ಹಿಂದೂಗಳ ಆರಾಧ್ಯದೈವ ಪ್ರಭು ಶ್ರೀರಾಮನ ಸನ್ನಿದಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಮಾಡುತ್ತಿರುವ ಕೆಲಸ ನೋಡಿದರೆ ಎಂತಹವರಿಗೂ ಒಂದು ಕ್ಷಣ ಶಾಕ್ ಆಗುತ್ತದೆ. ಈ ಬಾರಿಯ ರಾಮನವಮಿಯಂದು ರಾಜಾಜಿ ನಗರದ ರಥೋತ್ಸವ ಶಾಂತಿಯುತವಾಗಿ ಅಚ್ಚುಕಟ್ಟಾಗಿ ಸಾಗಲು ಬಹಳ ಶ್ರಮ ಪಟ್ಟು ನಿರ್ವಿಘ್ನವಾಗಿ ನೆರವೇರಿಸುವ ಹೊಣೆ ಓರ್ವ ಇಪ್ಪತ್ತೇಳು ವರ್ಷ ವಯಸ್ಸಿನ ವ್ಯಕ್ತಿಯ ಜವಾಬ್ದಾರಿಯಾಗಿತ್ತು. ಈ ದೇವಾಲಯದ ಆವರಣವನ್ನು ಶುಚಿಯಾಗಿರಿಸುವುದು ಸೇರಿದಂತೆ ಎಲ್ಲಾ ಬಗೆಯ ಕೆಲಸ ಮಾಡುವ ಈ ವ್ಯಕ್ತಿಯ ಹೆಸರನ್ನೊಮ್ಮೆ ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಆತನ ಹೆಸರು ಸದ್ದಾಂ ಹುಸೇನ್.

ಕೇವಲ ಎರಡನೇ ತರಗತಿಯವರೆಗೆ ಓದಿರುವ ಹುಸೇನ್ ಈ ಪ್ರದೇಶದ ಜನರಿಗೆ ಅವರ ಕೆಲಸಗಳಲಿ ನೆರವಾಗುತ್ತಾರೆ. ಮನೆಗಳ ಸ್ಥಲಾಂತರವಿರಬಹುದು, ಅಂಗಡಿ ಕೆಲಸವಿರಬಹುದು ಆತ ಇಲ್ಲವೆನ್ನದೆ ಮಾಡುತ್ತಾರೆ, ಅಷ್ಟೇ ಅಲ್ಲದೆ ಆತ ಕ್ಯಾಬ್ ಚಾಲನೆ ಸಹ ಮಾಡಬಲ್ಲರು.


ಪತ್ರಿಕಾ ಪ್ರತಿನಿಧಿ ರಾಜಾಜಿನಗರ ನಾಲ್ಕನೇ ಬ್ಲಾಕ್ ನಲ್ಲಿರುವ ರಾಮಮಂದಿರಕ್ಕೆ ಭೇಟಿ ಕೊಟ್ಟ ವೇಳೆ ಸದ್ದಾಂ ಹುಸೇನ್ ದೇವಾಲಯದ ಆವರಣವನ್ನು ಶುಚಿಗೊಳಿಸುತ್ತಿದ್ದರು. 1950 ರ ದಶಕದ ಉತ್ತರಾರ್ಧದಲ್ಲಿ ರಾಜಾಜಿನಗರ ಲೇಔಟ್ ರಚನೆಯಾದಾಗ ಈ ದೇವಾಲಯವನ್ನು ನಿರ್ಮಿಸಲಾಯಿತು. ಸದ್ದಾಂ ಹುಸೇನ್ ಯಾರೊಬ್ಬರ ಸಹಾಯಕ್ಕಾಗಿ ಕಾಯುವುದಿಲ್ಲ,  ತಾವು ದೇವಾಲಯ ಹೊಕ್ಕು ಅಲ್ಲಿರುವ ಏಣಿಯೊಂದನ್ನೇರಿ ಛಾವಣಿಯಲ್ಲಿರಬಹುದಾದ ಧೂಳು, ಜೇಡರ ಬಲೆಗಳಂತಹಾ ಕಸವನ್ನು ಶುಚಿಗೊಳಿಸುತ್ತಾರೆ. ಕಸ ಹೊಡೆಯುವುದು, ಬಟ್ಟೆಯಿಂದ ನೆಲ, ಗೋಡೆಗಳ ಒರೆಸುವುದನ್ನು ಅವರೊಬ್ಬರೇ ಮಾಡಬಲ್ಲರು.

