ಸಾಮಾನ್ಯವಾಗಿ ಕಾರ್ ಚಾಲನೆ ಮಾಡುವ ಕ್ರೇಜ್ ಎಲ್ಲರಿಗು ಕೂಡ ಇರುತ್ತದೆ. ಕುಟುಂಬದ ಜೊತೆ ಅಥವಾ ಸ್ನೇಹಿತರ ಜೊತೆ ಪ್ರಯಾಣ ಬೆಳೆಸುವುದನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ. ಆದರೆ ಕಾರಿನಲ್ಲಿ ಹಗಲು ಪ್ರಯಾಣ ಮಾಡಲು ಮತ್ತು ರಾತ್ರಿ ಪ್ರಯಾಣ ಮಾಡಲು ಸಾಕಷ್ಟು ವ್ಯತ್ಯಾಸಗಳಿವೆ. ಹಗಲಿನಲ್ಲಿ ನೀವೊಬ್ಬ ಉತ್ತಮ ಡ್ರೈವರ್ ಆಗಿರಬಹುದು ಆದರೆ ರಾತ್ರಿ ಪಯಣದ ವೇಳೆ ಕೆಲವೊಂದು ವಿಷಯಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಉತ್ತಮ. ಸುರಕ್ಷಿತ ಡ್ರೈವಿಂಗ್ ಹಾಗು ಸುರಕ್ಷತೆಯ ಪ್ರಯಾಣಕ್ಕಾಗಿ ಕೆಲವೊಂದು ಟಿಪ್ಸ್ ನೀವು ತಗೆದುಕೊಳ್ಳಬೇಕು.

ಸಾಮಾನ್ಯವಾಗಿ ಹೆಚ್ಚಿನ ಜನರು ರಾತ್ರಿಯಲ್ಲಿ ವಾಹನ ಚಲಾಯಿಸಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಶಾರ್ಟ್ ಡ್ರೈವ್‌ಗೆ ಇದು ಉತ್ತಮವಾಗಿದೆ, ಆದರೆ ದೀರ್ಘ ಪ್ರಯಾಣ ಮಾಡುವಾಗ ನೀವು ಯೋಚಿಸಬೇಕು. ತುರ್ತು ಪರಿಸ್ಥಿತಿ ಇದ್ದಾಗ ತೊಂದರೆಯಿಲ್ಲ ಆದರೆ ನೀವು ಹವ್ಯಾಸಗಳಿಗಾಗಿ ರಾತ್ರಿಯಲ್ಲಿ ವಾಹನ ಚಲಾಯಿಸಿದರೆ, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಸ್ವಲ್ಪ ಅಜಾಗರೂಕತೆಯು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.

ಒಂದು ವೇಳೆ ನಿಮಗೆ ರಾತ್ರಿ ಪಯಣ ಮಾಡಲೇಬೇಕಾದ ಅವಶ್ಯಕತೆ ಬಂದಾಗ ಮತ್ತು ಅದರ ಅಗತ್ಯತೆ ಇದ್ದಾಗ ದಿನದಲ್ಲಿ ಸ್ವಲ್ಪ ಸಮಯದವರೆಗೆ ನಿದ್ರೆ ಪಡೆಯಿರಿ. ಏಕೆಂದರೆ ರಾತ್ರಿ 3 ರಿಂದ 5 ಗಂಟೆಯ ಸಮಯ ಅತ್ಯಂತ ಅಪಾಯಕಾರಿ, ಕಾರಣ ಏನೆಂದರೆ ಈ ಸಮಯದಲ್ಲಿ ನಿದ್ರೆ ವ್ಯಕ್ತಿಯ ಮೇಲೆ ಹೆಚ್ಚು ಪ್ರಾಬಲ್ಯ ಸಾಧಿಸುವ ಘಳಿಗೆ ಆಗಿರುತ್ತದೆ. ಈ ವಿಷಯದ ಬಗ್ಗೆ ಹಲವು ವೃತ್ತಿಪರ ಚಾಲಕರೊಂದಿಗೆ ನಡೆದ ವಿಮರ್ಶೆಯ ಪ್ರಕಾರ ಎಲ್ಲಾ ಡ್ರೈವರ್ ಗಳು ಕೂಡ ರಾತ್ರಿ ಪಯಣವಿದ್ದರೆ ಹಗಲಿನಲ್ಲಿ ಸಾಕಷ್ಟು ನಿದ್ರೆ ಮಾಡುತ್ತಾರೆ. ಏಕೆಂದರೆ ರಾತ್ರಿ ಪೂರ್ತಿ ಎಚ್ಚರವಿದ್ದು ಡ್ರೈವಿಂಗ್ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಸಣ್ಣ ಕಿರು ನಿದ್ರೆ ಬಂದರೂ ಕೂಡ ಅವಘಡ ತಪ್ಪಿದ್ದಲ್ಲ.

ಇನ್ನು ರಾತ್ರಿ ಚಾಲನೆ ಮಾಡುವವರಿಗೆ ಮತ್ತೊಂದು ದೊಡ್ಡ ಸೂಚನೆ ಎಂದರೆ ಮದ್ಯಪಾನ ಮಾಡಿ ಡ್ರೈವಿಂಗ್ ಮಾಡಬೇಡಿ ಕುಡಿದು ವಾಹನ ಚಲಾಯಿಸುವುದು ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ಇದನ್ನು ಮಾಡುವುದರ ಮೂಲಕ, ನೀವು ಒಂದು ಕಡೆ ಕಾನೂನನ್ನು ಮುರಿಯುತ್ತೀರಿ, ಮತ್ತೊಂದೆಡೆ ನಿಮ್ಮೊಂದಿಗೆ ಇರುವವರ ಪ್ರಾಣವನ್ನು ಪಣಕ್ಕಿಡುತ್ತೀರಿ. ಕುಡಿದು ವಾಹನ ಚಲಾಯಿಸಬೇಡಿ ಮತ್ತು ರಾತ್ರಿಯಲ್ಲಿ ಇದು ಅತ್ಯಂತ ಅಪಾಯಕಾರಿ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಕುಡಿತ ನಿಮ್ಮನ್ನು ಗೊತ್ತಿಲ್ಲದೇ ಸಣ್ಣ ನಿದ್ರೆಗೆ ಜಾರಿಸಬಹುದು ಎಚ್ಚರವಿರಲಿ.

