rule of income tax ride

ಸ್ನೇಹಿತರೆ ನಿನ್ನ ಕೆಲವು ಕನ್ನಡ ನಟರ ಮತ್ತು ನಿರ್ಮಾಪಕರ ಮನೆಯ ಮೇಲೆ IT ರೇಡ್ ಆದ ವಿಷಯ ನಿಮಗೆಲ್ಲ ಗೊತ್ತೇ ಇದೆ, ಸ್ನೇಹಿತರೆ IT ರೇಡ್ ಹೇಗೆ ಮಾಡುತ್ತಾರೆ, ಯಾವ ರೀತಿಯ ಪ್ಲಾನ್ ಮಾಡುತ್ತಾರೆ ಮತ್ತು ಏನನ್ನ ರೇಡ್ ಮಾಡಬೇಕು ಮತ್ತು ಏನನನ್ನ ರೇಡ್ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಒಬ್ಬ ವ್ಯಕ್ತಿ ತುಂಬಾ ಹಣವನ್ನ ಹೊಂದಿರುತ್ತಾನೆ ಆದರೆ ಆತ ಸರಕಾರಕ್ಕೆ ಯಾವುದೇ ರೀತಿಯ ತೆರಿಗೆಯನ್ನ ಕಟ್ಟುವುದಿಲ್ಲ ಮತ್ತು ಆತ ಸಂಪಾದನೆ ಮಾಡಿದ ಹಣಕ್ಕೆ ಯಾವುದೇ ಸಾಕ್ಷ್ಯಗಳನ್ನ ಇಟ್ಟುಕೊಂಡಿರುವುದಿಲ್ಲ, ಈ ಸಮಯದಲ್ಲಿ ತೆರಿಗೆ ಇಲಾಖೆಗೆ ಆತನ ಮೇಲೆ ಅನುಮಾನ ಬಂದಾಗ ಆತನ ಮನೆಯನ್ನ ಜಪ್ತಿ ಮಾಡುತ್ತಾರೆ.

rule of income tax ride

ಯಾರಾದರೂ ತೆರಿಗೆ ಇಲಾಖೆಗೆ ಕಾಲ್ ಮಾಡಿ ಆತನ ಬಳಿ ಸಾವಿರಾರು ಕೋಟಿ ಆಸ್ತಿ ಮತ್ತು ಹಣ ಇದೆ ಎಂದು ಕಾಲ್ ಮಾಡಿದರೆ ಹೇಳಿದರೆ ತೆರಿಗೆ ಇಲಾಖೆ ಆತನ ಮನೆಯನ್ನ ರೇಡ್ ಮಾಡುವುದಿಲ್ಲ.

ಇನ್ನು ತೆರಿಗೆ ಇಲಾಖೆಯಲ್ಲಿ ಒಂದು ಗುಪ್ತಚರ ಇಲಾಖೆ ಇರುತ್ತದೆ ಅವರು ಮಾಹಿತಿಯನ್ನ ಕೊಟ್ಟರೆ ಮಾತ್ರ ತೆರಿಗೆ ಇಲಾಖೆ ಅವರ ಮೇಲೆ ರೇಡ್ ಮಾಡುತ್ತದೆ, ಇನ್ನು ಬ್ಯಾಂಕ್ ಪಾಸ್ ಬುಕ್ ನಲ್ಲಿ ಸುಳ್ಳು ಮಾಹತಿಯನ್ನ ಇಟ್ಟರೆ, ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣವನ್ನ ಖರ್ಚು ಮಾಡಿದಾಗ, ರಿಯಲ್ ಎಸ್ಟೇಟ್ ನಲ್ಲಿ ಅಕ್ರಮವಾಗಿ ಹಣವನ್ನ ಹೂಡಿದರೆ ಅಥವಾ ಷೇರು ವರ್ಗಾವಣೆಯನ್ನ ಮಾಡಿದರೆ ತೆರಿಗೆ ಇಲಾಖೆ ಜಪ್ತಿ ಮಾಡಲು ನಿರ್ಧಾರ ಮಾಡುತ್ತದೆ.

ಇನ್ನು ಜಪ್ತಿ ಮಾಡಲು ಅವರು ಕೇವಲ ಒಂದು ಎರಡು ಅಥವಾ ಎಡರು ದಿನದ ಪ್ಲಾನ್ ಮಾಡುವುದಿಲ್ಲ ಹೊರತಾಗಿ ತಿಂಗಳು ಗಟ್ಟಲೆ ಪ್ಲಾನ್ ಮಾಡಿ ಅವರ ಸಂಪೂರ್ಣ ಚಲನವಲನಗಳನ್ನ ಗಮನದಲ್ಲಿ ಇಟ್ಟುಕೊಂಡು ರೇಡ್ ಮಾಡಲು ಹೋಗುತ್ತಾರೆ.

rule of income tax ride

ಇನ್ನು ಇವರು ರೇಡ್ ಮಾಡುವ ವಿಷಯ ಬೇರೆ ಯಾರಿಗೂ ತಿಳಿದಿರುವುದಿಲ್ಲ, ಇನ್ನು ರೇಡ್ ಮಾಡುವುದು ಯಾರಿಗೆ ತಿಳಿದಿರುತ್ತದೆ ಅಂದರೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 132 (1) ರ ಪ್ರಕಾರ ಪ್ರದಾನ ಮಹಾ ನಿರ್ದೇಶಕರು ಅಥವಾ ನಿರ್ದೇಶಕರು ಅಥವಾ ಪ್ರದಾನ ಮುಖ್ಯ ಆಯುಕ್ತರು ಅಥವಾ ಮುಖ್ಯ ಆಯುಕ್ತರು ಇವರಿಗೆ ಮಾತ್ರ ಈ ವಿಷಯ ಇಳಿದಿರುತ್ತದೆ.

