ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಅವರ ಮೊದಲ ನೋಟ ಮತ್ತು ಮೊದಲ ಭೇಟಿ ತುಂಬಾ ಸ್ವಾರಸ್ಯಕರವಾಗಿದೆ ಮತ್ತು ಇವರಿಬ್ಬರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆ ಇಲ್ಲ ಅನ್ನುವುದು ಕೂಡ ಅಷ್ಟೇ ಸತ್ಯವಾಗಿದೆ. ಸ್ನೇಹಿತರೆ ಈ ಕಥೆ ನಡೆದಿದ್ದು 1990 ರ ಇಸವಿಯಲ್ಲಿ ಮತ್ತು ಅಂಜಲಿಯವರು ಆಗಾಗಲೇ ಡಾಕ್ಟರ್ ಆಗಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಇನ್ನು ಸಚಿನ್ ಮತ್ತು ಅಂಜಲಿ ಅವರ ಮೊದಲ ಭೇಟಿ ಆರಂಭ ಆಗಿದ್ದು ಮುಂಬೈ ನ ಏರ್ಪೋರ್ಟ್ ನಲ್ಲಿ, ತನ್ನ ತಾಯಿಯನ್ನ ಕರೆದುಕೊಂಡು ಬರಲು ಅಂಜಲಿ ಅವರ ತನ್ನ ಸ್ನೇಹಿತೆಯ ಜೊತೆ ಏರ್ಪೋರ್ಟ್ ಗೆ ಹೋಗಿದ್ದರು, ಇನ್ನು ಅದೇ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ತಮ್ಮ ಮೊದಲ ಶತಕವನ್ನ ಭಾರಿಸಿ ಭಾರತಕ್ಕೆ ಬಂದ ಸಚಿನ್ ಅವರು ಮುಂಬೈ ಏರ್ಪೋರ್ಟ್ ನಲ್ಲಿ ಇಳಿದಿದ್ದರು.

ಇನ್ನು ಸಚಿನ್ ಅವರು ಏರ್ಪೋರ್ಟ್ ನಿಂದ ಆಚೆ ಬರುವಾಗ ಮೊದಲ ಭಾರಿ ಸಚಿನ್ ಅವರನ್ನ ನೋಡಿದ ಅಂಜಲಿ ಅವರಿಗೆ ಏನಾಯಿತೋ ಗೊತ್ತಿಲ್ಲ ಮತ್ತು ಆ ಸಮಯದಲ್ಲಿ ಸಚಿನ್ ಅವರು ಒಬ್ಬ ಕ್ರಿಕೆಟ್ ಆಟಗಾರ ಅನ್ನುವುದು ಕೂಡ ಅಂಜಲಿ ಅವರಿಗೆ ತಿಳಿದಿರಲಿಲ್ಲ, ಇನ್ನು ಸಚಿನ್ ಅವರನ್ನ ನೋಡಿದ ಅಂಜಲಿ ಅವರು ಹುಡುಗ ಸೊ ಕ್ಯೂಟ್ ಎಂದು ತನ್ನ ಸ್ನೇಹಿತೆಯ ಬಳಿ ಹೇಳಿದ್ದರು ಅಂಜಲಿ ಅವರು. ಇನ್ನು ಆ ಸಮಯದಲ್ಲಿ ಸಚಿನ್ ಅವರನ್ನ ಹಿಂಬಾಲಿಸಿದ ಅಂಜಲಿ ಅವರು ಸಚಿನ್ ಅವರನ್ನ ಮಾತನಾಡಿಸಲು ತುಂಬಾ ಪ್ರಯತ್ನ ಮಾಡಿದರು ಮತ್ತು ಅದೇ ಸಮಯದಲ್ಲಿ ಸಚಿನ್ ಅವರು ಕೂಡ ಅಂಜಲಿ ಅವರನ್ನ ನೋಡಿದರು. ಸಚಿನ್ ಗೆ ತುಂಬಾ ಸೆಕ್ಯೂರಿಟಿ ಇದ್ದ ಕಾರಣ ಅವರನ್ನ ಮಾತನಾಡಿಸಲು ಅಂಜಲಿ ಅವರಿಗೆ ಸಾಧ್ಯವಾಗಲಿಲ್ಲ.

Sachin and Anjali

ಇನ್ನು ಈ ಸಮಯದಲ್ಲಿ ಅಂಜಲಿ ಅವರ ಸ್ನೇಹಿತರೆ ಈತ ಭಾರತದ ಕ್ರಿಕೆಟ್ ತಂಡದ ಆಟಗಾರ ಮತ್ತು ಇತ್ತೀಚಿಗೆ ಇಂಗ್ಲೆಂಡ್ ನಲ್ಲಿ ಶತಕವನ್ನ ಭಾರಿಸಿ ಭಾರತಕ್ಕೆ ವಾಪಾಸ್ ಬಂದಿದ್ದಾರೆ ಎಂದು ಅಂಜಲಿ ಅವರ ಬಳಿ ಹೇಳಿದರು ಅಂಜಲಿ ಅವರ ಸ್ನೇಹಿತೆ. ಇನ್ನು ವಿಪರ್ಯಾಸ ಏನು ಅಂದರೆ ಸಚಿನ್ ಅವರನ್ನ ಭೇಟಿ ಮಾಡುವ ಭರದಲ್ಲಿ ಅಂಜಲಿ ಅವರು ತಮ್ಮ ತಾಯಿಯನ್ನ ಮನೆಗೆ ಕರೆದುಕೊಂಡು ಹೋಗುವುದನ್ನ ಮರೆತು ಹೋಗಿದ್ದರಂತೆ. ಸಚಿನ್ ಅವರ ಜೊತೆ ಹೇಗಾದರೂ ಮಾಡಿ ಮಾತನಾಡಬೇಕು ಎಂದು ದೃಢ ನಿರ್ಧಾರ ಮಾಡಿದ ಅಂಜಲಿ ಅವರು ಸಚಿನ್ ಅವರ ಫೋನ್ ನಂಬರ್ ತೆಗೆದುಕೊಳ್ಳಲು ಭಾರಿ ಪ್ರಯತ್ನ ಮಾಡಿ ಕೊನೆಗೂ ಫೋನ್ ನಂಬರ್ ತೆಗೆದುಕೊಂಡು ಸಚಿನ್ ಗೆ ಕರೆ ಮಾಡಿದರು ಅಂಜಲಿ ಅವರು.

