ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಕ್ಷಣಾ ಪಡೆಗಳಿಗೆ ಎಲ್ಲಿಲ್ಲದ ಕಾಳಜಿ ನೀಡಿದೆ ಮತ್ತು ಅವರ ಬೇಡಿಕೆಗಳನ್ನು ಪೂರೈಸುತ್ತಲೇ ಬಂದಿದೆ. ಈ ಹಿಂದೆ ಪಾಕ್ ನಿರಂತರವಾಗಿ ನಮ್ಮ ಗಡಿ ರೇಖೆಯನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದರೂ ಸರ್ಕಾರ ಮೌನ ತಾಳಿತ್ತು ಆದರೆ ಈಗಿನ ಸೇನೆ ಎಲ್ಲದಕ್ಕೂ ಸಿದ್ಧವಾಗಿದೆ, ತನ್ನ ಬತ್ತಳಿಕೆಯನ್ನು ಒಂದೊಂದಾಗಿ ತುಂಬಿಸಿಕೊಂಡು ಬಂದಿರುವ ಸೇನೆ ಈಗ ಮತ್ತೊಂದು ಇತಿಹಾಸ ಕೂಡ ಬರೆಯಲಿದೆ. ಈ ಆಯುಧದ ಆಗಮನದೊಂದಿಗೆ ರಕ್ಷಣಾ ಪಡೆಗಳು ಮತ್ತಷ್ಟು ಬಲಶಾಲಿಯಾಗಲಿವೆ. ಹಾಗಿದ್ರೆ ಈ ಡಿಫೆನ್ಸ್ ವರದಿ ನಿಮ್ಮ ಮುಂದಿದೆ ತಿಳಿಯಿರಿ.

ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಬಂದಿವೆ.
ಹೌದು. ಪಾಕ್‌ ಮೂಲದ ನುಸುಳುಕೋರ ಉಗ್ರರನ್ನು ಮತ್ತು ಅಪ್ರಚೋದಿತ ದಾಳಿ ಮಾಡುವ ಪಾಕ್ ಸೈನಿಕರ ಮಟ್ಟಹಾಕಲು ಅನುಕೂಲವಾಗುವಂತೆ ಅತ್ಯಾಧುನಿಕ ಸ್ನೈಪರ್‌ ರೈಫ‌ಲ್ ಗ‌ಳ ಬಳಕೆಯನ್ನು ಭಾರತೀಯ ಸೇನೆ ಆರಂಭಿಸಿದೆ.

 

 

ಇದಕ್ಕಾಗಿ ಭಾರತ ಬೆರೆಟ್ಟಾ ಸಂಸ್ಛೆಯ ಲಪುವಾ ಮ್ಯಾಗ್ನಮ್ ಸ್ಕಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಮತ್ತು ಬರೆಟ್ಟ್ ಸಂಸ್ಥೆಯ  ಎಂ95 ಸ್ನೈಪರ್ ರೈಫಲ್ ಗಳನ್ನು ಖರೀದಿ ಮಾಡಿದೆ.  ಮೂಲಗಳ ಪ್ರಕಾರ ಈ ಎರಡೂ ಮಾದರಿ ಒಟ್ಟು 5,719 ಸೂಪರ್ ಸ್ಪೈಪರ್ ರೈಫಲ್ ಗಳನ್ನು ಭಾರತ ಖರೀದಿ ಮಾಡಿದ್ದು, ಈಗಾಗಲೇ ಪಾಕಿಸ್ತಾನ ಮತ್ತು ಭಾರತ ಗಡಿ ಪ್ರದೇಶವಾಗಿರುವ ಎಲ್ ಒಸಿ (ಗಡಿ ನಿಯಂತ್ರಣ ರೇಖೆ)ಯಲ್ಲಿರುವ ಸೈನಿಕರಿಗೆ ನೀಡಲಾಗಿದೆ ಎಂದು ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಲೆಫ್ಟಿನೆಂಟ್‌ ಜನರಲ್ ರಣಬೀರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಕಳೆದ ಜನವರಿಯಲ್ಲಿ ನಾರ್ಥರ್ನ್ ಕಮಾಂಡ್ ನ‌ ಜನರಲ್‌ ಆಫೀಸರ್‌ ಕಮಾಂಡರ್‌ ಇನ್‌ ಚೀಫ್ ಅವರ ವಿಶೇಷ ಹಣಕಾಸು ಅಧಿಕಾರದಡಿ ಜಾಗತಿಕ ಪೂರೈಕೆದಾರರಿಂದ 5,719 ಸ್ನೈಪರ್‌ ರೈಫ‌ಲ್ ಗ‌ಳನ್ನು ಖರೀದಿ ಮಾಡಲು ಭಾರತೀಯ ಸೇನೆಯು ಟೆಂಡರ್‌ ಕರೆದಿತ್ತು. ಇದೀಗ ಬೆರೆಟ್ಟಾ ಮತ್ತು ಬರೆಟ್ಟ್ ಸಂಸ್ಥೆಗಳ ಸೂಪರ್ ಸ್ನೈಪರ್ ಗಳನ್ನು ಖರೀದಿ ಮಾಡಲಾಗಿದೆ.

