Saaho and Kurukshetra

ಬರಿ ಸಿನಿಮಾದ ಹಾಡುಗಳಲ್ಲಿ ಮಾತ್ರ ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಗೌಮ ಎಂದು ಎಂದು ಹೇಳಿಕೊಳ್ಳಲಾಗುತ್ತಿದೆ, ಆದರೆ ನಿಜಕ್ಕೂ ಕರ್ನಾಕಟದಲ್ಲಿ ಕನ್ನಡಿಗರ ಪರಿಸ್ಥಿತಿ ಹೇಳತೀರದಾಗಿದೆ. ನಮ್ಮ ಸಿನೆಮಾಗಳಲ್ಲಿ ನಾವು ಕನ್ನಡಿಗರು, ಕರ್ನಾಟದಲ್ಲಿ ನಾವೇ ಬಲಶಾಲಿಗಳು ಹೇಳಿಕೊಳ್ಳುತ್ತೇವೆ, ಆದರೆ ನಿಜಜೀವನದಲ್ಲಿ ವಾಸ್ತವದ ಚಿತ್ರಣವನ್ನ ಅದರಲ್ಲಿಯೂ ಟಾಪ್ ನಟನ ಸಿನಿಮಾಕ್ಕೆ ಉಂಟಾಗಿರುವ ಪರಿಸ್ಥಿತಿಯನ್ನ ನಾವು ಈ ಹೇಳುತ್ತೀವಿ ಓದಿ.

ಕರ್ನಾಟಕದಲ್ಲಿ ಕನ್ನಡಿಗರು ಯಾಕೋ ವಿಶಾಲ ಹೃದಯದವರು ಆಗಿದ್ದಾರೆ, ಇದರ ಪರಿಣಾಮ ಇಂದು ಕನ್ನಡ ಮೇಲೆ ಮತ್ತು ಕನ್ನಡಿಗರ ಮೇಲೆ ತುಂಬಾ ದೌರ್ಜನ್ಯಗಳು ನಡೆಯುತ್ತಿದೆ.

Saaho and Kurukshetra

ನಿಜವಾಗಲೂ ನಾವು ಸಿನೆಮಾಗಳಲ್ಲಿ ಹೇಳುಕೊಳ್ಳುವಷ್ಟು ಬಲಶಾಲಿಗಳು ಆಗಿದ್ದೇವಾ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳುವ ಹಾಗೆ ಆಗಿದೆ, ಸ್ನೇಹಿತರೆ ಕೆಲವು ದಿನಗಳ ಹಿಂದೆ ಪಂಚಭಾಷೆಗಳಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಖ್ಯಾತ ನಟರನ್ನ ಒಳಗೊಂಡ ಕುರುಕ್ಷೇತ್ರ ಚಿತ್ರ ಮೊನ್ನೆ 100 ಕೋಟಿ ಹಣವನ್ನ ಗಳಿಸಿ ದಾಖಲೆಯನ್ನ ಬರೆದಿದ್ದು ನಿಮಗೆಲ್ಲ ಗೊತ್ತೇ ಇದೆ.

ದಿನ ಬೆಳಗಾಗುವುದರ ಒಳಗೆ ಕನ್ನಡ ಕುರುಕ್ಷೇತ್ರ ಚಿತ್ರ ಪರಭಾಷೆಯ ಚಿತ್ರದ ಎದುರು ಮಂಡಿಯೂರಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ, ಹೌದು ಸ್ನೇಹಿತರೆ ನಮ್ಮ ಬೆಂಗಳೂರಿನಲ್ಲಿ ಕುರುಕ್ಷೇತ್ರ ಚಿತ್ರ ಆನ್ಲೈನ್ ಶೋ ಗಳಲ್ಲಿ ಕೇವಲ 50 ಶೋ ಗಳನ್ನ ಮಾತ್ರ ಮೀಸಲು ಇಟ್ಟಿದ್ದು ಪರಭಾಷೆಯ ಚಿತ್ರವಾದ ಸಾಹೋ ಚಿತ್ರಕ್ಕೆ ಒಂದೇ ಚಿತ್ರ ಮಂದಿರದಲ್ಲಿ 15 ರಿಂದ 17 ಶೋ  ಗಳನ್ನ ಮೀಸಲು ಇಡಲಾಗಿದೆ.

