Runamukta Khayide

ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನ ನೀಡುವ ಕೊನೆಯ ಕ್ಷಣದಲ್ಲಿ ಕರ್ನಾಟಕ ರಾಜ್ಯದ ಎಲ್ಲರಿಗೂ ಬಂಪರ್ ಉಡುಗೊರೆಯನ್ನ ನೀಡಿ ಹೋಗಿದ್ದಾರೆ.

ಇನ್ನು ಕುಮಾರಸ್ವಾಯಿಯವರು ತಾವು ಅಧಿಕಾರವನ್ನ ಸ್ವೀಕಾರ ಮಾಡುವಾಗ ಬಂಪರ್ ಉಡುಗೊರೆಯನ್ನ ನೀಡುತ್ತೇನೆ ಎಂದು ಹೇಳಿದ್ದಾರೆ, ಅವರು ಕೊಟ್ಟ ಮಾತಿನಂತೆ ತಮ್ಮ ಅಧಿಕಾರದ ಕೊನೆಯ ಕ್ಷಣದಲ್ಲಿ ಬಂಪರ್ ಉಡುಗೊರೆಯನ್ನ ನೀಡಿದ್ದಾರೆ. ಹಾಗಾದರೆ ಆ ಬಂಪರ್ ಊಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ರಾಜಯದಲ್ಲಿ ಇಲ್ಲಿಯ ತನಕ ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದ ಎಲ್ಲಾ ಸಾಲವನ್ನ ಮನ್ನಾ ಮಾಡಲಾಗಿದೆ, ಇನ್ನು ಇದರ ಬಗ್ಗೆ ರಾಜೀನಾಮೆಯನ್ನ ನೀಡುವ ಮೊದಲೇ ಆದೇಶವನ್ನ ಹೊರಡಿಸಿದ್ದಾರೆ ಕುಮಾರಸ್ವಾಮಿಯವರು.

Runamukta Khayide

ಬಡ್ಡಿ ವ್ಯವಹಾರ ಮಾಡುವ ಖಾಸಗಿ ವ್ಯಕ್ತಿಗಳಿಗೆ ಈ ಋಣಮುಕ್ತ ಖಾಯಿದೆ ನುಂಗಲಾರದ ತುತ್ತಾಗಿದೆ, ರಾಜ್ಯ ಸರ್ಕಾರಕ್ಕೆ ಋಣಮುಕ್ತ ಕಾಯಿದೆಯನ್ನ ಜಾರಿಗೆ ತರಲು ರಾಷ್ಟ್ರಪತಿಗಳ ಅಂಕಿತವು ದೊರೆತಿತ್ತು ರಾಜ್ಯಾದ್ಯಂತ ಕಾರ್ಯರೂಪಕ್ಕೆ ಬಂದಿದೆ.

ಇಲ್ಲಿಯ ತನಕ ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಹಣವನ್ನ ಪಡೆದಿದ್ದರೆ ಅದನ್ನ ವಾಪಸ್ಸು ಮಾಡಬೇಕಾಗಿಲ್ಲ, ಈ ಕಾಯಿದೆಯಲ್ಲಿ ಅಡಿಯಲ್ಲಿ ಬಡ್ಡಿ ವ್ಯವಹಾರವನ್ನ ಮಾಡುವಾಗ ನಿಮ್ಮ ಒಡವೆಯನ್ನ ಇಟ್ಟುಕೊಂಡು ಸಾಲವನ್ನ ನೀಡಿದ್ದರೆ ಅಂತಹ ಎಲ್ಲಾ ಸಾಲಗಳು ಮನ್ನಾ ಆಗಲಿದೆ.

Runamukta Khayide

ಆದರೆ ಈ ನಿಯಮಗಳು ಎಲ್ಲರಿಗೂ ಅನ್ವಯ ಆಗುವುದಿಲ್ಲ, ಇದು ಸ್ವಂತ ಜಾಮೀನು ಇಲ್ಲದ ಬಡ ರೈತರಿಗೆ ಹಾಗು 2 ಹೆಕ್ಟೇರ್ ಜಮೀನಿಗಿಂತ ಕಡಿಮೆ ಜಮೀನನ್ನ ಹೊಂದಿರುವವರಿಗೆ ಮತ್ತು ಯಾರ ಕುಟುಂಬವು ವರ್ಷಕ್ಕೆ 1.25 ಲಕ್ಷ ಆದಾಯಕ್ಕಿಂತ ಕಡಿಮೆ ಆದಾಯ ಹೊಂದಿರುತ್ತದೆಯೋ ಅಂತಹ ಬಡ ಕುಟುಂಬಗಳಿಗೆ ಮಾತ್ರ ಅನ್ವಯ ಆಗಲಿದೆ.

ಇನ್ನು ಈ ನಿಯಮವು ಬಡ್ಡಿ ವ್ಯವಹಾರವನ್ನ ಮಾಡುವವರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ ಮತ್ತು ಒಡವೆಯನ್ನ ಅಡ ಇರಿಸಿಕೊಂಡು ಸಾಲವನ್ನ ನೀಡಿದ್ದರೆ ಆ ಒಡವೆಯನ್ನ ಅವರಿಗೆ ವಾಪಾಸ್ ಕೊಡಬೇಕಾಗಿದೆ ಮತ್ತು ಯಾವುದೇ ಹಣವನ್ನ ಬಡವನಿಂದ ಕೇಳುವಾಗ ಹಾಗೆ ಇಲ್ಲ.

ಸ್ನೇಹಿತರೆ ಈ ಋಣಮುಕ್ತ ಖಾಯಿದೆಯೂ ರಾಜ್ಯದಲ್ಲಿ ಜಾರಿಗೆ ಬಂದಿರುವುದರಿಂದ ಬಡವರಿಗೆ ಯಾರು ಕೂಡ ಅನಿವಾರ್ಯದ ಸಮಯದಲ್ಲಿ ಹಣವನ್ನ ನೀಡಲು ಮುಂದಾಗುದಿಲ್ಲ, ಸ್ನೇಹಿತರೆ ಈ ಖಾಯಿದೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Runamukta Khayide

Please follow and like us:
error0
http://karnatakatoday.in/wp-content/uploads/2019/07/Runamukta-Khayide-1-1024x576.jpghttp://karnatakatoday.in/wp-content/uploads/2019/07/Runamukta-Khayide-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನ ನೀಡುವ ಕೊನೆಯ ಕ್ಷಣದಲ್ಲಿ ಕರ್ನಾಟಕ ರಾಜ್ಯದ ಎಲ್ಲರಿಗೂ ಬಂಪರ್ ಉಡುಗೊರೆಯನ್ನ ನೀಡಿ ಹೋಗಿದ್ದಾರೆ. ಇನ್ನು ಕುಮಾರಸ್ವಾಯಿಯವರು ತಾವು ಅಧಿಕಾರವನ್ನ ಸ್ವೀಕಾರ ಮಾಡುವಾಗ ಬಂಪರ್ ಉಡುಗೊರೆಯನ್ನ ನೀಡುತ್ತೇನೆ ಎಂದು ಹೇಳಿದ್ದಾರೆ, ಅವರು ಕೊಟ್ಟ ಮಾತಿನಂತೆ ತಮ್ಮ ಅಧಿಕಾರದ ಕೊನೆಯ ಕ್ಷಣದಲ್ಲಿ ಬಂಪರ್ ಉಡುಗೊರೆಯನ್ನ ನೀಡಿದ್ದಾರೆ. ಹಾಗಾದರೆ ಆ ಬಂಪರ್ ಊಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India