ಚಿತ್ರರಂಗ ಎಂದರೆ ಹಾಗೆ ಇಲ್ಲಿ ಎಲ್ಲರೂ ಕೂಡ ಹಣ ಮಾಡಲು ಬರುವುದಿಲ್ಲ ಕೆಲವರಿಗೆ ಅವರದ್ದೇ ಆದ ವೈಯುಕ್ತಿಕ ವಿಚಾರಗಳು, ಮತ್ತು ಕೆಲವು ಗುರಿಗಳು ಇರುತ್ತ್ತವೆ ಮತ್ತು ತಮ್ಮ ಜೀವನದ ಮೂಲಕ ಏನಾದರು ಸಂದೇಶ ಸಾರಬೇಕೆಂಬ ಇಚ್ಛೆ ಕೂಡ ಇರುತ್ತದೆ ಹಾಗಾಗಿ ಇತ್ತೀಚಿಗೆ ಖ್ಯಾತ ನಟಿಯೊಬ್ಬರು ತಮಗೆ ಬಂದಿದ್ದ ಎರಡು ಕೋಟಿ ರೂ ಮೊತ್ತದ ಭರ್ಜರಿ ಜಾಹಿರಾತು ಒಂದನ್ನು ತ್ಯಜಿಸಿದ್ದಾರೆ ಕಾರಣ ಇಷ್ಟೇ ತನ್ನಿಂದ ಯಾವುದೇ ತಪ್ಪು ಸಂದೇಶ ರವಾನೆ ಆಗಬಾರದು ಎನ್ನುವ ಕಾರಣಕ್ಕಾಗಿ.

ಇಷ್ಟಕ್ಕೂ ಈ ವಿಷ್ಯದ ಬಗ್ಗೆ ಸಂಪೂರ್ಣವಾಗಿ ನೋಡೋಣ ಬನ್ನಿ. ತಮಿಳಿನ ಜನಪ್ರಿಯ ನಟಿ ಸಾಯಿ ಪಲ್ಲವಿ ಇತ್ತೀಚೆಗೆ 2 ಕೋಟಿ ಸಂಭಾವನೆಯ ಜಾಹಿರಾತನ್ನು ತಿರಸ್ಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಇದರ ಬಗ್ಗೆ ಅವರು ಮಾತನಾಡಿದ್ದಾರೆ.
ಬಿಳಿ ತ್ವಚೆಗಾಗಿ ಕಂಪನಿಯೊಂದು ತನ್ನ ಪ್ರಾಡೆಕ್ಟ್ ಅನ್ನು ಪ್ರಮೋಟ್‌ ಮಾಡುವಂತೆ ನಟಿ ಸಾಯಿ ಪಲ್ಲವಿಗೆ 2 ಕೋಟಿ ರೂಪಾಯಿ ನೀಡಲು ಸಿದ್ಧವಾಗಿತ್ತು. ಇದನ್ನು ತಿರಸ್ಕರಿಸಿದ್ದ ಸಾಯಿ ಪಲ್ಲವಿ ಚರ್ಮ ಸೌಂದರ್ಯದ ಬಗ್ಗೆ ಇರುವ ಕಲ್ಪನೆಯೇ ತಪ್ಪು, ಕಪ್ಪು ಮೈಬಣ್ಣದ ಬಗ್ಗೆ ಕೀಳರಿಮೆ ಬೇಡ ಎಂದಿದ್ದಾರೆ.

‘ನನಗಿಂತ 4-5 ವರ್ಷ ಇರುವ ನನ್ನ ತಂಗಿ ಯಾವಾಗಲೂ ನನ್ನ ಜತೆ ಕನ್ನಡಿ ಮುಂದೆ ನಿಂತು ತಾನು ಕಪ್ಪಗಿದ್ದೇನೆ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದರು. ಬೆಳ್ಳಗಾಗಲು ಆಸೆ ಪಟ್ಟು ನಾನು ಹೇಳಿದಂತೆ ಇಷ್ಟವಿರದಿದ್ದರೂ ತರಕಾರಿ, ಹಣ್ಣು ತಿಂದಳು. ಇದನ್ನು ನೋಡಿದಾಗ ನನಗೆ ಬೇಸರವಾಗ್ತಿತ್ತು. ಇಂಥ ಜಾಹಿರಾತಿನಿಂದ ನಾನು ಹಣ ಸಂಪಾದಿಸಿ ಏನಾಗಬೇಕಿದೆ? ನಾನು ಮನೆಗೆ ಹೋಗಿ ಮೂರು ಚಪಾತಿ ಅಥವಾ ಅನ್ನ ತಿಂದರೆ ಮುಗೀತು.