Saaho and Kurukshetra

ಕರ್ನಾಟಕದ ಮಾಲ್ ಮತ್ತು ಮಲ್ಟಿಪ್ಲೆಸ್ ಗಳಲ್ಲಿ ಸಾಹೋ ಚಿತ್ರಕ್ಕೆ ಹೆಚ್ಚಿನ ಬೆಂಬಲವನ್ನ ಕೊಡಲಾಗಿದೆ, ಇನ್ನು ಇದಷ್ಟೇ ಅಲ್ಲದೆ ಉತ್ತರ ಕರ್ನಾಟಕ, ಬಳ್ಳಾರಿ, ರಾಯಚೂರು, ದಾವಣೆಗೆರೆ ಹೀಗೆ ಹಲವು ಕಡೆಗಳಲ್ಲಿ ಕನ್ನಡದ ಕುರುಕ್ಷೇತ್ರ ಚಿತ್ರವನ್ನ ತೆಗೆದು ಹಾಕಿ ಸಾಹೋ ಚಿತ್ರಗಳನ್ನ ಹಾಕಲಾಗಿದೆ. ಇನ್ನು ಕೆಲವು ಚಿತ್ರ ಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರದ ದರ್ಶನ್ ಅವರ ಕಟ್ ಔಟ್ ಗಳು ಕೆಳಗೆ ಇಳಿದು ಪ್ರಭಾಸ್ ಅವರ ಕಟ್ ಔಟ್ ಗಳು ತಲೆ ಎತ್ತಿದೆ.

ಬರಿ ಸಿನಿಮಾ ವಿಷಯದಲ್ಲಿ ಮಾತ್ರವಲ್ಲದೆ ಎಲ್ಲಾ ವಿಷಯದಲ್ಲಿ ಕೂಡ ಕನ್ನಡಕ್ಕೆ ಅವಮಾನ ಆಗುತ್ತಿದೆ ನಮ್ಮ ಕರ್ನಾಟಕದಲ್ಲಿ. ಸ್ನೇಹಿತರೆ ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಭಾರಿ ಅವಮಾನ ಆಗುತ್ತದೆ ಅನ್ನುವುದು ನಮ್ಮ ಅನಿಸಿಕೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಕನ್ನಡಿಗರಿಗೆ ತಲುಪಿಸಿ.

Saaho and Kurukshetra

Please follow and like us:
error0
http://karnatakatoday.in/wp-content/uploads/2019/08/Saaho-and-Kurukshetra-1024x576.jpghttp://karnatakatoday.in/wp-content/uploads/2019/08/Saaho-and-Kurukshetra-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಬರಿ ಸಿನಿಮಾದ ಹಾಡುಗಳಲ್ಲಿ ಮಾತ್ರ ಕರ್ನಾಟಕದಲ್ಲಿ ಕನ್ನಡಿಗನೇ ಸರ್ವಗೌಮ ಎಂದು ಎಂದು ಹೇಳಿಕೊಳ್ಳಲಾಗುತ್ತಿದೆ, ಆದರೆ ನಿಜಕ್ಕೂ ಕರ್ನಾಕಟದಲ್ಲಿ ಕನ್ನಡಿಗರ ಪರಿಸ್ಥಿತಿ ಹೇಳತೀರದಾಗಿದೆ. ನಮ್ಮ ಸಿನೆಮಾಗಳಲ್ಲಿ ನಾವು ಕನ್ನಡಿಗರು, ಕರ್ನಾಟದಲ್ಲಿ ನಾವೇ ಬಲಶಾಲಿಗಳು ಹೇಳಿಕೊಳ್ಳುತ್ತೇವೆ, ಆದರೆ ನಿಜಜೀವನದಲ್ಲಿ ವಾಸ್ತವದ ಚಿತ್ರಣವನ್ನ ಅದರಲ್ಲಿಯೂ ಟಾಪ್ ನಟನ ಸಿನಿಮಾಕ್ಕೆ ಉಂಟಾಗಿರುವ ಪರಿಸ್ಥಿತಿಯನ್ನ ನಾವು ಈ ಹೇಳುತ್ತೀವಿ ಓದಿ. ಕರ್ನಾಟಕದಲ್ಲಿ ಕನ್ನಡಿಗರು ಯಾಕೋ ವಿಶಾಲ ಹೃದಯದವರು ಆಗಿದ್ದಾರೆ, ಇದರ ಪರಿಣಾಮ ಇಂದು ಕನ್ನಡ ಮೇಲೆ ಮತ್ತು...Film | Devotional | Cricket | Health | India