ಇನ್ನು ಅವರು ಜಪ್ತಿ ಮಾಡುವ ವಸ್ತುಗಳು ಯಾವುದು ಅಂದರೆ, ಸರ್ಕಾರಕ್ಕೆ ಘೋಷಣೆ ಮಾಡದೆ ಇರುವ ಹಣ ಅಂದರೆ ಲೆಕ್ಕವನ್ನ ತೋರಿಸದೆ ಇರುವ ಹಣ ಆಗಿರಬಹುದು, ಚಿನ್ನಾಭರಣಗಳು, ಅಕೌಂಟ್ ಪುಸ್ತಕಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಮತ್ತು ಆಸ್ತಿ ಪಾತ್ರಗಳು, ಇವೆಲ್ಲವನ್ನ ಅವರು ಸೀಜ್ ಮಾಡಿ ಜೊತೇಲಿ ತಗೆದುಕೊಂಡು ಹೋಗುತ್ತಾರೆ.

rule of income tax ride

ಇನ್ನು ಅವರು ಯಾವುದನ್ನ ಸೀಜ್ ಮಾಡಲು ಆಗುವುದಿಲ್ಲ ಅಂದರೆ, ಅವರು ಘೋಷಣೆ ಮಾಡಿದ ಹಣ, ಆಸ್ತಿ, ಚಿನ್ನಾಭರಣ ಹೀಗೆ ಘೋಷಣೆ ಮಾಡಿದ ವಸ್ತುಗಳನ್ನ ಅಂದರೆ ತೆರಿಗೆ ಕಟ್ಟಿದ ವಸ್ತುಗಳನ್ನ ಅವರು ಯಾವುದೇ ಕಾರಣಕ್ಕೂ ಮುಟ್ಟುವುದಿಲ್ಲ.

ಇನ್ನು ಮದುವೆಯಾದ ಮಹಿಳೆಗೆ ಸೇರಿದ ಸುಮಾರು 500 ಗ್ರಾಂ ಚಿನ್ನ ಅಥವಾ ಮದುವೆ ಆಗದ ಮಹಿಳೆಗೆ ಸೇರಿದ ಸುಮಾರು 250 ಗ್ರಾಂ ಚಿನ್ನ ಮತ್ತು ಪುರುಷರಿಗೆ ಸೇರಿದ ಸುಮಾರು 100 ಗ್ರಾಂ ಚಿನ್ನ, ಇವುಗಳನ್ನ ಅವರು ಯಾವುದೇ ಕಾರಣಕ್ಕೂ ಜಪ್ತಿ ಮಾಡುವ ಹಾಗೆ ಇಲ್ಲ. ಇನ್ನು ಅವರು ಮನೆಗೆ ಜಪ್ತಿ ಮಾಡಲು ಬಂದಾಗ ಆ ಮನೆಯ ಎಲ್ಲಾ ಫೋನ್ ಗಳನ್ನ ಸ್ವಿಚ್ ಆಫ್ ಮಾಡಲಾಗುತ್ತದೆ.

ಇನ್ನು ಈ ದಾಳಿಯನ್ನ ಯಾವ ಆಧಾರದ ಮೇಲೆ ಮಾಡುತ್ತಿದ್ದೀರಾ ಎಂದು ತಿಳಿದುಕೊಳ್ಳುವ ಅಧಿಕಾರ ಯಾರು ದಾಳಿಗೆ ಒಳಗಾಗಿರುತ್ತಾರೋ ಅವರಿಗೂ ಇಲ್ಲ, ಇದನ್ನ ತಿಳಿಯುವ ಅಧಿಕಾರ ಇರುವುದು ಸುಪ್ರೀಮ್ ಕೋರ್ಟ್ ಮತ್ತು ಹೈ ಕೋರ್ಟ್ ಗೆ ಮಾತ್ರ.

rule of income tax ride

Please follow and like us:
0
http://karnatakatoday.in/wp-content/uploads/2019/01/Information-of-Income-tax-1024x576.jpghttp://karnatakatoday.in/wp-content/uploads/2019/01/Information-of-Income-tax-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ನಿನ್ನ ಕೆಲವು ಕನ್ನಡ ನಟರ ಮತ್ತು ನಿರ್ಮಾಪಕರ ಮನೆಯ ಮೇಲೆ IT ರೇಡ್ ಆದ ವಿಷಯ ನಿಮಗೆಲ್ಲ ಗೊತ್ತೇ ಇದೆ, ಸ್ನೇಹಿತರೆ IT ರೇಡ್ ಹೇಗೆ ಮಾಡುತ್ತಾರೆ, ಯಾವ ರೀತಿಯ ಪ್ಲಾನ್ ಮಾಡುತ್ತಾರೆ ಮತ್ತು ಏನನ್ನ ರೇಡ್ ಮಾಡಬೇಕು ಮತ್ತು ಏನನನ್ನ ರೇಡ್ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಒಬ್ಬ ವ್ಯಕ್ತಿ...Kannada News