Rule of ATM

ದೇಶದಲ್ಲಿ ಎಟಿಎಂ ಕಾರ್ಡ್ ಬಳಕೆ ಮಾಡುವ ಅದೆಷ್ಟೋ ಅಸಂಖ್ಯಾತ ಮಂದಿಗೆ ಅದರ ಶುಲ್ಕ ಹಾಗೂ ಕಾರ್ಯ ನಿರ್ವಹಿಸುವ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ ಮತ್ತು ನಾವು ತಿಳಿದುಕೊಳ್ಳಲು ಪ್ರಯತ್ನ ಮಾಡುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕುಗಳು ನಿಮಗೆ ತಿಂಗಳಿಗೆ ಐದು ಅಥವಾ ಆರು ಫ್ರೀ ಟ್ರಾನ್ಸಕ್ಷನ್ ಗಳನ್ನು ಎಟಿಎಂ ಕಾರ್ಡುಗಳಿಗೆ ನೀಡುತ್ತವೆ, ಆದರೆ ಇದರಲ್ಲಿ ನೀವು ಕೇವಲ ಬಾಲನ್ಸ್ ಚೆಕ್ ಮಾಡಿದರೂ ಕೂಡ ಅದು ಕೌಂಟ್ ಆಗುತ್ತದೆ ಮತ್ತು ಕೆಲವೊಮ್ಮೆ ನೀವು ಎಟಿಎಂ ಸರಿ ಇಲ್ಲವೆಂದು ಎರಡರಿಂದ ಮೂರು ಬಾರಿ ಪ್ರಯತ್ನಿಸಿದರೆ ಅದು ಕೂಡ ಫೇಲ್ ಆದ ಟ್ರಾನ್ಸಕ್ಷನ್ ಆದರೂ ಸಹಿತ ಶುಲ್ಕಕ್ಕೆ ಅರ್ಹವಾಗಿರುತ್ತದೆ.

ಈ ನಿಟ್ಟಿನಲ್ಲಿ ಬ್ಯಾಂಕ್ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಳ್ಳೆ ಸುದ್ದಿ ನೀಡಿದ್ದು, ಎಟಿಎಂ ಹಣ ವಹಿವಾಟಿನಲ್ಲಿ ಕೆಲ ಮಹತ್ವದ ಬದಲಾವಣೆ ತಂದಿದೆ, ಅಲ್ಲದೆ ಈ ಕುರಿತಂತೆ ಬ್ಯಾಂಕ್ ಗಳಿಗೂ ಸೂಚನೆ ನೀಡಿದೆ. ಮೂಲಗಳ ಪ್ರಕಾರ, ಎಟಿಎಂ ವಹಿವಾಟಿನ ಕೆಲವು ನಿಯಮಗಳನ್ನು ಬದಲಾವಣೆ ಮಾಡುವಂತೆ ಬ್ಯಾಂಕುಗಳಿಗೆ ಆರ್ ಬಿಐ ನಿರ್ದೇಶನ ನೀಡಿದೆ.

Rule of ATM

ಮೂಲಗಳ ಪ್ರಕಾರ ತಾಂತ್ರಿಕ ಮತ್ತು ಇತರೆ ನಿರ್ದಿಷ್ಟ ಕಾರಣಗಳಿಂದಾಗಿ ವಿಫಲವಾದ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ವಹಿವಾಟುಗಳನ್ನು ಐದು ಉಚಿತ ಮಾಸಿಕ ಎಟಿಎಂ ವಹಿವಾಟುಗಳಲ್ಲಿ ಸೇರಿಸದಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ ಎನ್ನಲಾಗಿದೆ. ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಆರ್ ಬಿಐ, ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ವಹಿವಾಟುಗಳು, ಎಟಿಎಂಗಳಲ್ಲಿ ಕರೆನ್ಸಿ(ಹಣ) ಲಭ್ಯವಿಲ್ಲದಿರುವುದು ಇತ್ಯಾದಿಗಳನ್ನು ಉಚಿತ ಎಟಿಎಂ ವಹಿವಾಟಿನ ಸಂಖ್ಯೆಯಲ್ಲಿ ಸೇರಿಸಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.