ಅದಕ್ಕಿಂತ ದೊಡ್ಡ ಅಗತ್ಯಗಳು ನನಗೆ ಇಲ್ಲ. ನನ್ನ ಸುತ್ತಮುತ್ತ ಇರುವವರನ್ನು ಸಂತೋಷವಾಗಿಡಲು ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಅಥವಾ ನಾವು ಯಾವ ಸ್ಟ್ಯಾಂಡರ್ಡ್‌ ಇಟ್ಟುಕೊಂಡಿದ್ದೇವೋ ಅದು ತಪ್ಪು ಎಂದು ಹೇಳಲು ಬಯಸುತ್ತೇನೆ. ಕಂದು ಮೈಬಣ್ಣ ಭಾರತೀಯರ ಬಣ್ಣ. ನಾವು ವಿದೇಶಿಗರ ಹತ್ತಿರ ಹೋಗಿ ಯಾಕೆ ನೀವು ಬೆಳ್ಳಗಿದ್ದೀರಾ ಅಂತ ಕೇಳುವುದಿಲ್ಲ.

ಯಾಕೆಂದರೆ ಅದು ಅವರ ಬಣ್ಣ’ ಎಂದಿದ್ದಾರೆ ಸಾಯಿ ಪಲ್ಲವಿ.  ಪ್ರತಿಭಾವಂತ ನಟಿ ಸಾಯಿ ಪಲ್ಲವಿಯ ನಿರ್ಧಾರ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರೇಮಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕೈದು ವರ್ಷಗಳಲ್ಲಿ ದೊಡ್ಡ ಸ್ಟಾರ್‌ ಆಗಿ ಅವರು ಬೆಳೆದಿದ್ದಾರೆ. ಈ ನಟಿಯ ನಿರ್ಧಾರದ ಬಗ್ಗೆ ನಿಮ್ಮ ಮಾತನ್ನು ತಿಳಿಸಿ.

Please follow and like us:
error0
http://karnatakatoday.in/wp-content/uploads/2019/05/sai-pallavi-1-1024x576.jpghttp://karnatakatoday.in/wp-content/uploads/2019/05/sai-pallavi-1-150x104.jpgKarnataka Trendingಚಲನಚಿತ್ರಚಿತ್ರರಂಗ ಎಂದರೆ ಹಾಗೆ ಇಲ್ಲಿ ಎಲ್ಲರೂ ಕೂಡ ಹಣ ಮಾಡಲು ಬರುವುದಿಲ್ಲ ಕೆಲವರಿಗೆ ಅವರದ್ದೇ ಆದ ವೈಯುಕ್ತಿಕ ವಿಚಾರಗಳು, ಮತ್ತು ಕೆಲವು ಗುರಿಗಳು ಇರುತ್ತ್ತವೆ ಮತ್ತು ತಮ್ಮ ಜೀವನದ ಮೂಲಕ ಏನಾದರು ಸಂದೇಶ ಸಾರಬೇಕೆಂಬ ಇಚ್ಛೆ ಕೂಡ ಇರುತ್ತದೆ ಹಾಗಾಗಿ ಇತ್ತೀಚಿಗೆ ಖ್ಯಾತ ನಟಿಯೊಬ್ಬರು ತಮಗೆ ಬಂದಿದ್ದ ಎರಡು ಕೋಟಿ ರೂ ಮೊತ್ತದ ಭರ್ಜರಿ ಜಾಹಿರಾತು ಒಂದನ್ನು ತ್ಯಜಿಸಿದ್ದಾರೆ ಕಾರಣ ಇಷ್ಟೇ ತನ್ನಿಂದ ಯಾವುದೇ ತಪ್ಪು ಸಂದೇಶ ರವಾನೆ...Film | Devotional | Cricket | Health | India