 

ಇದಲ್ಲದೆ ಭವಿಷ್ಯದಲ್ಲಿ ಮತ್ತಷ್ಟು ಸ್ನೈಪರ್ ರೈಫಲ್ ಗಳ ಖರೀದಿ ಮಾಡುವುದಾಗಿ ಸೇನಾ ಮೂಲಗಳು ತಿಳಿಸಿವೆ. ಅಲ್ಲದೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲೇ ಸೂಪರ್ ಸ್ನೈಪರ್ ರೈಫಲ್ ಗಳನ್ನು ನಿರ್ಮಾಣ ಮಾಡಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿವೆ. ಇನ್ನು ಭಾರತೀಯ ಸೇನೆ ಪ್ರಸ್ತುತ ರಷ್ಯಾದ ಡ್ರ್ಯಾಗೊನೋವ್‌ ಎಸ್ ವಿಡಿ ರೈಫ‌ಲ್ ಗ‌ಳನ್ನು ಬಳಕೆ ಮಾಡುತ್ತಿದೆ. ಸಮಯವಿದ್ದರೆ ಜೈ ಹಿಂದ್ ಎಂದು ತಿಳಿಸಿ.

Please follow and like us:
error0
http://karnatakatoday.in/wp-content/uploads/2019/02/indian-armed-forces-1024x576.jpghttp://karnatakatoday.in/wp-content/uploads/2019/02/indian-armed-forces-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಕ್ಷಣಾ ಪಡೆಗಳಿಗೆ ಎಲ್ಲಿಲ್ಲದ ಕಾಳಜಿ ನೀಡಿದೆ ಮತ್ತು ಅವರ ಬೇಡಿಕೆಗಳನ್ನು ಪೂರೈಸುತ್ತಲೇ ಬಂದಿದೆ. ಈ ಹಿಂದೆ ಪಾಕ್ ನಿರಂತರವಾಗಿ ನಮ್ಮ ಗಡಿ ರೇಖೆಯನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದರೂ ಸರ್ಕಾರ ಮೌನ ತಾಳಿತ್ತು ಆದರೆ ಈಗಿನ ಸೇನೆ ಎಲ್ಲದಕ್ಕೂ ಸಿದ್ಧವಾಗಿದೆ, ತನ್ನ ಬತ್ತಳಿಕೆಯನ್ನು ಒಂದೊಂದಾಗಿ ತುಂಬಿಸಿಕೊಂಡು ಬಂದಿರುವ ಸೇನೆ ಈಗ ಮತ್ತೊಂದು ಇತಿಹಾಸ ಕೂಡ ಬರೆಯಲಿದೆ. ಈ ಆಯುಧದ ಆಗಮನದೊಂದಿಗೆ ರಕ್ಷಣಾ ಪಡೆಗಳು ಮತ್ತಷ್ಟು...Film | Devotional | Cricket | Health | India