ಇನ್ನು ಸಚಿನ್ ಗೆ ಫೋನ್ ಮಾಡಿದ ಅಂಜಲಿ ಅವರು ನನ್ನ ಹೆಸರು ಅಂಜಲಿ ಅವರು ನಾನು ನಿಮ್ಮ ನಿನ್ನೆ ಏರ್ಪೋರ್ಟ್ ನಲಿ ಮೊದಲ ಭಾರಿಗೆ ನೋಡಿದೆ ಎಂದು ಹೇಳಿದರು, ಇನ್ನು ಇದಕ್ಕೆ ಉತ್ತರಿಸಿದ ಸಚಿನ್ ಅವರು ಹೌದು ನನಗೆ ನೆನಪಿದೆ ಅಂದರು. ಇನ್ನು ಇದನ್ನ ಕೇಳಿದ ಅಂಜಲಿ ಅವರಿಗೆ ಆಶ್ಚರ್ಯವಾಗಿ ಕುತೂಹಲ ತಡೆಯಲಾರದೆ ನಾನು ನಿನ್ನೆ ಯಾವ ಕಲರ್ ಬಟ್ಟೆ ಹಾಕಿಕೊಂಡಿದ್ದೆ ಎಂದು ಹೇಳಿ ಎಂದು ಕೇಳಿದರಂತೆ ಮತ್ತು ಇದಕ್ಕೆ ಉತ್ತರಿಸಿದ ಸಚಿನ್ ವಾರೆಂಜ್ ಬಣ್ಣದ ಟಿ ಶರ್ಟ್ ಎಂದು ಹೇಳಿದರು.

ಇನ್ನು ಇಲ್ಲಿಂದ ಇವರಿಬ್ಬರ ಸ್ನೇಹ ಆರಂಭವಾಗುತ್ತದೆ, ತುಂಬಾ ನಾಚಿಕೆಯ ಸ್ವಭಾವದ ಸಚಿನ್ ಅವರು ಮೊದಲ ಭಾರಿ ಅಂಜಲಿ ಅವರನ್ನ ಮನೆಗೆ ಕರೆದುಕೊಂಡು ಬಂದಾಗ ಇವರು ಪತ್ರಕರ್ತೆ ಮತ್ತು ನನ್ನನ್ನ ಇಂಟರ್ವ್ಯೂ ಮಾಡಲು ಬಂದಿದ್ದಾರೆ ಎಂದು ಹೇಳಿದರಂತೆ, ಆದರೆ ಮನೆಯವರಿಗೆ ಮಾತ್ರ ಫುಲ್ ಡೌಟ್ ಬಂದಿತ್ತಂತೆ. ಇನ್ನು ಐದು ವರ್ಷ ಪ್ರೇಮಿಗಳಾಗಿದ್ದ ಇವರು 1995 ರಲ್ಲಿ ಮದುವೆಯಾದರು, ಸ್ನೇಹಿತರೆ ಸಚಿನ್ ಮತ್ತು ಅಂಜಲಿ ಅವರ ಪ್ರೇಮಕಥೆ ಸಿನಿಮಾ ಪ್ರೇಮಕಥೆ ಇದ್ದ ಹಾಗೆ ಇದೆ ಅಲ್ವ, ಸ್ನೇಹಿತರೆ ಇವರಿಬ್ಬರ ಪ್ರೇಮಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/04/Sachin-and-Anjali-1-1024x576.jpghttp://karnatakatoday.in/wp-content/uploads/2020/04/Sachin-and-Anjali-1-150x104.jpgeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ನಗರಬೆಂಗಳೂರುಸುದ್ದಿಜಾಲಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಅವರ ಮೊದಲ ನೋಟ ಮತ್ತು ಮೊದಲ ಭೇಟಿ ತುಂಬಾ ಸ್ವಾರಸ್ಯಕರವಾಗಿದೆ ಮತ್ತು ಇವರಿಬ್ಬರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆ ಇಲ್ಲ ಅನ್ನುವುದು ಕೂಡ ಅಷ್ಟೇ ಸತ್ಯವಾಗಿದೆ. ಸ್ನೇಹಿತರೆ ಈ ಕಥೆ ನಡೆದಿದ್ದು 1990 ರ ಇಸವಿಯಲ್ಲಿ ಮತ್ತು ಅಂಜಲಿಯವರು ಆಗಾಗಲೇ ಡಾಕ್ಟರ್ ಆಗಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಇನ್ನು ಸಚಿನ್ ಮತ್ತು ಅಂಜಲಿ ಅವರ ಮೊದಲ ಭೇಟಿ ಆರಂಭ ಆಗಿದ್ದು ಮುಂಬೈ ನ...Film | Devotional | Cricket | Health | India