ಕಂಬದ ಮೇಲಿರುವ ರಾಮ, ಲಕ್ಷ್ಮಣ, ಸೀತಾ ಹಾಗೂ ಹನುಮನ ಮೂರ್ತಿಗಳ ಮೇಲಿನ ಧೂಳನ್ನು ಸಹ ಅವರು ನಿರ್ವಿಕಾರ ಭಾವದಿಂದ ಒರೆಸುತ್ತಾರೆ, ಹಾಗೆಯೇ ಆ ಮೂರ್ತಿಗಳು ಹೊಚ್ಚ ಹೊಸದಾಗಿ ಕಾಣುವವರೆಗೆ ಅವರು ಶುಚಿಗೊಳಿಸುತ್ತಾರೆ.
“ನಾನು ದೇವಾಲಯದ ಶುಚಿಮಾಡುವುದನ್ನು ಕೆಲ ಜನರು ಪ್ರಶಂಸಿಸುತ್ತಾರೆ. ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಬಹುದು, ಅಂತಹವರಿಗೆ ನಾನು ನನ್ನ ಕಿರುನಗೆಯ ಮೂಲಕ ಉತ್ತರಿಸುತ್ತೇನೆ” ಸದ್ದಾಂ ಹೇಳಿದರು.


ಗಾಂಧಿನಗರದಲ್ಲಿನ ಗ್ರಂಥಿಗೆ ಅಂಗಡಿ ಮಾಲೀಕ ವೆಂಕಟೇಶ್ ಬಾಬು ಅವರ ಬಳಿ ಸದ್ದಾಂ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ತಮ್ಮ ಅಂಗಡಿಗಳಲ್ಲಿ ಗಣೇಶನ ವಿಗ್ರಹ ಮಾರಾಟ ನಡೆಸುತ್ತಿದ್ದರು. ಅವರು ಹೇಳಿದಂತೆ “ಸದ್ದಾಂ ನನ್ನೊಂದಿಗೆ ಕೆಲಸ ಮಾಡುತ್ತಾನೆ. ದೇವಾಲಯವನ್ನು ವಾರ್ಷಿಕವಾಗಿ ಶುಚಿಗೊಳಿಸುವ ಕೆಲಸವೂ ಅವರ ಪಾಲಿಗಿದೆ.ಅವರು ಸಂಪೂರ್ಣ ಪ್ರಾಮಾಣಿಕತೆಯಿಂದ ಆ ಕಾರ್ಯ ನೆರವೇರಿಸುತ್ತಾರೆ.

Please follow and like us:
0
http://karnatakatoday.in/wp-content/uploads/2019/04/saddam-1024x576.jpghttp://karnatakatoday.in/wp-content/uploads/2019/04/saddam-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳು  ಹಿಂದೂಗಳ ಆರಾಧ್ಯದೈವ ಪ್ರಭು ಶ್ರೀರಾಮನ ಸನ್ನಿದಿಯಲ್ಲಿ ಈ ಮುಸ್ಲಿಂ ವ್ಯಕ್ತಿ ಮಾಡುತ್ತಿರುವ ಕೆಲಸ ನೋಡಿದರೆ ಎಂತಹವರಿಗೂ ಒಂದು ಕ್ಷಣ ಶಾಕ್ ಆಗುತ್ತದೆ. ಈ ಬಾರಿಯ ರಾಮನವಮಿಯಂದು ರಾಜಾಜಿ ನಗರದ ರಥೋತ್ಸವ ಶಾಂತಿಯುತವಾಗಿ ಅಚ್ಚುಕಟ್ಟಾಗಿ ಸಾಗಲು ಬಹಳ ಶ್ರಮ ಪಟ್ಟು ನಿರ್ವಿಘ್ನವಾಗಿ ನೆರವೇರಿಸುವ ಹೊಣೆ ಓರ್ವ ಇಪ್ಪತ್ತೇಳು ವರ್ಷ ವಯಸ್ಸಿನ ವ್ಯಕ್ತಿಯ ಜವಾಬ್ದಾರಿಯಾಗಿತ್ತು. ಈ ದೇವಾಲಯದ ಆವರಣವನ್ನು ಶುಚಿಯಾಗಿರಿಸುವುದು ಸೇರಿದಂತೆ ಎಲ್ಲಾ ಬಗೆಯ ಕೆಲಸ ಮಾಡುವ ಈ ವ್ಯಕ್ತಿಯ ಹೆಸರನ್ನೊಮ್ಮೆ...Kannada News