ಹಾರ್ಡ್ ವೇರ್, ಸಾಫ್ಟ್ ವೇರ್, ಸಂವಹನ ಸಮಸ್ಯೆಗಳು, ಎಟಿಎಂನಲ್ಲಿ ಹಣ ಲಭ್ಯವಿಲ್ಲದಿರುವುದು ಮತ್ತು ಬ್ಯಾಂಕ್ ಅಥವಾ ಸೇವಾ ಪೂರೈಕೆದಾರರಿಗೆ ನೇರವಾಗಿ ಅಥವಾ ಸಂಪೂರ್ಣವಾಗಿ ಸೂಚಿಸಬಹುದಾದ ಇತರ ಸಮಸ್ಯೆಗಳು ಮತ್ತು ಅಮಾನ್ಯ ಪಿನ್ ಅಥವಾ ಅನುಮೋದನೆ ಗೊಳಿಸುವಿಕೆಯಂತಹ ತಾಂತ್ರಿಕ ಕಾರಣಗಳನ್ನು ವಿಫಲವಾದ ವಹಿವಾಟುಗಳು ಈ ಉಚಿತ ವಹಿವಾಟು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಹೇಳಿದೆ.

Rule of ATM

ಅಂತೆಯೇ ಇಂತಹ ವಹಿವಾಟುಗಳನ್ನು ಗ್ರಾಹಕರಿಗೆ ಮಾನ್ಯ ಮಾಡಿದ ಎಟಿಎಂ ವಹಿವಾಟು ಎಂದು ಪರಿಗಣಿಸಲಾಗುವುದಿಲ್ಲ, ಈ ವಿಫಲ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ನಗದು ರಹಿತ ವಹಿವಾಟುಗಳು (ಬ್ಯಾಲೆನ್ಸ್ ವಿಚಾರಣೆ, ಚೆಕ್ ಬುಕ್ ವಿನಂತಿ, ತೆರಿಗೆಗಳ ಪಾವತಿ, ಹಣ ವರ್ಗಾವಣೆ), ಇದು ಉಚಿತ ಎಟಿಎಂ ವಹಿವಾಟಿನ ಭಾಗವಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಆರ್ ಬಿಐ ಉಲ್ಲೇಖಿಸಿದೆ.

ಇನ್ನು ಈ ನಿಯಮ ಎಲ್ಲಾ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ ಎಂದು ತಿಳಿಸಿದೆ ಆರ್ ಬಿಐ, ಸ್ನೇಹಿತರೆ ಆರ್ ಬಿಐ ನ ಈ ಬದಲಾವಣೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನಿಗೆ ತಲುಪಿಸಿ.

Rule of ATM

Please follow and like us:
error0
http://karnatakatoday.in/wp-content/uploads/2019/08/New-rules-of-RBI-1024x576.jpghttp://karnatakatoday.in/wp-content/uploads/2019/08/New-rules-of-RBI-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲದೇಶದಲ್ಲಿ ಎಟಿಎಂ ಕಾರ್ಡ್ ಬಳಕೆ ಮಾಡುವ ಅದೆಷ್ಟೋ ಅಸಂಖ್ಯಾತ ಮಂದಿಗೆ ಅದರ ಶುಲ್ಕ ಹಾಗೂ ಕಾರ್ಯ ನಿರ್ವಹಿಸುವ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ ಮತ್ತು ನಾವು ತಿಳಿದುಕೊಳ್ಳಲು ಪ್ರಯತ್ನ ಮಾಡುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕುಗಳು ನಿಮಗೆ ತಿಂಗಳಿಗೆ ಐದು ಅಥವಾ ಆರು ಫ್ರೀ ಟ್ರಾನ್ಸಕ್ಷನ್ ಗಳನ್ನು ಎಟಿಎಂ ಕಾರ್ಡುಗಳಿಗೆ ನೀಡುತ್ತವೆ, ಆದರೆ ಇದರಲ್ಲಿ ನೀವು ಕೇವಲ ಬಾಲನ್ಸ್ ಚೆಕ್ ಮಾಡಿದರೂ ಕೂಡ ಅದು ಕೌಂಟ್ ಆಗುತ್ತದೆ ಮತ್ತು ಕೆಲವೊಮ್ಮೆ ನೀವು...Film | Devotional | Cricket | Health | India