೈಬಿಡಲು ನಿರ್ಧಾರ...Film | Devotional | Cricket | Health | India