ಮತ್ತೊಂದು ಮುಖ್ಯ ಸೂಚನೆ ಎಂದರೆ  ರಾತ್ರಿಯಲ್ಲಿ ಕಾರನ್ನು ಚಾಲನೆ ಮಾಡುವಾಗ ವೇಗವನ್ನು ಕಡಿಮೆ ಮಾಡಿ. ಕೆಲವೊಮ್ಮೆ ಹೊಂಡಗಳು ಅಥವಾ ರಸ್ತೆ ಮುರಿಯುವವರು ರಾತ್ರಿಯಲ್ಲಿ ಗೋಚರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಕಾರನ್ನು ನಿಯಂತ್ರಿತ ವೇಗದಲ್ಲಿ ಓಡಿಸಿದರೆ, ನೀವು ಸರಿಯಾದ ಸಮಯದಲ್ಲಿ ಬ್ರೇಕ್ ಅನ್ನು ಅನ್ವಯಿಸಲು ಸಾಧ್ಯವಾಗುತ್ತದೆ. ಅಪಘಾತದ ಸಮಯದಲ್ಲಿ ನಿಮ್ಮ ಕಾರನ್ನು ನಿಯಂತ್ರಿಸಲು ಇದು ನಿಮಗೆ ಸಹಕಾರಿ. ಹೀಗಾಗಿ ರಾತ್ರಿಯಲ್ಲಿ ಹೆಚ್ಚು ವೇಗದ ಚಾಲನೆ ಬೇಡವೇ ಬೇಡ.

ರಾತ್ರಿ ಸಮಯದಲ್ಲಿ ಕಾರಿನ ಹೆಡ್ ಲೈಟ್ ಹಾಗು ದೊಡ್ಡ ವಾಹನಗಳ ಹೆಡ್ ಲೈಟ್ ಬಹಳ ಶಾರ್ಪ್ ಆಗಿರುವುದರಿಂದ ಒಮ್ಮೊಮೆ ನಿಮಗೂ ಕೂಡ ರಸ್ತೆ ಗೋಚರಿಸದಂತಾಗುತ್ತದೆ. ಡಿಮ್ ಡಿಪ್ ನೀಡಿದರು ಕೂಡ ಕೆಲವೊಮ್ಮೆ ಪ್ರಯೋಜನವಾಗಲ್ಲ. ಈಗಿನ ಬಹುತೇಕ ವಾಹನಗಳು ಎಲ್ಇಡಿ ಬಲ್ಬ್ ಗಳನ್ನ್ನು ಹೊಂದಿರುತ್ತವೆ. ಇನ್ನು ಕಾಡು ಮಾರ್ಗದಲ್ಲಿ ಸಾಕಷ್ಟು ನಿಧಾನವಾಗಿ ಪ್ರಯಾಣಿಸಿ ಏಕೆಂದರೆ ವನ್ಯ ಜೀವಿಗಳು ರಾತ್ರಿ ಸಮಯದಲ್ಲಿ ತಿರುಗುವ ಸಾಧ್ಯತೆ ಹೆಚ್ಚಿರುತ್ತದೆ.

Please follow and like us:
error0
http://karnatakatoday.in/wp-content/uploads/2019/11/night-drvingb-tip-1024x576.pnghttp://karnatakatoday.in/wp-content/uploads/2019/11/night-drvingb-tip-150x104.pngKarnataka Trendingಅಂಕಣಆಟೋಸಾಮಾನ್ಯವಾಗಿ ಕಾರ್ ಚಾಲನೆ ಮಾಡುವ ಕ್ರೇಜ್ ಎಲ್ಲರಿಗು ಕೂಡ ಇರುತ್ತದೆ. ಕುಟುಂಬದ ಜೊತೆ ಅಥವಾ ಸ್ನೇಹಿತರ ಜೊತೆ ಪ್ರಯಾಣ ಬೆಳೆಸುವುದನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ. ಆದರೆ ಕಾರಿನಲ್ಲಿ ಹಗಲು ಪ್ರಯಾಣ ಮಾಡಲು ಮತ್ತು ರಾತ್ರಿ ಪ್ರಯಾಣ ಮಾಡಲು ಸಾಕಷ್ಟು ವ್ಯತ್ಯಾಸಗಳಿವೆ. ಹಗಲಿನಲ್ಲಿ ನೀವೊಬ್ಬ ಉತ್ತಮ ಡ್ರೈವರ್ ಆಗಿರಬಹುದು ಆದರೆ ರಾತ್ರಿ ಪಯಣದ ವೇಳೆ ಕೆಲವೊಂದು ವಿಷಯಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಉತ್ತಮ. ಸುರಕ್ಷಿತ ಡ್ರೈವಿಂಗ್ ಹಾಗು ಸುರಕ್ಷತೆಯ ಪ್ರಯಾಣಕ್ಕಾಗಿ...Film | Devotional | Cricket | Health | India